ದರ್ಶನ್ ಮೊಬೈಲ್ ತುಂಬಾ ರೌಡಿಗಳ ನಂಬರ್: ಕರ್ನಾಟಕದ ಮೂಲೆ ಮೂಲೆಯಲ್ಲೂ ‘ಡಿ-ಗ್ಯಾಂಗ್’ ಅಲರ್ಟ್?
ದರ್ಶನ್ ತೂಗುದೀಪ್ & ಆತನ ಸಹಚರರ ಮೊಬೈಲ್ ಫೋನ್ ಸರ್ಚ್ ಮಾಡಿರುವ ಪೊಲಿಸರಿಗೆ ಭಯಾನಕ ಸಂಗತಿ ಗೊತ್ತಾಗಿದೆ. 'ಡಿ-ಗ್ಯಾಂಗ್' ಸದಸ್ಯರು ನೇರವಾಗಿ ರೌಡಿಗಳ ಜೊತೆಗೆ ಸಂಪರ್ಕ ಸಾಧಿಸಿದ್ದರು ಎಂಬ ಶಾಕಿಂಗ್ ವಿಚಾರ ಇದೀಗ ವಿಚಾರಣೆ ವೇಳೆ ಬಯಲಾಗಿದೆ. ಹಾಗಾದ್ರೆ ಇದೇ ದರ್ಶನ್ & ಗ್ಯಾಂಗ್ ರೌಡಿಗಳನ್ನ ಯಾಕೆ ಸಂಪರ್ಕದಲ್ಲಿ ಇಟ್ಟುಕೊಂಡಿತ್ತು ಗೊತ್ತಾ? ದರ್ಶನ್ & ಗ್ಯಾಂಗ್ ಅಟ್ಟಹಾಸದ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ದರ್ಶನ್ & ಆತನ ಸಹಚರರು ಕೊಲೆ ಆರೋಪದಲ್ಲಿ ಕಂಬಿ ಎಣಿಸುತ್ತಿದ್ದಾರೆ. ಪೊಲೀಸರು ಈಗ ಸರಿಯಾಗಿ ರಿಮ್ಯಾಂಡ್ ಎತ್ತುತ್ತಿದ್ದಾರೆ. ಹೀಗಿದ್ದಾಗಲೇ ಪೊಲೀಸರು ದರ್ಶನ್ & ಗ್ಯಾಂಗ್ ಫೋನ್ ಪರಿಶೀಲನೆ ಮಾಡಿದ ಸಮಯದಲ್ಲಿ ಸ್ಫೋಟಕ ಸಂಗತಿ ಬಯಲಾಗಿದೆ. ಅದು ಏನೆಂದರೆ ತಮ್ಮ, ತಮ್ಮ ಕೃತ್ಯಗಳನ್ನ ಎಸಗಲು ಕರ್ನಾಟಕದ ಮೂಲೆ ಮೂಲೆಯಲ್ಲಿ ಇದೇ ದರ್ಶನ್ & ಗ್ಯಾಂಗ್‌ನ ಸದಸ್ಯರು ರೌಡಿಗಳನ್ನ ಸಂಪರ್ಕದಲ್ಲಿ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಈ ವಿಚಾರ ಮತ್ತೊಮ್ಮೆ ಸಂಚಲನ ಸೃಷ್ಟಿ ಮಾಡಿದೆ. ಹಾಗಾದ್ರೆ ರೌಡಿಗಳ ಮೂಲಕ ದರ್ಶನ್ & ಗ್ಯಾಂಗ್ ಏನು ಮಾಡ್ತಿತ್ತು? ಬನ್ನಿ ತಿಳಿಯೋಣ.

ರೌಡಿಗಳ ಮೂಲಕ 'ಡಿ-ಗ್ಯಾಂಗ್' ಡೀಲ್?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಈಗ ಅಂದರ್ ಆಗಿರುವ ದರ್ಶನ್ & ಗ್ಯಾಂಗ್ ಕರ್ನಾಟಕದಲ್ಲಿ ದೊಡ್ಡ ನೆಟ್ವರ್ಕ್ ಹೊಂದಿದೆ ಎಂಬುದು ಈಗ ಬಯಲಾಗಿದೆ. ಯಾಕಂದ್ರೆ ತಮ್ಮ ವಿರೋಧಿಗಳ ಧ್ವನಿ ಅಡಗಿಸಲು & ದರ್ಶನ್ ವಿರುದ್ಧ ಕಮೆಂಟ್ ಮಾಡುವವರನ್ನ ಭಯಪಡಿಸಲು ಈ ರೀತಿಯ ರೌಡಿಗಳನ್ನ ಬಳಸಿಕೊಂಡು ಫೋನ್ ಮಾಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಹಾಗೇ ದರ್ಶನ್ ಕಾರ್ಯಕ್ರಮದಲ್ಲಿ ಜನರನ್ನು ಸೇರಿಸುವ ಬಗ್ಗೆ ಕೂಡ ಸ್ಫೋಟಕ ಆರೋಪ ಕೇಳಿಬಂದಿದೆ. ಯಾವುದೇ ಜಿಲ್ಲೆಯಲ್ಲಿ ದರ್ಶನ್ ಕಾರ್ಯಕ್ರಮ ನಡೆದರೂ ಅಲ್ಲಿ ಇದೇ ಪುಡಿ ರೌಡಿಗಳು ಹಾಗು ನಟೋರಿಯಸ್ ರೌಡಿಗಳ ಮೂಲಕ ದರ್ಶನ್ & ಗ್ಯಾಂಗ್ ಜನರನ್ನ ಸೇರಿಸುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.
ಪುನೀತ್ ರಾಜ್‌ಕುಮಾರ್‌ಗೂ ತೊಂದರೆ?
ದರ್ಶನ್ & ಗ್ಯಾಂಗ್ ವಿರುದ್ಧ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಇವತ್ತು, ಹಲವು ಸ್ಫೋಟಕ ಆರೋಪ ಮಾಡಿದ್ದಾರೆ. ಅದ್ರಲ್ಲೂ ದರ್ಶನ್ & ಗ್ಯಾಂಗ್ ಬರೀ ಸಾಮಾನ್ಯ ಜನರಿಗೆ ತೊಂದರೆಯನ್ನ ನೀಡಿಲ್ಲ, ಇದರ ಜೊತೆಗೆ ಪುನೀತ್ ರಾಜ್‌ಕುಮಾರ್ ಅವರಿಗೂ & ಅವರ ಅಭಿಮಾನಿಗಳಿಗೆ ಕೂಡ ಸಾಕಷ್ಟು ತೊಂದ್ರೆ ನೀಡ್ತಿತ್ತು ಎಂದು ಆರೋಪ ಮಾಡಿದ್ದಾರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್.
ಈ ಆರೋಪ ಈಗ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಯಾಕಂದ್ರೆ ಕೊಲೆ ಆರೋಪಿ ಆಗಿರುವ ನಟ ದರ್ಶನ್ ಪದೇ ಪದೇ ಪುನೀತ್ ರಾಜ್‌ಕುಮಾರ್ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಿದ್ದ ಉದಾಹರಣೆ ಇದೆ. ಈ ನಡುವೆ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದ್ದು, ಕರ್ನಾಟಕದ ಸಿನಿಮಾ ಇಂಡಸ್ಟ್ರಿಯಲ್ಲಿ ಈಗ ಸಂಚಲನ ಸೃಷ್ಟಿಯಾಗಿದೆ. ಹಾಗೇ ತಮಗೆ ಗನ್ ತೋರಿಸಿದ್ದ ಈ 'ಡಿ-ಗ್ಯಾಂಗ್' ಉಪಟಳದ ಬಗ್ಗೆಯೂ ನಿರ್ಮಾಪಕ ಉಮಾಪತಿ ಸ್ಫೋಟಕ ಆರೋಪ ಮಾಡಿದ್ದಾರೆ.
ದರ್ಶನ್ ಮನುಷ್ಯನ ರಾಕ್ಷಸನಾ...
ಕರ್ನಾಟಕದಲ್ಲಿ ದರ್ಶನ್ ದೊಡ್ಡ ಹೆಸರು ಮಾಡಿದ್ದಾನೆ. ನಟನೆ ಮೂಲಕ ಕೋಟ್ಯಂತರ ಫ್ಯಾನ್ಸ್ ಸಂಪಾದನೆ ಮಾಡಿದ್ದಾನೆ. ಇದೇ ಕಾರಣಕ್ಕೆ ದರ್ಶನ್‌ಗೆ ದೊಡ್ಡ ಜವಾಬ್ದಾರಿ ಇತ್ತು. ಆದರೆ ಹೀಗೆ ಜವಾಬ್ದಾರಿ ಸ್ಥಾನದಲ್ಲಿ ಇದ್ದು, ಸರಿಯಾಗಿ ನಡೆದುಕೊಳ್ಳಬೇಕಿದ್ದ ಈತ ಕೆಟ್ಟದಾಗಿ ನಡೆದುಕೊಂಡು ಈಗ ಕಂಬಿ ಎಣಿಸುತ್ತಿದ್ದಾನೆ. ಅದರಲ್ಲೂ ನಟ ದರ್ಶನ್ ಕೊಲೆ ಆರೋಪದಲ್ಲಿ ಅರೆಸ್ಟ್ ಆಗುವ ಮೊದಲು, ಆತ ಮಾಡಿದ ಕೃತ್ಯದ ವಿಡಿಯೋಗಳನ್ನ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ವೀಕ್ಷಣೆ ಮಾಡಿದ್ದರಂತೆ. ಖುದ್ದು ಬೆಂಗಳೂರು ಕಮೀಷನರ್ ದರ್ಶನ್ ಅಟ್ಟಹಾಸದ ವಿಡಿಯೋ ತೋರಿಸಿ, ಸಿಎಂ ಬಳಿ ಅನುಮತಿ ಪಡೆದು ಕೊಲೆ ಆರೋಪಿ ದರ್ಶನ್ ಬಂಧಿಸಿದ್ದರಂತೆ.
118 ಸಾಕ್ಷ್ಯ ಸಂಗ್ರಹಿಸಿದ ಪೊಲೀಸರು?
ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧ ಕೇಳಿಬಂದಿರುವ ಕೊಲೆ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರು ಖಡಕ್ ತನಿಖೆ ನಡೆಸುತ್ತಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಈ ವಿಚಾರದಲ್ಲಿ ಕರ್ನಾಟಕದ ಪೊಲೀಸರಿಗೆ ಫುಲ್ ಪವರ್ ಕೊಟ್ಟಿದ್ದು, ಯಾವುದೇ ರೀತಿಯ ಒತ್ತಡಗಳಿಗೆ ಮಣಿಯಬೇಡಿ ಎಂದಿದ್ದಾರೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದೆ. ಅದರಲ್ಲೂ ದರ್ಶನ್ & ಗ್ಯಾಂಗ್ ವಿರುದ್ಧ ಈವರೆಗೂ ಸುಮಾರು 118 ಸಾಕ್ಷ್ಯ ಸಂಗ್ರಹವಾಗಿದೆ ಎಂಬ ಸುದ್ದಿ ತಿಳಿದುಬಂದಿದೆ. ಹೀಗಾಗಿ ಕೇಸ್ ಕೂಡ ತುಂಬಾ ಸ್ಟ್ರಾಂಗ್ ಆಗುತ್ತಿದ್ದು, ಈಗ ದರ್ಶನ್‌ಗೆ ಜೈಲೂಟ ಗ್ಯಾರಂಟಿ ಆಗಿದೆ.
ಡಿ-ಗ್ಯಾಂಗ್‌ಗೆ ಮಾನಸಿಕ ವಿಕೃತಿ?
ದರ್ಶನ್ & ಗ್ಯಾಂಗ್ ಸೇರಿ ರೇಣುಕಾಸ್ವಾಮಿ ಕೊಲೆ ಮಾಡಿರುವ ರೀತಿ ನೋಡಿದರೆ, ಈ ಗ್ಯಾಂಗ್ ಮಾನಸಿಕ ವಿಕೃತಿ ಹೊಂದಿದೆಯಾ? ಎಂಬ ಅನುಮಾನ ಮೂಡಿದೆ ಯಾಕಂದ್ರೆ ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿ ಭಯಾನಕ ಸಂಗತಿ ಗೊತ್ತಾಗಿದೆ. ರೇಣುಕಾಸ್ವಾಮಿ ಚರ್ಮಕ್ಕೆ, ತಲೆಗೆ ಹಾಗೂ ಮರ್ಮಾಂಗಕ್ಕೆ ಭಾರಿ ಗಾಯ ಮಾಡಲಾಗಿದೆ. ಹಾಗೇ ಮರ್ಮಾಂಗದ ಚರ್ಮ ಸುಲಿದು ಟಾರ್ಚರ್ ಕೊಟ್ಟಿದ್ದಾರೆ. ಈ ಮೂಲಕ ವಿಕೃತವಾಗಿ ರೇಣುಕಾಸ್ವಾಮಿ ಕೊಲೆ ಮಾಡಿದೆ ಈ ವಿಕೃತರ ಗ್ಯಾಂಗ್. ಹೀಗಾಗಿಯೇ ಪೊಲೀಸರು ಈ ಗ್ಯಾಂಗ್‌ಗೆ ವಿಕೃತ ಮನಸ್ಥಿತಿ ಇದೆಯಾ? ಎಂಬ ಆಂಗಲ್ ಮೂಲಕವೂ ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ ಇವರಿಂದ ಇನ್ನೂ ಯಾರು, ಯಾರೆಲ್ಲಾ ಸಮಸ್ಯೆ ಎದುರಿಸಿದ್ದಾರೆ? ಅನ್ನೋದನ್ನ ಕೂಡ ಪರಿಶೀಲನೆ ಮಾಡಲಾಗುತ್ತಿದೆ.
ಮುಂದೆ ಐತೆ ಮಾರಿ ಹಬ್ಬ?
ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಮಾಡಿದೆ ಅಂತಾ ಗಂಭೀರ ಆರೋಪವು ಕೇಳಿಬಂದ ನಂತರದಲ್ಲಿ ಇಡೀ ಗ್ಯಾಂಗ್‌ನ ಜೀಪ್‌ಗೆ ಎತ್ತಾಕಿ ಪೊಲೀಸ್ ಠಾಣೆಗೆ ಕರೆತಂದ ಪೊಲೀಸರು, ಕಳೆದ 10 ದಿನದಿಂದ ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. ದರ್ಶನ್ ನೇರವಾಗಿ ರೇಣುಕಾಸ್ವಾಮಿಯ ಕೊಲೆಯಲ್ಲಿ ಭಾಗಿ ಆಗಿದ್ದಾರೆ ಎಂಬ ಆರೋಪಗಳ ನಡುವೆ, ಈಗಾಗಲೇ ಎರಡು ಬಾರಿ ದರ್ಶನ್ & ಗ್ಯಾಂಗ್‌ನ ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆ ನಡೆಸಿದ್ದಾರೆ. ಇದೀಗ ಮತ್ತೊಮ್ಮೆ, ದರ್ಶನ್ ಮತ್ತು ಸಹಚರರ ವಶಕ್ಕೆ ಪಡೆದು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಕೋರ್ಟ್ ಕೂಡ ಪೊಲೀಸರ ಮನವಿ ಪುರಸ್ಕರಿಸಿ, ದರ್ಶನ್ & ಗ್ಯಾಂಗ್‌ನ ಪೊಲೀಸರ ವಶಕ್ಕೆ ನೀಡಲಾಗಿದೆ.
ದರ್ಶನ್ ಅಲಿಯಾಸ್ ರೌಡಿ ದರ್ಶನ್?
2011ರ ಸಮಯದಲ್ಲಿ ತನ್ನ ಹೆಂಡತಿ ಮೇಲೆಯೇ ದರ್ಶನ್ ರಾಕ್ಷಸನ ರೀತಿ ಹಲ್ಲೆ ಮಾಡಿರುವುದು ಸೇರಿದಂತೆ, ಪದೇ ಪದೇ ದರ್ಶನ್ & ಗ್ಯಾಂಗ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿವೆ. ಹೀಗೆ ಕನ್ನಡ ನಾಡಿನಲ್ಲಿ ತನ್ನ ಪಟಾಲಂ ಕಟ್ಟಿಕೊಂಡು ದರ್ಶನ್ & ಗ್ಯಾಂಗ್ ಜನರಿಗೆ ಹಾಗೂ ಹಲವು ನಿರ್ಮಾಪಕ, ನಿರ್ದೇಶಕರಿಗೆ ಟಾರ್ಚರ್ ಮಾಡಿದೆ ಎಂಬ ಆರೋಪ ಇದೆ. ಹೀಗಾಗಿಯೇ ಇದೀಗ, ದರ್ಶನ್ ಮತ್ತು ಆತನ ಸಹಚರರ ವಿರುದ್ಧ ರೌಡಿಶೀಟ್ ತೆರೆಯಲು ಕನ್ನಡ ನಾಡಿನ ಪೊಲೀಸರು ಅಂತಿಮ ಹಂತದ ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆ ಎಲ್ಲಾ ದಾಖಲೆಗಳನ್ನ ಸಂಗ್ರಹಿಸುವ ಮೂಲಕ, ದರ್ಶನ್ & ಗ್ಯಾಂಗ್‌ಗೆ ಶಾಕ್ ನೀಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ'?
ಕಲಾಸಿಪಾಳ್ಯ, ಮೆಜೆಸ್ಟಿಕ್ ಅಂತಾ ಬೆಂಗಳೂರಿನ ಏರಿಯಾಗಳ ಹೆಸರನ್ನು ಇಟ್ಟುಕೊಂಡೇ ಭಾರಿ ಭರ್ಜರಿ ಸಿನಿಮಾ ನೀಡಿದ್ದ ದರ್ಶನ್, ಈಗ 'ಪರಪ್ಪನ ಅಗ್ರಹಾರ' ಸೇರಿದ್ದಾರೆ. ದರ್ಶನ್ ತಾನೇ ಮಾಡಿಕೊಂಡ ಎಡವಟ್ಟಿಗೆ & ದುರಹಂಕಾರಕ್ಕೆ ಇಂದು ವಿಲವಿಲ ಒದ್ದಾಡುವ ಪರಿಸ್ಥಿತಿ ಬಂದಿದೆ ಅಂತಾರೆ ಅವರ ಸ್ನೇಹಿತರು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆ ನಡೆಯುತ್ತಿದೆ. ಹೀಗೆ ದರ್ಶನ್ ಕೊಲೆ ಆರೋಪದಲ್ಲಿ ಸೆಂಟ್ರಲ್ ಜೈಲ್ 'ಪರಪ್ಪನ ಅಗ್ರಹಾರ'ಕ್ಕೆ ಹೋಗಿದ್ದು, ಕೊಲೆ ಆರೋಪಿ ದರ್ಶನ್ ಮುಂದಿನ ಸಿನಿಮಾ 'ಪರಪ್ಪನ ಅಗ್ರಹಾರ' ಆಗಿರಲಿದೆ ಅಂತಿದ್ದಾರೆ ದರ್ಶನ್ ವಿರೋಧಿಗಳು. ಹೀಗಾಗಿ ದರ್ಶನ್ & ಅವರ ವಿರೋಧಿಗಳ ಫೈಟಿಂಗ್‌ಗೆ ಭರ್ಜರಿ ತಿರುವು ಸಿಕ್ಕಿದೆ.












Click it and Unblock the Notifications