Darshan Thoogudeepa: ಪವಿತ್ರಾ ಗೌಡಗೆ 10,000 ರೂಪಾಯಿ ಆಫರ್ ಮಾಡಿದ್ದ ರೇಣುಕಾಸ್ವಾಮಿಗೆ 100 ಕೋಟಿ ರೂಪಾಯಿ....

ಡಿ-ಬಾಸ್ ದರ್ಶನ್ ತೂಗುದೀಪ್ ತಮ್ಮ ಜೀವಕ್ಕಿಂತ ಹೆಚ್ಚು ಇಷ್ಟಪಡುತ್ತಿದ್ದ ಹುಡುಗಿ ಅಂದ್ರೆ ಅದು ಪವಿತ್ರಾ ಗೌಡ ಅನ್ನೋದು ರೇಣುಕಾಸ್ವಾಮಿ ಕೊಲೆ ನಂತರ ಇಡೀ ಊರಿಗೆ ಗೊತ್ತಾಗಿದೆ. ಆದರೆ ರೇಣುಕಾಸ್ವಾಮಿ ಅಶ್ಲೀಲವಾಗಿ ಕೆಟ್ಟ ಕೆಟ್ಟ ಮೆಸೇಜ್ ಮಾಡುತ್ತಾ, ಪವಿತ್ರಾ ಗೌಡಗೆ 10,000 ರೂಪಾಯಿ ಆಫರ್ ಮಾಡಿ ಕೆಟ್ಟದಾಗಿ ಮೆಸೇಜ್ ಮಾಡಿದ್ದನಂತೆ.

ಇದೇ ಕಾರಣಕ್ಕೆ ಅವನ ಮೇಲೆ ಹಲ್ಲೆ ಮಾಡಿ ಮರ್ಮಾಂಗದ ಸಿಪ್ಪೆ ಸುಲಿದು ಡಿ-ಬಾಸ್ ದರ್ಶನ್ ತೂಗುದೀಪ್ & ಸಹಚರರು ಕೊಲೆ ಮಾಡಿದ್ದಾರೆ ಎಂಬ ಆರೋಪ ಇದೆ. ಹೀಗಿದ್ದಾಗ, ಪವಿತ್ರಾ ಗೌಡಗೆ 10,000 ರೂಪಾಯಿ ಆಫರ್ ಮಾಡಿದ್ದ ರೇಣುಕಾಸ್ವಾಮಿಗೆ 100 ಕೋಟಿ ರೂಪಾಯಿ....

Darshan Thoogudeepa Girlfriend Pavithra Gowda And Renukaswamy Story Explained

ರೇಣುಕಾಸ್ವಾಮಿ ಮರ್ಮಾಂಗ ತುಳಿದು...

ಪವಿತ್ರಾ ಗೌಡ ಜೊತೆಗೆ ರೇಣುಕಾಸ್ವಾಮಿ ಅಸಭ್ಯ ಮೆಸೇಜ್ ಮಾಡುತ್ತಾ, ಕೆಟ್ಟದಾಗಿ ವರ್ತನೆ ಮಾಡಿದ್ದ ಎಂಬ ಕಾರಣಕ್ಕೆ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಹಲ್ಲೆ ಮಾಡಲಾಗಿತ್ತು. ಹೀಗೆ ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿ ಕರೆದುಕೊಂಡು ಬಂದಾಗ ಖುದ್ದು ದರ್ಶನ್ ಅವರು ಹಲ್ಲೆ ಮಾಡಿದ್ದರು. ಆಗ ರೇಣುಕಾಸ್ವಾಮಿ ಮರ್ಮಾಂಗ ಕೂಡ ತುಳಿದಿದ್ದರು ಎಂಬ ಭಾರಿ ಗಂಭೀರ ಆರೋಪವು ಕೂಡ ಕೇಳಿ ಬಂದಿತ್ತು. ಹೀಗಿದ್ದಾಗಲೇ, ಪವಿತ್ರಾ ಗೌಡಗೆ ಮೆಸೇಜ್‌ನ ಮಾಡಿ 10,000 ರೂಪಾಯಿ ಆಫರ್ ಮಾಡಿದ್ದ ರೇಣುಕಾಸ್ವಾಮಿಗೆ 100 ಕೋಟಿ ರೂಪಾಯಿ ಭಿಕ್ಷೆ ಹಾಕಲು....

100 ಕೋಟಿ ರೂಪಾಯಿ ಭಿಕ್ಷೆ ಹಾಕಲು....

ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಆತ್ಮೀಯ ಗೆಳತಿ ಪವಿತ್ರಾ ಗೌಡ ಬಗ್ಗೆ ಕೆಲವು ಫ್ಯಾನ್ಸ್ ಸಪೋರ್ಟ್ ಮಾಡುತ್ತಿದ್ದಾರೆ. ಹಾಗೇ ಕೆಲವು ಅಭಿಮಾನಿಗಳು ಪವಿತ್ರಾ ಗೌಡ ವಿರುದ್ಧ ಈಗ ಮಾತನಾಡುತ್ತಿದ್ದಾರೆ. ಈ ಸಮಯದಲ್ಲೇ, ಪವಿತ್ರಾ ಗೌಡಗೆ 10 ಸಾವಿರ ರೂಪಾಯಿ ಕೊಡ್ತೀನಿ ಅಂತಾ ಹೇಳಿದ್ದ ರೇಣುಕಾಸ್ವಾಮಿ ಕೊಲೆಯನ್ನ ಸಮರ್ಥನೆ ಕೂಡ ಮಾಡಿಕೊಂಡು, ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿದ್ದಾರೆ.

ಮತ್ತೊಂದು ಕಡೆ ಕೊಲೆ ಆಗಿರುವ ರೇಣುಕಾಸ್ವಾಮಿಗೆ ಡಿ-ಬಾಸ್ ಅಭಿಮಾನಿಗಳೇ 100, 100 ರೂಪಾಯಿ ದೇಣಿಗೆ ಹಾಕಿ 100 ಕೋಟಿ ರೂಪಾಯಿ ಭಿಕ್ಷೆ ಹಾಕಲು ಸಿದ್ಧ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿನ ಹಬ್ಬಿಸುತ್ತಿದ್ದಾರೆ! ಈ ಬಗ್ಗೆ ಇದೀಗ ಪರ & ವಿರೋಧದ ಚರ್ಚೆಗಳು ಕೂಡ ಶುರುವಾಗಿವೆ. ಈ ಮೂಲಕ ಇದೀಗ, ಸೋಷಿಯಲ್ ಮೀಡಿಯಾದಲ್ಲಿ ರಣರಂಗವೇ ಶುರುವಾಗಿದೆ.

ಪವಿತ್ರಾ ಗೌಡ ರಿಲೀಸ್ ಯಾವಾಗ?

ಡಿ-ಬಾಸ್ ದರ್ಶನ್ ತೂಗುದೀಪ್ ಬೆನ್ನು ನಡೆಯಲು ಆಗದಷ್ಟು ಊತ ಬಂದಿದೆ, ಕಾಲುಗಳ ಒಳಗೂ ಊತ ಕಾಣಿಸಿಕೊಂಡಿದೆ ಅಂತಾ ಜಾಮೀನು ಕೊಟ್ಟು ರಿಲೀಸ್ ಮಾಡಲಾಗಿದೆ. ಇನ್ನು ಪವಿತ್ರಾ ಗೌಡಗೆ ಜಾಮೀನು ಯಾವಾಗ ಸಿಗುತ್ತೆ? ಅನ್ನೋ ಪ್ರಶ್ನೆ ಕೂಡ ಈಗ ಮೂಡಿದ್ದು, ಭಾರಿ ಕುತೂಹಲ ಕೆರಳಿದೆ.

ಮತ್ತೊಂದು ಕಡೆ ಪವಿತ್ರಾ ಗೌಡಗೆ ಜಾಮೀನು ಕೊಡಿಸಲು ಈ ಸಮಯದಲ್ಲಿ ಎಲ್ಲಾ ರೀತಿಯ ಪ್ರಯತ್ನವನ್ನ ಅವರ ಮನೆಯವರು ಮಾಡುತ್ತಿದ್ದಾರೆ. ಆದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮೊದಲ ಆರೋಪಿ ಅಂದ್ರೆ ಎ-1 ಆರೋಪಿ ಆಗಿರುವುದಕ್ಕೆ ಅಷ್ಟು ಸುಲಭವಾಗಿ ಈಗ ಪವಿತ್ರಾ ಗೌಡಗೆ ಜಾಮೀನು ಸಿಗುವುದು ಕಷ್ಟ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+