Darshan Thoogudeepa: ದರ್ಶನ್‌ಗೆ ಬಿಗ್ ರಿಲೀಫ್: ದೇಶಾದ್ಯಂತ ಪ್ರಯಾಣಿಸಲು ದಾಸನಿಗೆ ಹೈಕೋರ್ಟ್ ಅನುಮತಿ
ಕನ್ನಡ ಸಿನಿಮಾ ನಟ ದರ್ಶನ್ ಅವರಿಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ದರ್ಶನ್ ಗೆ ದೇಶಾದ್ಯಂತ ಪ್ರಯಾಣಿಸಲು ಹೈಕೋರ್ಟ್ ಅನುಮತಿ ನೀಡಿದೆ. ಇದರಿಂದ ದೇಶದ ಯಾವುದೇ ಭಾಗದಲ್ಲಿಯಾದರೂ ದರ್ಶನ್ ಪ್ರಯಾಣ ಮಾಡಬಹುದಾಗಿದೆ. ಆದರೆ ವಿದೇಶಕ್ಕೆ ಹೋಗಲು ಮಾತ್ರ ದರ್ಶನ್ ಅವರಿಗೆ ಅನುಮತಿ ಇಲ್ಲ. ಒಂದು ವೇಳೆ ಹೋಗಬೇಕಾದರೆ ಹೈಕೋರ್ಟ್ ಅನುಮತಿಯನ್ನು ಅವರು ಪಡೆಯಬೇಕಾಗುತ್ತದೆ.
ಹೌದು.. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಸದ್ಯಕ್ಕೆ ನಿರಾಳರಾಗಿರುವ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ತಮ್ಮ ಕಾನೂನು ಹೋರಾಟ ಮುಂದುವರೆಸಿದ್ದಾರೆ. ಈ ನಡುವೆ ದರ್ಶನ್ ತಮ್ಮ ವೃತ್ತಿ ಜೀವನಕ್ಕೆ ಆಧ್ಯತೆ ನೀಡಲು ಬಯಸಿದ್ದಾರೆ. ಕಳೆದ ಜೂನ್‌ನಲ್ಲಿ ನಿಂತು ಹೋಗಿದ್ದ ಡೆವಿಲ್ ಸಿನಿಮಾ ಶೂಟಿಂಗ್ ಮತ್ತೆ ಪ್ರಾರಂಭಿಸಲು ದಾಸ ತಯಾರಿ ನಡೆಸಿದ್ದಾರೆ. ಇದಕ್ಕಾಗಿ ಕೋರ್ಟ್‌ನಲ್ಲಿ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೈಲು ಸೇರಿದ್ದರಿಂದ ಡೆವಿಲ್ ಸಿನಿಮಾ ಶೂಟಿಂಗ್ ಅರ್ಧಕ್ಕೆ ನಿಂತು ಹೋಗಿತ್ತು. ಇದೀಗ ದರ್ಶನ್ ಆ ಸಿನಿಮಾ ಶೂಟಿಂಗ್‌ಗೆ ರೆಡಿ ಆಗುತ್ತಿದ್ದಾರೆ. ಇದಕ್ಕಾಗಿ ಕೋರ್ಟ್ ಅನುಮತಿ ಪಡೆಯಲು ದರ್ಶನ್ ಅರ್ಜಿ ಸಲ್ಲಿಸಿದ್ದರು. ಇದಕ್ಕೀಗ ಕೋರ್ಟ್ ಅನುಮತಿ ನೀಡಿದೆ.
ಕೋರ್ಟ್ ಅನುಮತಿಗಾಗಿ ಮುಂದಿನ ವಾರ ಅರ್ಜಿ
ಬೆಂಗಳೂರು ಬಿಟ್ಟು ಹೊರ ಹೋಗಲು ಕೋರ್ಟ್ ಅನುಮತಿ ಕಡ್ಡಾಯವಾಗಿದೆ. ಹೀಗಾಗಿ ಶೂಟಿಂಗ್‌ಗಾಗಿ ಬೆಂಗಳೂರು ಬಿಟ್ಟು ಹೋಗಲು ದಾಸ ಅನುಮತಿ ನೀಡುವಂತೆ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಇದೀಗ ಇದಕ್ಕೆ ಕೋರ್ಟ್ ಅನುಮತಿ ನೀಡಿದೆ. ಹೀಗಾಗಿ ಬೆಂಗಳೂರು ಬಿಟ್ಟು ದರ್ಶನ್ ದೇಶದ ಯಾವುದೇ ಭಾಗಕ್ಕೂ ಪ್ರಯಾಣ ಮಾಡಬಹುದಾಗಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿರುವ ದರ್ಶನ್ ಇನ್ನೂ ಕೂಡ ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿಲ್ಲ. ಯಾಕೆಂದರೆ ಅವರಿಗೆ ತೀವ್ರ ಬೆನ್ನು ಹಾಗೂ ಕಾಲು ನೋವು ಇರುವುದರಿಂದ ಶೂಟಿಂಗ್‌ಗೆ ಹೋಗಲು ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ಮತ್ತೆ ಶೂಟಿಂಗ್ ಶುರು ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಕೋರ್ಟ್ ಅನುಮತಿ ಪಡೆದಿದ್ದಾರೆ ದಾಸ.
ಜೈಲಿನಿಂದ ಹೊರ ಬಂದ ಬಳಿಕ ದರ್ಶನ್ ಅವರಿಗೆ ವಿಪರೀತ ಬೆನ್ನು ನೋವು ಕಾಣಿಸಿಕೊಂಡಿತ್ತು. ಇದಕ್ಕಾಗಿ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾರೆ ಎಂದು ಹೇಳಲಾಗಿತ್ತು. ಆದರೆ ದರ್ಶನ್ ಶಸ್ತ್ರ ಚಿಕಿತ್ಸೆಗೆ ಒಳಗಾಗಿಲ್ಲ. ಆದರೆ ಫಿಸಿಯೋಥೆರಪಿ ಮೂಲಕ ಗುಣಮುಖರಾಗುತ್ತಿದ್ದಾರೆ.
ಇನ್ನೂ ಡೆವಿಲ್ ಸಿನಿಮಾ ಶೂಟಿಂಗ್ ಅರ್ಧಕ್ಕೆ ನಿಂತು ಹೋಗಿತ್ತು. ಈ ಸಿನಿಮಾ ಶೂಟಿಂಗ್ ಕಡೆಗೆ ಸದ್ಯ ಅವರು ಗಮನ ಹರಿಸಿದ್ದಾರೆ ಎನ್ನಲಾಗುತ್ತಿದೆ. ಇದೀಗ ಕೋರ್ಟ್ ಅನುಮತಿ ನೀಡಿದ್ದರಿಂದ ದರ್ಶನ್ ತೂಗುದೀಪ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ ಬೆಂಗಳೂರು ಬಿಟ್ಟು ಹೊರ ಪ್ರದೇಶದಲ್ಲಿನ ಶೂಟಿಂಗ್ ಸ್ಪಾಟ್‌ಗೂ ತೆರಳುವ ಅನುಮತಿಯನ್ನು ಕೋರ್ಟ್ ದರ್ಶನ್ ಅವರಿಗೆ ನೀಡಿದೆ.
ಶೂಟಿಂಗ್ ಪೂರ್ಣಗೊಂಡರೆ ಇದೇ ವರ್ಷ ಡೆವಿಲ್ ಸಿನಿಮಾ ತೆರೆ ಕಾಣಲಿದ್ದು ದೊಡ್ಡ ಪರದೆಯ ಮೇಲೆ ಡಿ-ಬಾಸ್ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಡೆವಿಲ್ ಸಿನಿಮಾದ ಬಳಿಕ ಸಾಲು ಸಾಲು ಸಿನಿಮಾಗಳು ದರ್ಶನ್ ಕೈಯಲ್ಲಿ ಇವೆ. ಈ ಸಿನಿಮಾಗಳು ಶೂಟಿಂಗ್ ಇನ್ನೂ ಕೂಡ ಪ್ರಾರಂಭವಾಗಿಲ್ಲ. ಆದರೆ ಡೆವಿಲ್ ಸಿನಿಮಾ ಮಾತ್ರ ಇದೇ ವರ್ಷ ತೆರೆ ಕಾಣಲಿದ್ದು ಸಿನಿಮಾಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ದಾಸ ಗುಡ್ ನ್ಯೂಸ್ ಕೊಡಲಿದ್ದಾರೆ.
ಒಟ್ಟಿನಲ್ಲಿ ಕೊಲೆ ಪ್ರಕರಣದಲ್ಲಿ ಹೊರ ಬಂದಿರುವ ದರ್ಶನ್ ಅತ್ತ ಕಾನೂನು ಹೋರಾಟ ಮುಂದುವರೆಸಿಕೊಂಡು, ಆರೋಗ್ಯದ ಕಡೆಗೆ ಗಮನ ಹರಿಸುತ್ತಾ ಇತ್ತ ಸಿನಿಮಾ ಶೂಟಿಂಗ್ ಕೂಡ ಶುರು ಮಾಡಲು ಮನಸ್ಸು ಮಾಡಿದ್ದಾರೆ. ಮತ್ತೆ ಹೊಸ ವ್ಯಕ್ತಿಯಾಗಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ.












Click it and Unblock the Notifications