Darshan Thoogudeepa: ದರ್ಶನ್ ತೂಗುದೀಪ್‌ಗೆ ಜೊತೆಗೆ ಇದ್ದವರೇ ಬೆನ್ನಿಗೆ ಚೂರಿ ಹಾಕಿದ್ರಾ?

ಬಳ್ಳಾರಿ ಜೈಲಿನಲ್ಲಿ ದರ್ಶನ್ ತೂಗುದೀಪ್ ಅವರು ಇದೀಗ ಪರದಾಡುತ್ತಿದ್ದಾರೆ. ಪರಿಸ್ಥಿತಿ ಹೀಗೆ ಇದ್ದಾಗಲೇ ಜೈಲಿನ ಹೊರಗೆ ದರ್ಶನ್ ತೂಗುದೀಪ್ ಅವರ ವಿರುದ್ಧ ದೊಡ್ಡ ಮಟ್ಟದಲ್ಲಿಯೇ ಕುತಂತ್ರ ನಡೆಯುತ್ತಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಅದರಲ್ಲೂ, ನಟ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇದೀಗ ಆಳವಾಗಿ ಲಾಕ್ ಆಗೋದಕ್ಕೆ ಜೊತೆಗೆ ಇದ್ದವರೇ ಕಾರಣ ಎಂಬ ಆರೋಪವೂ ಕೇಳಿಬಂದಿದೆ. ಇಷ್ಟು ದಿನಗಳ ಕಾಲ ದರ್ಶನ್ ಅವರ ಸ್ನೇಹಿತರು ಅಂತಾ ಕರೆಸಿಕೊಂಡವರೇ ಇದೀಗ ದರ್ಶನ್ ತೂಗುದೀಪ್ ಅವರ ಬೆನ್ನಿಗೆ ಚೂರಿ ಹಾಕಿದ್ರಾ? ಬನ್ನಿ ತಿಳಿಯೋಣ.

ದರ್ಶನ್ ತೂಗುದೀಪ್ ಜೈಲು ಸೇರದೆ ಹೊರಗೆ ಇದ್ದ ಸಮಯದಲ್ಲಿ ಎಲ್ಲರೂ ಡಿ-ಬಾಸ್... ಡಿ-ಬಾಸ್... ಅಂತಾ ಗೌರವ ಕೊಡುತ್ತಿದ್ದರು. ಅದರಲ್ಲೂ ಕನ್ನಡ ಸಿನಿಮಾ ರಂಗದ ಹಲವು ಸೆಲೆಬ್ರಿಟಿಗಳು ದರ್ಶನ್ ತೂಗುದೀಪ್ ಕಾಲಿಗೆ ಕೂಡ ಬಿದ್ದಿದ್ದು ಇದೆ. ಹೀಗಿದ್ದಾಗಲೇ ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ್ ಸೆಂಟ್ರಲ್ ಜೈಲು ಸೇರಿದರು. ಹೀಗೆ, ಅಭಿಮಾನಿಗಳ ಪಾಲಿನ ಪ್ರೀತಿಯ ದಾಸ 'ಡಿ-ಬಾಸ್' ದರ್ಶನ್ ಜೈಲು ಸೇರಿದ ನಂತರ ಎಲ್ಲ ಅಲ್ಲೋಲ ಕಲ್ಲೋಲ ಆಗುತ್ತಿದೆ. ಅದರಲ್ಲೂ ನಟ ದರ್ಶನ್ ಅವರ ಜೊತೆಗೆ ಇದ್ದವರೇ ಈಗ ಬೆನ್ನಿಗೆ ಚೂರಿ ಹಾಕಿ, ನಟ ದರ್ಶನ್ ಜೈಲಿನಿಂದ ಹೊರಗೆ ಬರದಂತೆ ಮಾಡುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ!

Darshan Thoogudeepa Friends Did This To Him Now

ದರ್ಶನ್ ತೂಗುದೀಪ್ ರಿಲೀಸ್ ಆಗೋದು...

ಹೌದು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಅವರನ್ನು ಗುರುತಿಸಿದ್ದೇ ಬೇರೆ ರೀತಿಯಾಗಿ. ಅಂದ್ರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಅವರನ್ನ ಎ-2 ಅಂದರೆ ಆರೋಪಿ ನಂ. 2 ಆರೋಪಿ ಎಂದು ಗುರುತಿಸಲಾಗಿತ್ತು. ಆದರೆ ಇದೀಗ ಚಾರ್ಜ್ ಶೀಟ್ ಸಲ್ಲಿಕೆ ಸಮಯದಲ್ಲಿ, ಅಂದ್ರೆ ನ್ಯಾಯಾಲಯಕ್ಕೆ ದರ್ಶನ್ ತೂಗುದೀಪ್ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಸಮಯದಲ್ಲಿ, ಹಣೆ ಬರಹ ಬದಲಾಯಿಸಲು ಜೊತೆಗೆ ಇದ್ದವರೇ ಚೂರಿ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

ಮತ್ತೊಂದು ಕಡೆ ದರ್ಶನ್ ತೂಗುದೀಪ್ ಅವರ ವಿರೋಧಿಗಳು ಕೂಡ ಈಗ ಅಲರ್ಟ್ ಆಗಿ, ಕಮೆಂಟ್ ಮಾಡುತ್ತಿದ್ದಾರೆ. ಆರೋಪಿ ನಂ. 1 ಅಂದ್ರೆ ಎ-1 ಸ್ಥಾನಕ್ಕೆ ಪ್ರಮೋಷನ್ ಕೊಟ್ಟು ಮೊದಲ ಸ್ಥಾನದಲ್ಲಿ ದರ್ಶನ್‌ರನ್ನ ಕೂರಿಸಿದ್ದಾರೆ ಅಂತಾ ದರ್ಶನ್ ಅವರ ವಿರೋಧಿಗಳು ಈಗ ಮಾತನಾಡುತ್ತಿದ್ದಾರೆ. ಆದರೆ ದರ್ಶನ್ ತೂಗುದೀಪ್ ಇಷ್ಟೆಲ್ಲಾ ಕಷ್ಟ ಅನುಭವಿಸಲು, ಇಷ್ಟು ದಿನಗಳ ಕಾಲ ಅವರ ಜೊತೆ ಇದ್ದವರು ಬೆನ್ನಿಗೆ ಚೂರಿ ಹಾಕಿದ್ದೇ ಕಾರಣ ಎಂಬ ಆರೋಪ ಕೇಳಿಬಂದಿದೆ.

ದರ್ಶನ್ 1 ವರ್ಷ ಹೊರಗೆ ಬರಲ್ಲ?

ಅಂದಹಾಗೆ ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಅವರನ್ನ ಬಚಾವ್ ಮಾಡಬಹುದಿತ್ತು. ಆದರೆ ದರ್ಶನ್ ತೂಗುದೀಪ್ ಯಾರನ್ನು ಹೆಚ್ಚಾಗಿ ನಂಬಿದ್ದರೋ, ಅದೇ ವ್ಯಕ್ತಿಗಳು ಇದೀಗ ದರ್ಶನ್ ತೂಗುದೀಪ್ ವಿರುದ್ಧವೇ ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಈಗ ಸಾಕ್ಷಿ ಹೇಳಿದ್ದಾರೆ. ಹೀಗಿದ್ದಾಗ ಪರಿಸ್ಥಿತಿ ಕೂಡ ಕೈಮೀರಿ ಹೋಗುತ್ತಿದ್ದು, ನಟ ದರ್ಶನ್‌ಗೆ ಜೈಲಿನಿಂದ ಹೊರಗೆ ಬರುವುದು ಕೂಡ ಕಷ್ಟವಾಗಲಿದೆ. ಹಾಗೇ ದರ್ಶನ್ ಅವರ ಜೊತೆಗಿದ್ದ ಹಲವರು ದರ್ಶನ್ ತೂಗುದೀಪ್ ವಿರುದ್ಧ ಈಗಾಗಲೇ ಸಾಕ್ಷಿ ಹೇಳಿರುವ ಕಾರಣಕ್ಕೆ, ದರ್ಶನ್‌ಗೆ ಜಾಮೀನು ಸಿಗುವುದು ತುಂಬಾ ಕಷ್ಟ. ಕನಿಷ್ಠ 1 ವರ್ಷ ಎ-1 ಆರೋಪಿಯಾಗಿ ಜೈಲಿನಲ್ಲಿ ದರ್ಶನ್ ಪರದಾಡಬೇಕಾಗಿ ಬರುತ್ತದೆ ಎಂಬ ಅಭಿಪ್ರಾಯವನ್ನು ಕಾನೂನು ತಜ್ಞರು ಇದೀಗ ವ್ಯಕ್ತಪಡಿಸಿದ್ದಾರೆ.

ದರ್ಶನ್ ಬೆನ್ನಿಗೆ ಹೊಸ ಕಂಟಕ?

ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ದರ್ಶನ್ ತೂಗುದೀಪ್ ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ, ಮನಸ್ಸಿಗೆ ಬಂದಂತೆ ಬದುಕುತ್ತಿದ್ದ ಫೋಟೋಸ್ ಈಗ ವೈರಲ್ ಆಗುತ್ತಿವೆ. ಇದೆಲ್ಲಾ ಮಾನ್ಯ ನ್ಯಾಯಾಲಯಕ್ಕೆ ತಲುಪಿದರೆ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಗ್ಯಾರಂಟಿ ಅಂತಾ ಹೇಳ್ತಾ ಇದ್ದಾರೆ ಕಾನೂನು ತಜ್ಞರು. ಹೀಗಾಗಿ ನಟ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಹೊಸ ಕಂಟಕ ಎದುರಾದಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಜಾಮೀನು ಪಡೆದು ದರ್ಶನ್ ತೂಗುದೀಪ್ ಹೊರಗೆ ಬರಲು ಇದು ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಈ ಫೋಟೋಸ್ ವೈರಲ್ ಮಾಡುತ್ತಾ, ನಮ್ಮ ಬಾಸ್ ಹಂಗೆ & ಹಿಂಗೆ ಅಂತಾ ಪೋಸ್ಟ್ ಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+