Darshan Thoogudeepa: ಇದ್ರೆ ನೆಮ್ಮದಿಯಾಗಿ ಇರಬೇಕು... ಅಂತಾ ಲಾಯರ್ ಜಗದೀಶ್‌ಗೆ ಡಿ-ಬಾಸ್ ಫ್ಯಾನ್ಸ್...
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಹಲವು ಸಂಕಷ್ಟ ಎದುರಿಸುತ್ತಿರುವ ದರ್ಶನ್ ತೂಗುದೀಪ್ ಅವರ ವಿರುದ್ಧ ಕೆಲವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಆದರೆ ಈ ಮಾತುಗಳು ಡಿ-ಬಾಸ್ ಅವರ ಅಭಿಮಾನಿಗಳನ್ನು ಈಗ ಕೆರಳಿಸುತ್ತಿದೆ. ಅದರಲ್ಲೂ ದರ್ಶನ್ ತೂಗುದೀಪ್ ಅವರ ಕುರಿತಾಗಿ, ಸೋಷಿಯಲ್ ಮೀಡಿಯಾಗಳಲ್ಲಿ ಆವಾಜ್ ಹಾಕುತ್ತಿರುವವರಿಗೆ ವಾರ್ನಿಂಗ್ ಕೊಡುತ್ತಿರುವ ಡಿ-ಬಾಸ್ ಫ್ಯಾನ್ಸ್ ಇದೀಗ, ಇದ್ರೆ ನೆಮ್ಮದಿಯಾಗಿ ಇರಬೇಕು... ಅಂತಿದ್ದಾರೆ!
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಮಾತನಾಡುತ್ತಾರೆ ಅನ್ನೋ ಕಾರಣಕ್ಕೆ ಇದೀಗ, ಡಿ-ಬಾಸ್ ಅಭಿಮಾನಿಗಳು ಲಾಯರ್ ಜಗದೀಶ್ ವಿರುದ್ಧ ರೊಚ್ಚಿಗೆದ್ದು ಆಕ್ರೋಶ ಹೊರಗೆ ಹಾಕುತ್ತಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಲಾಯರ್ ಜಗದೀಶ್ ಅವರು ಹಾಗೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ನಡುವೆ, ದೊಡ್ಡ ಕಾಳಗ ನಡೆಯುತ್ತಿದೆ. ಇಂತಹ ಸಮಯದಲ್ಲೇ, ಇದ್ರೆ ನೆಮ್ಮದಿಯಾಗಿ ಇರಬೇಕು...

ಡಿ-ಬಾಸ್ ಫ್ಯಾನ್ಸ್ VS ಲಾಯರ್ ಜಗದೀಶ್!
ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಹಾಗೂ ಡಿ-ಬಾಸ್ ದರ್ಶನ್ ಅವರ ಅಭಿಮಾನಿಗಳ ಬಗ್ಗೆ ಲಾಯರ್ ಜಗದೀಶ್ ಎಚ್ಚರಿಕೆಯ ಮಾತುಗಳನ್ನ ಆಡಿದ್ದರು. ಈ ರೀತಿ ಲಾಯರ್ ಜಗದೀಶ್ ಅವರ ವಿಡಿಯೋ ವೈರಲ್ ಆದ ನಂತರ ದೊಡ್ಡ ಬಿರುಗಾಳಿಯೇ ಎದ್ದಿದೆ. ಅದರಲ್ಲೂ ಡಿ-ಬಾಸ್ ಫ್ಯಾನ್ಸ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಲಾಯರ್ ಜಗದೀಶ್ ವಿರುದ್ಧ ತಿರುಗಿಬಿದ್ದು, ವಾರ್ನಿಂಗ್ ಕೊಡುವ ರೀತಿ ಪೋಸ್ಟ್ & ಕಮೆಂಟ್ ಹಾಕುತ್ತಿದ್ದಾರೆ.
'ಡಿ-ಬಾಸ್ ಅಲ್ಲ ಅವನು...'
ರೇಣುಕಾಸ್ವಾಮಿ ಕೊಲೆಯಾದ ನಂತರ, ಇಡೀ ಕರ್ನಾಟಕವೇ ಈ ಕುರಿತು ಮಾತನಾಡುತ್ತಿದೆ. ಮತ್ತೊಂದ್ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಅಂತಾ ಹೇಳಿಕೊಂಡು ಕೆಲವರು, ಜನರಿಗೆ ಬೆದರಿಕೆ ಹಾಕುತ್ತಿರುವ ಆರೋಪವೂ ಕೇಳಿ ಬರುತ್ತಿದೆ. ಈ ಆರೋಪಗಳ ಮಧ್ಯೆ ಇದೀಗ ಲಾಯರ್ ಜಗದೀಶ್, 'ಡಿ-ಬಾಸ್ ಅಲ್ಲ ಅವನು ಡ್ರಗ್ ಬಾಸ್, ನನ್ನ ಜಾಂ** ಬಾಸ್ ಅವನು...' ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ & ಡಿ-ಬಾಸ್ ದರ್ಶನ್ ಅಭಿಮಾನಿ ಬಳಗಕ್ಕೆ ವಾರ್ನಿಂಗ್ ಕೊಟ್ಟಿದ್ದರು. ಈ ವಿಡಿಯೋ ವೈರಲ್ ಆದ ನಂತರ ಮತ್ತಷ್ಟು ಕಿರಿಕ್ ಶುರುವಾಗಿದೆ.
ಒಟ್ನಲ್ಲಿ ಲಾಯರ್ ಜಗದೀಶ್ & ಡಿ-ಬಾಸ್ ದರ್ಶನ್ ತೂಗುದೀಪ್ ಫ್ಯಾನ್ಸ್ ನಡುವೆ ಇದೀಗ ದೊಡ್ಡ ಫೈಟಿಂಗ್ ಆರಂಭ ಆಗಿದೆ. ಅಲ್ಲದೆ ಇದು ಎಲ್ಲಿಗೆ ಬಂದು ನಿಲ್ಲುತ್ತೆ? ಅಂತಾ ಕೂಡ ಇದೀಗ ಚರ್ಚೆ ನಡೆಯುತ್ತಿದೆ. ಈ ವಿಚಾರದಲ್ಲಿ ಅಂತಿಮವಾಗಿ ಏನಾಗುತ್ತೆ? ಜಗಳ ನಿಲ್ಲುತ್ತಾ ಅಥವಾ ಮತ್ತಷ್ಟು ಹೆಚ್ಚಾಗುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications