Darshan Thoogudeepa: ರೇಣುಕಾಸ್ವಾಮಿ ಕುಟುಂಬಕ್ಕೆ 10 ಕೋಟಿ ರೂಪಾಯಿ...
ಡಿ-ಬಾಸ್ ದರ್ಶನ್ ತೂಗುದೀಪ್ & ಜೊತೆಗಾರರು ಸೇರಿ ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ವ್ಯಕ್ತಿಯನ್ನ, ಬರ್ಬರವಾಗಿ ಹಿಂಸೆ ನೀಡಿ ಕೊಲೆ ಮಾಡಿರುವ ಆರೋಪ ಕೇಳಿಬಂದು ಡಿ-ಬಾಸ್ ದರ್ಶನ್ ತೂಗುದೀಪ್ 100ಕ್ಕೂ ಹೆಚ್ಚು ದಿನಗಳ ಕಾಲ ಜೈಲಿನಲ್ಲಿ ನರಳುವಂತೆಯು ಆಗಿತ್ತು. ಇಂತಹ ಸಮಯದಲ್ಲೇ ಬಳ್ಳಾರಿ ಜೈಲಿನಿಂದ ಜಾಮೀನು ಪಡೆದು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರಿಲೀಸ್ ಆಗಿದ್ದಾರೆ. ಹೀಗಿದ್ದಾಗಲೇ, ರೇಣುಕಾಸ್ವಾಮಿ ಕುಟುಂಬಕ್ಕೆ 10 ಕೋಟಿ ರೂಪಾಯಿ...
ರೇಣುಕಾಸ್ವಾಮಿ ಕೊಲೆ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ ಒಂದಲ್ಲ ಒಂದು ರೀತಿಯ ಸಮಸ್ಯೆ ಸುಳಿಗೆ ಸಿಲುಕಿ ಪರದಾಡುತ್ತಿದ್ದಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಜೀವನದಲ್ಲಿ ರಾಜನ ರೀತಿ ಬಾಳುತ್ತಿದ್ದರು. ಆದರೆ ಪವಿತ್ರಾ ಗೌಡ ತಂಟೆಗೆ ಬಂದ ಅಂತಾ ರೇಣುಕಾಸ್ವಾಮಿ ಕಥೆಯನ್ನೇ ಮುಗಿಸಿದ ಆರೋಪ ಡಿ-ಬಾಸ್ ದರ್ಶನ್ ತೂಗುದೀಪ್ & ಜೊತೆಗಾರರ ವಿರುದ್ಧ ಕೇಳಿ ಬಂದಿತ್ತು. ಹೀಗಿದ್ದಾಗಲೇ, ರೇಣುಕಾಸ್ವಾಮಿ ಕುಟುಂಬಕ್ಕೆ 10 ಕೋಟಿ ರೂಪಾಯಿ...

ರೇಣುಕಾಸ್ವಾಮಿಗೆ 10 ಕೋಟಿ ರೂಪಾಯಿ...
ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್.. ಅಂತಾ ಎಲ್ಲೇ ಹೋದರೂ ಅಭಿಮಾನಿಗಳು ಇದೀಗ ಜೈಕಾರ ಹಾಕುತ್ತಾರೆ. ಬಳ್ಳಾರಿ ಜೈಲಿನಲ್ಲಿ ಇದ್ದಾಗ ದರ್ಶನ್ ತೂಗುದೀಪ್ ಅವರು, ಸಾಕಷ್ಟು ನೋವು ಅನುಭವಿಸಿದ್ದರು. ದರ್ಶನ್ ತೂಗುದೀಪ್ ಅವರ ಆರೋಗ್ಯ ಕೂಡ ಕೈಕೊಟ್ಟ ಕಾರಣ ಸಾಕಷ್ಟು ಸಮಸ್ಯೆ ಎದುರಾಗಿತ್ತು.
ಹೀಗೆ ದರ್ಶನ್ ತೂಗುದೀಪ್ ಅವರು ಸಾಕಷ್ಟು ಆರೊಗ್ಯ ಸಮಸ್ಯೆ ಎದುರಿಸುವಾಗ ಅವರ ಕೋಟಿ ಕೋಟಿ ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಈಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಮಯದಲ್ಲೇ, ಭೀಕರವಾಗಿ ಕೊಲೆ ಆಗಿರುವ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ ಬಗ್ಗೆ ಸ್ಫೋಟಕ ಸುದ್ದಿ ಹಬ್ಬುತ್ತಿದೆ.
ಕಾಮುಕ ಅಂತಿದ್ದಾರೆ ದರ್ಶನ್ ಅಭಿಮಾನಿಗಳು!
ರೇಣುಕಾಸ್ವಾಮಿ ಒಬ್ಬ ಕಾಮುಕ, ಇದೇ ಕಾರಣಕ್ಕೆ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕಥೆ ಮುಗಿಸಿದ್ದಾರೆ ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸಮರ್ಥನೆ ಮಾಡಿಕೊಳ್ಳುತ್ತಾರೆ. ಇಂತಹ ಸಮಯದಲ್ಲೇ, ರೇಣುಕಾಸ್ವಾಮಿ ಕುಟುಂಬಕ್ಕೆ 10 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ... ಎನ್ನುವ ಸುದ್ದಿಯನ್ನ ಈಗ ಹಬ್ಬಿಸಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ಪೋಸ್ಟ್ ವೈರಲ್ ಆಗ್ತಿದ್ದು, ಈ ಬಗ್ಗೆ ಇದುವರೆಗೂ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಡಿ-ಬಾಸ್ ದರ್ಶನ್ ತೂಗುದೀಪ್ ಹವಾ!
ಒಟ್ನಲ್ಲಿ ರೇಣುಕಾಸ್ವಾಮಿ ಕೊಲೆಯಾದ ನಂತರ ದಿನಕ್ಕೊಂದು ಘಟನೆ ನಡೆಯುತ್ತಿದೆ. ಹೀಗೆ ಇದ್ದಾಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬೆನ್ನು ನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಕಡೆ ಕೋಟಿ ಕೋಟಿ ಅಭಿಮಾನಿಗಳು, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಆದಷ್ಟು ಬೇಗ ಮತ್ತೆ ಸಿನಿಮಾಗಳನ್ನ ಮಾಡಲಿ ಅಂತಾ ಪ್ರಾರ್ಥನೆ ಮಾಡುತ್ತಿದ್ದಾರೆ.
ಡಿ-ಬಾಸ್ ಅಭಿಮಾನಿಗಳು & ವಿರೋಧಿಗಳ ಫೈಟ್!
ದರ್ಶನ್ ತೂಗುದೀಪ್ ಅವರು ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನರಳುತ್ತಿದ್ದಾರೆ. ಇಂತಹ ಸಮಯದಲ್ಲಿ ಅನಗತ್ಯವಾಗಿ ದರ್ಶನ್ ತೂಗುದೀಪ್ ಅವರು ಬೇಡದ ವಿವಾದ ಮಾಡಿಕೊಂಡು ಪರದಾಡುತ್ತಿದ್ದಾರೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ಅವರ ಹೆಸರು ಹೇಳಿಕೊಂಡು ಕೆಲವರು ಮಾಧ್ಯಮ ಸಿಬ್ಬಂದಿ ಅಂದ್ರೆ ಪತ್ರಕರ್ತರಿಗೆ ಸೇರಿದಂತೆ ದರ್ಶನ್ ಬಗ್ಗೆ ಮಾತನಾಡುವ ಹಲವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಇದೆ. ಹೀಗಿದ್ದಾಗಲೇ ಕೋರ್ಟ್ ಕೂಡ ಎಲ್ಲವನ್ನೂ ಗಮನಿಸುತ್ತಿದ್ದು, ದರ್ಶನ್ ತೂಗುದೀಪ್ ಮತ್ತೆ ಜೈಲಿಗೆ ಹೋಗುತ್ತಾರಾ? ಎಂಬ ಪ್ರಶ್ನೆ ಮೂಡಿದೆ.












Click it and Unblock the Notifications