Darshan Thoogudeepa: ಎಸಿಪಿ ಚಂದನ್‌ಗೆ ಮತ್ತೆ ಸವಾಲು ಹಾಕಿದ ದರ್ಶನ್ ತೂಗುದೀಪ್ ಅಭಿಮಾನಿಗಳು...

ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಸಾಕಷ್ಟು ನೋವನ್ನು ಅನುಭವಿಸಿ ಇದೀಗ ಬಳ್ಳಾರಿ ಸೆಂಟ್ರಲ್ ಜೈಲಿನಿಂದ ರಿಲೀಸ್ ಆಗಿ ಹೊರಗೆ ಬಂದಿದ್ದಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಈ ಕಷ್ಟ & ನೋವನ್ನು ನೋಡಿ ನಿಜವಾದ ಅಭಿಮಾನಿಗಳು ಕೊರಗುತ್ತಿದ್ದಾರೆ ಹಾಗೂ ಮರುಗುತ್ತಿದ್ದಾರೆ. ಆದರೆ ಕೆಲವರು ಅಭಿಮಾನಿಗಳ ಹೆಸರಲ್ಲಿ ಏನು ಮಾಡುತ್ತಿದ್ದಾರೆ ಗೊತ್ತಾ? ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೆಲವು ಅಭಿಮಾನಿಗಳು ಕರ್ನಾಟಕದ ಪೊಲೀಸರಿಗೇ ಚಾಲೆಂಜ್ ಹಾಕ್ತಾ ಇದ್ದಾರಾ? ಎಸಿಪಿ ಚಂದನ್‌ಗೆ ಮತ್ತೆ ಸವಾಲು ಹಾಕಿದ ದರ್ಶನ್ ತೂಗುದೀಪ್ ಅಭಿಮಾನಿಗಳು...

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಅವರು ತಪ್ಪನ್ನೇ ಮಾಡಿಲ್ಲ, ಆದ್ರೆ ಬೇಕು ಬೇಕು ಅಂತಲೇ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಅವರನ್ನ ಸಿಲುಕಿಸಿದ್ದಾರೆ ಎಂಬುದು ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಆರೋಪ. ಇದೆಲ್ಲ ಏನೇ ಇರಲಿ ಆದರೆ ಈಗ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಅಂತಾ ಹೇಳಿಕೊಂಡು ಕೆಲವರು ಪೊಲೀಸರಿಗೆ & ಮಾಧ್ಯಮದವರಿಗೆ ಬೆದರಿಕೆ ಹಾಕುತ್ತಿರುವ ಆರೋಪ ಕೇಳಿ ಬಂದಿದೆ.

Darshan Thoogudeepa Fans Challenging This To ACP Chandan

ಡಿ-ಬಾಸ್ ಅಭಿಮಾನ VS ಎಸಿಪಿ ಚಂದನ್

ಅದ್ರಲ್ಲೂ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ದರ್ಶನ್ ತೂಗುದೀಪ್ ಅವರನ್ನು ಜೈಲಿಗೆ ಕಳಿಸಿದ್ದ ಎಸಿಪಿ ಚಂದನ್ ಅವರಿಗೆ, ಈಗ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಅಂತಾ ಹೇಳಿಕೊಳ್ಳುತ್ತಿರುವ ಕೆಲವರು ಚಾಲೆಂಜ್ ಹಾಕುತ್ತಿದ್ದಾರೆ. 'ನಮ್ಮ ಡಿ-ಬಾಸ್ ಅರೆಸ್ಟ್ ಮಾಡಿದ್ದ ಎಸಿಪಿ ಚಂದನ್ ನೀವು ಈಗ ಹೊಸಕೆರೆ ಹಳ್ಳಿ ಏರಿಯಾದಲ್ಲಿ ನಮ್ಮ ಶಕ್ತಿ ಹೆಂಗಿದೆ ಗೊತ್ತಾ?' ಅಂತಾ ಚಾಲೆಂಜ್ ಹಾಕುತ್ತಿದ್ದಾರೆ.

ದರ್ಶನ್ ತೂಗುದೀಪ್ ಅಭಿಮಾನಿಗಳು & ಎಸಿಪಿ ಚಂದನ್ ನಡುವೆ ಸೋಷಿಯಲ್ ಮೀಡಿಯಾ ವಾರ್ ಇವತ್ತು ಅಥವಾ ನಿನ್ನೆಯದಲ್ಲ. ಕಳೆದ 3 ತಿಂಗಳಿಂದಲು ಕೂಡ ಇದೇ ರೀತಿ ಎಸಿಪಿ ಚಂದನ್ & ಡಿಸಿಪಿ ಗಿರೀಶ್ ಅವರ ಬಗ್ಗೆ ನಟ ದರ್ಶನ್ ತೂಗುದೀಪ್ ಅಭಿಮಾನಿಗಳು ಅಂತಾ ಹೇಳಿಕೊಳ್ಳುವ ಕೆಲವರು ಚಾಲೆಂಜ್ ಹಾಕುತ್ತಾ ಬಂದಿದ್ದಾರೆ.

ಪೊಲೀಸರಿಗೆ ಅಭಿಮಾನಿಗಳಿಂದ ಚಾಲೆಂಜ್?

ಅದರಲ್ಲೂ ದರ್ಶನ್ ತೂಗುದೀಪ್ ಅವರು ಜೈಲಿನಿಂದ ರಿಲೀಸ್ ಆದ ನಂತರ ಖುದ್ದು ಎಸಿಪಿ ಚಂದನ್ ನಮ್ಮ ಡಿ-ಬಾಸ್‌ಗೆ ಸೆಕ್ಯುರಿಟಿ ಕೊಡುತ್ತಾರೆ, ದರ್ಶನ್ ತೂಗುದೀಪ್ ಅವರ ಮನೆಗೆ ಎಸಿಪಿ ಚಂದನ್ ಅವರೇ ಸೆಕ್ಯುರಿಟಿ ಗಾರ್ಡ್ ಅಂತೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ತೂಗುದೀಪ್ ಅಭಿಮಾನಿಗಳು ಎಂಬ ಫ್ಯಾನ್ಸ್ ಪೇಜ್ ಮೂಲಕ ಪೋಸ್ಟ್‌ಗಳನ್ನ ಹಾಕಲಾಗಿತ್ತು, ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು.

ಈಗ ದರ್ಶನ್ ತೂಗುದೀಪ್ ಅವರು ಆರೋಗ್ಯ ಸಮಸ್ಯೆ ಕಾರಣ ಹೇಳಿ ರಿಲೀಸ್ ಆಗಿ ಬಳ್ಳಾರಿ ಜೈಲಿನಿಂದ ಹೊರಗೆ ಬಂದ ನಂತರ ಈ ಕಿರಿಕ್ ಮತ್ತೆ ಜೋರಾಗಿದ್ದು, ಪೊಲೀಸರಿಗೆ ಇದೀಗ ನಟ ದರ್ಶನ್ ತೂಗುದೀಪ್ ಅಭಿಮಾನಿಗಳು ಚಾಲೆಂಜ್ ಹಾಕುತ್ತಿರುವ ಆರೋಪ ಕೇಳಿ ಬಂದಿದೆ. ಅಲ್ಲದೆ ಈ ವಿಚಾರ ಮತ್ತೆ ದರ್ಶನ್ ತೂಗುದೀಪ್ ಅವರಿಗೆ ಸಮಸ್ಯೆ ಮಾಡುವ ವಾತಾವರಣ ಸೃಷ್ಟಿ ಮಾಡುತ್ತಿದ್ದು, ದೊಡ್ಡ ಮಟ್ಟದ ಚರ್ಚೆಗೆ ವೇದಿಕೆ ಒದಗಿಸಿದೆ.

ಮಾನ್ಯ ಕೋರ್ಟ್‌ನ ಷರತ್ತು ಮೀರಿದರೆ....

ಸಾಕ್ಷ್ಯ ನಾಶ ಪಡಿಸಲು ಯತ್ನಿಸಬಾರದು & ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಆಗಲಿ ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕುವಂತೆ ಇಲ್ಲ ಎಂಬ ಎಚ್ಚರಿಕೆ ನೀಡಲಾಗಿದೆ. ಇದಕ್ಕಿಂತ ಹೆಚ್ಚಾಗಿ, ರೇಣುಕಾಸ್ವಾಮಿ ಕೊಲೆ ಕೇಸ್‌ನ 2ನೇ ಆರೋಪಿ ದರ್ಶನ್ ತೂಗುದೀಪ್ ಅವರು ನೇರವಾಗಿ, ಈ ಕೇಸ್‌ನ ಸಾಕ್ಷಿಗಳ ಸಂಪರ್ಕಕ್ಕೆ ಬರಬಾರದು ಎಂದು ಎಚ್ಚರಿಸಲಾಗಿದೆ.

ಹೀಗಾಗಿಯೇ ಈಗ ಆಸ್ಪತ್ರೆಯಲ್ಲಿ ದರ್ಶನ್ ತೂಗುದೀಪ್ ಅವರ ಭೇಟಿಗೆ ಯಾರೆಲ್ಲ ಬರ್ತಿದ್ದಾರೆ? ಡಿ-ಬಾಸ್ ದರ್ಶನ್ ತೂಗುದೀಪ್ ಯಾರ ಯಾರ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದಾರೆ? ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಇನ್ನು ಅಕಸ್ಮಾತ್ ಕೋರ್ಟ್‌ನ ಷರತ್ತು ಮೀರಿದರೆ, ದರ್ಶನ್ ತೂಗುದೀಪ್ ಅವರು ಮತ್ತೆ ಬಳ್ಳಾರಿ ಜೈಲು ಸೇರುವುದು ಗ್ಯಾರಂಟಿ ಎಂಬ ಮಾತು ಸೋಷಿಯಲ್ ಮೀಡಿಯಾದಲ್ಲಿ ಓಡಾಡ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+