ಸಂಕ್ರಾಂತಿ ಹಬ್ಬದ ನಂತರ ನಟ ದರ್ಶನ್ ತೂಗುದೀಪ್ ಜೈಲಿನಿಂದ ರಿಲೀಸ್? Darshan Thoogudeepa
ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಸಂಪಾದಿಸಿ, ಅಭಿಮಾನಿಗಳ ಹೃದಯ ಗೆದ್ದು ಡಿ-ಬಾಸ್ ಎಂಬ ಬಿರುದು ಪಡೆದಿದ್ದ ನಟ ದರ್ಶನ್ ತೂಗುದೀಪ್ ಅವರು ಸಂಕಷ್ಟದಲ್ಲಿ ಇದ್ದಾರೆ. ಹೀಗೆಲ್ಲಾ ಇದ್ದರೂ ಅಭಿಮಾನಿಗಳು ಅವರ ಕೈಬಿಡದೆ, ಡೆವಿಲ್ ಸಿನಿಮಾ ಗೆಲ್ಲಿಸಿದ್ದಾರೆ. ಹಾಗೇ ನಟ ದರ್ಶನ್ ತೂಗುದೀಪ್ ಅವರು ಇನ್ನಷ್ಟು ಸಿನಿಮಾ ಮಾಡಬೇಕು, ಹೊರಗೆ ಬಂದು ಅಬ್ಬರಿಸಬೇಕು ಎಂಬ ಭಾರಿ ದೊಡ್ಡ ಆಸೆ & ಕನಸು ಇಟ್ಟುಕೊಂಡಿದ್ದರು. ಹಾಗಾದರೆ, ಸಂಕ್ರಾಂತಿ ಹಬ್ಬದ ನಂತರ ನಟ ದರ್ಶನ್ ತೂಗುದೀಪ್ ಜೈಲಿನಿಂದ ರಿಲೀಸ್?
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ್ ಅವರು 2ನೇ ಬಾರಿಗೆ ಜೈಲಿಗೆ ಹೋದ ನಂತರ ಅಭಿಮಾನಿಗಳಿಗೆ ತುಂಬಾ ಬೇಸರವಾಗಿದೆ. ನಮ್ಮ ಡಿ-ಬಾಸ್ ತಪ್ಪು ಮಾಡದೇ ಇದ್ದರೂ ಈ ರೀತಿಯಾಗಿ ಸಮಸ್ಯೆ ಮಾಡಲಾಗುತ್ತಿದೆ ಎಂಬ ಆರೋಪ ಕೂಡ ಮಾಡುತ್ತಿದ್ದಾರೆ. ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ತೂಗುದೀಪ್ ಅವರು ಸಾಕಷ್ಟು ಸಮಸ್ಯೆ ಎದುರಿಸುತ್ತಾ ಇದ್ದು, ಆದಷ್ಟು ಬೇಗ ಹೊರಗೆ ಬರಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಾ ಇದ್ದಾರೆ. ಇಷ್ಟೆಲ್ಲಾ ಇದ್ದಾಗಲೇ ದಿಢೀರ್ ನಟ ದರ್ಶನ್ ತೂಗುದೀಪ್ ಅವರು ಜೈಲಿನಿಂದ ರಿಲೀಸ್ ಆಗುವ ಬಗ್ಗೆ ಚರ್ಚೆ ಶುರುವಾಗಿದೆ.

ಸಂಕ್ರಾಂತಿ ಹಬ್ಬದ ನಂತರ ಡಿ-ಬಾಸ್ ರಿಲೀಸ್?
ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲ ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿಯಲ್ಲೇ ನಟ ದರ್ಶನ್ ತೂಗುದೀಪ್ ಅವರ ಘಟನೆ ದೊಡ್ಡ ಸೌಂಡ್ ಮಾಡುತ್ತಾ ಇದೆ. ಹಾಗೇ ಡೆವಿಲ್ ಸಿನಿಮಾ ರಿಲೀಸ್ ಆಗಿ ಅಬ್ಬರಿಸುವ ಸಮಯದಲ್ಲಿ ಇಂಡಿಯಾ ಪೂರ್ತಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಕೋಟಿ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಡೆವಿಲ್ ಸಿನಿಮಾ ದಾಖಲೆ ಬರೆದಿದೆ. ಇಂತಹ ಸಮಯದಲ್ಲೇ, ನಟ ದರ್ಶನ್ ತೂಗುದೀಪ್ ಅವರು ಜೈಲಿನಿಂದ ರಿಲೀಸ್ ಆಗಿ ಹೊರಗೆ ಬಂದರೆ ಅಭಿಮಾನಿಗಳ ಸಂತೋಷ ಹೇಗೆ ಇರಬೇಡ?
6 ತಿಂಗಳವರೆಗೆ ಜಾಮೀನು ಕಷ್ಟ?
ಜನವರಿ 14ಕ್ಕೆ ನಟ ದರ್ಶನ್ ತೂಗುದೀಪ್ ಅವರು ಜೈಲಿಗೆ ಹೋಗಿ 6 ತಿಂಗಳು ಮುಗಿಯಲಿದೆ. ಹೀಗೆ ಇದ್ದಾಗ ಜೈಲು ಸೇರಿ 6 ತಿಂಗಳವರೆಗೂ ಜಾಮೀನು ಸಿಗೋದು ಕಷ್ಟ ಅಂತಲೇ ಹೇಳಲಾಗಿತ್ತು, ಆದರೆ ಈಗ 6 ತಿಂಗಳು ಆಗಿರುವ ಕಾರಣಕ್ಕೆ ಜನವರಿ 14ರ ನಂತರ ನಟ ದರ್ಶನ್ ತೂಗುದೀಪ್ ಅವರ ಪರವಾಗಿ ಜಾಮೀನು ಅಂದ್ರೆ ಬೇಲ್ ಅರ್ಜಿ ಸಲ್ಲಿಕೆ ಸಾಧ್ಯತೆ ದಟ್ಟವಾಗಿದೆ. ಜಾಮೀನಿಗಾಗಿ ಮತ್ತೆ ಮೊರೆ ಹೋಗುವ ಸಾಧ್ಯತೆ ಹೆಚ್ಚಿದ್ದು, ಬಹುತೇಕ ನಟ ದರ್ಶನ್ ತೂಗುದೀಪ್ ಅವರಿಗೆ ಜಾಮೀನು ಸಿಗುತ್ತೆ ಎಂಬ ಭರವಸೆ ಅಭಿಮಾನಿಗಳಲ್ಲಿ ಮೂಡಿದೆ. ಹಾಗೇ ನಟ ದರ್ಶನ್ ತೂಗುದೀಪ್ ಅವರ ಪರ ವಕೀಲರು ಕೂಡ ಇದೇ ಭರವಸೆ ವ್ಯಕ್ತಪಡಿಸುತ್ತಿದ್ದು, ಸಂಕ್ರಾಂತಿ ಹಬ್ಬದ ನಂತರ ಭರ್ಜರಿ ಸುದ್ದಿ ಸಿಗುವ ನಿರೀಕ್ಷೆ ಇದೆ.
ಹಲವು ಸಂಕಷ್ಟಗಳಿಗೆ ಸಿಗುತ್ತಾ ಮುಕ್ತಿ?
ನಟ ದರ್ಶನ್ ಅವರು ಜೈಲಲ್ಲಿ ಇದ್ದರೂ ಡೆವಿಲ್ ಸಿನಿಮಾ ಹಿಟ್ ಆಗಿದ್ದು, ಕೋಟ್ಯಂತರ ರೂಪಾಯಿ ಹಣ ಗಳಿಸಿದೆ. ಹೀಗಾಗಿ ಅಭಿಮಾನಿಗಳು ಕೂಡ ಮುಂದಿನ ಸಿನಿಮಾಗೆ ಕಾಯುತ್ತಿದ್ದಾರೆ. ಅಲ್ಲದೆ ಇದೇ ರೀತಿಯಾಗಿ ಬೆಂಬಲ ನೀಡುವ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಹೇಳುತ್ತಾ ಇದ್ದಾರೆ ನಟ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು. ಹೀಗಿದ್ದಾಗ ನಟ ದರ್ಶನ್ ತೂಗುದೀಪ್ ಅವರು ಜೈಲಿನಿಂದ ರಿಲೀಸ್ ಆಗಿ ಹೊರಗೆ ಬಂದರೆ ಮುಂದಿನ ಸಿನಿಮಾಗೆ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಚಿಂತಿಸಲಿದ್ದಾರೆ, ಹೀಗಾಗಿ ಆದಷ್ಟು ಬೇಗ ಜಾಮೀನು ಸಿಗಲಿ ಎಂದು ಅಭಿಮಾನಿಗಳು ಪ್ರಾರ್ಥನೆ ಮಾಡುತ್ತಿದ್ದಾರೆ. ಆದರೆ ಜಾಮೀನು ಅರ್ಜಿಯ ಬಗ್ಗೆ ನಟ ದರ್ಶನ್ ಅವರ ಪರ ವಕೀಲರು ಯಾವ ನಿರ್ಧಾರ ಕೈಗೊಳ್ಳುತ್ತಾರೆ? ಕೋರ್ಟ್ ಇದಕ್ಕೆ ಯಾವ ತೀರ್ಪು ಕೊಡುತ್ತದೆ ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications