1,000 ಕೋಟಿ ಕಲೆಕ್ಷನ್ ಗ್ಯಾರಂಟಿ, ನಟ ದರ್ಶನ್ ತೂಗುದೀಪ್ ಅಭಿಮಾನಿಗಳ ಅಭಿಯಾನ! Darshan Thoogudeepa
ಕನ್ನಡ ಸಿನಿಮಾ ಇಂಡಸ್ಟ್ರಿಗೆ ಇನ್ನೇನು 100 ವರ್ಷ ತುಂಬಲಿದ್ದು, ಜಗತ್ತಿನ ಕೆಲವೇ ಕೆಲವು ಚಿತ್ರ ರಂಗದ ಪೈಕಿ ಕನ್ನಡ ಸಿನಿಮಾ ರಂಗ ಕೂಡ ಒಂದಾಗಲಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಸಾಧನೆ ಮಾಡಿರುವ ರೀತಿಗೆ ಸ್ವತಃ ಹಾಲಿವುಡ್ ಮಂದಿ ಕೂಡ ಬೆರಗಾಗುತ್ತಾರೆ, ಯಾಕಂದ್ರೆ ಕನ್ನಡ ಸಿನಿಮಾ ಸಾವಿರಾರು ಕೋಟಿ ರೂಪಾಯಿ ದಾಟಿ ಹೋಗಬಹುದು ಎಂಬುದನ್ನ ಕನ್ನಡಿಗರು ತೋರಿಸಿದ್ದು ಈಗ ಇತಿಹಾಸ. ಇಂತಹ ಸಮಯದಲ್ಲೇ 1,000 ಕೋಟಿ ಕಲೆಕ್ಷನ್ ಗ್ಯಾರಂಟಿ, ನಟ ದರ್ಶನ್ ತೂಗುದೀಪ್ ಅಭಿಮಾನಿಗಳ ಅಭಿಯಾನ!
ಹೌದು, ಭಾರತದ ಸಿನಿಮಾ ರಂಗ ಎಂದು ಗುರುತಿಸಿಕೊಂಡಿದ್ದ ಹಿಂದಿ ಸಿನಿಮಾ ರಂಗ ಬಾಲಿವುಡ್ ಮೀರಿಸಿ ಸಾಧನೆ ಮಾಡುವ ಕೆಪಾಸಿಟಿ ಇರುವುದು ಕನ್ನಡ ಸಿನಿಮಾ ರಂಗಕ್ಕೆ ಮಾತ್ರ. ಹೀಗೆಲ್ಲಾ, ಭಾರತೀಯ ಸಿನಿಮಾ ರಂಗ ದೊಡ್ಡ ಮಟ್ಟದಲ್ಲಿ ಹವಾ ಎಬ್ಬಿಸುತ್ತಿದೆ. ಅದರಲ್ಲೂ ಕನ್ನಡದಲ್ಲಿ ಬರುವ ಸಿನಿಮಾಗಳ ಎದುರು ಬರೋದಕ್ಕೆ ಸ್ವತಃ ಬಾಲಿವುಡ್ ಸಿನಿಮಾ ರಂಗ ಯೋಚನೆ ಮಾಡುವ ರೀತಿ ಆಗಿದೆ. ಇದೀಗ ನಟ ದರ್ಶನ್ ತೂಗುದೀಪ್ ಅಭಿಮಾನಿಗಳು ಹೊಸ ಚಾಲೆಂಜ್ ತಗೊಂಡು, ಅದನ್ನ ಸಾಧಿಸಲು ಮುಂದೆ ನುಗ್ಗಿದ್ದಾರೆ.

1,000 ಕೋಟಿ ರೂಪಾಯಿ ಕಲೆಕ್ಷನ್...
1.. 2.. 3... ಹೀಗೆ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಕೌಂಟ್‌ಡೌನ್ ಶುರು ಮಾಡಿದ್ದಾರೆ. ಯಾಕಂದ್ರೆ ಇನ್ನು ಕೇವಲ 9 ದಿನಗಳಲ್ಲಿ ಡೆವಿಲ್ ಸಿನಿಮಾ ಅಬ್ಬರಿಸೋಕೆ ಎಂಟ್ರಿ ಕೊಡುತ್ತಿದೆ. ಈ ಸಿನಿಮಾ 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವುದು ಗ್ಯಾರಂಟಿ ಅಂತಾ ಕೂಡ ಚಾಲೆಂಜ್ ಹಾಕುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು. ಅದರಲ್ಲೂ ಸೋಷಿಯಲ್ ಮೀಡಿಯಾ ಮೂಲಕ ಇದೀಗ ಭಾರಿ ದೊಡ್ಡ ಮಟ್ಟದಲ್ಲಿ ಕ್ಯಾಂಪೇನ್ ಕೂಡ ಮಾಡಲಾಗುತ್ತಿದೆ. ಡೆವಿಲ್ ಸಿನಿಮಾ 1,000 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ತನಕವೂ ನಾವು ಬೆನ್ನಿಗೆ ನಿಲ್ಲಬೇಕು ಅಂತಿದ್ದಾರೆ ಅಭಿಮಾನಿಗಳು. ಇದೀಗ ಇದು ಸಖತ್ ಟ್ರೆಂಡ್ ಹುಟ್ಟು ಹಾಕಿದ್ದು, ಹೊಸ ಇತಿಹಾಸ ನಿರ್ಮಾಣದ ನಿರೀಕ್ಷೆ ಮೂಡಿದೆ.
ಡಿ-ಬಾಸ್ ಹವಾ ಮತ್ತೆ ಬಲು ಜೋರು?
ಒಟ್ನಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಮತ್ತೆ ಜೋರಾಗುತ್ತೆ, ಇಡೀ ಪ್ರಪಂಚ ನೋಡುವ ರೀತಿ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮತ್ತೆ ಎದ್ದು ಬರ್ತಾರೆ... ಹೀಗಂತಾ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿ ಬಳಗ ಹೆಮ್ಮೆಯಿಂದ ಎದೆ ತಟ್ಟಿಕೊಂಡು ಹೇಳುತ್ತಿದ್ದಾರೆ. ಏನೇ ಕಷ್ಟ ಬಂದರೂ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ನಾವು ಬಿಟ್ಟು ಕೊಡೋದಿಲ್ಲ... ಅಂತಾ ಕೂಡ ಕೋಟಿ ಕೋಟಿ ಅಭಿಮಾನಿಗಳು ಸಾರಿ ಸಾರಿ ಹೇಳುತ್ತಿದ್ದಾರೆ.












Click it and Unblock the Notifications