Darshan Thoogudeepa: ನಿಖಿಲ್ ಕುಮಾರಸ್ವಾಮಿ ಸೋಲಿಗೆ ಡಿ-ಬಾಸ್ ದರ್ಶನ್ ತೂಗುದೀಪ್ ಕಾರಣ ಅಂತಾ....

ಡಿ-ಬಾಸ್ ದರ್ಶನ್ ತೂಗುದೀಪ್ ಕರ್ನಾಟಕ ರಾಜಕೀಯಕ್ಕೆ ಬಂದ್ರೆ ಮುಂದಿನ ಸಿಎಂ ಆಗಿ, ಕರ್ನಾಟಕ ರಾಜ್ಯವನ್ನು ಸಿಂಗಾಪುರ ಮಾಡೋದು ಗ್ಯಾರಂಟಿ ಅಂತಾನೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹೇಳ್ತಿದ್ದರು. ಯಾಕಂದ್ರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಯಾವುದೇ ರಾಜಕೀಯ ಚುನಾವಣಾ ಪ್ರಚಾರಕ್ಕೆ ಹೋದರೂ ಲಕ್ಷ ಲಕ್ಷ ಅಭಿಮಾನಿ ಬಳಗ ಸೇರುತ್ತಿತ್ತು ಎಂಬುದೇ ಇದಕ್ಕೆ ಕಾರಣ.

ಡಿ-ಬಾಸ್.. ಡಿ-ಬಾಸ್.. ಡಿ-ಬಾಸ್... ಹೀಗೆ ಕರ್ನಾಟಕದಲ್ಲಿ ಎಲ್ಲೇ ಚುನಾವಣೆ ನಡೆದರೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಸಖತ್ ಡಿಮ್ಯಾಂಡ್ ಇತ್ತು. ಆದರೆ ಹೀಗಿದ್ದಾಗಲೇ ರೇಣುಕಾಸ್ವಾಮಿ ಕೊಲೆ ಕೇಸ್ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಸೆಂಟ್ರಲ್ ಜೈಲು ಸೇರುವಂತೆ ಮಾಡಿತ್ತು. ಇದು ಸಾಲದು ಎನ್ನುವಂತೆ ಈಗ, ನಿಖಿಲ್ ಕುಮಾರಸ್ವಾಮಿ ಸೋಲಿಗೆ ಡಿ-ಬಾಸ್ ದರ್ಶನ್ ತೂಗುದೀಪ್ ಕಾರಣ ಅಂತಾ....

Darshan Thoogudeepa Fans Are Saying This About Nikhil Kumaraswamy

ನಿಖಿಲ್ ಕುಮಾರಸ್ವಾಮಿ ಸೋಲಿಗೆ ಡಿ-ಬಾಸ್....

ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮನಸ್ಸು ಮಾಡಿದರೆ ಕರ್ನಾಟಕ ರಾಜಕೀಯದಲ್ಲಿ ಯಾರನ್ನ ಬೇಕಾದರೂ ಸೋಲಿಸಬಹುದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಮನಸ್ಸು ಮಾಡಿದರೆ ಕರ್ನಾಟಕ ರಾಜಕೀಯದಲ್ಲಿ ಯಾರನ್ನ ಬೇಕಾದರೂ ಗೆಲ್ಲಿಸಲೂ ಬಹುದು ಅಂತಾ ವಾದ ಮಾಡುತ್ತಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು.

ಡಿ-ಬಾಸ್ VS ಕುಮಾರಸ್ವಾಮಿ ಅವರ ಕುಟುಂಬ?

ಅದರಲ್ಲೂ, 2019ರ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋತಿದ್ದು & ಸುಮಲತಾ ಅಂಬರೀಶ್ ಅವರು ಗೆದ್ದಿದ್ದು ಇದೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಮೂಲಕ ಅನ್ನೋದು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹೇಳುವ ಮಾತು. ಹೀಗಿದ್ದಾಗಲೇ, ಚನ್ನಪಟ್ಟಣದಲ್ಲಿಯೂ ನಿಖಿಲ್ ಕುಮಾರಸ್ವಾಮಿ ಸೋಲಿಗೆ ಡಿ-ಬಾಸ್ ದರ್ಶನ್ ತೂಗುದೀಪ್ ಕಾರಣ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ & ಕಮೆಂಟ್ ಮೂಲಕ ಚರ್ಚೆ ಮಾಡ್ತಿದ್ದಾರೆ ಕೆಲವರು. ಹಾಗಾದ್ರೆ ಕಾರಣ ಏನಂತೆ?

ಡಿ-ಬಾಸ್ ದರ್ಶನ್ ಅಭಿಮಾನಿಗಳಿಂದ...

ಅಂದಹಾಗೆ ಡಿ-ಬಾಸ್ ದರ್ಶನ್ ತೂಗುದೀಪ್ & ಕುಮಾರಸ್ವಾಮಿ ಅವರ ನಡುವೆ ಮೊದಲಿಂದ ಕೂಡ ದೊಡ್ಡ ದ್ವೇಷ, ಕಿತ್ತಾಟ ಇದ್ದೇ ಇದೆ. ಕೆಲವೇ ದಿನಗಳ ಹಿಂದೆ ಅಂದ್ರೆ 2024ರ ಮಂಡ್ಯ ಲೋಕಸಭಾ ಚುನಾವಣೆ ಸಮಯದಲ್ಲೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್ ಮಂಡ್ಯದಲ್ಲಿ ಪ್ರಚಾರ ನಡೆಸಿ, ಎಲೆಕ್ಷನ್ ಕ್ಯಾಂಪೇನ್ ಮಾಡಿದ್ದರು. ಸ್ಟಾರ್ ಚಂದ್ರು ಬೆನ್ನಿಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ನಿಂತಿದ್ದರು.

ಹೀಗಿದ್ದಾಗ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವ್ರು ಜೈಲಿಗೆ ಹೋದ ಕಾರಣ, ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ರಿವೇಂಜ್ ತೆಗೆದುಕೊಂಡಿದ್ದಾರೆ. ಹೀಗಾಗಿ ನಿಖಿಲ್ ಕುಮಾರಸ್ವಾಮಿ, ಚನ್ನಪಟ್ಟಣದಲ್ಲಿ ಸೋತಿದ್ದಾರೆ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ಹೀಗಾಗಿ ಈ ಸುದ್ದಿಯ ಪರಾಮರ್ಶೆ ಆಗಬೇಕಿದೆ ಅಂತಿದ್ದಾರೆ ಕನ್ನಡಿಗರು.

ಡಿ.ಕೆ. ಬ್ರದರ್ಸ್ ಎದುರು ನಲುಗಿದ ಜೆಡಿಎಸ್?

ಹೌದು, ರಾಮನಗರ ಜಿಲ್ಲೆಯಲ್ಲಿ ಡಿ.ಕೆ. ಬ್ರದರ್ಸ್ ಹಿಡಿತ ಬಲವಾಗಿದೆ. ಅದರಲ್ಲೂ ಕನಕಪುರ ಭಾಗದಲ್ಲಿ ಡಿ.ಕೆ. ಸುರೇಶ್ & ಡಿ.ಕೆ. ಶಿವಕುಮಾರ್ ಅವರ ಹಿಡಿತಕ್ಕೆ ಬೇರೆ ಯಾರು ಕೂಡ ಸಾಠಿ ಇಲ್ಲ ಎನ್ನುವಂತಹ ವಾತಾವರಣ ಇತ್ತು. ಈಗ ಡಿಕೆ ಬ್ರದರ್ಸ್ ಹವಾ ಇಡೀ ರಾಮನಗರ ಜಿಲ್ಲೆಗೆ ಆವರಿಸಿದ್ದು, ಭಾರಿ ದೊಡ್ಡ ಹಂತದಲ್ಲಿ ಗೆದ್ದು ಬೀಗಿದ್ದಾರೆ ಕಾಂಗ್ರೆಸ್ ಅಭ್ಯರ್ಥಿಯಾದ ಸಿಪಿ ಯೋಗೇಶ್ವರ್ ಅವರು.

ಇದಿಷ್ಟು ಮಾತ್ರವಲ್ಲದೆ ಸಿಎಂ ಸಿದ್ದರಾಮಯ್ಯ & ಸಚಿವರಾದ ಜಮೀರ್ ಅವರು ಸೇರಿದಂತೆ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಪರವಾಗಿ ಘಟಾನುಘಟಿ ನಾಯಕರೇ ಬಂದು ಭಾರಿ ದೊಡ್ಡ ಮಟ್ಟದಲ್ಲಿ ಪ್ರಚಾರ ಕಾರ್ಯ ನಡೆಸಿದ್ದರು. ಹೀಗಿದ್ದಾಗ ಸಿಪಿ ಯೋಗೇಶ್ವರ್ ಗೆಲುವು ಕೂಡ ಸುಲಭವಾಯಿತು ಎಂಬ ಚರ್ಚೆ ನಡೆಯುತ್ತಿದೆ. ಈ ಮೂಲಕ ರಾಮನಗರದಲ್ಲಿ ಈಗ ಜೆಡಿಎಸ್ ಖಾಲಿ.. ಖಾಲಿ.. ಆಗಿದ್ದರೆ, ಕಾಂಗ್ರೆಸ್ ಜಾಲಿ.. ಜಾಲಿ.. ಅಂತಿದೆ ಅಂತಾ ಜನ ಮಾತನಾಡುತ್ತಿದ್ದಾರೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+