Darshan Thoogudeepa: ದರ್ಶನ್ ತೂಗುದೀಪ್ ರಿಲೀಸ್ ಆಗುವ ದಿನ ಅಭಿಮಾನಿಗಳು ಮಾಡುವ ಕೆಲಸ ಏನಂತೆ ಗೊತ್ತಾ?
ದರ್ಶನ್ ತೂಗುದೀಪ್ & ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿಗೆ ಸೇರಿದ್ದು, ಈ ಸಮಯದಲ್ಲಿ ದರ್ಶನ್ ತೂಗುದೀಪ್ ವಿರುದ್ಧದ ಕೊಲೆ ಆರೋಪಕ್ಕೆ ಹಲವು ಸಾಕ್ಷ್ಯಗಳು ಈಗ ಸಿಗುತ್ತಿವೆ. ದರ್ಶನ್ ತೂಗುದೀಪ್ & ಗ್ಯಾಂಗ್ ವಿರುದ್ಧದ ಕೊಲೆ ಆರೋಪ ಸಂಬಂಧ ಇದೀಗ, ತನಿಖೆ ನಡೆಸುತ್ತಿರುವ ಪೊಲೀಸರು ಕೂಡ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅಭಿಮಾನಿಗಳು ಹೊಸ ಚಾಲೆಂಜ್ ಹಾಕಿದ್ದಾರೆ. ಹಾಗಾದ್ರೆ ದರ್ಶನ್ ತೂಗುದೀಪ್ ರಿಲೀಸ್ ಆಗುವ ದಿನ ಅಭಿಮಾನಿಗಳು ಮಾಡುವ ಕೆಲಸ ಏನಂತೆ ಗೊತ್ತಾ?
ನಟ ದರ್ಶನ್ ತೂಗುದೀಪ್ ಅವರು ಜೈಲಿನಿಂದ ರಿಲೀಸ್ ಆಗಿ, ಶೀಘ್ರದಲ್ಲೇ ಹೊರ ಬಂದು ಮತ್ತೆ ಸಿನಿಮಾಗಳನ್ನು ಮಾಡುತ್ತಾರೆ ಅನ್ನೋದು ಅವರ ಅಭಿಮಾನಿಗಳ ಆಶಯ. ಅದ್ರಲ್ಲೂ ಈ ಸಮಯದಲ್ಲಿ ದರ್ಶನ್ ಅವರ ವಿರುದ್ಧ ಮಾತನಾಡುವವರಿಗೆ ಕೂಡ ಅಭಿಮಾನಿಗಳು ಈ ರೀತಿ ಎಚ್ಚರಿಕೆ ನೀಡುತ್ತಿದ್ದು, ನಮ್ಮ ಬಾಸ್ ಹೊರಗೆ ಬರಲಿ ಆಮೇಲೆ ತೋರಿಸುತ್ತೇವೆ ಏನು ಅಂತಾ ಎಂದು ಹೇಳ್ತಿದ್ದಾರೆ. ಅದ್ರಲ್ಲೂ ದರ್ಶನ್ ತೂಗುದೀಪ್ ಅವರ ವಿರುದ್ಧ ಇದೀಗ ಚಾರ್ಜ್ ಶೀಟ್ ಸಲ್ಲಿಕೆ ಆದ ಕಾರಣ ದರ್ಶನ್ ತೂಗುದೀಪ್ ಅವರ ಪರ ಜಾಮೀನಿಗೆ ಅರ್ಜಿ ರೆಡಿಯಾಗಿದೆ. ಹೀಗಾಗಿ ದರ್ಶನ್ ಅವರು ಆದಷ್ಟು ಬೇಗನೇ ಹೊರ ಬರುವ ನಿರೀಕ್ಷೆಯಲ್ಲಿ ಇದ್ದಾರೆ. ಹಾಗಾದ್ರೆ ದರ್ಶನ್ ತೂಗುದೀಪ್ ರಿಲೀಸ್ ಆಗುವ ದಿನ ಅಭಿಮಾನಿಗಳು ಮಾಡುವ ಕೆಲಸ ಏನು?

ಸಂಭ್ರಮದ ಜೊತೆಗೆ ವಾರ್ನಿಂಗ್!
ಹೌದು, ಇದೀಗ ನಟ ದರ್ಶನ್ ತೂಗುದೀಪ್ & ಗ್ಯಾಂಗ್ ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಲಾಕ್ ಆಗಿ ಜೈಲು ಸೇರಿದೆ. ಹೀಗಿದ್ದಾಗ ನಟ ದರ್ಶನ್ & ಗ್ಯಾಂಗ್ ಜಾಮೀನು ಪಡೆದು ಹೊರಗೆ ಬರುವ ದಿನ, ಸಂಭ್ರಮದಿಂದ ದರ್ಶನ್ ತೂಗುದೀಪ್ ಅವರನ್ನ ಬರ ಮಾಡಿಕೊಳ್ಳುತ್ತೇವೆ. ಈ ಸಮಯದಲ್ಲೇ ದರ್ಶನ್ ಅವರ ವಿರೋಧಿಗಳಿಗೆ ಹಾಗೂ ಚೆನ್ನಾಗಿ ಇದ್ದು ಈಗ ವಿರುದ್ಧವಾಗಿ ಮಾತನಾಡುತ್ತಿರುವ ಪ್ರತಿಯೊಬ್ಬರಿಗೂ ಉತ್ತರ ಕೊಡ್ತೀವಿ ಅಂತಿದ್ದಾರೆ ದರ್ಶನ್ ಅವರ ಫ್ಯಾನ್ಸ್. ಈ ರೀತಿಯ ಹೇಳಿಕೆಗಳು ಈಗ ವೈರಲ್ ಆಗುತ್ತಿದ್ದು, ಭಾರಿ ಚರ್ಚೆ ಕೂಡ ನಡೆಯುತ್ತಿದೆ.
ರೇಣುಕಾಸ್ವಾಮಿ ಫೋಟೋ ವೈರಲ್
ರೇಣುಕಾಸ್ವಾಮಿ ಕೊಲೆ ಆಗುವ ಮೊದಲು ಕಣ್ಣು & ಮುಖಕ್ಕೆ ಗಾಯ ಮಾಡಿಕೊಂಡು ಕೂತು ದರ್ಶನ್ & ಗ್ಯಾಂಗ್ ಎದುರು ಬೇಡಿಕೊಳ್ಳುತ್ತಿರುವ ಫೋಟೋಗೆ ಭರ್ಜರಿ ಕಮೆಂಟ್‌ಗಳು ದರ್ಶನ್ ಅವರ ಅಭಿಮಾನಿಗಳಿಂದ ಬರುತ್ತಿವೆ. ಬಹುತೇಕರು ಫೋಟೊ ನೋಡಿ ಹೇಳಿದ್ದು ಏನು ಅಂದ್ರೆ, ಈ ರೀತಿ ಒಬ್ಬ ವ್ಯಕ್ತಿಯನ್ನು ಹಿಂಸೆ ಮಾಡಬಾರದಾಗಿತ್ತು ಅಂತಾ. ಈ ಮೂಲಕ ದರ್ಶನ್‌ರ ಬಗ್ಗೆ ಚರ್ಚೆ ನಡೆಯುತ್ತಿದೆ. ಒಟ್ನಲ್ಲಿ ಸೋಷಿಯಲ್ ಮೀಡಿಯಾ ಪೂರ್ತಿ ದರ್ಶನ್ ಮ್ಯಾಟರ್ ಗಲಾಟೆ ಎಬ್ಬಿಸಿದೆ.
ದರ್ಶನ್ ಬೆನ್ನಿಗೆ ಹೊಸ ಕಂಟಕ?
ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ದರ್ಶನ್ ತೂಗುದೀಪ್ ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ, ಮನಸ್ಸಿಗೆ ಬಂದಂತೆ ಬದುಕುತ್ತಿದ್ದ ಫೋಟೋಸ್ ಈಗ ವೈರಲ್ ಆಗುತ್ತಿವೆ. ಇದೆಲ್ಲಾ ಮಾನ್ಯ ನ್ಯಾಯಾಲಯಕ್ಕೆ ತಲುಪಿದರೆ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಗ್ಯಾರಂಟಿ ಅಂತಾ ಹೇಳ್ತಾ ಇದ್ದಾರೆ ಕಾನೂನು ತಜ್ಞರು. ಹೀಗಾಗಿ ನಟ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಹೊಸ ಕಂಟಕ ಎದುರಾದಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಜಾಮೀನು ಪಡೆದು ದರ್ಶನ್ ತೂಗುದೀಪ್ ಹೊರಗೆ ಬರಲು ಇದು ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಈ ಫೋಟೋಸ್ ವೈರಲ್ ಮಾಡುತ್ತಾ, ನಮ್ಮ ಬಾಸ್ ಹಂಗೆ & ಹಿಂಗೆ ಅಂತಾ ಪೋಸ್ಟ್ ಹಾಕುತ್ತಿದ್ದಾರೆ.












Click it and Unblock the Notifications