Darshan Thoogudeepa: ರೇಣುಕಾಸ್ವಾಮಿಗೆ 1 ಕೋಟಿ ರೂಪಾಯಿ ಗುಟ್ಟಾಗಿ ಕೊಟ್ಟರಾ ಡಿ-ಬಾಸ್ ದರ್ಶನ್....

ಡಿ-ಬಾಸ್ ದರ್ಶನ್ ತೂಗುದೀಪ್ & ಜೊತೆಗಾರರು ಸೇರಿ ರೇಣುಕಾಸ್ವಾಮಿ ಎಂಬ ಚಿತ್ರದುರ್ಗದ ವ್ಯಕ್ತಿಯನ್ನ, ಮರ್ಮಾಂಗ ತುಳಿದು, ಎದೆಗೆ ಒದ್ದು, ತಲೆಗೆ ತೂತು ಮಾಡಿ, ಎತ್ತಿ ಎತ್ತಿ ಬಿಸಾಡಿ, ಸಿಕ್ಕಾಪಟ್ಟೆ ಟಾರ್ಚರ್ ಕೊಟ್ಟು ಪಟ್ಟಣಗೆರೆ ಶೆಡ್‌ನ ಒಳಗೆ ಬರ್ಬರವಾಗಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಇಂತಹ ಸಮಯದಲ್ಲೇ, ರೇಣುಕಾಸ್ವಾಮಿಗೆ 1 ಕೋಟಿ ರೂಪಾಯಿ ಗುಟ್ಟಾಗಿ ಕೊಟ್ಟರಾ ಡಿ-ಬಾಸ್ ದರ್ಶನ್....

'ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಕೊಡಗೈ ದಾನಿ, ಕೋಟ್ಯಂತರ ಜನರಿಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕೋಟಿ ಕೋಟಿ ರೂಪಾಯಿ ಸಹಾಯ ಮಾಡಿದ್ದಾರೆ. ಹಾಗೇ ಯಾರೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮನೆ ಎದುರು ಹೋಗಿ ಸಹಾಯ ಬೇಡಿದರೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇಲ್ಲ ಅನ್ನಲ್ಲ, ಲಕ್ಷ & ಕೋಟಿ ರೂಪಾಯಿ ಆದರೂ ಸಹಾಯ ಮಾಡುತ್ತಾರೆ...' ಇದು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹೇಳುವ ಮಾತು, ಹೀಗಿದ್ದಾಗಲೇ ರೇಣುಕಾಸ್ವಾಮಿಗೆ 1 ಕೋಟಿ ರೂಪಾಯಿ ಗುಟ್ಟಾಗಿ ಕೊಟ್ಟರಾ ಡಿ-ಬಾಸ್ ದರ್ಶನ್....

Darshan Thoogudeepa Fans Are Saying That Renukaswamy Family Is Got This Gift

ರೇಣುಕಾಸ್ವಾಮಿಗೆ 1 ಕೋಟಿ ರೂಪಾಯಿ....

ಪಟ್ಟಣಗೆರೆ ಶೆಡ್‌ಗೆ ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನ ಕರೆದುಕೊಂಡು ಬಂದು, ಮನಸ್ಸಿಗೆ ಬಂದ ರೀತಿ ಹಲ್ಲೆ ಮಾಡಿ ಕೊಲೆ ಮಾಡಿರುವ ಆರೋಪ ಡಿ-ಬಾಸ್ ದರ್ಶನ್ ತೂಗುದೀಪ್ & ಅವರ ಗ್ಯಾಂಗ್ ವಿರುದ್ಧ ಕೇಳಿ ಬಂದಿತ್ತು. ಆದರೆ ರೇಣುಕಾಸ್ವಾಮಿ ಸಾಯುವ ಸಮಯದಲ್ಲಿ ಅತ್ತ ರೇಣುಕಾಸ್ವಾಮಿ ಹೆಂಡತಿ ಗರ್ಭಿಣಿ ಆಗಿದ್ದರು. ಇದೀಗ ರೇಣುಕಾಸ್ವಾಮಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇಂತಹ ಸಮಯದಲ್ಲೇ....

ಭೀಕರವಾಗಿ ಕೊಲೆಯಾಗಿರುವ ರೇಣುಕಾಸ್ವಾಮಿಯ ಕುಟುಂಬಕ್ಕೆ ಸಾಕಷ್ಟು ಜನರು ಸಹಾಯ ಮಾಡುತ್ತಿದ್ದಾರೆ. ಅದರಲ್ಲೂ ಸರ್ಕಾರದ ಕಡೆಯಿಂದ ಕೂಡ ನೆರವು ನೀಡಲಾಗುತ್ತಿದೆ. ಹೀಗೆ ಇದ್ದಾಗಲೇ, 'ರೇಣುಕಾಸ್ವಾಮಿಗೆ 1 ಕೋಟಿ ರೂಪಾಯಿ ಗುಟ್ಟಾಗಿ ಡಿ-ಬಾಸ್ ದರ್ಶನ್ ಅವರು ಕೊಟ್ಟಿದ್ದಾರೆ, ಈ ಮೂಲಕ ರೇಣುಕಾಸ್ವಾಮಿ ಕುಟುಂಬಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ನೆರವಾಗಿದ್ದಾರೆ' ಅಂತಾ ಸುದ್ದಿ ಹಬ್ಬಿಸುತ್ತಿದ್ದಾರೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೆಲವು ಅಭಿಮಾನಿಗಳು. ಸೋಷಿಯಲ್ ಮೀಡಿಯಾದಲ್ಲಿ ಈ ರೀತಿಯ ಪೋಸ್ಟ್‌ಗಳನ್ನ ಇದೀಗ ಹರಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ!

ಸೋಷಿಯಲ್ ಮೀಡಿಯಾದಲ್ಲಿ ವೈರಲ್!

ಇದೆಲ್ಲಾ ಏನೇ ಇರಲಿ, ಡಿ-ಬಾಸ್ ದರ್ಶನ್ ತೂಗುದೀಪ್ ಇದುವರೆಗೂ ರೇಣುಕಾಸ್ವಾಮಿಯ ಕುಟುಂಬಕ್ಕೆ ನಯಾಪೈಸೆ ನೆರವು ನೀಡಿಲ್ಲ ಎಂಬ ಆರೋಪ ಕೂಡ ಇದೆ. ಹೀಗಿದ್ದರೂ, ಇತ್ತ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮಾತ್ರ ಸೋಷಿಯಲ್ ಮೀಡಿಯಾ ಮೂಲಕ ಈ ಸುದ್ದಿ ಹಬ್ಬಿಸಿದ ಮಾತು ಕೇಳಿ ಬಂದಿದೆ. ಹೀಗಾಗಿ ದರ್ಶನ್ ತೂಗುದೀಪ್ ಅವರ ಕಡೆಯಿಂದ ಅಧಿಕೃತ ಮಾಹಿತಿ ಸಿಗುವ ತನಕ ಕಾಯಬೇಕಿದೆ ಅಂತಿದ್ದಾರೆ ಜನ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+