Darshan Thoogudeepa: ರಾಜರಾಜೇಶ್ವರಿ ನಗರದಲ್ಲಿ ದರ್ಶನ್ ತೂಗುದೀಪ್ ದೇವಸ್ಥಾನ ನಿರ್ಮಾಣಕ್ಕೆ...
ದರ್ಶನ್ ತೂಗುದೀಪ್ ಬಗ್ಗೆ ಅಭಿಮಾನಿಗಳು ಸಾವಿರ ಸಾವಿರ ಕನಸು ಇಟ್ಟುಕೊಂಡಿದ್ದು, ಇಡೀ ಕನ್ನಡ ಸಿನಿಮಾ ಇಂಡಸ್ಟ್ರಿಗೆ ದರ್ಶನ್ ತೂಗುದೀಪ್ ಅವರು ಬಾಸ್ ಅಂತಾರೇ ಕೋಟಿ ಕೋಟಿ ಫ್ಯಾನ್ಸ್. ಇದೇ ಕಾರಣಕ್ಕೆ ದರ್ಶನ್ ತೂಗುದೀಪ್ ಎಲ್ಲೇ ಹೋದರೂ, ಅವರನ್ನು ನೋಡಲು ಜನರು ಸಾಗರದಂತೆ ಹರಿದು ಬರುತ್ತಾರೆ. ಇಂತಹ ನಟನಿಗೆ ಇದೀಗ ಮತ್ತೊಂದು ಭರ್ಜರಿ ಗಿಫ್ಟ್ ಕೊಡಲು ಅಭಿಮಾನಿಗಳು ಸಜ್ಜಾಗಿದ್ದಾರೆ!
ದರ್ಶನ್ ತೂಗುದೀಪ್ ಅವರನ್ನು ಕೋಟ್ಯಂತರ ಅಭಿಮಾನಿಗಳು, ಪ್ರೀತಿಯಿಂದ ಡಿ-ಬಾಸ್ ಅಂತಾ ಕರೆಯುತ್ತಾರೆ. ಹೀಗಿದ್ದಾಗ ಡಿ-ಬಾಸ್ ಅಭಿಮಾನಿಗಳ ಎದೆಯಲ್ಲಿ ಉಳಿದಿರುವ ಆರಾಧ್ಯ ದೈವ, ಡಿ-ಬಾಸ್ ಸದಾ ಅವರ ಅಭಿಮಾನಿಗಳ ಪಾಲಿಗೆ ದೇವರ ಸಮಾನವೇ. ಹೀಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಪೂಜೆ ಮಾಡುತ್ತಾರೆ. ಇದು ಕರ್ನಾಟಕದಲ್ಲಿ ಮಾತ್ರವಲ್ಲ ದೇಶದ ಹಲವು ಕಡೆ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಕೋಟಿ ಕೋಟಿ ಅಭಿಮಾನಿಗಳು ಇದ್ದಾರೆ. ಹೀಗಿದ್ದಾಗಲೇ, ರಾಜರಾಜೇಶ್ವರಿ ನಗರದಲ್ಲಿ ದರ್ಶನ್ ತೂಗುದೀಪ್ ದೇವಸ್ಥಾನ ನಿರ್ಮಾಣಕ್ಕೆ...

ರಾಜರಾಜೇಶ್ವರಿ ನಗರದಲ್ಲಿ ದರ್ಶನ್ ತೂಗುದೀಪ್ ದೇವಸ್ಥಾನ...
ಹೌದು, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಮನಸ್ಸು ಮಾಡಿದರೆ ಏನು ಬೇಕಾದ್ರೂ ಮಾಡುತ್ತಾರೆ. ಇದಕ್ಕೆ ಹಲವು ಸಾಕ್ಷ್ಯಗಳು ಕೂಡ ಇದ್ದು, ದರ್ಶನ್ ತೂಗುದೀಪ್‌ರ ಫ್ಯಾನ್ಸ್‌ಗೆ ಫಿದಾ ಆಗಿದ್ದಾರೆ ಕನ್ನಡ ಸಿನಿಮಾ ರಂಗದ ತಾರೆಯರು. ಅದರಲ್ಲೂ ದರ್ಶನ್ ತೂಗುದೀಪ್ ಅವರ ಒಂದೇ ಒಂದು ಕೂಗಿಗೆ ಜನರು ಸಾಗರದ ರೀತಿ ಹರಿದು ಬರುತ್ತಾರೆ. ಹೀಗಿದ್ದಾಗಲೇ, ರಾಜರಾಜೇಶ್ವರಿ ನಗರದಲ್ಲಿ ದರ್ಶನ್ ತೂಗುದೀಪ್ ದೇವಸ್ಥಾನ ನಿರ್ಮಾಣಕ್ಕೆ...
ದರ್ಶನ್ ತೂಗುದೀಪ್‌ರ ದೇವಸ್ಥಾನ ಯಾವಾಗ?
ಡಿ-ಬಾಸ್ ದರ್ಶನ್ ತೂಗುದೀಪ್ 25 ವರ್ಷಗಳಲ್ಲಿ ದೊಡ್ಡ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಈ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಬಾಕ್ಸ್ ಆಫಿಸ್ ಕಾ ಸುಲ್ತಾನ ಆಗಿ ಮೆರೆದಿದ್ದರು ಅನ್ನೋದು, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಹೆಮ್ಮೆ ಆಗಿದೆ. ಹೀಗಿದ್ದಾಗಲೇ, ದರ್ಶನ್ ತೂಗುದೀಪ್ ನೂರಾರು ಶತ್ರುಗಳನ್ನ ಎದುರು ಹಾಕಿಕೊಂಡು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೆರೆಯುತ್ತಿದ್ದರು.
ಈ ಸಮಯದಲ್ಲೇ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬೇಕು ಅಂತಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಸಿಲುಕಿಸಿರುವ ಆರೋಪ ಕೂಡ ಇದೆ. ಹೀಗಿದ್ದಾಗಲೇ, ರಾಜರಾಜೇಶ್ವರಿ ನಗರದಲ್ಲಿ ದರ್ಶನ್ ತೂಗುದೀಪ್ ಅವರಿಗೆ ದೇವಸ್ಥಾನ ನಿರ್ಮಾಣಕ್ಕೆ ಇದೀಗ ಅಭಿಮಾನಿಗಳು ಸಿದ್ಧರಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಶುರು ಮಾಡಿದ್ದು, ಅತಿ ಶೀಘ್ರದಲ್ಲೇ ಅಂದ್ರೆ ಡೆವಿಲ್ ಸಿನಿಮಾ ರಿಲೀಸ್‌ಗೆ ಮೊದಲೇ ದರ್ಶನ್ ತೂಗುದೀಪ್ ಅವರಿಗೆ ದೇವಸ್ಥಾನ ನಿರ್ಮಾಣ ಮಾಡಲು ಪ್ಲಾನ್ ನಡೆದಿದೆಯಂತೆ!
ರೇಣುಕಾಸ್ವಾಮಿ ವಿರುದ್ಧ ತೀವ್ರ ಆಕ್ರೋಶ!
ಅಭಿಮಾನಿಗಳ ಪಾಲಿನ ಪ್ರೀತಿಯ ಡಿ-ಬಾಸ್ ಆಗಿರುವ ದರ್ಶನ್ ತೂಗುದೀಪ್ ಅವರನ್ನ ಫ್ಯಾನ್ಸ್ ಯಾವ ಸ್ಥಿತಿಯಲ್ಲೂ ಬಿಟ್ಟು ಕೊಡುವುದೇ ಇಲ್ಲ ಅನ್ನೋದು ಮತ್ತೆ, ಮತ್ತೆ ಸಾಬೀತಾಗಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಪ್ಪು ಮಾಡಿಲ್ಲ, ಸಮಾಜದಲ್ಲಿದ್ದ ಒಬ್ಬ ಕಾಮುಕ ಕ್ರಿಮಿ ತೊಲಗಿಸಿದ್ದಾರೆ ಅಷ್ಟೇ... ಅಂದಹಾಗೆ ಈ ರೀತಿ ರೇಣುಕಾಸ್ವಾಮಿ ಭೀಕರ ಕೊಲೆ ಬಗ್ಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಸಮರ್ಥನೆ ಮಾಡ್ಕೊಂಡಿದ್ದಾರೆ. ಅಲ್ಲದೆ ಈ ವೇಳೆ ರೇಣುಕಾಸ್ವಾಮಿ ಒಬ್ಬ ವಿಕೃತ ಕಾಮುಕ ಎಂಬ ಪಟ್ಟವನ್ನೂ ಕೊಟ್ಟಿದ್ದಾರೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು.
ಪವಿತ್ರಾ ಗೌಡ & ಡಿ-ಬಾಸ್ ಮಧ್ಯೆ ದ್ವೇಷ?
ರೇಣುಕಾಸ್ವಾಮಿ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡಗೆ ದೊಡ್ಡ ಕಂಟಕ ಎದುರಾಗಿದೆ. ಹೀಗೆ ಇಬ್ಬರೂ ಈ ಕೇಸ್‌ನಲ್ಲಿ ಈಗಲೂ ನರಳುತ್ತಿದ್ದು, ಯಾವ ಕ್ಷಣದಲ್ಲಿ ಮತ್ತೆ ಜೈಲಿಗೆ ಹೋಗುತ್ತಾರೋ ಎಂಬ ಅನುಮಾನ ಇದೆ. ಈ ಕೇಸ್ ತುಂಬಾನೇ ಸ್ಟ್ರಾಂಗ್ ಆಗಿದ್ದು ಪೊಲೀಸರು ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪರಿಸ್ಥಿತಿ ಕಠಿಣವಾಗಿರುವ ಸಮಯದಲ್ಲೇ ಮತ್ತೊಂದು ಘಟನೆ ನಡೆದು ಹೋಗಿದೆ...
ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ಸಂಬಂಧ ಡಿ-ಬಾಸ್ ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡ ಕೋರ್ಟ್ ಎದುರು ಹಾಜರಾದರು. ವಿಚಾರಣೆ ವೇಳೆ ಇಬ್ಬರೂ ಎದುರಾಗಿ ಬಂದರೂ ಮಾತನಾಡಿಲ್ಲ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿತ್ತು. ಈ ಮೂಲಕ ಇಬ್ಬರೂ ದೂರವಾಗಿ ಹೋಗಿದ್ದು, ಇಬ್ಬರ ನಡುವೆ ಇದೀಗ ಮಾತುಕತೆಯೇ ಇಲ್ಲ ಎಂಬ ಸುದ್ದಿ ಹಬ್ಬಿದೆ. ಅಲ್ಲದೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಮನೆಯವರು ಕೂಡ ಪವಿತ್ರಾ ಗೌಡ ಅವರಿಂದ ದೂರ ಇಡಲು ಪ್ರಯತ್ನ ಮಾಡುತ್ತಿದ್ದು, ಇದೀಗ ಯಾರೂ ಕೂಡ ನೇರ ಡಿ-ಬಾಸ್ ಅವರನ್ನ ಭೇಟಿ ಮಾಡಲು ಅಥವಾ ಸಂಪರ್ಕ ಮಾಡಲು ಆಗುತ್ತಿಲ್ಲವಂತೆ!
2014ರ ಸಮಯದಲ್ಲಿ ಪವಿತ್ರಾ ಗೌಡ...
ಅಷ್ಟಕ್ಕೂ ಪವಿತ್ರಾ ಗೌಡ ಅವರು ಡಿ-ಬಾಸ್ ದರ್ಶನ್ ತೂಗುದೀಪ್ ಜೊತೆಗೆ ಆತ್ಮೀಯತೆಯನ್ನ ಬೆಳೆಸಿಕೊಳ್ಳುವ ಮೊದಲು ಮದುವೆ ಆಗಿದ್ದರು. ಆದರೆ, ಪವಿತ್ರಾ ಗೌಡ ತಮ್ಮ ಮೊದಲನೇ ಗಂಡನ ಜೊತೆಗೆ ಜೀವನ ಮಾಡಲು & ಸಂಸಾರ ನಡೆಸಲು ಆಗಲ್ಲ ಎಂಬ ಕಾರಣಕ್ಕೆ ದೂರ ಆಗಿದ್ದರು. ಹೀಗೆ ಪವಿತ್ರಾ ಗೌಡ ತಮ್ಮ ಮೊದಲ ಗಂಡ ಸಂಜಯ್ ಸಿಂಗ್ ಅವರಿಂದ ದೂರ ಆದ ನಂತರ ಒಂಟಿಯಾಗಿ ಇದ್ದರು. ಆದರೆ ಆ ನಂತರ 2014ರ ಸಮಯದಲ್ಲಿ ಪವಿತ್ರಾ ಗೌಡ ಮತ್ತು ಡಿ-ಬಾಸ್ ದರ್ಶನ್ ತೂಗುದೀಪ್ ಆತ್ಮೀಯ ಗೆಳೆತನ ಬೆಳೆಸಿಕೊಂಡರು.
ರೇಣುಕಾಸ್ವಾಮಿ ಎಂಟ್ರಿ ಯಾಕೆ?
ಇಂತಹ ಸಮಯದಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಗಲಾಟೆ ಶುರುವಾಗಿ, ಕೆಲವು ವರ್ಷದ ಹಿಂದೆ ರೇಣುಕಾಸ್ವಾಮಿ ಪವಿತ್ರಾ ಗೌಡ ತಂಟೆಗೆ ಬಂದಿದ್ದ ಎಂಬ ಆರೋಪ ಇದೆ. ಹೀಗಾಗಿ, ರೇಣುಕಾಸ್ವಾಮಿ ಚಿತ್ರದುರ್ಗದಲ್ಲಿ ಇರುವ ವಿಚಾರ ತಿಳಿದು, ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಹಲ್ಲೆ ಮಾಡಿ ಹತ್ಯೆ ನಡೆಸಿರುವ ಆರೋಪ ಕೂಡ ಇದೆ. ಮತ್ತೊಂದು ಕಡೆ ಇದೇ ಕೊಲೆ ಕೇಸ್ ದೇಶಾದ್ಯಂತ ದೊಡ್ಡ ಸದ್ದು ಮಾಡಿದ್ದು, ಮುಂದಿನ ದಿನಗಳಲ್ಲೂ ಯಾವ ರೀತಿ ತಿರುವು ಪಡೆಯಲಿದೆ? ಅನ್ನೋ ಚರ್ಚೆ ಕೂಡ ನಡೆಯುತ್ತಿದೆ.












Click it and Unblock the Notifications