Darshan Thoogudeepa: ಕುದುರೆ ಸವಾರಿ ಮಾಡಲು ಆಗಲ್ವಾ ಡಿ-ಬಾಸ್ ದರ್ಶನ್ ತೂಗುದೀಪ್?

ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬೆನ್ನು ಸಮಸ್ಯೆ ಭಾರಿ ದೊಡ್ಡ ಗಂಡಾಂತರಕ್ಕೆ ಸಿಲುಕಿ ಭಯ ಹುಟ್ಟಿಸಿದೆ. ಅದರಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಪರಿಸ್ಥಿತಿ ನೋಡಿ, ಕೋಟಿ ಕೋಟಿ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಬಾಸ್‌ಗೆ ಯಾಕೆ ಹಿಂಗೆಲ್ಲ ಆಗುತ್ತಿದೆ? ಅನ್ನೋ ಚಿಂತೆಯಲ್ಲಿ ಅಭಿಮಾನಿಗಳು ಮುಳುಗಿದ್ದಾರೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿರುವ ಸಮಯದಲ್ಲೇ, ಕುದುರೆ ಸವಾರಿ ಮಾಡಲು ಆಗಲ್ವಾ ಡಿ-ಬಾಸ್ ದರ್ಶನ್?

ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬೆನ್ನಿಗೆ ಇಷ್ಟು ದೊಡ್ಡ ಸಮಸ್ಯೆ ಆಗಲು ಕಾರಣ ಕುದುರೆ ಸವಾರಿ ಎಂಬ ಆರೋಪ ಇದೆ. ಬೃಂದಾವನ ಸಿನಿಮಾ ಸಮಯದಲ್ಲೇ ಈ ರೀತಿ ಕುದುರೆ ಮೇಲಿಂದ ಬಿದ್ದಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬೆನ್ನಿಗೆ ಸಮಸ್ಯೆ ಆಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಹೀಗೆ ಆರೋಪ & ಪ್ರತ್ಯಾರೋಪಗಳ ನಡುವೆಯೇ ಮತ್ತೊಂದು ಸ್ಫೋಟಕ ಸುದ್ದಿ ಇದೀಗ ಅಭಿಮಾನಿಗಳ ನಿದ್ದೆಗೆಡಿಸಿದೆ.

Darshan Thoogudeepa Fans Are In Tension About This Matter Now

ಕುದುರೆ ಹತ್ತಿದರೆ ಸಮಸ್ಯೆ ಗ್ಯಾರಂಟಿ?

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕುದುರೆ ಸವಾರಿ ಮಾಡಲು ಬರುತ್ತಿದ್ದ ಕೆಲವೇ ಕೆಲವು ನಟರ ಪೈಕಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಒಬ್ಬರು. ಯಾಕಂದ್ರೆ ಬಹುತೇಕ ಹೀರೋ & ನಟರಿಗೆ ಕುದುರೆ ಸವಾರಿ ಬರೋದೆ ಇಲ್ಲ. ಯಾಕಂದ್ರೆ ಕುದುರೆ ಸವಾರಿ ಮಾಡುವುದು ದೊಡ್ಡ ಸವಾಲಿನ ಕೆಲಸ, ಧೈರ್ಯ ಹೆಚ್ಚಾಗಿ ಬೇಕು.

ಹೀಗಿದ್ದಾಗ ತಮ್ಮ ಬೆನ್ನಿಗೆ ಗಾಯ ಮಾಡಿಕೊಂಡು ನರಳುತ್ತಿರುವ ನಟ ದರ್ಶನ್ ತೂಗುದೀಪ್ ಅವರು ಇನ್ನು ಮುಂದೆ ಎಂದೆಂದಿಗೂ ಕುದುರೆ ಸವಾರಿಗೆ ಹೋಗಲ್ಲ ಎನ್ನಲಾಗುತ್ತಿದೆ. ಈಗ ಈ ಮಾತು ಯಾಕಂದ್ರೆ, ಮತ್ತೆ ಡಿ-ಬಾಸ್ ಅವರು ಕುದುರೆ ಹತ್ತಿ ಸವಾರಿ ಮಾಡಿದರೆ, ಸಮಸ್ಯೆ ದೊಡ್ಡದಾಗುವುದು ಗ್ಯಾರಂಟಿ ಎಂಬ ಮಾತು ಹಬ್ಬಿದೆ.

ಡಿ-ಬಾಸ್ ದರ್ಶನ್ ತೂಗುದೀಪ್ ದೇವಸ್ಥಾನ?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲು ಸೇರಿ ಇದೀಗ ತಾನೆ ರಿಲೀಸ್ ಆಗಿ ಹೊರ ಬಂದಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಸಮಸ್ಯೆ ನಡುವೆ ಹೋರಾಟ ನಡೆಸುತ್ತಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ವೇಳೆ ಹೊರಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಖುಷಿ ಖುಷಿಯಾಗಿ ಕಾಯುತ್ತಿದ್ದು, ಶೀಘ್ರದಲ್ಲೇ ಮಹತ್ವದ ಕೆಲಸ ಮಾಡಿ ದರ್ಶನ್ ತೂಗುದೀಪ್ ಅವರನ್ನ ಖುಷಿಪಡಿಸಲು ಈಗ ಅವರೆಲ್ಲಾ ಸಜ್ಜಾಗಿದ್ದಾರೆ!

ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಇದೀಗ ದರ್ಶನ್ ತೂಗುದೀಪ್ ಅವರಿಗೆ ದೇವಸ್ಥಾನ ನಿರ್ಮಾಣ ಮಾಡಲು ಚಿಂತನೆ ನಡೆಸುತ್ತಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಕೂಡ ನಡೆಯುತ್ತಿದೆ. ಡಿ-ಬಾಸ್ ದರ್ಶನ್ ತೂಗುದೀಪ್‌ರ ದೇವಸ್ಥಾನ ನಿರ್ಮಾಣ ಮಾಡಿ, ಅಲ್ಲಿ ಡಿ-ಬಾಸ್ ಮೂರ್ತಿಯನ್ನೇ ಇಟ್ಟು ಪೂಜೆ ಮಾಡಲು ಈಗ ಚಿಂತಿಸುತ್ತಿದ್ದಾರೆ ಕೋಟಿ ಕೋಟಿ ಡಿ-ಬಾಸ್ ಅಭಿಮಾನಿಗಳು ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+