Bigg Boss Kannada: ದರ್ಶನ್ ತೂಗುದೀಪ್ ಬಿಗ್‌ಬಾಸ್ ನಿರೂಪಕರಾಗಿ ಬಂದ್ರೆ ಪಟ್ಟಣಗೆರೆ ಶೆಡ್...

ಬಳ್ಳಾರಿ ಜೈಲಿನಲ್ಲಿ ಇರುವ ದರ್ಶನ್ ತೂಗುದೀಪ್ ಅವರು, ಇನ್ನೇನು ಕೆಲವೇ ದಿನಗಳಲ್ಲೇ ಜಾಮೀನು ಪಡೆದು ರಿಲೀಸ್ ಆಗಿ ಹೊರಗೆ ಬರಲಿದ್ದಾರೆ ಎಂಬ ನಿರೀಕ್ಷೆ ಹೆಚ್ಚಾಗಿದೆ. ಡಿ-ಬಾಸ್, ಡಿ-ಬಾಸ್, ಡಿ-ಬಾಸ್... ಅಂತಾ ಇದೀಗ ದರ್ಶನ್ ತೂಗುದೀಪ್ ಕೋಟಿ ಕೋಟಿ ಫ್ಯಾನ್ಸ್, ಇಡೀ ದೇಶಾದ್ಯಂತ ತಮ್ಮ ನೆಚ್ಚಿನ ನಟನ ರಿಲೀಸ್‌ಗೆ ಕಾಯುತ್ತಿದ್ದಾರೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್ ಅವರು ಕನ್ನಡ ಬಿಗ್‌ಬಾಸ್ ಕಾರ್ಯಕ್ರಮದ, ಮುಂದಿನ ನಿರೂಪಕ ಎಂಬ ಸುದ್ದಿ ಹಬ್ಬಿದೆ. ಹೀಗಿದ್ದಾಗ, ದರ್ಶನ್ ತೂಗುದೀಪ್ ಬಿಗ್‌ಬಾಸ್ ನಿರೂಪಕರಾಗಿ ಬಂದ್ರೆ ಪಟ್ಟಣಗೆರೆ ಶೆಡ್...

ಬಳ್ಳಾರಿ ಜೈಲಿನಲ್ಲಿ ದರ್ಶನ್ ತೂಗುದೀಪ್ ಪರದಾಡುತ್ತಿದ್ದ ಕಾರಣ ಹೇಗಾದ್ರೂ ಮಾಡಿ ಅವರಿಗೆ ಜಾಮೀನು ಕೊಡಿಸಿ ಹೊರಗೆ ಕರೆತರಬೇಕು ಎಂಬ ಪ್ರಯತ್ನ ನಡೆಯುತ್ತಿದ್ದವು. ಹೀಗಿದ್ದಾಗಲೇ ನಟ ದರ್ಶನ್ ತೂಗುದೀಪ್ ಅವರ ಜಾಮೀನು ಅರ್ಜಿ ವಜಾ ಆಗಿದ್ದು, ಮುಂದೆ ಕರ್ನಾಟಕ ಹೈಕೋರ್ಟ್‌ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಲು ಇದೀಗ ದರ್ಶನ್ ತೂಗುದೀಪ್ ತಯಾರಿಯ ನಡೆಸಿದ್ದಾರೆ. ಇಂತಹ ಸಮಯದಲ್ಲೇ ದರ್ಶನ್ ತೂಗದೀಪ್ ಅವರು ಬಿಗ್‌ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ ಎಂಬ ಸುದ್ದಿ ಕರ್ನಾಟಕದ ಮೂಲೆ ಮೂಲೆಯಲ್ಲೂ ಹಬ್ಬಿದ್ದು, ದರ್ಶನ್ ತೂಗುದೀಪ್ ಬಿಗ್‌ಬಾಸ್ ನಿರೂಪಕರಾಗಿ ಬಂದ್ರೆ ಪಟ್ಟಣಗೆರೆ ಶೆಡ್...

Darshan Thoogudeepa Fans Are Discussing This About Kannada Bigg Boss

ಪಟ್ಟಣಗೆರೆ ಶೆಡ್‌ನಲ್ಲೇ ಶೂಟಿಂಗ್ ಫಿಕ್ಸ್...

ಡಿ-ಬಾಸ್, ಡಿ-ಬಾಸ್, ಡಿ-ಬಾಸ್... ಇದು ಕರ್ನಾಟಕದಲ್ಲಿ ಎಲ್ಲೇ ಹೋದರು ದರ್ಶನ್ ಅವರ ಅಭಿಮಾನಿಗಳ ಬಾಯಿಂದ ಇದೀಗ ಕೇಳಿ ಬರುತ್ತಿರುವ ಒಂದೇ ಒಂದು ಪದ ಎನ್ನಬಹುದು. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಜಾಮೀನು ಅರ್ಜಿ ವಿಚಾರಣೆ ಹಲವು ದಿನಗಳಿಂದಲು ನಡೆಯುತ್ತಿದ್ದು, ದರ್ಶನ್ ತೂಗುದೀಪ್ ಜಾಮೀನು ಅರ್ಜಿ ಮಾನ್ಯವಾಗಿ ಬೇಲ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದರು. ಹೀಗಿದ್ದಾಗ ದರ್ಶನ್ ತೂಗುದೀಪ್‌ಗೆ ಈಗ ಜಾಮೀನು ಸಿಕ್ಕಿಲ್ಲ. ಈ ಸಮಯದಲ್ಲೇ ದರ್ಶನ್ ತೂಗುದೀಪ್ ಬಿಗ್‌ಬಾಸ್ ನಿರೂಪಕರಾಗಿ ಬಂದ್ರೆ ಪಟ್ಟಣಗೆರೆ ಶೆಡ್‌ನಲ್ಲೇ ಶೂಟಿಂಗ್ ಫಿಕ್ಸ್ ಅಂತಿದ್ದಾರೆ ಜನ. ಯಾಕೆ ಗೊತ್ತಾ? ಮುಂದೆ ಓದಿ.

ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಗೆ ಕನ್ನಡಿಗರಿಂದ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಕಿಚ್ಚ ಸುದೀಪ್ ಅವರೇ ಸತತ 11ನೇ ಆವೃತ್ತಿಯಲ್ಲಿ ನಿರೂಪಣೆ ಹೊಣೆ ಹೊತ್ತು ಕಾರ್ಯಕ್ರಮ ಕೂಡ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಮತ್ತೊಂದು ಕಡೆ ಈ ಸೀಸನ್‌ನ ಬಿಗ್ ಬಾಸ್‌ಗೆ ಭರ್ಜರಿ ಟಿಆರ್‌ಪಿ ಕೂಡ ಸಿಕ್ಕಿದ್ದು, ಪ್ರಸಕ್ತ ವಾರ 9.9 ಅಂಕ ಪಡೆದು ಹೊಸ ಇತಿಹಾಸ ಸೃಷ್ಟಿ ಮಾಡಿದೆ ಕಾರ್ಯಕ್ರಮ. ಇಂತಹ ಸಮಯದಲ್ಲೇ ದಿಢೀರ್ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ಬಿಟ್ಟು ಹೋಗುತ್ತಿದ್ದಾರೆ ಎನ್ನುವ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಈ ಸಮಯದಲ್ಲೇ ದರ್ಶನ್ ತೂಗುದೀಪ್ ಅವರು ಜೈಲಿಂದ ಹೊರಗೆ ಬಂದ ತಕ್ಷಣ ಬಿಗ್‌ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿದೆ.

ಬಿಗ್‌ಬಾಸ್ ಅಂದ್ರೆ ದರ್ಶನ್ ತೂಗುದೀಪ?

ಹೀಗೆ ದರ್ಶನ್ ತೂಗುದೀಪ ಅವರು ಬಿಗ್‌ಬಾಸ್ ಕಾರ್ಯಕ್ರಮ ನಿರೂಪಣೆ ಮಾಡಲು ಶುರು ಮಾಡಿದರೆ, ಬಿಗ್‌ಬಾಸ್ ಕಾರ್ಯಕ್ರಮದ ಶೂಟಿಂಗ್ ನಡೆಯುವುದು ಪಟ್ಟಣಗೆರೆ ಶೆಡ್‌ನಲ್ಲಿಯೇ ಅಂತಾ ಹೇಳಲಾಗಿದೆ. ಯಾಕಂದ್ರೆ ಯಾರೇ ಬಿಗ್‌ಬಾಸ್ ಮನೆಯಲ್ಲಿ ತಪ್ಪು ಮಾಡಿದರೂ ಆ ರೀತಿಯ ಸ್ಪರ್ಧಿಗಳನ್ನ ನೇರವಾಗಿ ಪಟ್ಟಣಗೆರೆ ಶೆಡ್‌ಗೆ ಕರೆತಂದು ಬುದ್ಧಿ ಹೇಳಲು ಅನುಕೂಲ ಆಗಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ. ಹೀಗಾಗಿ ಕರ್ನಾಟಕದ ಮೂಲೆ ಮೂಲೆಯಲ್ಲಿ ಕೂಡ ಈ ವಿಚಾರ ಚರ್ಚೆಯಾಗುತ್ತಿದೆ. ದರ್ಶನ್ ತೂಗುದೀಪ ಅವರೇ ಕನ್ನಡ ಬಿಗ್‌ಬಾಸ್‌ನ ನಿರೂಪಣೆ ಮಾಡಲಿ ಅಂತಾ ಇದೀಗ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+