Darshan Thoogudeepa: ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ರೌಡಿಗಳಾ? ಲಾಯರ್ ಜಗದೀಶ್ ಸ್ಫೋಟಕ...

ಬಳ್ಳಾರಿ ಜೈಲಿನಿಂದ ರಿಲೀಸ್ ಆಗಿರುವ ದರ್ಶನ್ ತೂಗುದೀಪ್ ಅವರಿಗೆ ನೆಮ್ಮದಿಯೇ ಇಲ್ಲ, ಯಾಕಂದ್ರೆ ಬೆನ್ನು ನೋವಿನಿಂದ ನರಳುತ್ತಿರುವ ದರ್ಶನ್ ತೂಗುದೀಪ್ ಅವರಿಗೆ ಈಗ ಸಾಲು ಸಾಲು ಚಿಕಿತ್ಸೆ ನೀಡಬೇಕಿದೆ. ಪರಿಸ್ಥಿತಿ ಹೀಗಿದ್ದಾಗಲೇ ದರ್ಶನ್ ತೂಗುದೀಪ್ ಅವರ ಅಭಿಮಾನಿ ಅಂತಾ ಹೇಳಿಕೊಳ್ಳುವ ಕೆಲವರು, ಮಾಧ್ಯಮಗಳ ರಿಪೋರ್ಟರ್ & ವಾಹನಗಳ ಮೇಲೆ ದಾಳಿ ಮಾಡಿ ದರ್ಪ ತೋರಿದ ಆರೋಪ ಕೇಳಿ ಬಂದಿದೆ. ಇಂತಹ ಸಮಯದಲ್ಲೇ, ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ರೌಡಿಗಳಾ? ಲಾಯರ್ ಜಗದೀಶ್ ಸ್ಫೋಟಕ...

ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಒಂದು ಕಡೆ ದೊಡ್ಡ ಆರೋಗ್ಯ ಸಮಸ್ಯೆ ಎದುರಾಗಿ ಪರದಾಡುತ್ತಿದ್ದಾರೆ, ದಿನದಿಂದ ದಿನಕ್ಕೆ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. 'ಡಿ-ಬಾಸ್' ದರ್ಶನ್ ತೂಗುದೀಪ್ ಅವರಿಗೆ ಇದೀಗ ಇರುವ ಆರೋಗ್ಯ ಸಮಸ್ಯೆ ಅರ್ಥ ಮಾಡಿಕೊಂಡು ನಿಜವಾದ ಅಭಿಮಾನಿಗಳು ಮರುಗುತ್ತಿದ್ದಾರೆ. ಆದರೆ ಇನ್ನೂ ಕೆಲವು ಪುಢಾರಿಗಳು ಅಭಿಮಾನದ ಹೆಸರು ಇಟ್ಟುಕೊಂಡು, ಮಾಧ್ಯಮಗಳಿಗೆ ಬೆದರಿಕೆ ಹಾಕುತ್ತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಮತ್ತೆ ಮತ್ತೆ ಸಮಸ್ಯೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಮಯದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ರೌಡಿಗಳಾ? ಲಾಯರ್ ಜಗದೀಶ್ ಸ್ಫೋಟಕ...

Darshan Thoogudeepa Fans And Lawyer Jagadish Challenge

ಲಾಯರ್ ಜಗದೀಶ್ ಸ್ಫೋಟಕ...

ಲಾಯರ್ ಜಗದೀಶ್ ಅವರು, ದರ್ಶನ್ ತೂಗುದೀಪ್ ಅಭಿಮಾನಿಗಳು ಅಂತಾ ಹುಚ್ಚಾಟವನ್ನ ಮಾಡಿರುವ ಕೆಲವರಿಗೆ ಎಚ್ಚರಿಕೆ ನೀಡಿದ್ದು, ಒಂದು ವಿಡಿಯೋ ಮೂಲಕ ಲಾಯರ್ ಜಗದೀಶ್ ಅವರು ದರ್ಶನ್ ತೂಗುದೀಪ್ ಅವರ ಕೆಲವು ಕಿರಿಕ್ ಮಾಡುವ ಅಭಿಮಾನಿಗಳಿಗೆ ಖಡಕ್ ಆಗಿ ವಾರ್ನಿಂಗ್ ಕೊಟ್ಟಿದ್ದಾರೆ.

'ನಮಸ್ಕಾರ ಈ ವಿಡಿಯೋ ಸೋ ಕಾಲ್ಡ್ ದರ್ಶನ್ ಅಭಿಮಾನಿಗಳಿಗೆ...' ಅಂತಾ ವಿಡಿಯೋ ಶುರು ಮಾಡುವ ಲಾಯರ್ ಜಗದೀಶ್ ಅವರು, ದರ್ಶನ್ ತೂಗುದೀಪ್ ಅಭಿಮಾನಿಗಳು ಅಂತ ಹೇಳಿಕೊಳ್ಳುವ ಕೆಲವರು ಮಾಧ್ಯಮಗಳ ಮೇಲೆ ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ, ನೀವೇನು ರೌಡಿಗಳೇನೋ? ಅಂತಾ ಗಲಾಟೆ ಮಾಡಿರುವ ಬಗ್ಗೆ ಆರೋಪ ಕೇಳಿ ಬಂದಿರುವ & ದರ್ಶನ್ ತೂಗುದೀಪ್ ಅಭಿಮಾನಿಗಳು ಅಂತಾ ಹೇಳಿಕೊಂಡು ಮಾಧ್ಯಮಗಳ ಮೇಲೆ ದೌರ್ಜನ್ಯ ನಡೆಸಿರುವ ಕೆಲವರನ್ನು, ಪ್ರಶ್ನೆ ಮಾಡಿದ್ದಾರೆ ಲಾಯರ್ ಜಗದೀಶ್ ಅವರು.

ಬೆಂಗಳೂರು ಪೊಲೀಸರು ಕ್ರಮ ಕೈಗೊಳ್ಳುತ್ತಾರಾ?

ಅಲ್ಲದೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಕೂಡ ಈ ಬಗ್ಗೆ ಮಾಹಿತಿ ನೀಡಿರುವ ಲಾಯರ್ ಜಗದೀಶ್, ಜನರಿಗೆ & ಮಾಧ್ಯಮದವರಿಗೆ ತೊಂದರೆ ನಿಡುತ್ತಿರುವ ಕೆಲವು ದರ್ಶನ್ ತೂಗುದೀಪ್ ಅಭಿಮಾನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು. ಹೀಗಾಗಿ ಬೆಂಗಳೂರು ಪೊಲೀಸ್ ಪಡೆ ಅಂತಹ ಕಿರಿಕ್ ಮಾಡುವ & ಅಭಿಮಾನದ ಹೆಸರಲ್ಲಿ ಮಾಧ್ಯಮಗಳ ಮೇಲೆ ದೌರ್ಜನ್ಯ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+