Darshan Thoogudeepa: ರೇಣುಕಾಸ್ವಾಮಿ ಪ್ರಕರಣಕ್ಕೂ & ವಿನಯ್ ಗೌಡ ಹಿಡಿದ ಮಚ್ಚಿಗೂ ಸಂಬಂಧ ಅಂತಾ...
ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ಇದೀಗ ಮತ್ತೆ ಚಿಂತೆಯಲ್ಲಿ ಮುಳುಗುವಂತೆ ಆಗಿದೆ. ವಿನಯ್ ಗೌಡ & ರಜತ್ ಮಚ್ಚು ಹಿಡಿದು ಭರ್ಜರಿಯಾಗಿ ಸ್ಟೆಪ್ ಹಾಕಿ, ವಾಕ್ ಮಾಡಿ ರೀಲ್ಸ್ ಮಾಡಿದ ನಂತರ ಬೆಂಕಿ ಹೊತ್ತಿಕೊಂಡಿದೆ. ಇಂತಹ ಸಮಯದಲ್ಲೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ರೇಣುಕಾಸ್ವಾಮಿ ಬರ್ಬರ ಕೊಲೆ ಕೇಸ್‌ನಲ್ಲಿ ಅರೆಸ್ಟ್ ಮಾಡಿದ್ದ ಎಸಿಪಿ ಚಂದನ್ ಅವರು ಪ್ರಕರಣಕ್ಕೆ ಎಂಟ್ರಿಯನ್ನ ಕೊಟ್ಟಿದ್ದಾರೆ. ಈ ಆಘಾತದ ನಡುವೆ ಮತ್ತೊಂದು ಶಾಕ್ ಸಿಕ್ಕಿದೆ!
ಅಂದಹಾಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಅರೆಸ್ಟ್ ಆಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಮೂಲಕ ಡೆವಿಲ್ ಸಿನಿಮಾದ ಹೀರೋ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ಅರೆಸ್ಟ್ ಮಾಡಿದ್ದ ಎಸಿಪಿ ಚಂದನ್ ಅವರ ತಂಡ, ಈಗ ಡೆವಿಲ್ ಸಿನಿಮಾದ ವಿಲನ್‌ನ ಕೂಡ ಅರೆಸ್ಟ್ ಮಾಡಿದಂತೆ ಆಗಿದೆ. ಇದು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಭಾರಿ ದೊಡ್ಡ ಆಘಾತವನ್ನೇ ನೀಡಿದೆ.

ಮಚ್ಚು ತೋರಿಸಿ ಶತ್ರುಗಳಿಗೆ ವಾರ್ನಿಂಗ್ ಕೊಡುವ ರೀತಿ, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಾದ ವಿನಯ್ ಗೌಡ & ರಜತ್ ರೀಲ್ಸ್ ಮಾಡಿ ಮಿರ ಮಿರ ಮಿಂಚಿದ್ದರು. ಈ ಮೂಲಕ ಭಾರಿ ದೊಡ್ಡ ಚರ್ಚೆ ಕೂಡ ನಡೆಯುತ್ತಿದ್ದು, ಮಚ್ಚು ತೋರಿಸಿ ರೀಲ್ಸ್ ಮಾಡಿದ್ದ ಕಾರಣಕ್ಕೆ ರಜತ್ & ವಿನಯ್ ಗೌಡ ಅವರನ್ನ ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗಿದೆ. ಇದೇ ಸಮಯದಲ್ಲಿ, ರೇಣುಕಾಸ್ವಾಮಿ ಪ್ರಕರಣಕ್ಕೂ & ವಿನಯ್ ಗೌಡ ಹಿಡಿದ ಮಚ್ಚಿಗೂ ಸಂಬಂಧ ಅಂತಾ...
ರೇಣುಕಾಸ್ವಾಮಿಗೂ & ವಿನಯ್ ಗೌಡ ಮಚ್ಚಿಗೂ...
ರೇಣುಕಾಸ್ವಾಮಿ ಕೊಲೆ ಕೇಸ್ ಇಂಡಿಯಾ ಪೂರ್ತಿ ಸಂಚಲನವೇ ಸೃಷ್ಟಿ ಮಾಡಿದ್ದು, ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಬಳ್ಳಾರಿ ಜೈಲು ಮತ್ತು ಪರಪ್ಪನ ಅಗ್ರಹಾರ ಜೈಲು ಸೇರಿ ರಿಲೀಸ್ ಆಗಿ ಹೊರ ಬಂದಿದ್ದಾರೆ. ಇಷ್ಟೆಲ್ಲದರ ಮಧ್ಯೆ ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ, ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿ ರೇಣುಕಾಸ್ವಾಮಿಯ ಕೊಲೆ ಕೇಸ್ ಕಂಡು ಬೆಚ್ಚಿ ಬಿದ್ದಿದೆ. ಹೀಗಿದ್ದಾಗಲೇ, ರೇಣುಕಾಸ್ವಾಮಿ ಪ್ರಕರಣಕ್ಕೂ & ವಿನಯ್ ಗೌಡ ಹಿಡಿದ ಮಚ್ಚಿಗೂ ಸಂಬಂಧ ಅಂತಾ...
ದಿಢೀರ್ ಮಚ್ಚು ಬದಲಾವಣೆ ಆಯ್ತಾ?
ಅಂದಹಾಗೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಚರ್ಚೆಯು ಶುರುವಾಗಿದ್ದು, ಆ ಪ್ರಕಾರ ರೇಣುಕಾಸ್ವಾಮಿ ಪ್ರಕರಣಕ್ಕೂ & ವಿನಯ್ ಗೌಡ ಹಿಡಿದ ಮಚ್ಚಿಗೂ ಸಂಬಂಧ ಅಂತಾ ಚರ್ಚೆ ನಡೆಸಲಾಗುತ್ತಿದೆ. ಯಾಕಂದ್ರೆ ದಿಢೀರ್ ಮಚ್ಚು ಬದಲಾವಣೆ ಮಾಡಿರುವ ಆರೋಪ ಕೂಡ ಕೇಳಿ ಬಂದಿರುವ ಹಿನ್ನೆಲೆಯಲ್ಲಿ, ಈ ಆಂಗಲ್‌ನಲ್ಲಿ ಕೂಡ ಪೊಲೀಸರು ತನಿಖೆಯನ್ನ ನಡೆಸಬೇಕು ಎಂದು ಸೋಷಿಯಲ್ ಮೀಡಿಯಾ ಬಳಕೆದಾರರು ಇದೀಗ ಒತ್ತಾಯವನ್ನ ಮಾಡ್ತಾ ಇದ್ದಾರೆ.
ರೇಣುಕಾಸ್ವಾಮಿ ಪ್ರಕರಣಕ್ಕೂ & ವಿನಯ್ ಗೌಡ ಹಿಡಿದಿದ್ದ ಮಚ್ಚಿಗೂ ಸಂಬಂಧ ಇದೆಯಾ? ಎಂದು ಪೊಲೀಸರು ತನಿಖೆ ನಡೆಸಲಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಈಗ ಪೋಸ್ಟ್ & ಕಮೆಂಟ್ಸ್ ಹಾಕಲಾಗುತ್ತಿದೆ. ಹೀಗಾಗಿ, ಈ ವಿಚಾರ ದೊಡ್ಡ ಮಟ್ಟದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡುತ್ತಿದೆ. ಆದರೆ ಪೊಲೀಸರು ಈ ಬಗ್ಗೆ ಇನ್ನೂ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ, ಮತ್ತೊಂದು ಕಡೆ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಕುರಿತು ಪೊಲೀಸರು ಗಮನ ಹರಿಸುತ್ತಿದ್ದಾರೆ.












Click it and Unblock the Notifications