Darshan Thoogudeepa: ಎಸಿಪಿ ಚಂದನ್ ಗರಂ, ಡಿ-ಬಾಸ್ ದರ್ಶನ್ ತೂಗುದೀಪ್ ರೀತಿಯೇ ವಿನಯ್...

ಎಸಿಪಿ ಚಂದನ್ & ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳ ನಡುವೆ ದೊಡ್ಡ ಯುದ್ಧ ನಡೆಯುತ್ತಿದೆ. ಒಂದು ಕಾಲದಲ್ಲಿ ಎಸಿಪಿ ಚಂದನ್ ಅವರು ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಭದ್ರತೆ ನೀಡುತ್ತಿದ್ದರು, ಆದರೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೇ ಮೋಸ ಮಾಡಿಬಿಟ್ಟರು ಅಂತಾ ಆರೋಪ ಮಾಡುತ್ತಿದ್ದಾರೆ ಫ್ಯಾನ್ಸ್. ಇದೇ ವಿಚಾರಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅಭಿಮಾನಿಗಳು ಎಸಿಪಿ ಚಂದನ್ ವಿರುದ್ಧ ಭಾರಿ ಆಕ್ರೋಶ ಹೊರ ಹಾಕುತ್ತಿದ್ದಾರೆ.

ಡಿ-ಬಾಸ್ ದರ್ಶನ್ ತೂಗುದೀಪ್ ಬದುಕಿನಲ್ಲಿ ಕೊಲೆ ಕೇಸ್ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಮೈಸೂರಿಗೆ ತೆರಳಿ, ಡೆವಿಲ್ ಸಿನಿಮಾ ಶೂಟಿಂಗ್‌ನ ನಡೆಸುತ್ತಿದ್ದ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಎಸಿಪಿ ಚಂದನ್ ಅವರ ತಂಡ ಅರೆಸ್ಟ್ ಮಾಡಿ ಕರೆದುಕೊಂಡು ಬಂದಿತ್ತು. ಈ ಘಟನೆ ನಂತರ ದೊಡ್ಡ ಕಾಡ್ಗಿಚ್ಚೇ ಹೊತ್ತಿಕೊಂಡು, ಭಾರಿ ದೊಡ್ಡ ಚರ್ಚೆ ಕೂಡ ನಡೆಯುತ್ತಿದೆ. ಹೀಗಿದ್ದಾಗಲೇ, ಎಸಿಪಿ ಚಂದನ್ ಗರಂ, ಡಿ-ಬಾಸ್ ದರ್ಶನ್ ತೂಗುದೀಪ್ ರೀತಿಯೇ ವಿನಯ್...

Darshan Thoogudeepa Fan Vinay Gowda And ACP Chandan

ಎಸಿಪಿ ಚಂದನ್ ಗರಂ, ಡಿ-ಬಾಸ್ ದರ್ಶನ್...

ಹೌದು, ಕಳೆದ ಕೆಲವು ತಿಂಗಳಿಂದ ಎಸಿಪಿ ಚಂದನ್ ಕುಮಾರ್ ಅವರ ಹೆಸರು ಇಡೀ ಇಂಡಿಯಾ ಪೂರ್ತಿ ಸದ್ದು ಮಾಡುತ್ತಿದೆ. ಯಾಕಂದ್ರೆ ಎಸಿಪಿ ಚಂದನ್ ಅವರ ತಂಡ ಡಿ-ಬಾಸ್ ದರ್ಶನ್ ತೂಗುದೀಪ್ ವಿರುದ್ಧ ಕೇಳಿಬಂದ ಕೊಲೆ ಕೇಸ್ ತನಿಖೆ ನಡೆಸಿತ್ತು. ರೇಣುಕಾಸ್ವಾಮಿ ಎಂಬ ಚಿತ್ರದುರ್ಗ ಮೂಲದ ವ್ಯಕ್ತಿಯ ಕೊಲೆ ಕೇಸ್ ವಿಚಾರವಾಗಿ ದೊಡ್ಡ ಚರ್ಚೆ ನಡೆದಿತ್ತು. ಈ ಎಲ್ಲಾ ಗಲಾಟೆಯ ನಡುವೆಯೇ ಮತ್ತೊಂದು ಘಟನೆ ಇದೀಗ ಸಂಚಲನ ಸೃಷ್ಟಿ ಮಾಡಿದೆ. ಅಂದಹಾಗೆ, ಎಸಿಪಿ ಚಂದನ್ ಗರಂ, ಡಿ-ಬಾಸ್ ದರ್ಶನ್ ತೂಗುದೀಪ್ ರೀತಿಯೇ ವಿನಯ್...

ಡೆವಿಲ್ ಸಿನಿಮಾದ ವಿಲನ್‌ನ ಕೂಡ...

ಅಂದಹಾಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಇದೀಗ ಅರೆಸ್ಟ್ ಆಗಿ ರಿಲೀಸ್ ಆಗಿದ್ದಾರೆ. ಈ ಮೂಲಕ ಡೆವಿಲ್ ಸಿನಿಮಾದ ಹೀರೋ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ಅರೆಸ್ಟ್ ಮಾಡಿದ್ದ ಎಸಿಪಿ ಚಂದನ್ ಅವರ ತಂಡ, ಈಗ ಡೆವಿಲ್ ಸಿನಿಮಾದ ವಿಲನ್‌ನ ಕೂಡ ಅರೆಸ್ಟ್ ಮಾಡಿದಂತೆ ಆಗಿದೆ. ಈ ಮೂಲಕ ಭಾರಿ ದೊಡ್ಡ ಚರ್ಚೆ ಕೂಡ ನಡೆಯುತ್ತಿದ್ದು, ಮಚ್ಚು ತೋರಿಸಿ ರೀಲ್ಸ್ ಮಾಡಿದ್ದ ಕಾರಣಕ್ಕೆ ರಜತ್ & ವಿನಯ್ ಗೌಡನ ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗಿದೆ.

ಒಟ್ನಲ್ಲಿ ಎಸಿಪಿ ಚಂದನ್ ಅವರ ತಂಡದ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಇದೀಗ ಮತ್ತೆ ರೊಚ್ಚಿಗೆದ್ದಿದ್ದಾರೆ. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ 'ಹೇ ಎಸಿಪಿ ಚಂದನ್ ಇದೆಲ್ಲಾ ಸರಿ ಇರಲ್ಲ...' ಅಂತಾ ಕೂಡ ಕೆಮೆಂಟ್ಸ್ ಹಾಕುತ್ತಿದ್ದಾರೆ. ಈ ಮೂಲಕ ಜಗಳ ತಾರಕಕ್ಕೆ ಏರಿದ್ದು, ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ? ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+