Darshan Thoogudeepa: ಪವಿತ್ರಾ ಗೌಡ ಮಗಳು ದರ್ಶನ್ ಮನೆಗೆ ಶಿಫ್ಟ್? ಪವಿತ್ರಾ ಗೌಡ ಮಗಳನ್ನ ದರ್ಶನ್ ತೂಗುದೀಪ್...
ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಹಾಗೂ ಜೊತೆಗಾರರು ರೇಣುಕಾಸ್ವಾಮಿ ಕೊಲೆಯನ್ನ ಮಾಡಿದ್ದಾರೆ ಎಂದು ಆರೋಪಿಸಿ, ಇದೀಗ ಜೈಲಿಗೆ ಕಳುಹಿಸಲಾಗಿದೆ. ಹೀಗಿದ್ದಾಗ, ಪವಿತ್ರಾ ಗೌಡ ಮಗಳು ಇನ್ನೂ ಚಿಕ್ಕವರು. ಇದೇ ಕಾರಣಕ್ಕೆ ಇದೀಗ ದರ್ಶನ್ ತೂಗುದೀಪ್ ಕುಟುಂಬದ ಬಳಿ ದರ್ಶನ್ ತೂಗುದೀಪ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಮಾಡುತ್ತಿರುವ ಮನವಿ ಏನು? ಹಾಗಾದ್ರೆ ಪವಿತ್ರಾ ಗೌಡ ಮಗಳು ದರ್ಶನ್ ಮನೆಗೆ ಶಿಫ್ಟ್ ಆಗ್ತಾರಾ? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.
ಪವಿತ್ರಾ ಗೌಡ ಕೊಲೆ ಆರೋಪಿ ಆಗಿ ಇದೀಗ ಪರಪ್ಪನ ಅಗ್ರಹಾರ ಜೈಲಿನ ಒಳಗೆ ಕಂಬಿಯ ಎಣಿಸುತ್ತಾ, ಮುದ್ದೆ ಮುರಿದು ನುಂಗುತ್ತಿದ್ದಾರೆ. ಹೀಗಿದ್ದಾಗ ಹೊರಗಡೆ ಅವರ ಚಿಕ್ಕ ಮಗಳು ಮಾತ್ರ ಅಮ್ಮಾ.. ಅಮ್ಮಾ.. ಅಂತಾ ನರಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ನೀನು ಏನೇ ಮಾಡಿದರೂ ನನಗೆ ಅಮ್ಮಾ.. ನೀನು ನನಗೆ ಇಷ್ಟ ಅಮ್ಮಾ ಅಂತಾ ಇಂದು ಪವಿತ್ರಾ ಗೌಡ ಮಗಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. ಹೀಗಿದ್ದಾಗ ಜನರು ಮಾತ್ರ, ನಿಮ್ಮ ಅಮ್ಮ ಕೊಲೆ ಮಾಡಿದರೂ ಸರಿನಾ? ಎಂಬ ಪ್ರಶ್ನೆ ಕೇಳುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ದರ್ಶನ್ ತೂಗುದೀಪ್ ಅಭಿಮಾನಿಗಳು ಪವಿತ್ರಾ ಗೌಡ ಮಗಳ ಬೆಂಬಲಕ್ಕೆ ನಿಂತಿದ್ದಾರೆ!

ಬಾಸ್ ಮನೆಗೆ ನೀವು ಹೋಗಿ!
ಪವಿತ್ರಾ ಗೌಡ ಮಗಳು ಅಮ್ಮಾ.. ಅಮ್ಮಾ.. ಅಂತಾ ಪರದಾಡುತ್ತಿದ್ದಾರೆ ಎಂಬ ಮಾತುಗಳು ಓಡಾಡುತ್ತಿವೆ. ಹೀಗಿದ್ದಾಗ ದರ್ಶನ್ ತೂಗುದೀಪ್ ಅಭಿಮಾನಿಗಳು ಮಾತ್ರ ಹೊಸ ಬೇಡಿಕೆಯ ಇಟ್ಟಿದ್ದಾರೆ. ಅದು ಏನು ಅಂದ್ರೆ ದರ್ಶನ್ ತೂಗುದೀಪ್ ಅವರ ಮನೆಗೆ ಪವಿತ್ರಾ ಗೌಡ ಮಗಳು ಹೋಗಬೇಕು. ಈ ವಿಚಾರದಲ್ಲಿ ದರ್ಶನ್ ತೂಗುದೀಪ್ ಅವರು ತಮ್ಮ ಕುಟುಂಬದವರಿಗೆ & ಎಲ್ಲರಿಗೂ ಹೇಳಬೇಕು. ಆಗ ಮಾತ್ರ ಪವಿತ್ರಾ ಗೌಡ ಮಗಳು ನೆಮ್ಮದಿಯಾಗಿ ಬದಕಲು ಸಾಧ್ಯ.
ಇಲ್ಲವಾದರೆ ಪವಿತ್ರಾ ಗೌಡ ಮಗಳು ಪರದಾಡುವ ಪರಿಸ್ಥಿತಿ ಬರಲಿದ್ದು, ಈ ಕಾರಣಕ್ಕೆ ದರ್ಶನ್ ತೂಗುದೀಪ್ ಮನೆಗೆ ಪವಿತ್ರಾ ಗೌಡ ಮಗಳು ಹೋಗಿ ವಾಸ ಮಾಡಲಿ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕುತ್ತಿದ್ದಾರೆ. ಇಂತಹ ಕಮೆಂಟ್ ಬಗ್ಗೆ ಆಕ್ರೋಶ ಕೂಡ ಈಗ ಮೊಳಗುತ್ತಿದೆ. ಯಾಕಂದ್ರೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಹಾಕುತ್ತಿರುವ ಪ್ರಕಾರ, ದರ್ಶನ್ ತೂಗುದೀಪ್ ಬಾಳು ಹಾಳಾಗಿ ಹೋಗಿದ್ದು ಪವಿತ್ರಾ ಗೌಡ ಅವರಿಂದ ಎಂಬ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ದರ್ಶನ್ ಅವರ ಅಭಿಮಾನಿಗಳ ನಡುವೆಯೇ ಕಿತ್ತಾಟವು ಶುರುವಾಗಿದೆ!
ಕೊಲೆಯಾದ ರೇಣುಕಾಸ್ವಾಮಿ ಈಗ ದೆವ್ವ?
ದರ್ಶನ್ ತೂಗುದೀಪ್ ನೆಮ್ಮದಿಯಾಗಿ ಇದ್ದ ಜೀವನ ಹಾಳು ಮಾಡಿಕೊಂಡು ಇದೀಗ ಜೈಲಿನ ನರಕಕ್ಕೆ ಬಿದ್ದಂತೆ ಆಗಿದೆ. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಕಂಬಿ ಎಣಿಸುತ್ತಿರುವ ಈ ನಟನಿಗೆ ಸಾಲು ಸಾಲು ಸಮಸ್ಯೆ ಎದುರಾಗುತ್ತಿದೆ. ಅದರಲ್ಲೂ ಒಂದೊಂದು ಸಿನಿಮಾಗೆ ಕೂಡ ಕೋಟಿ ಕೋಟಿ ರೂಪಾಯಿ ಪಡೆಯುತ್ತಿದ್ದರು ಎಂಬ ಮಾತು ಕೂಡ ಇತ್ತು. ಇಂತಹ ಡಿ-ಬಾಸ್ ಈಗ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿ ನರಳಾಡುತ್ತಿದ್ದು, ದರ್ಶನ್ ಅವರ ಸಿನಿಮಾಗಳು ನಿಂತು ಹೋಗಲಿವೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಇದು ಬಿಡಿ, ಮತ್ತೆ ಒಂದು ಕಡೆ ರೇಣುಕಾಸ್ವಾಮಿ ಆತ್ಮ ದೆವ್ವವಾಗಿ ಇದೀಗ ಕಾಟ ಕೊಡಲು ಶುರು ಮಾಡುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ದರ್ಶನ್ ಬೆನ್ನಿಗೆ ಹೊಸ ಕಂಟಕ?
ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ದರ್ಶನ್ ತೂಗುದೀಪ್ ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ, ಮನಸ್ಸಿಗೆ ಬಂದಂತೆ ಬದುಕುತ್ತಿದ್ದ ಫೋಟೋಸ್ ಈಗ ವೈರಲ್ ಆಗುತ್ತಿವೆ. ಇದೆಲ್ಲಾ ಮಾನ್ಯ ನ್ಯಾಯಾಲಯಕ್ಕೆ ತಲುಪಿದರೆ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಗ್ಯಾರಂಟಿ ಅಂತಾ ಹೇಳ್ತಾ ಇದ್ದಾರೆ ಕಾನೂನು ತಜ್ಞರು. ಹೀಗಾಗಿ ನಟ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಹೊಸ ಕಂಟಕ ಎದುರಾದಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಜಾಮೀನು ಪಡೆದು ದರ್ಶನ್ ತೂಗುದೀಪ್ ಹೊರಗೆ ಬರಲು ಇದು ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಈ ಫೋಟೋಸ್ ವೈರಲ್ ಮಾಡುತ್ತಾ, ನಮ್ಮ ಬಾಸ್ ಹಂಗೆ & ಹಿಂಗೆ ಅಂತಾ ಪೋಸ್ಟ್ ಹಾಕುತ್ತಿದ್ದಾರೆ.












Click it and Unblock the Notifications