Darshan Thoogudeepa: ಹೆಣ್ಣು, ಎಣ್ಣೆ, ದಮ್ಮು, ಮಾಂಸ ಬಿಟ್ಟು ಒಂಟಿಯಾಗಿರುವ ದಾಸ ದರ್ಶನ್‌ಗೆ ಹುಚ್ಚು ಹಿಡಿಯುತ್ತಾ?
ದರ್ಶನ್ ತೂಗುದೀಪ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಪರಿಸ್ಥಿತಿ ಕೂಡ ದಿನದಿಂದ ದಿನಕ್ಕೆ ಭಾರಿ ಗಂಭೀರ ಸ್ವರೂಪ ಪಡೆಯುತ್ತಿದೆ. ಅದರಲ್ಲೂ, ಹೊರಗಡೆ ಇದ್ದಾಗ ದರ್ಶನ್ ತೂಗುದಿಪ್ ಹೆಣ್ಣು, ಎಣ್ಣೆ, ದಮ್ಮು, ಮಾಂಸ ಅಂತೆಲ್ಲಾ ಎಂಜಾಯ್ ಮಾಡಿದ್ದರು ಎಂಬ ಆರೋಪ ಇದೆ. ಹೀಗಿದ್ದಾಗ ದಿಢೀರ್ ಪರಪ್ಪನ ಅಗ್ರಹಾರ ಜೈಲಿಂದ ಈಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ಕೊಲೆ ಆರೋಪ ಹೊತ್ತಿರುವ ನಟ ದರ್ಶನ್ ತೂಗುದೀಪ್ ಅವರಿಗೆ ಸಮಸ್ಯೆ ಎದುರಾಗಿದೆ. ಹೀಗಿದ್ದಾಗ ಮನೋ ವೈದ್ಯರು ದರ್ಶನ್ ತೂಗುದೀಪ್ ಆರೋಗ್ಯದ ಕುರಿತಾಗಿ ಮಾತನಾಡಿದ್ದಾರೆ!
ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಮದುವೆ ಆಗಿದ್ದರು ಎಂಬ ಆರೋಪ ಇತ್ತು. ಆದ್ರೆ ಭಾರತದ ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿ 2 ಮದುವೆ ಆಗುವುದಕ್ಕೆ ಸಾಧ್ಯ ಇಲ್ಲ, ಹೀಗಾಗಿ ನಟ ದರ್ಶನ್ ತೂಗುದೀಪ್ 2 ಬಾರಿ ಮದುವೆಯೇ ಆಗಿಲ್ಲ. ಇದೆಲ್ಲವೂ ವಿರೋಧಿಗಳು ಸೃಷ್ಟಿ ಮಾಡುತ್ತಿರುವ ಸುಳ್ಳು ಸುದ್ದಿ ಅಂತಾ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಹಿಂದೆ ಕೂಡ ಹಲವು ಬಾರಿ ಹೇಳಿದ್ದಾರೆ ಅಲ್ಲದೆ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ.

ಹೀಗಿದ್ದಾಗ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ತುಂಬಾ ಹತ್ತಿರದ ಸಂಬಂಧ ಹೊಂದಿದ್ದರು, ಹೋಟೆಲ್ & ಫಾರಿನ್ ಟ್ರಿಪ್ ಅಂತಾ ವಿದೇಶಕ್ಕೆ ಒಟ್ಟಿಗೆ ಸುತ್ತುತ್ತಿದ್ದರು ಎಂಬ ಆರೋಪ ಇದೆ. ಹೀಗಿದ್ದಾಗಲೇ ಜೈಲಲ್ಲಿ ನಟ ದರ್ಶನ್ ತೂಗುದೀಪ್ ಅವರ ಮಾನಸಿಕ ಆರೋಗ್ಯ ಹದಗೆಟ್ಟು ಅವರಿಗೆ ಹುಚ್ಚು ಹಿಡಿಯುತ್ತಾ? ಎಂಬ ಪ್ರಶ್ನೆಯು ಮೂಡಿದೆ. ಇದಕ್ಕೆಲ್ಲಾ ಕಾರಣ ಮನೋ ವೈದ್ಯರು! ದರ್ಶನ್ ಅವರ ಮಾನಸಿಕ ಆರೋಗ್ಯ ಈಗ ಹದಗೆಡಲು ಕಾರಣ ಏನು? ಇಂತಹ ಪರಿಸ್ಥಿತಿಯಲ್ಲಿ ಹುಚ್ಚು ಹಿಡಿಯುವ ಸಾಧ್ಯತೆ ಇರುತ್ತಾ? ಆ ಬಗ್ಗೆ ತಿಳಿಯಲು ಮುಂದೆ ಓದಿ.
ದರ್ಶನ್ ತೂಗುದೀಪ್ ಅವರಿಗೆ ಮಾನಸಿಕ..
ಕನ್ನಡ ಸಿನಿಮಾ ರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುತ್ತಿದ್ದ ದರ್ಶನ್ ತೂಗುದೀಪ್‌ಗೆ ಮದ್ಯ ಸೇವನೆ, ಅಂದ್ರೆ ಕುಡಿಯುವ ಅಭ್ಯಾಸ ಇತ್ತು ಹೀಗಾಗಿ ಅವರು ಹೊರಗೆ ಇದ್ದಾಗ ಸಖತ್ ಎಂಜಾಯ್ ಮಾಡ್ತಿದ್ರು. ನಿಮಗೆಲ್ಲಾ ಗೊತ್ತಿರುವ ರೀತಿ ದರ್ಶನ್ ತೂಗುದೀಪ್ ಅವರ ಜೊತೆಗೆ ದೊಡ್ಡ ಸ್ನೇಹಿತರ ಪಡೆ ಇರುತ್ತಿತ್ತು. ಅಲ್ಲದೆ ಪವಿತ್ರಾ ಗೌಡ ಕೂಡ ಹಗಲು & ರಾತ್ರಿ ಜೊತೆಗೆ ಇರುತ್ತಿದ್ದರು ಎಂಬುದು ಅವರ ವಿರೋಧಿಗಳ ಆರೋಪ.
ಈ ರೀತಿಯಾಗಿ ಹೆಣ್ಣು, ಎಣ್ಣೆ, ದಮ್ಮು, ಮಾಂಸ ಅಂತಾ ಎಂಜಾಯ್ ಮಾಡುತ್ತಿದ್ದ ದರ್ಶನ್ ತೂಗುದೀಪ್‌ಗೆ ಇದೀಗ ಬಳ್ಳಾರಿ ಜೈಲಿನ ಒಳಗೆ ಯಾವುದೇ ರೀತಿ ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ, ದರ್ಶನ್ ತೂಗುದೀಪ್‌ಗೆ ಜೈಲಿನ ಒಳಗೆ ಮಾನಸಿಕವಾಗೂ ಆರೋಗ್ಯ ಏರುಪೇರು ಆಗಿ ಹುಚ್ಚು ಹಿಡಿಯಬಹುದು ಅಂತಾ ವಿರೋಧಿಗಳು ಹೇಳುತ್ತಿದ್ದಾರೆ. ಮನೋ ವೈದ್ಯರ ಹೇಳಿಕೆ ತಂದು, ಎಡಿಟ್ ಮಾಡಿ ಈ ರೀತಿ ದರ್ಶನ್ ಅವರ ವಿರುದ್ಧ ಭಾರಿ ದೊಡ್ಡ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಕೆಲವರು. ಈ ಬಗ್ಗೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಪಡೆ, ಆಕ್ರೋಶ ಹೊರ ಹಾಕುತ್ತಿದ್ದು ಸಂಚಲನ ಸೃಷ್ಟಿ ಮಾಡಿದೆ.
ದರ್ಶನ್ ಬೆನ್ನಿಗೆ ಹೊಸ ಕಂಟಕ?
ಕನ್ನಡ ಸಿನಿಮಾ ರಂಗದ ಸೂಪರ್ ಸ್ಟಾರ್ ಆಗಿ ಮೆರೆದಿದ್ದ ದರ್ಶನ್ ತೂಗುದೀಪ್ ಸಾಕಷ್ಟು ಸಂಕಷ್ಟ ಎದುರಿಸುವ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ, ಮನಸ್ಸಿಗೆ ಬಂದಂತೆ ಬದುಕುತ್ತಿದ್ದ ಫೋಟೋಸ್ ಈಗ ವೈರಲ್ ಆಗುತ್ತಿವೆ. ಇದೆಲ್ಲಾ ಮಾನ್ಯ ನ್ಯಾಯಾಲಯಕ್ಕೆ ತಲುಪಿದರೆ ದರ್ಶನ್ ತೂಗುದೀಪ್‌ಗೆ ಸಂಕಷ್ಟ ಗ್ಯಾರಂಟಿ ಅಂತಾ ಹೇಳ್ತಾ ಇದ್ದಾರೆ ಕಾನೂನು ತಜ್ಞರು. ಹೀಗಾಗಿ ನಟ ದರ್ಶನ್ ತೂಗುದೀಪ್ ವಿರುದ್ಧ ಇದೀಗ ಹೊಸ ಕಂಟಕ ಎದುರಾದಂತೆ ಕಾಣುತ್ತಿದೆ. ಭವಿಷ್ಯದಲ್ಲಿ ಜಾಮೀನು ಪಡೆದು ದರ್ಶನ್ ತೂಗುದೀಪ್ ಹೊರಗೆ ಬರಲು ಇದು ಸಮಸ್ಯೆ ಮಾಡಬಹುದು ಎನ್ನಲಾಗುತ್ತಿದೆ. ಆದರೆ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳೇ ಈ ಫೋಟೋಸ್ ವೈರಲ್ ಮಾಡುತ್ತಾ, ನಮ್ಮ ಬಾಸ್ ಹಂಗೆ & ಹಿಂಗೆ ಅಂತಾ ಪೋಸ್ಟ್ ಹಾಕುತ್ತಿದ್ದಾರೆ.












Click it and Unblock the Notifications