Darshan Thoogudeepa: ರೇಣುಕಾಸ್ವಾಮಿಯ ಫೋಟೋ ಕಂಡ ತಂದೆ ಕಣ್ಣೀರಿಟ್ಟು ಹೇಳಿದ್ದೇನು ಗೊತ್ತಾ.?
Darshan Thoogudeepa: ಬೆಂಗಳೂರಿನ ಪಟ್ಟಣಗೆರೆ ಶೆಡ್‌ನಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಲಾರಿ ಮುಂದೆ ಕುಳಿತು ಕಣ್ಣೀರಿಟ್ಟು ನನ್ನನ್ನು ಬಿಟ್ಟುಬಿಡಿ ಎಂದು ಪರಿಪರಿಯಾಗಿ ದರ್ಶನ್ & ಗ್ಯಾಂಗ್‌ಗೆ ಬೇಡಿಕೊಂಡಿರುವ ಫೋಟೋಗಳು ಇದೀಗ ವೈರಲ್ ಆಗಿವೆ. ಇನ್ನು ಇದನ್ನು ಕಂಡ ರೇಣುಕಾಸ್ವಾಮಿ ತಂದೆ-ತಾಯಿ ಹೇಳಿದ್ದೇನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಪವಿತ್ರಾ ಗೌಡಗೆ ಅಶ್ಲೀಲ ಸೇಂದೇಶ ಕಳುಹಿಸಿದ್ದಾರೆ ಎಂಬ ಕಾರಣಕ್ಕೆ ದರ್ಶನ್ & ಗ್ಯಾಂಗ್ ರೇಣುಕಾಸ್ವಾಮಿಯನ್ನು ಭೀಕರವಾಗಿ ಹತ್ಯ ಮಾಡಿದ್ದಾರೆ ಎಂದು ತಿಳಿದುಬಂದಿತ್ತು. ಆದರೆ ಹತ್ಯೆಗೂ ಮುಂಚೆ ರೇಣುಕಾಸ್ವಾಮಿ ಮೇಲೆ ಯಾವ ರೀತಿಯಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿರುವ ಫೋಟೋಗಳು ಇದೀಗ ವೈರಲ್ ಆಗುತ್ತಿದೆ.
ರೇಣುಕಾಸ್ವಾಮಿ ತಂದೆ ಹೇಳಿದ್ದೇನು?: ರೇಣುಕಾಸ್ವಾಮಿ ಕೈಮುಗಿದು ಎಷ್ಟೇ ಅಂಗಲಾಚಿದರೂ ಕೂಡ ಡಿ & ಗ್ಯಾಂಗ್ ಆತನ ಮೇಲೆ ಕ್ರೌರ್ಯ ಮೆರೆದಿದ್ದಾರೆ ಈ ಪೋಟೋಗಳು ಇದೀಗ ವೈರಲ್ ಆಗುತ್ತಿದ್ದು, ಇದನ್ನು ಕಂಡ ರೇಣುಕಾಸ್ವಾಮಿ ತಂದೆ ಕಾಶೀನಾಥಯ್ಯ ಪ್ರತಿಕ್ರಿಯಿಸಿ, "ನನ್ನ ಮಗನಿಗೆ ಈ ಪರಿಸ್ಥಿತಿ ಬರಬಾರದಾಗಿತ್ತು. ಇನ್ನು ನನ್ನ ಮಗನನನ್ನು ಈ ಸ್ಥಿತಿಗೆ ತಂದವರಿಗೂ ಇದೇ ರೀತಿ ಆಗಬೇಕು," ಎಂದು ಹೇಳಿದರು.
ಕರುಣೆ ತೋರಿಸಿ ಬಿಡಬಹುದಿತ್ತು: "ಕೈಮುಗಿದು ಅಂಗಲಾಚಿ, ಬೇಡಿಕೊಳ್ಳುತ್ತಿರುವ ಫೋಟೋದ ಬಗ್ಗೆ ಪ್ರತಿಕ್ರಿಯಿಸಿರುವ ಕರುಣೆ ತೋರಿಸಿ ಬಿಟ್ಟು ಕಳುಹಿಸಬಹುದಿತ್ತು. ನಾವು ಅವನ್ನು ಯಾವ ರೀತಿ ನೋಡ್ಕೋಬೇಕು ಹಾಗೆ ನೋಡ್ತಿದ್ವಿ, ಆದರೆ ಬೇಡಿಕೊಂಡರೂ ಬೀಡದೇ ಹೊಡೆದು ಸಾಯಿಸಿದ್ದಾರೆ," ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ.
"ಆ ಕ್ಷಣದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್ ನವರು ಯೋಚನೆ ಮಾಡಬೇಕಾಗಿತ್ತು. ಒಂದು ವೇಳೆ ಏನಾದರೂ ಅನಾಹುತ ಆದರೆ ನಾಳೆ ನನ್ನ ಪರಿಸ್ಥಿತಿ ಏನಾಗುತ್ತದೆ ಅಂತ ಯೋಚನೆ ಮಾಡಬೇಕಾಗಿತ್ತು. ಕೇಳಿಕೊಂಡಾಗ ಬಿಟ್ಟು ಕಳುಹಿಸಬಹುದಿತ್ತು. ಇಲ್ಲ ಅಂದ್ರೆ ಒಂದೆರಡು ಏಟು ಹೊಡೆದು ಕಳಿಸಿಬಹುದಿತ್ತು." ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ.
ನನ್ನ ಮಗ ನರಳಿ ನರಳಿ ಮೃತಪಟ್ಟಿದ್ದಾನೆ: "ಕಾನೂನಿನಲ್ಲಿ ಅವರಿಗೆ ಏನು ಶಿಕ್ಷೆ ಕೊಡಬೇಕು ಅದನ್ನು ಕೊಡಲಿ. ನನ್ನ ಮಗ ನರಳಿ ನರಳಿ ಮೃತಪಟ್ಟಿದ್ದಾನೆ. ಕಾನೂನು ಅದನ್ನು ನೋಡಿ ಅವರಿಗೆ ಶಿಕ್ಷೆ ನೀಡಬೇಕು. ಅದರಲ್ಲೂ ಅವರಿಗೆ ಕಠಿಣ ಶಿಕ್ಷೆ ಆಗಬೇಕು," ಎಂದು ಆಗ್ರಹಿಸಿದರು. ಅಲ್ಲದೆ, ಸೊಸೆಯ ಭವಿಷ್ಯದ ಬಗ್ಗೆಯೂ ಚಿಂತೆಯಾಗಿದೆ ಎಂದು ಹೇಳಿದರು.












Click it and Unblock the Notifications