Darshan Thoogudeepa: ದರ್ಶನ್ ತೂಗುದೀಪ್‌ಗೆ ಆಘಾತ... ಅಭಿಮಾನಿಗಳಲ್ಲಿ ತೀವ್ರಗೊಂಡ ಆತಂಕ!

ಕನ್ನಡ ಸಿನಿಮಾ ರಂಗದ ದಾಸ, ಕೋಟಿ ಕೋಟಿ ಅಭಿಮಾನಿಗಳ ಪಾಲಿ ಪ್ರೀತಿಯ ಡಿ-ಬಾಸ್ ದರ್ಶನ್ ಅವರಿಗೆ ತೀವ್ರ ಆಘಾತ ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಳ್ಳಾರಿ ಜೈಲಿನಲ್ಲಿ ನರಳಾಡುತ್ತಿರುವ ದರ್ಶನ್ ತೂಗುದೀಪ್, ರಿಲೀಸ್ ಆಗಿ ಹೊರಗೆ ಬರುವ ನಿರೀಕ್ಷೆ ಹೊಂದಿದ್ದರು. ಬಳ್ಳಾರಿ ಜೈಲಿನ ಊಟ ಸೆಟ್ ಆಗದೆ & ಬಳ್ಳಾರಿ ವಾತಾವರಣ ಹಿಡಿಸದಿರುವ ಕಾರಣ ದರ್ಶನ್ ತೂಗುದೀಪ್ ವಿಲವಿಲನೆ ಒದ್ದಾಡಿ ಹೋಗಿದ್ದಾರೆ. ಇಂತಹ ಸಮಯದಲ್ಲೇ ದರ್ಶನ್ ತೂಗುದೀಪ್‌ಗೆ ಆಘಾತ ಎದುರಾಗಿದ್ದು, ಅಭಿಮಾನಿಗಳಲ್ಲಿ ಆತಂಕ ತೀವ್ರಗೊಂಡಿದೆ!

ಡಿ-ಬಾಸ್.. ಡಿ-ಬಾಸ್.. ಅಂತಾ ಕರೆಸಿಕೊಳ್ಳುವ ದರ್ಶನ್ ಅವರಿಗೆ ಆಘಾತ ಎದುರಾಗಿದೆ. ದರ್ಶನ್ ತೂಗುದೀಪ್ ಪರಿಸ್ಥಿತಿ ಬಿಸಿ ತುಪ್ಪ ಬಾಯಲ್ಲಿ ಇಟ್ಟುಕೊಂಡಂತೆ ಆಗಿದೆ. ಯಾಕಂದ್ರೆ ಪವಿತ್ರಾ ಗೌಡಾ ಕಾರಣಕ್ಕೆ, ರೇಣುಕಾಸ್ವಾಮಿ ಎಂಬ ವ್ಯಕ್ತಿ ಕೊಲೆ ಮಾಡಿರುವ ಆರೋಪ ನಟ ದರ್ಶನ್ ತೂಗುದೀಪ್ ವಿರುದ್ಧವೇ ಕೇಳಿ ಬಂದಿದೆ. ಇದೇ ಕಾರಣಕ್ಕೆ ಈ ನಟ ಬಳ್ಳಾರಿ ಜೈಲು ಸೇರಿ ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲೇ ಅಭಿಮಾನಿಗಳ ಪ್ರೀತಿಯ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ...

Darshan Thoogudeepa Didn t Get Good News To Come Out Of Ballari

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಒಳಗೆ ಸಿಗರೇಟು & ಎಣ್ಣೆ & ಬಿರಿಯಾನಿ ಅಂತಾ ಫುಲ್ ಮಜಾ ಮಾಡ್ಕೊಂಡು ಇದ್ದರು ನಟ ದರ್ಶನ್ ತೂಗುದೀಪ್ ಎಂಬ ಆರೋಪ ಇತ್ತು. ಅಲ್ಲದೆ, ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಕೂತು ಸಿಗರೇಟ್ ಸೇದುತ್ತಾ, ಟೀ ಕುಡಿಯುತ್ತಿದ್ದ ಫೋಟೋ ವೈರಲ್ ಆಗಿತ್ತು. ಹೀಗಿದ್ದಾಗ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದ ದರ್ಶನ್ ತೂಗುದೀಪ್ ಅವರಿಗೆ ಈಗ ಆಘಾತ ಎದುರಾಗಿದೆ! ಹಾಗಾದ್ರೆ ಏನದು ದರ್ಶನ್ ತೂಗುದೀಪ್ ಅವರಿಗೆ ಎದುರಾಗಿರುವ ಆಘಾತ? ಮುಂದೆ ಓದಿ.

ದರ್ಶನ್ ತೂಗುದೀಪ್‌ಗೆ ತೀವ್ರ ಆಘಾತ!

ಅಂದಹಾಗೆ ಬಳ್ಳಾರಿ ಜೈಲಿನಲ್ಲಿ ಪರದಾಡುತ್ತಿರುವ ದರ್ಶನ್ ತೂಗುದೀಪ್ ರಿಲೀಸ್ ಆಗುವ & ಈ ಮೂಲಕ ಅದ್ಧೂರಿಯಾಗಿ ಹೊರಗೆ ಬರುವ ನಿರೀಕ್ಷೆ ಹುಸಿಯಾಗಿದೆ. ನಟ ದರ್ಶನ್ ಅವರ ಜಾಮೀನು ಅರ್ಜಿ ಇದೀಗ ಮುಂದೂಡಿಕೆ ಆಗಿದೆ. ಸೆಪ್ಟೆಂಬರ್ 27ಕ್ಕೆ ಮುಂದೂಡಿಕೆ ಆಗಿರುವ ಜಾಮೀನು ಅರ್ಜಿಯ ವಿಚಾರವನ್ನ ತಿಳಿದು ಈಗ ದರ್ಶನ್ ತೂಗುದೀಪ್ ಅವರಿಗೆ ಆಘಾತವೇ ಎದುರಾಗಿದೆ ಎನ್ನಲಾಗಿದೆ. ಬಳ್ಳಾರಿ ಜೈಲಿನಲ್ಲಿ ಈ ಸುದ್ದಿಯನ್ನು ಕೇಳಿದ ದರ್ಶನ್ ಅವರು ಬೆಚ್ಚಿ ಬಿದ್ದಿದ್ದಾರಂತೆ!

ಪವಿತ್ರಾ ಗೌಡ ಭೇಟಿ ಮಾಡುತ್ತಾರಾ?

ಪವಿತ್ರಾ ಗೌಡ & ದರ್ಶನ್ ತೂಗುದೀಪ್ ಒಬ್ಬರನ್ನ ಮತ್ತೊಬ್ಬರು ಬಿಟ್ಟು ಇರುತ್ತಿರಲಿಲ್ಲ ಎಂಬ ಸತ್ಯ ಇಡೀ ಜಗತ್ತಿಗೇ ಗೊತ್ತಾಗಿದೆ. ಆದರೆ, ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಹೀಗೆ ಜೈಲು ಸೇರಲು ಪರೋಕ್ಷವಾಗಿ ಪವಿತ್ರಾ ಗೌಡ ಕಾರಣ ಎಂಬ ಆಕ್ರೋಶ ಕೂಡ ಮೊಳಗಿದೆ. ದರ್ಶನ್ ತೂಗುದೀಪ್ ಅಭಿಮಾನಿಗಳು ಇದೀಗ ಪವಿತ್ರಾ ಗೌಡ ವಿರುದ್ಧವೇ ರೊಚ್ಚಿಗೆದ್ದು, ನಮ್ಮ ಡಿ-ಬಾಸ್ ಜೈಲಿಗೆ ಹೋಗಲು ನೀನೇ ಕಾರಣ ಅಂತಾ ಪವಿತ್ರಾ ಗೌಡ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ ದರ್ಶನ್ ಅವರ ಅಭಿಮಾನಿಗಳು. ಪರಿಸ್ಥಿತಿ ಹೀಗೆ ಇದ್ದಾಗಲೇ, ಪವಿತ್ರಾ ಗೌಡ ಭೇಟಿ ಮಾಡುತ್ತಾರಾ ನಟ ದರ್ಶನ್ ತೂಗುದೀಪ್? ಎಂಬ ಪ್ರಶ್ನೆ ಕೂಡ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಎದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+