Darshan Thoogudeepa: ನಗು ನಗುತಾ ಸೆಲ್‌ನಿಂದ ಹೊರ ಬಂದ ದರ್ಶನ್: ಜಾಮೀನು ಪಕ್ಕಾನಾ?
ದರ್ಶನ್‌ಗೆ ಮತ್ತೊಮ್ಮೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಆಗಿದೆ. ಸೆಪ್ಟೆಂಬರ್ 30ರವರೆಗೆ ದರ್ಶನ್ ನ್ಯಾಯಾಂಗ ಬಂಧನ ಅವಧಿ ಮುಂದೂಡಿಕೆ ಆಗಿದೆ. ಹೀಗಾಗಿ ಕೊಲೆ ಆರೋಪಿ ದರ್ಶನ್ಗೆ ಈಗ ಜೈಲೂಟವೇ ಗತಿಯಾಗಿದೆ. ಆದರೂ ದರ್ಶನ್ ಮುಖದಲ್ಲಿ ಮೊದಲ ಬಾರಿಗೆ ನಗು ಕಾಣಿಸಿಕೊಂಡಿದ್ದು, ಜಾಮೀನು ಸಿಗುವುದು ಪಕ್ಕಾ ಆಗಿರಬಹುದಾ ಎನ್ನುವ ಸುಳಿವು ನೀಡಿದೆ.
ಹೌದು... ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿರುವ ದರ್ಶನ್ ಜಾಮೀನು ಅರ್ಜಿಗೆ ಸಿದ್ಧತೆ ನಡೆಸಿದ್ದಾರೆ. ದರ್ಶನ್ ಪರ ವಕೀಲರೊಂದಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಜಾಮೀನು ಅರ್ಜಿ ಸಲ್ಲಿಸಲು ಮುಂದಾಗಿದ್ದು ಇದಕ್ಕೆ ತಯಾರಿ ನಡೆದಿದೆ. ಈ ವೇಳೆ ವಿಜಯಲಕ್ಷ್ಮಿ ಪತಿಯನ್ನು ನೋಡಲು ಬಳ್ಳಾರಿ ಜೈಲಿಗೆ ಹೋದಾಗ ಸೆಲ್‌ನಿಂದ ಹೊರ ಬಂದ ದರ್ಶನ್ ಮುಖದಲ್ಲಿ ಮೊದಲ ಬಾರಿಗೆ ನಗೆ ಕಾಣಿಸಿಕೊಂಡಿದೆ. ಈ ಮೂಲಕ ಜಾಮೀನು ಸಿಗುವ ಸೂಚನೆ ನೀಡಿದ್ದಾರೆ ದರ್ಶನ್.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲು ಸೇರಿ 100 ದಿನಗಳು ಕಳೆದಿವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಟೀ ಪಾರ್ಟಿ ನೀಡಿದ್ದ ಕುಖ್ಯಾತಿ ರೌಡಿ ವಿಲ್ಸನ್ ಗಾರ್ಡನ್ ನಾಗ ಅಂಡ್ ಟೀಂ ಅನ್ನು ಬೇರೆ ಜೈಲಿಗೆ ಎತ್ತಂಗಡಿ ಮಾಡಲಾಗಿದೆ.
ದಾಸನ ಮೇಲೆ ಎರಡು ಎಫ್‌ಐಆರ್
ದರ್ಶನ್‌ಗೆ ರಾಜ್ಯಾತಿಥ್ಯ ನೀಡಿದ ಪ್ರಕರಣ ಮುಳುವಾಗಿ ಬಳ್ಳಾರಿ ಜೈಲಿಗೆ ಅವರನ್ನು ಶಿಫ್ಟ್ ಮಾಡಲಾಗಿದೆ. ಇದರ ಪರಿಣಾಮ ದಾಸನ ಮೇಲೆ ಎರಡು ಎಫ್‌ಐಆರ್ ದಾಖಲಿಸಲಾಗಿದೆ. ಆದರೆ ದರ್ಶನ್ ಬಳ್ಳಾರಿ ಜೈಲಿನಲ್ಲೂ ತನ್ನ ಧಿಮಾಕು ಬಿಟ್ಟಿಲ್ಲ. ಮಾಧ್ಯಮಗಳಿಗೆ ಮಿಡಲ್ ಫಿಂಗರ್ ತೋರಿಸಿದ್ದಕ್ಕೆ ಆತನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈಗ ಬಳ್ಳಾರಿ ಜೈಲಿನಲ್ಲಿ ಪರಪ್ಪನ ಅಗ್ರಹಾರ ಜೈಲಿನಂತೆ ರಾಜ್ಯಾತಿಥ್ಯ ಸಿಗದೆ ವಿಲವಿಲ ಅಂತಾ ಒಡ್ಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ತಮ್ಮ ನೆಚ್ಚಿನ ನಟನ ಈ ಸ್ಥಿತಿ ಕಂಡು ಲಕ್ಷಾಂತರ ಅಭಿಮಾನಿಗಳು ಬೇಸರಗೊಂಡಿದ್ದಾರೆ. ದರ್ಶನ್ ಸಿನಿಮಾ ನೂರು ದಿನ ಓಡಿದಾಗ ಸಂಭ್ರಮಿಸುತ್ತಿದ್ದ ಅಭಿಮಾನಿಗಳಿಗೆ ದಿಕ್ಕು ತೋಚದಂತಾಗಿದೆ. ನೂರನೇ ದಿನಕ್ಕಾದರೂ ದರ್ಶನ್ ಜೈಲಿನಿಂದ ಹೊರಬರುತ್ತಾರೆ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಸಾಕಷ್ಟು ಬೇಸರವಾಗಿದೆ.
ಇತ್ತ ದರ್ಶನ್ ದಿನಕ್ಕೊಂದು ಬೇಡಿಕೆ ಇಡುತ್ತಾ ಜೈಲಾಧಿಕಾರಿಗಳಿಗೂ ಬೇಸರವಾಗಿದ್ದಾರೆ. ಇದೆಲ್ಲದರ ನಡುವೆ ದರ್ಶನ್‌ನನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಪತ್ನಿ ವಿಜಯಲಕ್ಷ್ಮಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ. ವಕೀಲರೊಂದಿಗೆ ಮಾತನಾಡಿ ಜಾಮೀನು ಪಡೆಯಲು ಬೇಕಾದ ಸಿದ್ದತೆಗಳು ನಡೆದಿವೆ. ಈ ಸಮಯದಲ್ಲಿ ದರ್ಶನ್ ಮುಖದಲ್ಲಿ ಮೊದಲ ಬಾರಿಗೆ ನಗು ಕಾಣಿಸಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.

ನಗುವಿನ ಮೂಲಕ ಜಾಮೀನು ಸಿಗುವ ಸೂಚನೆ ಕೊಟ್ಟ ದರ್ಶನ್
ಬುಧವಾರ ಪತ್ನಿಯನ್ನು ಭೇಟಿ ಮಾಡಲು ಶೆಲ್‌ನಿಂದ ಹೊರ ಬರುತ್ತಿರುವಾಗ ಮೊದಲ ಬಾರಿ ಅವರ ಮುಖದಲ್ಲಿ ನಗು ಕಾಣಿಸಿಕೊಂಡಿದೆ. ಇದು ಅವರಿಗೆ ಜಾಮೀನು ಸಿಗುವ ಸಂದೇಶ ಇರಬಹುದು ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ. ಅಭಿಮಾನಿಗಳು ಅಂದುಕೊಂಡಂತೆ ಆದರೆ ವಿಜಯಲಕ್ಷ್ಮಿ ಪ್ರಯತ್ನಕ್ಕೆ ಫಲ ಸಿಗಲಿದೆ.
ಆದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ರಾಜ್ಯಾತಿಥ್ಯ ಪಡೆದ ಫೋಟೋ ಹಾಗೂ ವಿಡಿಯೋಗಳು ದರ್ಶನ್ ಜಾಮೀನು ಪಡೆಯಲು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ. ಯಾಕೆಂದರೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ರಾಜ್ಯಾತಿಥ್ಯ ನೀಡಿದವರು ಯಾರು? ಅಲ್ಲಿದ್ದ ಜೈಲಾಧಿಕಾರಿ ಯಾರು ಎಂಬಿತ್ಯಾದಿ ವಿಷಯಗಳು ಗುಪ್ತವಾಗಿ ಇಡಲಾಗಿದೆ. ಈ ಬಗ್ಗೆ ಪೊಲೀಸರು ಸ್ವತ: ಬಳ್ಳಾರಿ ಜೈಲಿಗೆ ಆಗಮಿಸಿ ದರ್ಶನ್ ವಿಚಾರಣೆ ನಡೆಸುವುದು ಬಾಕಿ ಇದೆ.
ಜೈಲು ನಿಯಮ ಉಲ್ಲಂಘನೆ ಮಾಡಿದ ಆರೋಪದಲ್ಲಿ ಪೊಲೀಸರು ಮತ್ತಷ್ಟು ವಿಚಾರಣೆ ಮಾಡಲಿದ್ದಾರೆ. ಹೀಗೆ ದರ್ಶನ್‌ಗೆ ಒಂದಾದ ನಂತರ ಒಂದರಂತೆ ದರ್ಶನ್‌ಗೆ ಸಂಕಷ್ಟ ಎದುರಾಗಿದ್ದು ಮುಂದೇನಾಗುತ್ತದೆ ಎಂದು ಕಾದು ನೊಡಬೇಕಿದೆ.












Click it and Unblock the Notifications