ಗೆಳೆಯನ ಹುಟ್ಟುಹಬ್ಬ ಆಚರಿಸಿದ ಡಿ-ಬಾಸ್: ದರ್ಶನ್ ಲುಕ್‌ಗೆ ಫ್ಯಾನ್ಸ್ ಫಿದಾ
ಸ್ಯಾಂಡಲ್‌ವುಡ್ ನಟ ದರ್ಶನ್ ಈಗ ಡೆವಿಲ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯೂಸಿ ಆಗಿದ್ದಾರೆ. ಕೆಲ ತಿಂಗಳ ಬಳಿಕ ಡೆವಿಲ್ ಸಿನಿಮಾ ಶೂಟಿಂಗ್ ಶುರು ಮಾಡಿದ್ದು ಸಿನಿಮಾ ಚೆನ್ನಾಗಿ ಮೂಡಿ ಬರಲು ದಾಸ ಹೊಸ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆಯನ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.
ಹೌದು ದರ್ಶನ್ ಬಿಡುವಿಲ್ಲದೆ ಡೆವಿಲ್ ಶೂಟಿಂಗ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಅವರಷ್ಟೇ ಅಲ್ಲದೆ ಇಡೀ ಚಿತ್ರ ತಂಡ ಸಿನಿಮಾ ಉತ್ತಮವಾಗಿ ಪ್ರದರ್ಶನ ಕಾಣಲು ಸಾಕಷ್ಟು ಪ್ರಯತ್ನ ಪಡುತ್ತಿದೆ. ಇದೇ ವೇಳೆ ಗೆಳೆಯ ಸಚ್ಚಿದಾನಂದ ಹುಟ್ಟುಹಬ್ಬವನ್ನು ದಾಸ ಆಚರಿಸಿದ್ದಾರೆ. ಬಿಡುವಿಲ್ಲದ ಕಾರಣ ಗೆಳೆಯ ಸಚ್ಚಿದಾನಂದನನ್ನು ಶೂಟಿಂಗ್ ಸ್ಪಾಟ್‌ಗೆ ಕರೆಸಿ ಚಿಕ್ಕದೊಂದು ಕೇಕ್ ಕಟ್ ಮಾಡಿ ಶುಭಹಾರೈಸಿದ್ದಾರೆ ದಚ್ಚು. ಈ ಫೋಟೋಗಳು ಭಾರೀ ವೈರಲ್ ಆಗಿದ್ದು ದರ್ಶನ್ ಲುಕ್ಕಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಈ ಹಿಂದೆ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್‌ಗಾಗಿ ರಾಜಸ್ಥಾನದ ಜೈಪುರಕ್ಕೆ ಹೋಗಿ ಬಂದಿದ್ದರು. ಈ ಸಿನಿಮಾ ಶೂಟಿಂಗ್ ಮುಗಿಸಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆಗಮಿಸುತ್ತಿದ್ದ ದಾಸನ ಲುಕ್‌ಗೆ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಸಚ್ಚಿದಾನಂದ ಅವರ ಹುಟ್ಟುಹಬ್ಬದ ಫೋಟೋದಲ್ಲಿ ಡಿ-ಬಾಸ್ ಸ್ಟೈಲ್ ನೋಡಿ ಅಭಿಮಾನಿಗಳು ಮರುಳಾಗಿ ಹೋಗಿದ್ದಾರೆ.
ಅಂದಹಾಗೆ ದರ್ಶನ್ ಯಾರ ಕೈಗೂ ಸಿಗದಷ್ಟು ಬ್ಯೂಸಿ ಆಗಿದ್ದಾರೆ. ಯಾರನ್ನೂ ಭೇಟಿ ಮಾಡಲು ಹೋಗುತ್ತಿಲ್ಲ. ತಾವಾಯ್ತು ತಮ್ಮ ಕೆಲಸ ಆಯ್ತು ಎಂದು ಬ್ಯೂಸಿ ಆಗಿದ್ದಾರೆ. ಪತ್ನಿ ವಿಜಯಲಕ್ಷ್ಮೀ ಅವರೇ ಎಲ್ಲಾ ಜವಾಬ್ದಾರಿಯನ್ನು ಹೊತ್ತುಕೊಂಡಿರುವುದರಿಂದ ದರ್ಶನ್ ಪತ್ನಿ ತೋರಿಸಿದ ಮಾರ್ಗದಲ್ಲೇ ನಡೆಯುತ್ತಿದ್ದಾರೆ.
ದರ್ಶನ್ ಎಲ್ಲಿಗೇ ಹೋಗಲಿ ಅವರ ಪತ್ನಿ ವಿಜಯಲಕ್ಷ್ಮಿ ಅಥವಾ ಸಹೋದರ ದಿನಕರ್ ತೂಗುದೀಪ ಇದ್ದೇ ಇರುತ್ತಾರೆ. ಹೀಗಾಗಿ ದರ್ಶನ್ ಕೂಡ ಹೆಂಡತಿ ಹಾಕಿದ ಅಷ್ಟದಿಗ್ಬಂಧನದಿಂದ ಹೊರ ಬರುತ್ತಿಲ್ಲ. ಡಿ-ಬಾಸ್‌ನ ಈ ಜೀವನ ಶೈಲಿ ಅಭಿಮಾನಿಗಳಿಗೂ ಮೆಚ್ಚುಗೆಯಾಗಿದೆ. ಹೀಗಾಗಿ ನಿಮ್ಮಿಬ್ಬರ ನಡುವೆ ಯಾವುದೇ ಕೆಟ್ಟ ಶಕ್ತಿ ಬರದೇ ಇರಲಿ ಎಂದು ಆಗಾಗ ವಿಜಯಲಕ್ಷ್ಮೀ ಫ್ಯಾನ್ಸ್ ಹಾಗೂ ದರ್ಶನ್ ಫ್ಯಾನ್ಸ್ ಆಶಿಸುತ್ತಲೇ ಇರುತ್ತಾರೆ.
ಇನ್ನೂ ದರ್ಶನ್ ಆರೋಗ್ಯ ಕೂಡ ಸರಿಯಾಗಿಲ್ಲ. ಕೊಟ್ಟ ಮಾತಿನಂತೆ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸುವುದೊಂದೇ ದರ್ಶನ್‌ಗೆ ಸದ್ಯಕ್ಕಿರುವ ಟಾಸ್ಕ್. ಅದನ್ನು ಮುಗಿಸಲು ಆಗದೆ ದರ್ಶನ್ ಸ್ವಲ್ಪ ಕಷ್ಟಪಡುತ್ತಿರುವಂತೆ ಕಾಣಿಸುತ್ತಿದೆ. ಹಗಲಿರುಳು ಶೂಟಿಂಗ್ ಸ್ಪಾಟ್‌ನಲ್ಲಿ ಕೆಲಸ ಮಾಡುವುದು, ಬೆನ್ನು ಹಾಗೂ ಕಾಲು ನೋವಿನ ಸಮಸ್ಯೆಯಿಂದ ಬಳಲುವುದು, ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವುದು, ಇದಲ್ಲದೇ ಕೋರ್ಟ್ ಕಚೇರಿಗೆ ಅಲೆದಾಡುವುದು ಇದೆಲ್ಲವೂ ದಾಸನಿಗೆ ಸಾಕಾಗಿ ಹೋದಂತೆ ಕಾಣಿಸುತ್ತಿದೆ.
ಪ್ರತೀ ಬಾರಿ ದರ್ಶನ್ ಸಿನಿಮಾಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಜೊತೆಗೆ ಸಿನಿಮಾ ಮಾಡುವುದಾಗಿ ಕೊಟ್ಟ ಮಾತು ಉಳಿಸಿಕೊಳ್ಳಲಾದರೂ ಡಿವಿಲ್ ಸಿನಿಮಾ ಮಾಡಬೇಕು ಅನ್ನೋದು ದಾಸನ ನಿರ್ಧಾರ. ಆದರೆ ಸಿನಿಮಾ ಚೆನ್ನಾಗಿ ಮೂಡಿ ಬರಲು ಸಾಕಷ್ಟು ಸಮಯ ಬೇಕು. ಹೀಗಾಗಿ ದರ್ಶನ್ ಸಿನಿಮಾ ಶೂಟಿಂಗ್‌ನಲ್ಲಿ ಸಾಕಷ್ಟು ಸಮಯ ಕಳೆಯಬೇಕು. ಆದರೆ ದರ್ಶನ್ ಅವರಿಗೆ ಆರೋಗ್ಯ ಸರಿ ಇಲ್ಲ. ಹೀಗಾಗಿ ಅವರು ಶೂಟಿಂಗ್ ಸ್ಪಾಟ್‌ನಲ್ಲಿ ಸಾಕಷ್ಟು ಸಮಯ ಕಳೆಯಲು ಆಗುತ್ತಿಲ್ಲ.
ಆದರೂ ಕೂಡ ಸಿನಿಮಾ ಮೇಲೆ ಯಾವುದೇ ಪರಿಣಾಮ ಬೀರಬಾರದು ಅನ್ನೋದು ದರ್ಶನ್ ಆಸೆ. ಅವರ ಆಸೆಯಂತೆ ಸಿನಿಮಾ ಶೂಟಿಂಗ್ ಪೂರ್ಣಗೊಂಡರೆ ಇದೇ ವರ್ಷ ದೊಡ್ಡ ಪರದೆ ಮೇಲೆ ಅಭಿಮಾನಿಗಳನ್ನು ರಂಜಿಸಲಿದ್ದಾರೆ ಡಿ-ಬಾಸ್. ಒಟ್ಟಿನಲ್ಲಿ ದರ್ಶನ್ ಡೆವಿಲ್ ಸಿನಿಮಾ ಶೂಟಿಂಗ್‌ಗೆ ಸಾಕಷ್ಟು ಸಮಯ ನೀಡುತ್ತಿದ್ದು ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ.
ಇಷ್ಟೆಲ್ಲಾ ಕಷ್ಟಪಟ್ಟು ಸಿನಿಮಾ ಮಾಡುತ್ತಿದ್ದಾರೆ ಅಂದರೆ ಸಿನಿಮಾ ಅದ್ಭುತವಾಗಿಯೇ ಇರುತ್ತದೆ. ಆದರೂ ಸಿನಿಮಾ ಬಗ್ಗೆ ಕಾಮೆಂಟ್ ಮಾಡಲು ಡೆವಿಲ್ ಸಿನಿಮಾ ರಿಲೀಸ್ ಆಗುವವರೆಗೆ ನಾವೆಲ್ಲಾ ಕಾಯಲೇ ಬೇಕು.












Click it and Unblock the Notifications