Actor Chikkanna: ನಟ ದರ್ಶನ್ ನೋಡಿದ್ದಕ್ಕೇ ಚಿಕ್ಕಣ್ಣಗೆ ಶುರುವಾಯ್ತು ಢವಢವ-ಕಾರಣ ಬೇರೆನೇ ಇದೆ.!
Actor Chikkanna: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಸೇರಿದೆ. ಈ ಸಂಬಂಧ ಇತ್ತೀಚೆಗಷ್ಟೇ ದರ್ಶನ್ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನುವ ಕಾರಣಕ್ಕೆ ನಟ ಚಿಕ್ಕಣ್ಣನನ್ನು ಕೂಡ ಪೊಲೀಸರು ವಿಚಾರಣೆ ನಡೆಸಿ ಹೇಳಿಕೆಯನ್ನ ದಾಖಲಿಸಿಕೊಂಡಿದ್ದರು. ಆದರೆ ಇದೀಗ ಜೈಲಿಗೆ ಭೇಟಿ ನೀಡಿದ್ದಕ್ಕೆ ಮತ್ತೆ ಚಿಕ್ಕಣ್ಣಗೆ ಸಂಕಷ್ಟವೊಂದು ಎದುರಾಗಿದೆ.
ಸಾಮಾನ್ಯವಾಗಿ ಹಳ್ಳಿ ಕಡೆ ಒಂದು ಮಾತನ್ನು ಹೇಳುತ್ತಾರೆ, ಅದಲ್ಲ ಕಿಸ್ಬೈ ದಾಸ ಅಂದ್ರೆ, ಮತ್ತೆ ಅದೇ ಬೇಕು ಅಂತಾ ತಪ್ಪು ದಾರಿ ಹಿಡಿದು ಕೊನೆಗೆ ಸಂಕಷ್ಟಕ್ಕೆ ಸಿಲುಕಿಬಿಡುತ್ತಾರೆ. ಹೀಗಾಗಿದೆ, ಇದೀಗ ಹಾಸ್ಯನಟ ಚಿಕ್ಕಣ್ಣನ ಕಥೆ. ರೇಣುಕಾಸ್ವಾಮಿ ಕೊಲೆಗೂ ಬಳಿಕ ದರ್ಶನ್ ಜೊತೆ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎನ್ನುವ ಕಾರಣಕ್ಕೆ ಚಿಕ್ಕಣ್ಣನನ್ನು ಕೂಡ ವಿಚಾರಣೆಗೆ ಕರೆದು ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದರು.

ನಿಯಮದ ಪ್ರಕಾರಣ ವಿಚಾರಣೆ ಬಳಿಕ ಹೇಳಿಕೆ ದಾಖಲಿಸಿಕೊಂಡ ಮೇಲೆ ಮತ್ತೆ ಆರೋಪಿಯನ್ನು ಭೇಟಿ ಮಾಡುವಂತಿಲ್ಲ. ಆದರೆ, ನಟ ಚಿಕ್ಕಣ್ಣ ವಿಚಾರಣೆ ಬಳಿಕವೂ ಅಭಿಷೇಖ್ ಅಂಬರೀಷ್ ಜೊತೆ ಮತ್ತೆ ನಟ ದರ್ಶನ್ ಭೇಟಿ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೆಲ್ಲ ಗಮನಿಸಿದರೆ, ಪೊಲೀಸರು ನಟ ಚಿಕ್ಕಣ್ಣಗೆ ಮತ್ತೆ ನೋಟಿಸ್ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಒಂದು ಬಾರಿ ವಿಚಾರಣೆಗೆ ಹಾಜರಾದ ಮೇಲೆ ಆರೋಪಿಯನ್ನು ಭೇಟಿಯಾಗುವಂತಿಲ್ಲ. ಯಾಕೆಂದರೆ, ಅಲ್ಲಿ ಏನೆಲ್ಲ ಹೇಳಿಕೆ ದಾಖಲು ಮಾಡಿದ್ದಾರೆ ಎನ್ನುವ ವಿಚಾರಗಳನ್ನೆಲ್ಲ ಒಂದು ವೇಳೆ ಆರೋಪಿಗೆ ಹೇಳಿಬಿಡುತ್ತಾರೇನೋ ಅನ್ನುವ ಶಂಕೆ ಇದ್ದೇ ಇರುತ್ತದೆ. ಆದ್ದರಿಂದ ಕಾನೂನು ಮೀರಿ ಈ ರೀತಿ ಮಾಡುವಂತಿಲ್ಲ.
ಪೊಲೀಸರು ತಮ್ಮ ಶ್ರಮವನ್ನೆಲ್ಲ ಮುಡುಪಾಗಿಟ್ಟು ಬಲವಾದ ಸಾಕ್ಷಿಗಳು, ಹೇಳಿಕೆಗಳನ್ನು ದಾಖಲಿಸಿಕೊಂಡಿರುತ್ತಾರೆ. ಒಂದು ವೇಳೆ ಇವುಗಳು ಹೊರಗಡೆ ಲೀಕ್ ಆದರೆ ಇಷ್ಟು ದಿನ ಹಾಕಿದ ಶ್ರಮವೆಲ್ಲ ವ್ಯರ್ಥವಾದಂತಾಗುತ್ತದೆ. ಆದ್ದರಿಂದ ನಟ ಚಿಕ್ಕಣ್ಣಗೆ ಮತ್ತೊಮ್ಮೆ ಪೊಲೀಸರು ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆ ಹೆಚ್ಚಿಗೆ ಎನ್ನಲಾಗುತ್ತಿದೆ.
ಪೊಲೀಸರು ವಿಚಾರಣೆಗೆ ಕರೆದರೆ, ಈ ವೇಳೆ ಯಾವ ಉದ್ದೇಶಕ್ಕೆ ದರ್ಶನ್‌ನನ್ನು ಭೇಟಿಯಾಗುದ್ದೀರಿ. ಏನೆಲ್ಲ ಮಾತುಕತೆ ನಡೆಸಿದ್ದೀರಿ ಎನ್ನುವ ಮಾಹಿತಿಯನ್ನು ಕಲೆಹಾಕುವ ಸಾಧ್ಯತೆಯಿದೆ. ಇನ್ನೂ ಈ ಬಗ್ಗೆ ಇದೀಗ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ರ ದಯಾನಂದ ಬಿ ಅವರು, ನಟ ಚಿಕ್ಕಣ್ಣ ಅವರು ದರ್ಶನ್ ಭೇಟಿಯಾಗಿರುವ ವಿಚಾರ ತಿಳಿದುಬಂದಿದ್ದು,ಅವರ ವಿರುದ್ಧ ಶೀಘ್ರದಲ್ಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.












Click it and Unblock the Notifications