Darshan Thoogudeepa: ದರ್ಶನ್ ಬಟ್ಟೆ ಮೇಲೆ ರಕ್ತದ ಕಲೆ: ಲೂಮಿನಲ್ ಪರೀಕ್ಷೆಯಲ್ಲಿ ಸಿಕ್ತು ಮತ್ತೊಂದು ಸಾಕ್ಷಿ..
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ಪ್ರಕರಣದಲ್ಲಿ ಮಹತ್ವದ ಸಾಕ್ಷಿಯೊಂದನ್ನು ಪೊಲೀಸರು ಪಡೆದುಕೊಂಡಿದ್ದಾರೆ. ದರ್ಶನ್ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಬಲವಾದ ಸಾಕ್ಷಿಗಳು ಲಭ್ಯವಾಗಿವೆ. ಆ ಪೈಕಿ ಅವರ ಬಟ್ಟೆ ಮೇಲಿದ್ದ ರಕ್ತದ ಕಲೆ ಕೂಡ ಒಂದು.
ಸಾಮಾನ್ಯವಾಗಿ ಕೊಲೆಯಲ್ಲಿ ಭಾಗಿಯಾದವರು ಸಾಕ್ಷಿಗಳನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಾರೆ. ದರ್ಶನ್ ಪ್ರಕರಣದಲ್ಲೂ ಇದೇ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ದರ್ಶನ್ ಅವರು ರೇಣುಕಾಸ್ವಾಮಿ ಕೊಲೆಯಾದ ದಿನ ಬ್ಲ್ಯೂ ಜೀನ್ಸ್ ಹಾಗೂ ಕಪ್ಪು ಟೀ ಶರ್ಟ್ ಧರಿಸಿದ್ದರು. ಕೊಲೆಯಾದ ಬಳಿಕ ದರ್ಶನ್ ಅವರು ಧರಿಸಿದ್ದ ಉಡುಪನ್ನು ಕ್ಲೀನ್ ಮಾಡಲಾಗಿತ್ತು. ಆದಾಗ್ಯೂ ಇದರ ಮೇಲಿನ ರಕ್ತದ ಕಲೆಗಳನ್ನು ಗುರುತಿಸಲಾಗಿದೆ.

ಹೌದು.. ರೇಣುಕಾಸ್ವಾಮಿ ಅವರನ್ನು ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ಬಳಿಕ ಅವರ ದೇಹವನ್ನು ಮೋರಿಯಲ್ಲಿ ಎಸೆಯಲಾಗಿತ್ತು. ನಂತರ ಸಾಕ್ಷಿಗಳ ನಾಶಕ್ಕೆ ಪ್ರಯತ್ನಗಳು ನಡೆದಿವೆ. ದರ್ಶನ್ ರೇಣುಕಾಸ್ವಾಮಿ ಕೊಲೆಯಾದ ದಿನ ಧರಿಸಿದ್ದ ಬಟ್ಟೆಯನ್ನು ತೊಳೆದು ಹಾಕಿದ್ದರೂ ಅದರ ಮೇಲಿನ ರಕ್ತದ ಕಲೆಗಳನ್ನು ಪತ್ತೆ ಮಾಡಲಾಗಿದೆ. ಇದನ್ನು ಕಂಡು ಹಿಡಿಯಲು ಪರೀಕ್ಷೆಯೊಂದನ್ನು ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ದರ್ಶನ್ ಬಟ್ಟೆಯ ಮೇಲೆ ರಕ್ತದ ಗುರುತು ಪತ್ತೆ ಹಚ್ಚಲು ಲೂಮಿನಲ್ ಟೆಸ್ಟ್ ನಡೆಸಲಾಗಿದೆ.
ಸಾಮಾನ್ಯವಾಗಿ ಕೊಲೆ ಹಾಗೂ ಹಿಟ್ ಆಂಡ್ ರನ್ ಪ್ರಕರಣಗಳಲ್ಲಿ ಟೈರ್ ಹಾಗೂ ಬಟ್ಟೆ ಅಥವಾ ಇನ್ನಿತರ ವಸ್ತುಗಳ ಮೇಲೆ ರಕ್ತದ ಕಲೆಯನ್ನು ಪತ್ತೆ ಹಚ್ಚಲು ಈ ಪ್ರಯೋಗವನ್ನು (ಲೂಮಿನಲ್ ಟೆಸ್ಟ್) ನಡೆಸಲಾಗುತ್ತದೆ. ಈ ಕಲೆಯನ್ನು ಸ್ವಚ್ಚಗೊಳಿಸಿದ್ದರೂ ಪರೀಕ್ಷೆಯ ಮೂಲಕ ಪತ್ತೆ ಮಾಡಬಹುದಾಗಿದೆ. ವಸ್ತು ಅಥವಾ ಬಟ್ಟೆ ಮೇಲೆ ರಕ್ತದ ಕಲೆಯನ್ನು ಸ್ವಚ್ಚಗೊಳಿಸಿದ್ದರೂ ಈ ಪ್ರಯೋಗದ ಮೂಲಕ ಕಂಡುಹಿಡಿಯಬಹುದು.
ರಕ್ತದ ಕಲೆ ಅಂಟಿದ ವಸ್ತುವನ್ನು ಚೆನ್ನಾಗಿ ತೊಳೆದಿಟ್ಟರೆ ಆಗ ಬರಿಗಣ್ಣಿಗೆ ರಕ್ತದ ಕಲೆ ಕಾಣುವುದಿಲ್ಲ. ಇದರಿಂದ ಬಚಾವ್ ಅಂತ ಹಲವರು ಭಾವಿಸುತ್ತಾರೆ. ಆದರೆ ಇಂಥಹ ವಸ್ತುಗಳ ಮೇಲೆ ಔಷಧಿ ಸಿಂಪಡಣೆ ಮಾದರಿಯಲ್ಲಿ ಪ್ರಯೋಗ ಮಾಡಲಾಗುತ್ತದೆ. ಅನುಮಾನಾಸ್ಪದ ವಸ್ತು ಅಥವಾ ಬಟ್ಟೆ ಮೇಲೆ ಈ ಔಷಧವನ್ನು ಸಿಂಪಡಣೆ ಮಾಡಿದರೆ ರಕ್ತದ ಕಲೆ ಇದ್ದ ಅಷ್ಟು ಭಾಗದ ಮೇಲೆ ಬೇರೆಯದ್ದೆ ಬೆಳಕು ಮೂಡುತ್ತದೆ.

ಕೊಲೆ ಪ್ರಕರಣಗಳಲ್ಲಿ ಹೆಚ್ಚಾಗಿ ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ಈ ಮಾದರಿಯನ್ನು ಸಂಗ್ರಹಿಸಿ ಮೃತ ವ್ಯಕ್ತಿಯ ರಕ್ತದ ಮಾದರಿಗೆ ಹೋಲಿಕೆ ಮಾಡಿ ನೋಡಲಾಗುತ್ತದೆ. ಎಫ್‌ಎಸ್‌ಎಲ್ ತಜ್ಞರು ವರದಿ ನೀಡುತ್ತಾರೆ. ಈ ರಕ್ತದ ಮಾದರಿ ಹೋಲಿಕೆಯಾದರೆ ಇದೊಂದು ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ.
ಜೈಲಿನಲ್ಲಿ ದರ್ಶನ್‌ಗೆ ಸಿಕ್ಕಳು ಒಬ್ಬ ತಂಗಿ
ದರ್ಶನ್ ಅವರನ್ನು ಜೈಲಿಗೆ ಹೋಗಿ ಕೆಲವರು ಭೇಟಿ ಮಾಡಿ ಬರುತ್ತಿದ್ದಾರೆ. ಹೀಗೆ ಜೈಲಿಗೆ ಹೋಗಿ ದರ್ಶನ್ ಅವರನ್ನು ಭೇಟಿ ಮಾಡಿದವರಲ್ಲಿ ಪವಿತ್ರಾ ಗೌಡ ಅವರ ಸ್ನೇಹಿತ ಸಮತಾ ಕೂಡ ಒಬ್ಬರು. ಇವರು ದರ್ಶನ್ ಭೇಟಿಗೂ ಮುನ್ನ ಡೈರಿಯಲ್ಲಿ ತಾನು ದರ್ಶನ್ ಸಹೋದರಿ ಎಂದು ಬರೆದಿದ್ದಾರೆ.
ಜೈಲು ನಿಯಮಗಳ ಪ್ರಕಾರ ಜೈಲಿನಲ್ಲಿರು ಆರೋಪಿಯನ್ನು ಕುಟುಂಬಸ್ಥರು ಮಾತ್ರ ಭೇಟಿ ಮಾಡಬೇಕು. ಆದರೆ ಈವರೆಗೂ ದರ್ಶನ್ ಅವರನ್ನು ಸ್ನೇಹಿತರು, ಆಪ್ತರು ಭೇಟಿ ಮಾಡಿದ್ದಾರೆ. ಇದರಿಂದಾಗಿ ಜೈಲಾಧಿಕಾರಿಗಳು ಜೈಲು ನಿಯಮವನ್ನು ಕಡೆಗಣಿಸಿದ್ದಾರೆ ಎಂದು ದೂರಲಾಗಿದೆ.
ಸಮತಾ ದರ್ಶನ್ ಅವರಿಗೆ ಒಡ ಹುಟ್ಟಿದ ಸಹೋದರಿ ಅಲ್ಲ. ಆದರೂ ಕೂಡ ಅವರನ್ನು ಜೈಲಾಧಿಕಾರಿಗಳು ದರ್ಶನ್ ಭೇಟಿಗೆ ಅವಕಾಶ ನೀಡಿದ್ದಾರೆ. ಹೀಗಾಗಿ ಇಲ್ಲಿ ನಿಯಮ ಉಲ್ಲಂಘನೆಯಾಗಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.












Click it and Unblock the Notifications