Darshan Thoogudeepa: ರೇಣುಕಾಸ್ವಾಮಿ ಭೀಕರ ಕೊಲೆ ಕೇಸ್ ಪ್ರಸ್ತಾಪ ಮಾಡಿ ಬೆದರಿಕೆ?
ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಲವ್ವಿಡವ್ವಿ ನಡುವೆ ಮೂಗು ತೂರಿಸಿದ & ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂಬ ಕಾರಣಕ್ಕೆ ಡಿ-ಗ್ಯಾಂಗ್ ಸೇರಿ, ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಕೊಲೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯಕ್ಕೆ ರೇಣಕಾಸ್ವಾಮಿ ಒಬ್ಬ ಕಾಮುಕ, ಅದೇ ಕಾರಣಕ್ಕೆ ಡಿ-ಬಾಸ್ ಕೊಲೆ ಮಾಡಿದ್ದಾರೆ ಅಂತಿದ್ದಾರೆ ದರ್ಶನ್ ತೂಗುದೀಪ್ ಅಭಿಮಾನಿಗಳು. ಮತ್ತೊಂದು ಕಡೆ, ಕರ್ನಾಟಕದಲ್ಲಿ ರೇಣುಕಾಸ್ವಾಮಿ ಭೀಕರ ಕೊಲೆ ಕೇಸ್ ಪ್ರಸ್ತಾಪ ಮಾಡಿ ಬೆದರಿಕೆ?....
ಕರ್ನಾಟಕದ ಇತಿಹಾಸದಲ್ಲೇ ಒಂದು ಭೀಕರ ಹತ್ಯೆಯಾಗಿ ದಾಖಲಾಗಿರುವ, ರೇಣಕಾಸ್ವಾಮಿ ಮರ್ಡರ್ ಕೇಸ್ ಈವತ್ತಿಗು ಕೂಡ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದೆ. ಯಾಕಂದ್ರೆ ಇದೇ ಕೊಲೆ ಕೇಸ್‌ನಲ್ಲಿ ಕನ್ನಡ ಸಿನಿಮಾ ರಂಗದ ದೊಡ್ಡ ಸ್ಟಾರ್ ಅಂದ್ರೆ ದರ್ಶನ್ ತೂಗುದೀಪ & ಆತನ ಪ್ರೇಯಸಿ ಕೂಡ ಲಾಕ್ ಆಗಿದ್ದು, ಜಗತ್ತಿನಾದ್ಯಂತ ಸುದ್ದಿಯಾಗುತ್ತಿದೆ. ಪರಿಸ್ಥಿತಿ ಹೀಗೆ ಅತಿ ಸೂಕ್ಷ್ಮವಾಗಿ ಇದ್ದಾಗಲೇ ರೇಣಕಾಸ್ವಾಮಿ ಮರ್ಡರ್ ಕೇಸ್ ಪ್ರಸ್ತಾಪ ಮಾಡಿ ಬಿಬಿಎಂಪಿ ಗುತ್ತಿಗೆದಾರನಿಗೆ ಕೂಡ ಬೆದರಿಕೆ ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ! ಈ ಮೂಲಕ ರೇಣಕಾಸ್ವಾಮಿ ಕೊಲೆಯನ್ನ ಕೂಡ ವಸೂಲಿ ದಂಧೆಗೆ ಬಳಕೆ ಮಾಡುತ್ತಿದ್ದಾರಾ? ಎಂಬ ಅನುಮಾನ ಮೂಡಿದೆ.

ರೇಣುಕಾಸ್ವಾಮಿ ರೀತಿಯಲ್ಲೇ ನಿನ್ನ...
ಬಿಬಿಎಂಪಿ ಗುತ್ತಿಗೆದಾರ ಚಲುವರಾಜ್ ಎನ್ನುವವರು ಬೆಂಗಳೂರಲ್ಲಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ತಮಗೆ ಬೆಂಗಳೂರಿನ ಶಾಸಕ ಒಬ್ಬರಿಂದ ಜೀವ ಬೆದರಿಕೆ ಇದೆ ಎನ್ನುತ್ತಾ ಆತಂಕ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಹೀಗೆ ಕೈಮೀರಿ ಹೋಗಿರುವ ಸಮಯದಲ್ಲೇ, ದರ್ಶನ್ ತೂಗುದೀಪ್ & ಗ್ಯಾಂಗ್ ಅಂದ್ರೆ ಡಿ-ಗ್ಯಾಂಗ್ ನಡೆಸಿದೆ ಎನ್ನಲಾದ ರೇಣುಕಾಸ್ವಾಮಿ ಕೊಲೆಯ ವಿಚಾರ ಕೂಡ ಪ್ರಸ್ತಾಪ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ, ನಿನ್ನನ್ನ ಕೂಡ ರೇಣುಕಾಸ್ವಾಮಿ ರೀತಿಯಲ್ಲೇ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿರುವ ಬಗ್ಗೆ ಇದೀಗ ಸ್ವತಃ ಬಿಬಿಎಂಪಿ ಗುತ್ತಿಗೆದಾರ ಆರೋಪ ಮಾಡಿದ್ದಾರೆ.
ಕಾನೂನು ಸುವ್ಯವಸ್ಥೆಗೆ ಏನಾಗಿದೆ?
ಇದೇ ವಿಚಾರವು ಇದೀಗ ಎಲ್ಲೆಲ್ಲೂ ಹಲ್‌ಚಲ್ ಎಬ್ಬಿಸಿದೆ. ಹೀಗಿದ್ದಾಗ ರೇಣುಕಾಸ್ವಾಮಿ ಕೊಲೆ ಪ್ರಕರಣ ಇಟ್ಟುಕೊಂಡು, ಕರ್ನಾಟಕ ರಾಜ್ಯದಲ್ಲಿ ಸಾಮಾನ್ಯ ಜನರನ್ನು ಹೆದರಿಸುತ್ತಿದ್ದಾರಾ? ಕಾನೂನು ಸುವ್ಯವಸ್ಥೆಗೆ ಏನಾಗಿದೆ? ಎಂಬ ಪ್ರಶ್ನೆಯನ್ನ ಕನ್ನಡಿಗರು ಇದೀಗ ಕೇಳುತ್ತಿದ್ದಾರೆ. ಮತ್ತೊಂದು ಕಡೆ ಈ ವಿಚಾರವನ್ನು ಕರ್ನಾಟಕ ಸರ್ಕಾರ ಅಂದ್ರೆ ಸಿದ್ದರಾಮಯ್ಯ ಸರ್ಕಾರ ಸೂಕ್ಷ್ಮವಾಗಿ ಪರಿಗಣಿಸಿ, ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಸ್ತಾಪ ಮಾಡಿದ್ದು ಏಕೆ? ಎನ್ನುವ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ ಕನ್ನಡಿಗರು. ಅಲ್ಲದೆ ಈ ವಿಚಾರ ಸೋಷಿಯಲ್ ಮೀಡಿಯಾ ತುಂಬಾ ಇದೀಗ ಹಬ್ಬುತ್ತಿದೆ.
ಡಿ-ಬಾಸ್ ಸೈಲೆಂಟ್ ಆಗಿದ್ದು ಏಕೆ?
ದರ್ಶನ್ ತೂಗುದೀಪ್‌ಗೆ ಅಹಂಕಾರ & ಕೋಪವೇ ಮುಳ್ಳಾಗಿ ಪರಿಣಮಿಸಿದೆ ಎನ್ನುವ ಆರೋಪ ಇದೆ. ರೇಣುಕಾಸ್ವಾಮಿ ಕಿಡ್ನಾಪ್ ಮಾಡಲು ಸ್ವತಃ ದರ್ಶನ್ ತೂಗುದೀಪ್ ಸುಪಾರಿ ಕೊಟ್ಟು, ನಂತರ ಬೆಂಗಳೂರಿನ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದು ಮರ್ಮಾಂಗಕ್ಕೆ ಒದ್ದಿದ್ದೂ ಇದೆ ಎಂಬ ಆರೋಪ ಇದೆ. ಅದರಲ್ಲೂ ದರ್ಶನ್ ತೂಗುದೀಪ್ ಈ ರೀತಿ ರೇಣುಕಾಸ್ವಾಮಿಗೆ ಹಿಂಸೆ ಕೊಟ್ಟಿರುವುದಕ್ಕೆ & ಕಿಡ್ನಾಪ್ ಮಾಡಿಕೊಂಡು ಚಿತ್ರದುರ್ಗದಿಂದ ಕರೆದುಕೊಂಡು ಬರಲು ಆರ್ಡರ್ ಮಾಡಿದ್ದಕ್ಕೂ ಸಾಕ್ಷ್ಯಗಳು ಸಿಕ್ಕಿವೆ. ಪರಿಸ್ಥಿತಿ ಹೀಗಿದ್ದಾಗ ರೇಣುಕಾಸ್ವಾಮಿಯ ಬರ್ಬರ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಪ್ರಮುಖ ಆರೋಪಿ ಆಗಿದ್ದಾನೆ. ಇಷ್ಟಾದರೂ ಈಗ ಮೀಡಿಯಾಗಳಿಗೆ ಬೆರಳು ತೋರಿಸಿ ತನ್ನ ಬುಡಕ್ಕೆ ತಾನೆ ಬೆಂಕಿ ಹಚ್ಚಿಕೊಂಡಿದ್ದಾನೆ ಎನ್ನುವ ಅಭಿಪ್ರಾಯ ದರ್ಶನ್ ವಿರೋಧಿಗಳದ್ದು. ಹೀಗಿದ್ದಾಗಲೇ ಬಳ್ಳಾರಿ ಜೈಲಿನ ಅಧಿಕಾರಿಗಳಿಂದ ಕೂಡ ಎಚ್ಚರಿಕೆ ಪಡೆದಿದ್ದಾನೆ ಕೊಲೆ ಆರೋಪಿ ದರ್ಶನ್ ತೂಗುದೀಪ!












Click it and Unblock the Notifications