Darshan- Pavithra: ಜೈಲಿನಿಂದ ಹೊರ ಬಂದ ಜೋಡಿ ಹಕ್ಕಿ- ಮತ್ತೆ ಒಂದಾಗ್ತಾರಾ ದರ್ಶನ್-ಪವಿತ್ರಾ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೇರಿದಂತೆ ಒಟ್ಟು ಏಳು ಆರೋಪಿಗಳಿಗೆ ಇಂದು ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ದರ್ಶನ್‌ಗೆ ಪೂರ್ಣಾವಧಿ ಜಾಮೀನು ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ನ್ಯಾಯ ಮೂರ್ತಿ ವಿಶ್ವಜಿತ್ ಶೆಟ್ಟಿ ಅವರ ಪೀಠದಿಂದ ಈ ಆದೇಶ ಹೊರಬಿದ್ದಿದೆ.
ಸರ್ಜರಿಗೆಂದು ಆರು ವಾರ ಮಧ್ಯಂತರ ಜಾಮೀನು ಪಡೆದಿದ್ದ ದರ್ಶನ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಇಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ದರ್ಶನ್ ಅವರೊಂದಿಗೆ ಪವಿತ್ರಾ ಗೌಡ ಅವರಿಗೂ ಜಾಮೀನು ಮಂಜೂರು ಮಾಡಲಾಗಿದೆ. ಹೀಗಾಗಿ ಒಟ್ಟಿಗೆ ಜೈಲಿಗೆ ಹೋದ ದರ್ಶನ್ ಹಾಗೂ ಪವಿತ್ರಾ ಇಬ್ಬರೂ ಒಟ್ಟಿಗೆ ಜಾಮೀನು ಪಡೆದಿದ್ದಾರೆ. ಜಾಮೀನು ಪಡೆದ ಸುದ್ದಿ ಕೇಳಿ ಪವಿತ್ರಾ ಗೌಡ ಜೈಲಿನಲ್ಲಿ ಕಣ್ಣೀರು ಹಾಕಿದ್ದಾರೆ.

ಜೈಲಿನಿಂದ ಹೊರಬಂದ ಜೋಡಿ ಹಕ್ಕಿಗಳು
ಹೌದು.. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಹಾಗೂ ಎ2 ಆರೋಪಿ ದರ್ಶನ್ ಇಬ್ಬರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಜೈಲಿನಿಂದ ಇಬ್ಬರೂ ಕೂಡ ಜಾಮೀನು ಪಡೆದಿದ್ದಾರೆ. ಹೀಗಾಗಿ ಒಟ್ಟಿಗೆ ಜೈಲಿಗೆ ಹೋದ ಜೋಡಿ ಹಕ್ಕಿ ಒಟ್ಟಿಗೆ ಜಾಮೀನು ಪಡೆದುಕೊಂಡಿದೆ. ಇನ್ನೇನು ಪವಿತ್ರಾ ಗೌಡ ಜೈಲಿನಿಂದ ಹೊರಬರಲಿದ್ದಾರೆ. ಈಗಾಗಲೇ ಜೈಲಿನಿಂದ ಹೊರಗಿರುವ ದರ್ಶನ್‌ಗೂ ಕೂಡ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಅಲ್ಲಿಗೆ ಇಬ್ಬರೂ ಕೂಡ ಜೈಲಿನಿಂದ ಹೊರಬರಲಿದ್ದು ಇಬ್ಬರೂ ಮತ್ತೆ ಒಂದಾಗ್ತಾರಾ? ಅಥವಾ ದೂರ ಇರ್ತಾರಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ.
ಮತ್ತೆ ಒಂದಾಗ್ತಾರಾ ದರ್ಶನ್ ಹಾಗೂ ಪವಿತ್ರಾ?
ಜೈಲಿನಿಂದ ಹೊರಗಿರುವ ದರ್ಶನ್ ಪೂರ್ಣಾವಧಿಯ ಜಾಮೀನು ಪಡೆಯಲು ಸಾಕಷ್ಟು ಪ್ರಯತ್ನ ಪಟ್ಟರು. ಆ ಪ್ರಯತ್ನದ ಫಲ ಇಂದು ದರ್ಶನ್ ಅವರಿಗೆ ಸಿಕ್ಕಿದೆ. ಅಷ್ಟೇ ಅಲ್ಲ ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ದರ್ಶನ್ ಅವರನ್ನು ಜೈಲಿನಿಂದ ಬಿಡಿಸಿಕೊಂಡು ಬರಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ವಿಜಯಲಕ್ಷ್ಮಿ ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಬೇಡಿಕೊಳ್ಳದ ದೇವರೇ ಇರಲಿಲ್ಲ. ಸಾಕಷ್ಟು ಶಕ್ತಿ ದೇವರ ದರ್ಶನ ಪಡೆದು ವಿಜಯಲಕ್ಷ್ಮಿ ಗಂಡನ ದರ್ಶನಕ್ಕಾಗಿ ಹರಕೆ ಕೂಡ ಹೊತ್ತುಕೊಂಡಿದ್ದರು. ಕೊನೆಗೂ ವಿಜಯಲಕ್ಷ್ಮಿ ಪೂಜಾ ಫಲ ನೆರವೇರಿದೆ.
ಆದರೆ ಇದೇ ಸಂದರ್ಭದಲ್ಲಿ ಪವಿತ್ರಾ ಗೌಡ ಅವರಿಗೂ ಕೂಡ ಜಾಮೀನು ಸಿಕ್ಕಿದ್ದು ಅವರು ಜೈಲಿನಲ್ಲಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಜೈಲಿನಿಂದ ಹೊರಬರಲು ತುದಿಗಾಲಲ್ಲಿ ನಿಂತಿದ್ದಾರೆ. ಪವಿತ್ರಾ ಗೌಡ ಅವರಿಗೆ ಜಾಮೀನು ಸಿಗಲು ದರ್ಶನ್ ಪ್ರಯತ್ನ ಕೂಡ ಇರಬಹುದು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.
ಯಾಕೆಂದರೆ ಕೊಲೆ ಪ್ರಕರಣದಲ್ಲಿ ಪವಿತ್ರಾ ಎ1 ಆರೋಪಿಯಾಗಿದ್ದಾರೆ. ಅವರಿಗೆ ಜಾಮೀನು ಸಿಗೋದು ಡೌಟ್ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಪವಿತ್ರಾಗೂ ಜಾಮೀನು ಸಿಕ್ಕಿದ್ದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಇದರ ಹಿಂದೆ ದರ್ಶನ್ ಪ್ರಯತ್ನ ಇರಬಹುದು ಎನ್ನಲಾಗುತ್ತಿದೆ. ಹಾಗಾದರೆ ಪವಿತ್ರಾ ಹಾಗೂ ದರ್ಶನ್ ಮತ್ತೆ ಭೇಟಿ ಮಾಡ್ತಾರಾ? ಮತ್ತೆ ದರ್ಶನ್ ಪವಿತ್ರಾ ಜೊತೆ ಹಿಂದಿನ ಗೆಳೆತನವನ್ನು ಮುಂದುವರೆಸುತ್ತಾರಾ?
ಸ್ನೇಹಿತರಾಗಿ ಇರಲಿದ್ದಾರೆ ದರ್ಶನ್ ಹಾಗೂ ಪವಿತ್ರಾ..
ದರ್ಶನ್ ಅವರಿಗೆ ತಮ್ಮಿಂದಾಗಿ ತಿಳಿದೋ ತಿಳಿಯದೆಯೋ ಹಲವಾರು ಜನ ಜೈಲು ಸೇರುವಂತಾಯ್ತು ಎನ್ನುವ ಮರುಕವಿತ್ತು. ಹೀಗಾಗಿ ದರ್ಶನ್ ಮೊದಲು ತಾವು ಹೊರಬಂದರು ಬಳಿಕ ತಮ್ಮೊಂದಿಗೆ ಜೈಲಿಗೆ ಸೇರಿದ ಒಟ್ಟು 6 ಜನರನ್ನು ಹೊರತಂದರು ಎನ್ನಲಾಗುತ್ತಿದೆ. ಇದರಲ್ಲಿ ಪವಿತ್ರಾ ಗೌಡ ಅವರೂ ಇದ್ದಾರೆ. ದರ್ಶನ್ ಅವರ ಈ ಕಾಳಜಿಯಿಂದಾಗಿ ಪವಿತ್ರಾ ಗೌಡ ಅವರಿಗೆ ತುಂಬಾ ಖುಷಿಯಾಗಿದೆ. ಹೀಗಾಗಿ ಅವರು ಜೈಲಿನಿಂದ ಹೊರಬಂದ ಬಳಿಕ ದರ್ಶನ್ ಅವರೊಂದಿಗೆ ಸ್ನೇಹದಿಂದ ಇರಬಹುದು ಎನ್ನಲಾಗುತ್ತಿದೆ.
ಒಟ್ಟಿನಲ್ಲಿ ದರ್ಶನ್ ಹಾಗೂ ಪವಿತ್ರಾ ಜೈಲಿಗೆ ಒಟ್ಟಿಗೆ ಹೋದಂತೆ ಒಟ್ಟಿಗೆ ಜಾಮೀನು ಪಡೆದುಕೊಂಡಿದ್ದಾರೆ. ಇವರಿಬ್ಬರು ಮುಂದೆ ಮತ್ತೊಬ್ಬರಿಗೆ ಮಾದರಿಯಾಗಿ ಜೀವನ ಮಾಡ್ತಾರಾ? ಜೈಲಿಗೆ ಹೋಗಿ ಬದಲಾಗಿದ್ದಾರಾ? ಅಥವಾ ಇಲ್ವಾ? ಅನ್ನೊದನ್ನು ಕಾದು ನೋಡಬೇಕಿದೆ.












Click it and Unblock the Notifications