Darshan Thoogudeepa: ನಾಳೆ ಪವಿತ್ರಾಗೆ ದರ್ಶನ್ ದರ್ಶನ- ಮರೆಯದೆ ಮರೆಯಾದ ದಾಸನನ್ನು ಕಾಣಲಿರುವ ಸುಬ್ಬಿ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಹಾಗೂ ಎ1 ಆರೋಪಿ ಪವಿತ್ರಾ ಗೌಡ ಇವರು ಪೂರ್ಣಾವಧಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ಇಬ್ಬರು ಭೇಟಿ ಮಾಡಿ ಸರಿಸುಮಾರು ಆರು ತಿಂಗಳು ಕಳೆದಿವೆ. ಪೂರ್ಣಾವಧಿ ಜಾಮೀನು ಪಡೆದು ಹೊರ ಬಂದ ಬಳಿಕವೂ ಇವರಿಬ್ಬರು ಭೇಟಿ ಮಾಡಿರಲಿಲ್ಲ. ಆದರೀಗ ಜೈಲಿನಿಂದ ಹೊರ ಬಂದ ಬಳಿಕ ಮೊದಲ ಬಾರಿಗೆ ಇಬ್ಬರೂ ಕೂಡ ಕೋರ್ಟ್ ಆವರಣದಲ್ಲಿ ಮುಖಾಮುಖಿಯಾಗಲಿದ್ದಾರೆ.
ದರ್ಶನ್ ಹಾಗೂ ಪವಿತ್ರಾ ಇಬ್ಬರೂ ಜನವರಿ 10 ಅಂದರೆ ಶುಕ್ರವಾರ ಕೋರ್ಟ್‌ಗೆ ಹಾಜರಾಗಬೇಕಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎಲ್ಲಾ ಆರೋಪಿಗಳು ಖುದ್ದು ಕೋರ್ಟ್‌ಗೆ ಹಾಜರಾಗಬೇಕಾದ ಸೂಚನೆ ಇರುವ ಕಾರಣ ಇವರಿಬ್ಬರೂ ಕೂಡ ಕೋರ್ಟ್ ಆವರಣದಲ್ಲಿ ಮುಖಾಮುಖಿಯಾಗಲಿದ್ದಾರೆ.

ಪವಿತ್ರಾಗೆ ದರ್ಶನ್ ದರ್ಶನ
ಡಿಸೆಂಬರ್ 13ರಂದು ಕೊಲೆ ಆರೋಪಿಗಳಾದ ದರ್ಶನ್ ಹಾಗೂ ಪವಿತ್ರಾ ಸೇರಿದಂತೆ 7 ಮಂದಿಗೆ ಕರ್ನಾಟಕ ಹೈಕೋರ್ಟ್ ನಾನಾ ಕಾರಣಗಳನ್ನು ಪರಿಗಣಿಸಿ ಷರತ್ತು ಬದ್ಧ ಜಾಮೀನು ನೀಡಿತ್ತು. ಷರತ್ತಿನನ್ವಯ ಆರೋಪಿಗಳು ಬೆಂಗಳೂರು ಬಿಟ್ಟು ಹೊರ ರಾಜ್ಯಗಳಿಗೆ ಭೇಟಿ ನೀಡುವಂತಿಲ್ಲ. ಕೋರ್ಟ್ ಅನುಮತಿ ಪಡೆಯದೇ ಬೆಂಗಳೂರು ಬಿಟ್ಟು ಹೋಗುವಂತಿಲ್ಲ. ಅಲ್ಲದೆ ತಿಂಗಳಿಗೊಂದು ಬಾರಿ ಕೋರ್ಟ್‌ಗೆ ಖುದ್ದಾಗಿ ಹಾಜರಾಗಬೇಕು. ಹೀಗಾಗಿ ಕೋರ್ಟ್ ಆದೇಶದಂತೆ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ನಾಳೆ ಹಾಜರಾಗಬೇಕಿದೆ.
ಈ ಹಿಂದೆ ವೀಡಿಯೋ ಕಾನ್ಪರೆನ್ಸ್ ಮೂಲಕ ಈ ಜೋಡಿ ಭೇಟಿ ಮಾಡಿತ್ತು. ಅದಾದ ಬಳಿಕ ಪವಿತ್ರಾಗೆ ದರ್ಶನ್ ದರ್ಶನ ಆಗಿರಲಿಲ್ಲ. ಇಷ್ಟೆಲ್ಲಾ ಆದ ಬಳಿಕ ಇವರಿಬ್ಬರು ದೂರ ಆಗಿದ್ದರು. ಇದೀಗ ಎಲ್ಲಾ ಆರೋಪಿಗಳು ನಾಳೆ ಕೋರ್ಟ್ ಮುಂದೆ ವಿಚಾರಣೆಗೆ ಹಾಜರಾಗಬೇಕಾಗಿದ್ದು ಪವಿತ್ರಾಗೆ ದರ್ಶನ್ ದರ್ಶನವಾಗಲಿದೆ.

ದರ್ಶನ್ ಪವಿತ್ರಾ ಮಾತನಾಡುತ್ತಾರಾ?
ಜೈಲಿನಿಂದ ಹೊರ ಬಂದ ಬಳಿಕ ಪವಿತ್ರಾ ಗೌಡ ತಮ್ಮ ಮನೆ ದೇವರಿಗೆ ಹರಕೆ ತೀರಿಸಿದ್ದರು. ಈ ವೇಳೆ ದರ್ಶನ್ ಹೆಸರಿನಲ್ಲಿ ಪೂಜೆ ಕೂಡ ಮಾಡಿಸಿದ್ದರು. ಪವಿತ್ರಾ ದರ್ಶನ್ ಹೆಸರಿನಲ್ಲಿ ಪೂಜೆ ಮಾಡಿಸುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಇಷ್ಟಾದರೂ ಪವಿತ್ರಾ ಗೌಡ ತನ್ನ ಬುದ್ಧಿ ಬಿಟ್ಟಿಲ್ಲ ಎಂದು ಜನ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದರು. ಇಷ್ಟಲ್ಲಾ ಆದ ಮೇಲೆ ಪವಿತ್ರಾ ಬದಲಾಗಿದ್ದಾರೆ ಎಂದು ಅಂದುಕೊಳ್ಳಲಾಗಿತ್ತು. ಆದರೆ ಪವಿತ್ರಾ ಜೈಲಿನಿಂದ ಹೊರಬಂದ ಬಳಿಕ ದೇವರಿಗೆ ದರ್ಶನ್ ಹೆಸರಿನಲ್ಲಿ ಪೂಜೆ ಮಾಡಿಸಿದ್ದನ್ನು ನೋಡಿದರೆ ಪವಿತ್ರಾ ಇನ್ನೂ ಕೂಡ ಬದಲಾಗಿಲ್ಲ ಅನ್ನೋದು ಸ್ಪಷ್ಟವಾಗುತ್ತದೆ.
ಇದೀಗ ಆರು ತಿಂಗಳ ಬಳಿಕ ದರ್ಶನ್ ಹಾಗೂ ಪವಿತ್ರಾ ಮೊದಲ ಬಾರಿಗೆ ಮುಖಾಮುಖಿಯಾಗಲಿದ್ದಾರೆ. ಇವರಿಬ್ಬರು ಕೋರ್ಟ್ ಆವರಣದಲ್ಲಿ ಭೇಟಿ ಮಾಡಿ ಮಾತನಾಡುತ್ತಾರಾ? ಅಥವಾ ಮಾತನಾಡದೇ ಹಿಂದಿರುಗುತ್ತಾರಾ? ನಾಳೆ ಕೋರ್ಟ್ ಆವರಣದಲ್ಲಿ ಪವಿತ್ರ ದರ್ಶನ ಹೇಗಿರುತ್ತಾರೆ? ಹೇಗೆ ವರ್ತಿಸುತ್ತಾರೆ ಅನ್ನೋದರ ಮೇಲೆ ಮುಂದೆ ಇವರಿಬ್ಬರು ಹೇಗಿರುತ್ತಾರೆ ಅನ್ನೋದು ಗೊತ್ತಾಗಲಿದೆ.
ಒಂದು ವೇಳೆ ಇವರಿಬ್ಬರು ಮಾತನಾಡಿದರೆ ಹಿಂದೆ ಇದ್ದ ದರ್ಶನ್ ಹಾಗೂ ಪವಿತ್ರಾ ಬದಲಾಗೇ ಇಲ್ಲ ಎನ್ನುವ ಅರ್ಥ ನೀಡುತ್ತದೆ. ಯಾಕೆಂದರೆ ರೇಣುಕಾಸ್ವಾಮಿ ಕೊಲೆ ಪ್ರಕರಣ ದರ್ಶನ್ ಕುಟುಂಬಸ್ಥರಿಗೆ ಹಾಗೂ ಪವಿತ್ರಾ ಕುಟುಂಬಸ್ಥರಿಗೆ ಸಾಕಷ್ಟು ನೋವು ತಂದಿದೆ. ಸಾಕಷ್ಟು ಅಲೆದಾಟ ಓಡಾಟದ ಬಳಿಕವಷ್ಟೇ ಇವರಿಬ್ಬರೂ ಹೊರ ಬರಲು ಸಾಧ್ಯವಾಗಿದೆ.
ಇವರು ತಪ್ಪು ಮಾಡಿದ್ದಾರೋ ಇಲ್ವೋ ಗೊತ್ತಿಲ್ಲ, ಆದರೆ ಇವರಿಬ್ಬರಿಂದಾಗಿ ಇವರ ಕುಟುಂಬಸ್ಥರು ಸಾಕಷ್ಟು ಸಂಕಷ್ಟ ಅನುಭವಿಸಿದ್ದಾರೆ. ಸಾಕಷ್ಟು ಅವಮಾನವನ್ನು ಸಹಿಸಿಕೊಂಡಿದ್ದಾರೆ. ಈ ಕಾರಣಕ್ಕಾದರೂ ಇವರಿಬ್ಬರು ಬದಲಾಗಬೇಕು. ಇಲ್ಲವಾದಲ್ಲಿ ಇಂದು ಇವರ ಜೊತೆಗಿರುವ ಕುಟುಂಬಸ್ಥರು ನಾಳೆ ಇವರೊಂದಿಗೆ ಯಾವುದೇ ಸಮಯದಲ್ಲೂ ಇರುವುದಿಲ್ಲ ಅನ್ನೋದು ಮಾತ್ರ ಸತ್ಯ.
ಇನ್ನೂ ದರ್ಶನ್ ಅವರು ಪವಿತ್ರಾ ಸಹವಾಸಕ್ಕೆ ಹೋಗಲ್ಲ ಎಂದು ಪತ್ನಿ ವಿಜಯಲಕ್ಷ್ಮಿಗೆ ಮಾತು ಕೊಟ್ಟ ಬಳಿಕವಷ್ಟೇ ವಿಜಯಲಕ್ಷ್ಮಿ ಪತಿ ದರ್ಶನ್ ಅವರನ್ನು ಜೈಲಿನಿಂದ ಬಿಡಿಸಿಕೊಂಡು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ದರ್ಶನ್ ಕೊಟ್ಟ ಮಾತು ಉಳಿಸಿಕೊಳ್ಳುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications