Darshan Thoogudeepa: ಪವಿತ್ರಾ ಗೌಡ & ಡಿ-ಬಾಸ್ ದರ್ಶನ್ ತೂಗುದೀಪ್ ಮಧ್ಯೆ ದ್ವೇಷ?
ಪವಿತ್ರಾ ಗೌಡ & ದರ್ಶನ್ ತೂಗುದೀಪ್ ಅವರು ಕಳೆದ 10 ವರ್ಷದಿಂದ ಕೂಡ ಸ್ನೇಹಿತರು. ಇಬ್ಬರ ನಡುವೆ ಅತ್ಯಂತ ಆತ್ಮೀಯ ಸ್ನೇಹ ಇತ್ತು ಅನ್ನೋದು ರೇಣುಕಾಸ್ವಾಮಿ ಕೊಲೆ ಕೇಸ್ ನಂತರ ಇಡೀ ಜಗತ್ತಿಗೇ ಗೊತ್ತಾಗಿದೆ. ಪವಿತ್ರಾ ಗೌಡಗೆ ಅಶ್ಲೀಲ ಫೋಟೋ & ಮೆಸೇಜ್ ಕಳಿಸಿ ಕಿರುಕುಳ ನೀಡಿದ್ದ ಎಂಬ ಕಾರಣಕ್ಕೆ, ವಿಕೃತವಾಗಿ ಟಾರ್ಚರ್ ಮಾಡಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯ ಬರ್ಬರ ಕೊಲೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಆದರೆ ಇದೀಗ...
ಬೆಂಗಳೂರಿನ ಪಟ್ಟಣಗೆರೆ ಶೆಡ್ ಒಳಗೆ ರೇಣುಕಾಸ್ವಾಮಿಗೆ ಟಾರ್ಚರ್ ನೀಡಿ, ಭೀಕರವಾಗಿಯೇ ಕೊಲೆ ಮಾಡಿ ರಾಜಕಾಲುವೆ ಪಕ್ಕ ಎಸೆಯಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಇದೇ ಆರೋಪ ಮುಂದೆ, ಪವಿತ್ರಾ ಗೌಡ & ದರ್ಶನ್ ತೂಗುದೀಪ್ ಅವರ ತಲೆಗೆ ಸುತ್ತಿಕೊಂಡಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪವಿತ್ರಾ ಗೌಡ ಆರೋಪಿ ನಂಬರ್ 1 ಆಗಿದ್ದರೆ, ಹಾಗೂ ಇದೇ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಅವರು ಆರೋಪಿ ನಂಬರ್ 2 ಆಗಿದ್ದಾರೆ.

ಪವಿತ್ರಾ ಗೌಡ & ಡಿ-ಬಾಸ್ ಮಧ್ಯೆ ದ್ವೇಷ?
ಹೀಗೆ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡಗೆ ದೊಡ್ಡ ಕಂಟಕ ಎದುರಾಗಿದೆ. ಹೀಗೆ ಇಬ್ಬರೂ ಈ ಕೇಸ್‌ನಲ್ಲಿ ಈಗಲೂ ನರಳುತ್ತಿದ್ದು, ಯಾವ ಕ್ಷಣದಲ್ಲಿ ಮತ್ತೆ ಜೈಲಿಗೆ ಹೋಗುತ್ತಾರೋ ಎಂಬ ಅನುಮಾನ ಇದೆ. ಪರಿಸ್ಥಿತಿ ಕಠಿಣವಾಗಿರುವ ಸಮಯದಲ್ಲೇ ಮತ್ತೊಂದು ಘಟನೆ ನಡೆದು ಹೋಗಿದೆ. ಅದು ಏನು ಅಂದ್ರೆ....
ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ಸಂಬಂಧ ಇವತ್ತು ಡಿ-ಬಾಸ್ ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡ ಕೋರ್ಟ್ ಎದುರು ಹಾಜರಾಗಿದ್ದರು. ಇನ್ನು ವಿಚಾರಣೆ ವೇಳೆ ಇಬ್ಬರೂ ಎದುರಾಗಿ ಬಂದರೂ ಮಾತನಾಡಿಲ್ಲ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಫೆಬ್ರವರಿ 25ಕ್ಕೆ ಮುಂದೂಡಲಾಗಿದೆ, ಆದ್ರೆ ಈಗ ಪವಿತ್ರಾ ಗೌಡ & ದರ್ಶನ್ ತೂಗುದೀಪ್ ಅವರ ನಡುವೆ ಮಾತುಕತೆ ಯಾಕೆ ನಡೆಯಲಿಲ್ಲ? ಎಂಬ ವಿಚಾರಕ್ಕೆ ಸೋಷಿಯಲ್ ಮೀಡಿಯಾ ಮಂದಿ ಚರ್ಚೆ ಮಾಡ್ತಿದ್ದಾರೆ.
ಪವಿತ್ರಾ ಗೌಡಗೆ ಪರದಾಡುವ ಸ್ಥಿತಿ?
ಒಟ್ನಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಇದೀಗ ಮತ್ತೊಂದು ಸಮಸ್ಯೆ ಸುಳಿಗೆ ಸಿಲುಕಿ ಪರದಾಡುವ ಸ್ಥಿತಿ ನಿರ್ಮಾಣ ಆಗಿದೆ. ಮತ್ತೊಂದು ಕಡೆ ಸುಪ್ರೀಕೋರ್ಟ್‌ಗೆ ಕರ್ನಾಟಕ ಪೊಲೀಸರು ಅರ್ಜಿ ಹಾಕಿದ್ದು, ದರ್ಶನ್ ತೂಗುದೀಪ್ ಅವರು & ಪವಿತ್ರಾ ಗೌಡ ಅವರ ಜಾಮೀನು ಅರ್ಜಿ ವಜಾ ಮಾಡಲು ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಭಾರಿ ಗಮನ ಸೆಳೆದಿದೆ ರೇಣುಕಾಸ್ವಾಮಿ ಕೊಲೆ ಕೇಸ್. ಪವಿತ್ರಾ ಗೌಡ ಕನ್ನಡ ಸಿನಿಮಾ ರಂಗದಲ್ಲಿ ಸಾಲುಸಾಲು ಸೋಲು ಕಂಡಿದ್ದರು. ಹೀಗಿದ್ದಾಗಲೇ 2014ರ ಬುಲ್ ಬುಲ್ ಸಿನಿಮಾದಲ್ಲಿ ತನಗೆ ಹೀರೋಯಿನ್ ಆಗಿ ನಟಿಸಲು ಚಾನ್ಸ್ ಕೊಡಿ ಅಂತ ಪವಿತ್ರಾ ಗೌಡ, ಡಿ-ಬಾಸ್ ದರ್ಶನ್ ತೂಗುದೀಪ್‌ರ ಎದುರು ಮನವಿ ಮಾಡಿದ್ದರಂತೆ. ಹೀಗೆ ಶುರುವಾಗಿತ್ತು ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಸ್ನೇಹ.












Click it and Unblock the Notifications