Darshan Thoogudeepa: ಪವಿತ್ರಾ ಗೌಡ ವಿರುದ್ಧ ಡಿ-ಬಾಸ್ ದರ್ಶನ್ ತೂಗುದೀಪ್ ಆಕ್ರೋಶ? ಮುಗೀತು ಇಬ್ಬರ ಸ್ನೇಹ &....
ಪವಿತ್ರಾ ಗೌಡ & ಡಿ-ಬಾಸ್ ದರ್ಶನ್ ತೂಗುದೀಪ್ ಅವರ ನಡುವೆ ಎಲ್ಲವೂ ಸರಿ ಇಲ್ಲ, ಇಬ್ಬರ ನಡುವೆ ಬಿರುಕು ಉಂಟಾಗಿದೆ... ಎಂಬ ಮಾತು ಕೆಲವು ದಿನಗಳಿಂದ ಎಲ್ಲೆಡೆ ಕೇಳಿ ಬಂದಿತ್ತು. ರೇಣುಕಾಸ್ವಾಮಿ ಕೊಲೆ ಕೇಸ್ ನಂತರ ಪವಿತ್ರಾ ಗೌಡ & ಡಿ-ಬಾಸ್ ದರ್ಶನ್ ತೂಗುದೀಪ್ ಅವರ ನಡುವೆ ಬಿರುಕು ಮೂಡಿ, ಒಬ್ಬರನ್ನ ಕಂಡರೆ ಮತ್ತೊಬ್ಬರು ಕೋಪ ಮಾಡಿಕೊಳ್ಳುವ ಸ್ಥಿತಿ ಇತ್ತು ಎಂಬ ಸುದ್ದಿ ಹಬ್ಬಿ ಸಂಚಲನ ಸೃಷ್ಟಿಯಾಗಿತ್ತು.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಂದ ಬಳ್ಳಾರಿ ಜೈಲಿಗೆ, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಶಿಫ್ಟ್ ಆದ ನಂತರ ಪವಿತ್ರಾ ಗೌಡ & ಡಿ-ಬಾಸ್ ನಡುವೆ ದೊಡ್ಡ ಬಿರುಕು ಮೂಡಿ ಇಬ್ಬರು ಕಿತ್ತಾಡಿದ್ದಾರೆ ಎನ್ನಲಾಗಿತ್ತು. ಇಷ್ಟೆಲ್ಲಾ ಸುದ್ದಿ ಸಂಚಲನದ ನಡುವೆ ಇದೀಗ ಭಾರಿ ಗಂಭೀರ ವಿಚಾರ ಬಟಾ ಬಯಲಾಗಿದೆ. ಪವಿತ್ರಾ ಗೌಡ ವಿರುದ್ಧ ಡಿ-ಬಾಸ್ ದರ್ಶನ್ ಆಕ್ರೋಶ? ಮುಗೀತು ಇಬ್ಬರ ಸ್ನೇಹ &....

ಪವಿತ್ರಾ ಗೌಡ ವಿರುದ್ಧ ಡಿ-ಬಾಸ್ ದರ್ಶನ್....
ಹೌದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಇದೀಗ ಮೈಸೂರಿನ ತಮ್ಮ ತೋಟದ ಮನೆ ಸೇರಿದ್ದಾರೆ. ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಹೆಂಡತಿ ವಿಜಯಲಕ್ಷ್ಮೀ ಅವರು ಹಾಗೂ ಮಗ ವಿನೀಶ್ ದರ್ಶನ್ ಜೊತೆಗೆ ಹಾಯಾಗಿ ದಿನ ಕಳೆಯುತ್ತಿದ್ದಾರೆ. ಹೀಗಿದ್ದಾಗಲೇ, ಪವಿತ್ರಾ ಗೌಡ ಕೂಡ ದರ್ಶನ್ ತೂಗುದೀಪ್ ಅವರನ್ನು ಭೇಟಿ ಮಾಡಲು ಸಂಪರ್ಕ ಮಾಡಿ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕೆ ದರ್ಶನ್ ಅವರು ಹೇಳಿದ್ದೇನು ಗೊತ್ತೆ?
ಡಿ-ಬಾಸ್ & ಪವಿತ್ರಾ ದೂರ.. ದೂರ..?
ಪವಿತ್ರಾ ಗೌಡ ಅವರು ದರ್ಶನ್ ತೂಗುದೀಪ್ ಅವ್ರನ್ನ ಭೇಟಿ ಮಾಡಲು ಸಂಪರ್ಕ ಮಾಡಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಆದರೆ ಹೀಗೆ, ಪವಿತ್ರಾ ಗೌಡ ತಮ್ಮನ್ನು ಭೇಟಿ ಮಾಡಲು ಪ್ರಯತ್ನ ಮಾಡಿದ ವಿಚಾರ ತಿಳಿದು ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಭಾರೀ ಸಿಟ್ಟು ಮಾಡಿಕೊಂಡು, ಗರಂ ಆಗಿ ತೋಟದ ಮನೆಯಲ್ಲಿ ಕೂಗಾಡಿದ್ದಾರೆ ಎಂಬ ಸುದ್ದಿ ಕೂಡ ಓಡಾಡುತ್ತಿದೆ!
ಅಲ್ಲದೆ ಪವಿತ್ರಾ ಗೌಡ ಜೊತೆ ಭೇಟಿ ಮಾಡಲ್ಲ & ಪವಿತ್ರಾ ಗೌಡ ಜೊತೆ ಮಾತನಾಡಲ್ಲ ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೆ ಪವಿತ್ರಾ ಗೌಡಗೆ ಮೈಸೂರಿನ ತೋಟದ ಮನೆಯ ಕಡೆಗೆ ಬರಲೇಬೇಡ, ಅಂತಲೂ ಆಜ್ಞೆ ಕೂಡ ನೀಡಿದ್ದಾರೆ ಎನ್ನಲಾಗಿದೆ! ಆದರೆ ಈ ಬಗ್ಗೆ ದರ್ಶನ್ ತೂಗುದೀಪ್ ಅವರೇ ಆಗಲಿ ಅಥವಾ ಅವರ ಕುಟುಂಬ ಸದಸ್ಯರೇ ಆಗಲಿ, ಅಥವಾ ಪವಿತ್ರಾ ಗೌಡ ಆಗಲಿ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಿದ್ದಾಗ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ!












Click it and Unblock the Notifications