Darshan Thoogudeepa: ನಟ ದರ್ಶನ್ ಭವಿಷ್ಯ; ಕೋಡಿಶ್ರೀ ಸ್ಫೋಟಕ ಮಾತು
ನಟ ದರ್ಶನ್‌ಗೆ ಜಾಮೀನು ಸಿಗುವ ಲಕ್ಷಣ ಕಾಣಿಸುತ್ತಿಲ್ಲ. ನಟ ಹಾಗೂ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುವುದು ತಪ್ಪುತ್ತಿಲ್ಲ. ಕೋರ್ಟ್‌ನಲ್ಲಿ ಈಗಾಗಲೇ ಹಲವು ಬಾರಿ ವಿಚಾರಣೆ ನಡೆದರೂ ಜಾಮೀನು ಸಿಕ್ಕಿಲ್ಲ. ಇದೀಗ ಕೋಡಿಶ್ರೀ (ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ) ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಕೊಲೆ ಆರೋಪದ ಮೇಲೆ ಜೈಲು ಕಂಬಿ ಎಣಿಸುತ್ತಿರುವ ದರ್ಶನ್. ಜಾಮೀನಿಗಾಗಿ ನಟ ದರ್ಶನ್, ಅವರ ಕುಟುಂಬ ಹಾಗೂ ಕೋಟ್ಯಾಂತರ ಜನ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ಇಲ್ಲಿಯವರೆಗೆ ಜಾಮೀನು ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ ಕೋಡಿಶ್ರೀ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ದರ್ಶನ್‌ನ ಪಾಪದ ಬಗ್ಗೆ ಹಾಗೂ ಜಾಮೀನಿನ ಬಗ್ಗೆ ಅವರು ಮಾತನಾಡಿದ್ದಾರೆ.

ನಟ ದರ್ಶನ್ ಈಗಾಗಲೇ ಜೈಲು ಸೇರಿ 100ಕ್ಕೂ ಹೆಚ್ಚು ದಿನಗಳಾಗಿವೆ. ಆದರೆ, ಐದಾರು ಬಾರಿ ಪ್ರಯತ್ನಿಸಿದರ ಹೊರತಾಗಿಯೂ ಜಾಮೀನು ಸಿಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ದರ್ಶನ್ ಜಾಮೀನು ಅರ್ಜಿ ವಿಚಾರಣೆ ಪ್ರತಿ ಬಾರಿ ನಡೆದಾಗಲೂ ಅವರ ಅಭಿಮಾನಿಗಳು ಕಾತುರದಿಂದ ದರ್ಶನ್ ಬಿಡುಗಡೆಯಾಗಲಿ ಎಂದು ಕಾಯುತ್ತಿದ್ದಾರೆ. ಆದರೆ, ಆ ದಿನ ಬರುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ನಡುವೆ ಸ್ವಾಮೀಜಿ ಕೋಡಿಶ್ರೀ ಅವರ ಸ್ಫೋಟಕ ಭವಿಷ್ಯ ಅವರ ಅಭಿಮಾನಿಗಳಿಗೆ ಆತಂಕ ಮೂಡಿಸುವಂತಿದೆ.
ಕರ್ನಾಟಕದಲ್ಲಿ ಕೋಡಿಶ್ರೀ ಅವರ ಭವಿಷ್ಯವಾಣಿಗೆ ವಿಶೇಷ ಸ್ಥಾನವಿದೆ. ಕೋಡಿಶ್ರೀ ಅವರು ಹೇಳಿರುವ ಹಲವು ವಿಚಾರಗಳು ನಡೆದಿವೆ. ರಾಜಕೀಯವಾಗಿ ಹಾಗೂ ರಾಜಕೀಯ, ಕರ್ನಾಟಕದ ಬೆಳವಣಿಗೆ ಹಾಗೂ ಹವಾಮಾನದ ಬಗ್ಗೆಯೂ ಅವರು ಭವಿಷ್ಯ ನುಡಿಯುವುದು ಇದೆ. ಅವರು ನುಡಿದ ಹಲವು ಭವಿಷ್ಯಗಳು ನಿಜವಾಗಿದ್ದೂ ಇದೆ. ಇವರ ಭವಿಷ್ಯವನ್ನು ಸಾರ್ವಜನಿಕರು ಹಾಗೂ ಅವರ ಭಕ್ತಾಧಿಗಳು ಆಸಕ್ತಿಯಿಂದ ಕೇಳುತ್ತಾರೆ. ಅದೇ ರೀತಿ ನಟ ದರ್ಶನ್ ಪ್ರಕರಣ ಹಾಗೂ ಅವರ ಜಾಮೀನಿನ ಬಗ್ಗೆಯೂ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ಜೈಲು ಸೇರಿದ್ದಾರೆ. ಮೊದಲು ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದ ದರ್ಶನ್ ಅಲ್ಲಿಂದ ಈಚೆಗೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಈ ಕೇಸ್‌ನಲ್ಲಿ ದರ್ಶನ್ A-2 ಆರೋಪಿಯಾಗಿದ್ದು, ಈ ಬಾರಿಯೂ ಅವರ ಜಮೀನು ಅರ್ಜಿ ವಜಾ ಆಗಿದೆ. ಈ ಬಾರಿ ಜಾಮೀನು ಸಿಗಬಹುದು ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದರು. ಆದರೆ, ಈ ಬಾರಿಯೂ ಸಿಕ್ಕಿಲ್ಲ.
ದರ್ಶನ್ ಬಗ್ಗೆ ಕೋಡಿಶ್ರೀ ನುಡಿದ ಭವಿಷ್ಯವೇನು
ನಟ ದರ್ಶನ್ ಜಾಮೀನು ಹಾಗೂ ಅವರ ಭವಿಷ್ಯದ ಬಗ್ಗೆ ಮಾತನಾಡಿರುವ ಕೋಡಿಶ್ರೀ, ಮಾರ್ಮಿಕವಾಗಿ ಮಾತನಾಡಿದ್ದಾರೆ. ಪಾಪ ಪಾಷಣ ಕಳೆದುಹೋಗಬೇಕು. ಮಾಡಿರುವ ಕರ್ಮವು ಫಲವತ್ತಾದರೆ ಯಾರೇನು ಮಾಡಲು ಸಾಧ್ಯ ಎಂದಿದ್ದಾರೆ. ಪಾಪದ ಕೆಲಸ ಮಾಡುವುದಕ್ಕೆ ಹೆದರಿಕೆ ಇರಬೇಕಿತ್ತು. ಆದರೆ, ಪಾಪ ಮಾಡುವುದಕ್ಕೆ ನಾವು ಹೆದರುತ್ತಿಲ್ಲ. ಪುಣ್ಯ ಮಾಡುವುದಕ್ಕೆ ನಾವು ಹೆದರುತ್ತಿದ್ದೇವೆ ಎಂದಿದ್ದಾರೆ. ಈ ಮೂಲಕ ದರ್ಶನ್ ಅವರು ಪುಣ್ಯ ಮಾಡಿದ್ದರೆ ಅದರ ಫಲಸಿಗಲಿದೆ ಎನ್ನುವ ಅರ್ಥದಲ್ಲೂ ಸ್ವಾಮೀಜಿ ಹೇಳಿರುವಂತಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್: ನಟ ದರ್ಶನ್ ಅವರ ಬಗ್ಗೆ ಕೋಡಿಶ್ರೀ ಅವರು ಮಾತನಾಡಿರುವ ವಿಷಯ ಇದೀಗ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಅಭಿಮಾನಿಗಳು ದರ್ಶನ್ ಬೇಗ ಬರ್ಲಿ ಅಂತಿದ್ದಾರೆ.












Click it and Unblock the Notifications