Darshan Thoogudeepa: ರಿಲಾಕ್ಸ್ ಮೂಡ್‌ನಲ್ಲಿ ನಟ ದರ್ಶನ್: ಈ ಕಾರಣಕ್ಕೆ ನಾಳೆ ಫಿಕ್ಸ್ ?
ದರ್ಶನ್ ಅಭಿಮಾನಿಗಳಿಗೆ ಇದು ನಿಜಕ್ಕೂ ಗುಡ್‌ನ್ಯೂಸ್. ದರ್ಶನ್ ಯಾವಾಗ ಜೈಲಿನಿಂದ ಬರ್ತಾರೋ ಅಂತ ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿ, ಇದೀಗ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರಿಗೆ ಈ ಪ್ರಕಣರದಲ್ಲಿ ಇತರರಿಗೂ ಜಾಮೀನು ಸಿಕ್ಕಿರುವುದು ನಿರಾಳತೆ ಮೂಡಿಸಿದೆ. ಈ ಪ್ರಕರಣದಲ್ಲಿ ಒಟ್ಟು 17 ಜನ ಆರೋಪಿಗಳಿದ್ದು, ಈಚೆಗೆ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಹೀಗಾಗಿ, ಮುಂದಿನ ವಿಚಾರಣೆಯಲ್ಲೇ ದರ್ಶನ್‌ಗೂ ಗುಡ್‌ನ್ಯೂಸ್ ಕಾದಿದೆ ಎನ್ನಲಾಗುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಮೀನಿಗಾಗಿ ಕಾಯುತ್ತಿದ್ದಾರೆ. ಅವರ ಅಭಿಮಾನಿಗಳು ಸಹ ಯಾವಾಗ ದರ್ಶನ್ ಹೊರಗಡೆ ಬರ್ತಾರೋ ಅಂತ ಕಾದುಕುಳಿತಿದ್ದಾರೆ. ದರ್ಶನ್ ಜಾಮೀನಿನ ಮೇಲೆ ಬಂದೇ ಬರ್ತಾರೆ, ಮೂವಿ ಮತ್ತೆ ಮಾಡ್ತಾರೆ ಅಂತ ಅವರ ಅಭಿಮಾನಿಗಳು ಗಟ್ಟಿಯಾಗಿ ನಂಬಿದ್ದಾರೆ. ದರ್ಶನ್ ನ್ಯಾಯಾಂಗ ಬಂಧನ ಮುಂದೂಡಿಕೆಯಾಗುವುದು ಹಾಗೂ ಜಾಮೀನು ಅರ್ಜಿಯೂ ಮುಂದೂಡಿಕೆಯಾಗುತ್ತಲ್ಲೇ ಇದೆ. ಆದರೆ, ಈ ನಡುವೆ ಈ ಪ್ರಕರಣದಲ್ಲಿನ ಒಂದು ಬೆಳವಣಿಗೆ ದರ್ಶನ್ ಹಾಗೂ ಅವರ ಕುಟುಂಬದಲ್ಲಿ ನಿರಾಳತೆ ಮೂಡಿಸಿದೆಯಂತೆ. ಎಲ್ಲವೂ ಅಂದುಕೊಂಡತೆ ಆದರೆ, ದಾಸ ಶೀಘ್ರ ಹೊರಬರಬಹುದು.

ನಾಳೆ ಅಂದರೆ ಅಕ್ಟೋಬರ್ 4ರಂದು ನಟ ದರ್ಶನ್ (ರೇಣುಕಾಸ್ವಾಮಿ ಕೊಲೆ ಆರೋಪಿ) ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ಹೀಗಾಗಿ, ನಾಳೆ ಜಾಮೀನು ಸಿಗುವ ನಿರೀಕ್ಷೆ ಹೆಚ್ಚಾಗುತ್ತಲ್ಲೇ ಇದೆ. ನಟ ದರ್ಶನ್ ಅವರ ವಿಚಾರಣೆ ನಾಳೆ ನಡೆಯಲಿದೆ. ಈಗಾಗಲೇ ಈ ಪ್ರಕರಣದಲ್ಲಿ ಮೂವರಿಗೆ ಜಾಮೀನು ಸಿಕ್ಕಿದೆ. ಹೀಗಾಗಿ, ದರ್ಶನ್‌ಗೂ ನಾಳೆ ಜಾಮೀನು ಸಿಗುತ್ತಾ ಅಂತ ಅವರ ಅಭಿಮಾನಿಗಳು ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರು ಸೇರಿದಂತೆ ಲಕ್ಷಾಂತರ ಜನ ಕಾಯುತ್ತಿದ್ದಾರೆ. ಜಾಮೀನು ಅರ್ಜಿ ವಿಚಾರವಾಗಿ ನಟ ದರ್ಶನ್ ಅವರು ಅವರ ಪತ್ನಿ ವಿಜಯಲಕ್ಷ್ಮಿ ಅವರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಲಾಗಿದೆ. ಜಾಮೀನು ಅರ್ಜಿಗೆ ಯಾವ ರೀತಿ ಸಿದ್ಧತೆ ನಡೆದಿದೆ, ಏನೆಲ್ಲ ಆಗಿದೆ ಎನ್ನುವ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ರಿಲ್ಯಾಕ್ಸ್ ಮೂಡ್‌ನಲ್ಲಿ ದರ್ಶನ್
ನಟ ದರ್ಶನ್ ಪುಲ್ ರಿಲಾಕ್ಸ್ ಮೂಡ್‌ನಲ್ಲಿ ಇದ್ದಾರಂತೆ. ಪ್ರಕರಣದಲ್ಲಿ ಮೂರು ಜನರಿಗೆ ಜಾಮೀನು ಸಿಕ್ಕ ವಿಷಯ ಕೇಳಿದಾಗಿಂದ ದರ್ಶನ್ ಬಳ್ಳಾರಿ ಜೈಲಿನಲ್ಲಿ ರಿಲಾಕ್ಸ್ ಮೂಡ್‌ನಲ್ಲಿ ಇದ್ದಾರೆ. ಜಾಮೀನು ಸಿಗುತ್ತೆ ಎನ್ನುವ ವಿಶ್ವಾಸದಲ್ಲಿರುವ ದರ್ಶನ್ ಜೈಲಿನಲ್ಲಿ ನಗು ಬೀರಿದ್ದಾರೆ. ಪೊಲೀಸರಿಗೂ ಇದನ್ನು ನೋಡಿ ಅಚ್ಚರಿ ಮೂಡಿದೆ. ಇನ್ನು ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗಿ 100 ದಿನಕ್ಕೂ ಹೆಚ್ಚಾಗಿದೆ. ಜಾಮೀನು ಸಿಗುವ ನಿರೀಕ್ಷೆಯಲ್ಲಿ ಅವರಿದ್ದು, ಅಕ್ಟೋಬರ್ 4ಕ್ಕೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಈ ಸಲ ಜಾಮೀನು ಸಿಗುವ ಸಾಧ್ಯತೆ ಹೆಚ್ಚಾಗಿದೆ. ಅಭಿಮಾನಿಗಳು ಕೂಡ ದರ್ಶನ್ ಬಿಡುಗಡೆಯಾಗುತ್ತಿದ್ದಂತೆಯೇ ಅದ್ಧೂರಿ ಸ್ವಾಗತ ಮಾಡಲು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications