Actor Darshan Case FSL Report: ಎಫ್‌ಎಸ್‌ಎಲ್ ವರದಿಯಲ್ಲಿ ದರ್ಶನ್ ಕರಾಳ ಮುಖ ಬಯಲು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಹೇಗಾಗಿತ್ತು? ಡಿ ಗ್ಯಾಂಗ್‌ನ ಕ್ರೌರ್ಯ ಹೇಗಿತ್ತು? ಎಫ್‌ಎಸ್‌ಎಲ್ ವರದಿಯಲ್ಲಿ ರೇಣುಕಾಸ್ವಾಮಿ ಸಾವಿನ ಸೀಕ್ರೇಟ್ ಬಯಲಾಗಿದೆ. ಈ ಕೊಲೆ ಭಯಾನಕ ಘೋರಾತಿಘೋರ ಎಂದು ವರದಿ ಬಹಿರಂಗಪಡಿಸಿದೆ. ದರ್ಶನ್ ಮತ್ತು ಗ್ಯಾಂಗ್‌ನ ಕ್ರೌರ್ಯವನ್ನು ಎಫ್‌ಎಸ್‌ಎಲ್ ವರದಿ ಎಳೆಎಳೆಯಾಗಿ ಬಿಚ್ಚಿಟ್ಟಿದೆ.
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆಯಲ್ಲಿ ಏನೆಲ್ಲಾ ಸಾಕ್ಷಿ ಸಿಕ್ಕಿತ್ತು ಎನ್ನುವುದನ್ನು ಎಫ್‌ಎಸ್ಎಲ್ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಹಲ್ಲೆಯಿಂದಾಗಿ ಎದೆಯ ಮೂಳೆ ಮುರಿತ ಆಗಿದ್ದು, ಆ ಮೂಳೆ ರೇಣುಕಾಸ್ವಾಮಿ ಶಾಸಕೋಶಕ್ಕೆ ಚುಚ್ಚಿರುವುದು ವರದಿಯಿಂದ ಬೆಳಕಿಗೆ ಬಂದಿದೆ. ಅಲ್ಲದೆ ರೇಣುಕಾಸ್ವಾಮಿ ಕಾಲು ಮೂಳೆ ಕೂಡ ಮುರಿತವಾಗಿದೆ.

ರೇಣುಕಾಸ್ವಾಮಿ ಬಲಗಣ್ಣು, ತಲೆ ಮತ್ತು ಮೆದುಳಿಗೆ ಗಂಭೀರವಾದ ಗಾಯಗಳಾಗಿದ್ದು ಭೀಕರ ಹಲ್ಲೆಯಿಂದಾಗಿ ಮೆದುಳಿನಿಂದ ರಕ್ತಸ್ರಾವವಾಗಿ ಆತ ಸಾವನ್ನಪ್ಪಿದ್ದಾನೆ ಎಂದು ವರದಿಯಲ್ಲಿ ಹೇಳಲಾಗಿದೆ. ಮಾತ್ರವಲ್ಲದೆ ಶವವನ್ನು ಪ್ರಾಣಿಯಂತೆ ಎಳೆದೊಯ್ದು ಡಿಕ್ಕಿಗೆ ಎಸೆಯಲಾಗಿದೆ.
ಇದರಿಂದಾಗಿ ರೇಣುಕಾಸ್ವಾಮಿ ತಲೆಗೆ ಹಾಗೂ ಕಾಲಿಗೆ ಗಂಭೀರವಾಗಿ ಗಾಯವಾಗಿದ್ದು ಚಿತ್ರ ವಿಚಿತ್ರವಾಗಿ ಹಿಂಸೆ ನೀಡಿದ್ದರಿಂದ ನರಳಿ ನರಳಿ ರೇಣುಕಾಸ್ವಾಮಿ ಪ್ರಾಣ ಬಿಟ್ಟಿದ್ದಾರೆ.
ದರ್ಶನ್ ಸೇರಿದಂತೆ ಆರು ಆರೋಪಿಗಳ ಬಟ್ಟೆಗೆ ರಕ್ತದ ಕಲೆ
ಇಷ್ಟ ಮಾತ್ರವಲ್ಲದೆ ದರ್ಶನ್ ಮಾತ್ರವಲ್ಲದೆ, ದರ್ಶನ್ ಸೇರಿದಂತೆ ಆರು ಆರೋಪಿಗಳ ಮೇಲೆ ರಕ್ತದ ಕಲೆ ಪತ್ತೆಯಾಗಿದೆ. ಅದು ರೇಣುಕಾಸ್ವಾಮಿ ಅವರದ್ದೇ ಎಂದು ಎಫ್‌ಎಸ್‌ಎಲ್ ವರದಿಯಲ್ಲಿ ದೃಢ ಆಗಿದೆ. ದರ್ಶನ್, ಕಾರ್ತಿಕ್, ಕೇಶವ ಮೂರ್ತಿ, ರವಿಶಂಕರ್, ನಂದೀಶ್, ದೀಪಕ್ ಬಟ್ಟೆ ಮೇಲೆ ರಕ್ತದ ಕಲೆ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಅಲ್ಲದೆ ಹಲ್ಲೆಗೆ ಬಳಸಿದ್ದ ಹಗ್ಗ, ರಿಪೀಸ್‌ನಲ್ಲಿ ಹಾಗೂ ಕಾರಿನಲ್ಲೂ ರಕ್ತದ ಕಲೆ ಇರುವುದು ಪತ್ತೆಯಾಗಿದೆ.

ಲುಮಿನಲ್ ಟೆಸ್ಟ್
ಪೊಲೀಸರು 200ಕ್ಕೂ ಅಧಿಕ ಸಾಕ್ಷಿಗಳನ್ನು ಕಲೆ ಹಾಕಿದ್ದಾರೆ. ದರ್ಶನ್ ಇವೆಲ್ಲಾ ಸಾಕ್ಷಿಗಳು ಸಂಕಷ್ಟಕ್ಕೆ ಸಿಲುಕಿಸಿವೆ. ಲುಮಿನಲ್ ಟೆಸ್ಟ್ ನಲ್ಲಿ ಕೆಮಿಕಲ್ ಬಳಕೆ ಮಾಡಿ ರಕ್ತದ ಕಲೆಗಳನ್ನು ಪತ್ತೆ ಮಾಡಲಾಗುತ್ತದೆ. ಈ ಪರೀಕ್ಷೆಯಲ್ಲಿ ದರ್ಶನ್ ಹಾಗೂ ಇನ್ನತರರು ಆ ದಿನ ಹಾಕಿಕೊಂಡಿದ್ದ ಬಟ್ಟೆಯನ್ನು ಪರೀಕ್ಷೆಗೆ ಬಳಕೆ ಮಾಡಲಾಗಿದೆ. ದರ್ಶನ್ ಕೇಸ್‌ನಲ್ಲಿ ಲುಮಿನಲ್ ಟೆಸ್ಟ್ ನಿಂದ ಸಾಕಷ್ಟು ಬಲವಾದ ಸಾಕ್ಷಿಗಳು ಸಿಕ್ಕಿವೆ.
ವಾಟ್ಸಾಪ್ ಕಾಲ್ ಹಿಸ್ಟರಿ ರಿಟ್ರೀವ್!
ದರ್ಶನ್ ಬಂಧನಕ್ಕೂ ಮುನ್ನ ಅಂದರೆ ಬೆಂಗಳೂರಿನಿಂದ ಮೈಸೂರಿಗೆ ಡೆವಿಲ್ ಶೂಟಿಂಗ್‌ಗಾಗಿ ಸಾಗುತ್ತಿದ್ದಾಗ ಕೆಲ ರಾಜಕೀಯ ವ್ಯಕ್ತಿಗಳಿಗೆ ಕರೆ ಮಾಡಿದ್ದರು ಎಂದು ತಿಳಿದು ಬಂದಿದೆ. ತಮ್ಮ ವಾಟ್ಸಾಪ್ ಮೂಲಕ ಹಲವಾರು ರಾಜಕಾರಣಿಗಳಿಗೆ ಕರೆ ಮಾಡಿದ ದರ್ಶನ್ ತಮ್ಮ ಸಹಾಯಕ್ಕೆ ಬರುವಂತೆ ಕೇಳಿಕೊಂಡಿದ್ದರು ಎನ್ನಲಾಗುತ್ತಿದೆ. ಹೀಗೆ ಹಲವರಿಗೆ ಕರೆ ಮಾಡಿದ್ದ ದರ್ಶನ್ ಬಳಿಕ ವಾಟ್ಸಾಪ್ ಕರೆಯ ಹಿಸ್ಟರಿಯನ್ನು ಡಿಲೀಟ್ ಮಾಡಿದ್ದರು. ಬಂಧನದ ಬಳಿಕ ದರ್ಶನ್ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದ ಪೊಲೀಸರು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ದರ್ಶನ್ ಆ ದಿನ ಯಾರಿಗೆಲ್ಲಾ ಕರೆ ಮಾಡಿದ್ದರು ಎನ್ನುವ ಬಗ್ಗೆ ವರದಿ ಮಾಡಿದ್ದಾರೆ.
ಸದ್ಯ ಪೊಲೀಸರು ವಾಟ್ಸಪ್ ಕಾಲ್ ಹಿಸ್ಟರಿಯನ್ನು ರಿಟ್ರೀವ್ ಮಾಡಿದ್ದಾರೆ. ಸೋಮವಾರ (ಆಗಸ್ಟ್ 12) ರಿಪೋರ್ಟ್ ಪೊಲೀಸರ ಕೈ ಸೇರಿದ್ದು ಇದೊಂದು ದರ್ಶನ್ ವಿರುದ್ಧ ಬಲವಾದ ಸಾಕ್ಷಿಯಾಗಿದೆ.












Click it and Unblock the Notifications