Darshan Thoogudeepa: ಮಂಡ್ಯದಿಂದ ದರ್ಶನ್ ತೂಗುದೀಪ ರಾಜಕೀಯಕ್ಕೆ ಎಂಟ್ರಿ!
ನಟ ದರ್ಶನ್ ತೂಗುದೀಪ ಇತ್ತೀಚೆಗೆ ತಾನೆ 48ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಾಟೇರ ಸಿನಿಮಾ ಭರ್ಜರಿ ಯಶಸ್ಸಿನ ಬಳಿಕ ಡೆವಿಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ದರ್ಶನ್, ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದರು. 6 ತಿಂಗಳ ಕಾಲ ಜೈಲಿನಲ್ಲಿದ್ದ ದರ್ಶನ್ ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
ಫೆಬ್ರವರಿ 16ರಂದು ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟ ದರ್ಶನ್ ತೂಗುದೀಪ ಬಗ್ಗೆ ಖ್ಯಾತ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದು ಗಮನ ಸೆಳೆಯುತ್ತಿದೆ. ಈ ಮೊದಲು ನಟ ದರ್ಶನ್ ಜೈಲಿನಲ್ಲಿದ್ದಾಗ ಅವರ ಬಿಡುಗಡೆ, ಸಿನಿಮಾ ವೃತ್ತಿಜೀವನದ ಬಗ್ಗೆ ಭವಿಷ್ಯ ನುಡಿಯುವ ಮೂಲಕ ಗಮನ ಸೆಳೆದಿದ್ದರು.

ದರ್ಶನ್ ತೂಗುದೀಪ ಜೈಲಿನಿಂದ ಬಿಡುಗಡೆಯಾದ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಲಿದೆ. ಮುಂದಿನ ಸಿನಿಮಾಗಳು ಸೂಪರ್ ಹಿಟ್ ಆಗಲಿವೆ ಎಂದು ಹೇಳಿದ್ದಾರೆ. ಅಲ್ಲದೆ ದರ್ಶನ್‌ರ ರಾಜಕೀಯ ಜೀವನದ ಬಗ್ಗೆ ಕೂಡ ಭವಿಷ್ಯ ನುಡಿದಿದ್ದಾರೆ.
2027ರಲ್ಲಿ ದರ್ಶನ್ ರಾಜಕೀಯಕ್ಕೆ!
ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಎನ್ನುವವರು ದರ್ಶನ್ ರಾಜಕೀಯದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ದರ್ಶನ್ 2027ರಲ್ಲಿ ರಾಜಕೀಯಕ್ಕೆ ಬರಲಿದ್ದಾರೆ, ತಮ್ಮ ನೆಚ್ಚಿನ ಊರಾದ ಮಂಡ್ಯದಿಂದಲೇ ಅವರ ರಾಜಕೀಯ ಜೀವನ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ.
ದರ್ಶನ್‌ಗೆ ರಾಜಕೀಯ ಹೊಸದೇನೂ ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಅವರು ಚುನಾವಣೆ ಸಂದರ್ಭದಲ್ಲಿ ಹಲವು ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದಾರೆ. ಎಲ್ಲಾ ಪಕ್ಷಗಳಲ್ಲೂ ಅವರಿಗೆ ಆಪ್ತರು ಇದ್ದಾರೆ.
ಮಂಡ್ಯದಲ್ಲಿ ದರ್ಶನ್ ತೂಗುದೀಪ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಸುಮಲತಾ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ನಟ ಯಶ್ ಜೊತೆ ದರ್ಶನ್ ತೂಗುದೀಪ ಕೂಡ ಪ್ರಚಾರ ನಡೆಸಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೂಡ ದರ್ಶನ್ ಹಲವು ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು.
ಕಾಂಗ್ರೆಸ್ ಸಚಿವ ಜಮೀರ್ ಅಹಮದ್ ಖಾನ್ ಕೂಡ ದರ್ಶನ್‌ಗೆ ಆಪ್ತರಾಗಿದ್ದಾರೆ. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪರವಾಗಿ ಕೂಡ ದರ್ಶನ್ ಪ್ರಚಾರ ಮಾಡಿ ಗೆಲುವಿಗೆ ಸಹಕರಿಸಿದ್ದರು. ಕಾಟೇರ ಸಿನಿಮಾದಲ್ಲಿ ಜನ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಸದ್ಯದ ಮಟ್ಟಿಗೆ ದರ್ಶನ್ ತಮ್ಮ ಆರೋಗ್ಯ, ಒಪ್ಪಿಕೊಂಡಿರುವ ಸಿನಿಮಾಗಳತ್ತ ಗಮನ ಹರಿಸಿದ್ದಾರೆ.
ದರ್ಶನ್‌ಗೆ ಅಭಿಮಾನಿ ಬಳದ ದೊಡ್ಡದಿದೆ. ಅವರು ಯಾವುದೇ ಪಕ್ಷಕ್ಕೆ ಸೇರದೆ ತಮ್ಮದೇ ರಾಜಕೀಯ ಪಕ್ಷವನ್ನು ಕಟ್ಟಿ ರಾಜಕೀಯಕ್ಕೆ ಬರಲಿದ್ದಾರೆ ಎಂದು ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದಾರೆ. ರಾಜಕೀಯದಲ್ಲೂ ದರ್ಶನ್‌ಗೆ ಅಪಾರ ಯಶಸ್ಸು ಸಿಗಲಿದೆ ಎಂದು ಅವರು ಹೇಳಿರುವುದ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ದರ್ಶನ್ ಬಂಧನ, ಜಾಮೀನು ಸಿಗುವ ವಿಚಾರದಲ್ಲಿ ಪ್ರಶಾಂತ್ ಕಿಣಿ ಹೇಳಿದ ಸಂಗತಿಗಳು ನಿಜವಾಗಿದ್ದು, ರಾಜಕೀಯ ಭವಿಷ್ಯವನ್ನು ಕೂಡ ನಂಬುವಂತೆ ಮಾಡಿದೆ.












Click it and Unblock the Notifications