Darshan: ದರ್ಶನ್ ತಲೆ ಬೋಳು ಮಾಡಿಸಿದ ಜೈಲು ಅಧಿಕಾರಿಗಳು: ಕಾರಣವೇನು?

ಪರಪ್ಪನ ಅಗ್ರಹಾರ ಜೈಲಿನೊಳಗೆ ದರ್ಶನ್‌ಗೆ ಕ್ಲೀನ್ ಶೇವ್ ಲುಕ್ ಕೊಟ್ಟಿದ್ದಾರಾ ಪೊಲೀಸರು?ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿ ಜೈಲು ಪಾಲಾಗಿರುವ ನಟ ದರ್ಶನ್ ಸದ್ಯ ಜೈಲಿನ ಪರಿಸ್ಥಿತಿಗಳಿಗೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ. ಮನೆ ಊಟ, ಹಾಸಿಗೆ ಮತ್ತು ಪುಸ್ತಕಗಳನ್ನು ನೀಡಲು ಅವಕಾಶ ಕೊಡುವಂತೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಜುಲೈ 19ರಂದು ವಿಚಾರಣೆ ನಡೆಯಲಿದೆ.

ಹೊರಗಡೆ ಐಷಾರಾಮಿ ಜೀವನ ನಡೆಸುತ್ತಿದ್ದ ದರ್ಶನ್‌ಗೆ ಜೈಲಿನ ವ್ಯವಸ್ಥೆಗೆ ಹೊಂದಿಕೊಳ್ಳುವುದು ಕಷ್ಟವಾಗಿದೆ. ಊಟ, ಮಲಗುವ ಕಷ್ಟ ಒಂದೆಡೆಯಾದರೆ, ದರ್ಶನ್‌ರ ವಿಗ್ ಮತ್ತೊಂದು ಸಮಸ್ಯೆಯಾಗಿದೆ.

Darshan Sports a Clean Shaven Look in Parappana Agrahara Prison

ನಟ ದರ್ಶನ್‌ ಅವರು ವಿಗ್ ಧರಿಸುತ್ತಿದ್ದರು ಎನ್ನುವುದು ಈಗ ಗುಟ್ಟಾಗೇನೂ ಉಳಿದಿಲ್ಲ. ಆದರೆ ಜೈಲಿನಲ್ಲಿ ದರ್ಶನ್‌ಗೆ ವಿಗ್ ನಿಭಾಯಿಸುವುದು ಕಷ್ಟವಾಗುತ್ತಿದೆ. ಅದಕ್ಕೆ ಜೈಲು ಅಧಿಕಾರಿಗಳು ದರ್ಶನ್‌ರ ತಲೆ ಬೋಳಿಸಿದ್ದಾರೆ ಎಂದು ವರದಿಯಾಗಿದೆ.

ವಿಗ್ ನೈಸರ್ಗಿಕ ಕೂದಲಿನ ಜೊತೆ ಸಮತೋಲನದಲ್ಲಿ ಇರಬೇಕು. 20 ದಿನಗಳಿಗೊಮ್ಮೆ ವಿಶೇಷ ಆರೈಕೆಯ ಅಗತ್ಯವಿದೆ. ಈ ತಲೆ ನೋವನ್ನು ತಪ್ಪಿಸಲು ಪೊಲೀಸರು ದರ್ಶನ್‌ರ ತಲೆ ಬೋಳಿಸುವ ಮೂಲಕ ಹೊಸ ಅವತಾರ ನೀಡಿದ್ದಾರೆ ಎನ್ನಲಾಗಿದೆ.

ಜೈಲಿನಲ್ಲಿ ಆಧ್ಯಾತ್ಮದ ದರ್ಶನ್‌

ಜೈಲಿನಲ್ಲಿರುವ ನೋವು ಮರೆಯಲು ನಟ ದರ್ಶನ್ ಆಧ್ಯಾತ್ಮದ ಮೊರೆ ಹೋಗಿದ್ದಾರೆ. ಈಗಾಗಲೇ ಪುಸ್ತಕಗಳನ್ನು ಓದುತ್ತಿರುವ ದರ್ಶನ್ ಈಗ ಯೋಗವನ್ನು ಮಾಡಲು ಕೂಡ ಆರಂಭಿಸಿದ್ದಾರೆ.

ಹೊರಗಡೆ ಇದ್ದಾಗ ಸಧೃಡ ಮೈಕಟ್ಟಿಗಾಗಿ ಜಿಮ್‌ನಲ್ಲಿ ಬೆವರಿಳಿಸುತ್ತಿದ್ದ ದರ್ಶನ್‌ ಈಗ ಮಾನಸಿಕ ಶಾಂತಿಗಾಗಿ ಯೋಗದ ಮೊರೆ ಹೋಗಿದ್ದಾರೆ. ಇನ್ನು ಸಂಜೆ ವೇಳೆ ಆಂಜನೇಯನ ಪ್ರಾರ್ಥನೆ ಮಾಡುತ್ತಿದ್ದು, ಕಷ್ಟಗಳನ್ನು ದೂರಾಗಿಸುವಂತೆ ಪ್ರಾರ್ಥನೆ ಮಾಡುತ್ತಿದ್ದಾರೆ. ಸ್ವಾಮಿ ವಿವೇಕಾನಂದ ಸೇರಿದಂತೆ ಹಲವು ಮಹಾತ್ಮರ ಸ್ಪೂರ್ತಿದಾಯಕ ಪುಸ್ತಕಗಳನ್ನು ಓದುತ್ತಿದ್ದಾರೆ.

ಅಭಿಮಾನಿಗಳಿಂದಲೂ ಪ್ರಾರ್ಥನೆ

ದರ್ಶನ್ ಜೈಲಿನಲ್ಲಿ ಬೇಗ ಬಿಡುಗಡೆಗಾಗಿ ಪ್ರಾರ್ಥನೆ ಮಾಡುತ್ತಿದ್ದರೆ, ಹೊರಗಡೆ ಅಭಿಮಾನಿಗಳು ಕೂಟ ತಮ್ಮ ನೆಚ್ಚಿನ ನಟ ಬೇಗ ಬಿಡುಗಡೆಯಾಗಲಿ ಎಂದು ದೇವರ ಮೊರೆ ಹೋಗಿದ್ದಾರೆ. ವಿವಿಧ ದೇವಸ್ಥಾನಗಳಲ್ಲಿ ದರ್ಶನ್ ಅಭಿಮಾನಿಗಳು ನೆಚ್ಚಿನ ನಟ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದು ಬೇಗನೆ ಹೊರಬರುವಂತಾಗಿ ಎಂದು ಪ್ರಾರ್ಥನೆ ಮಾಡುತ್ತಿದ್ದಾರೆ.

ಶಾಸ್ತ್ರಿ ಮರುಬಿಡುಗಡೆ

ದರ್ಶನ್ ಜೈಲಿನಲ್ಲಿರುವಾಗಲೇ ಅವರ ಅಭಿನಯದ ಸೂಪರ್ ಹಿಟ್ ಸಿನಿಮಾ ಶಾಸ್ತ್ರಿ ಮರುಬಿಡುಗಡೆಯಾಗಿದೆ. ಬೆಂಗಳೂರಿನ ವೀರೇಶ್ ಚಿತ್ರಮಂದಿರ ಸೇರಿದಂತೆ ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+