"ನೆಮ್ಮದಿಯಾಗಿ ಊಟ ಮಾಡಿ" ನಾನ್‌ವೆಜ್ ಹೋಟೆಲ್ ತೆರೆದ ನಟ ದರ್ಶನ್ ಸೋದರಳಿಯ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ತೂಗುದೀಪ ಮತ್ತೆ ಜೈಲುವಾಸಕ್ಕೆ ಮರಳಿದ್ದಾರೆ. ದರ್ಶನ್ ಅವರ ಇದ್ರೆ ನೆಮ್ದಿಯಾಗಿ ಇರ್ಬೇಕ್ ಅನ್ನೋ ದರ್ಶನ್ ಅವರ ಡೈಲಾಗ್ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಇದೇ ಕಾರಣಕ್ಕೆ ದರ್ಶನ್ ಅಭಿನಯದ ಡೆವಿಲ್ ಸಿನಿಮಾದಲ್ಲೂ ಇದ್ರೆ ನೆಮ್ದಿಯಾಗ್ ಇರ್ಬೇಕ್ ಅನ್ನೋ ಸಾಂಗ್ ಕೂಡ ಕಂಪೋಸ್ ಆಗಿತ್ತು. ಆದರೆ ಈ ಹಾಡು ರಿಲೀಸ್ ಆಗುವ ಹೊತ್ತಿಗೆ ಜಾಮೀನು ರದ್ದಾಗಿ ದರ್ಶನ್ ಮತ್ತೆ ಜೈಲು ಸೇರಿದ್ದರು. ನಂತರ ಚಿತ್ರತಂಡ ಹಾಡು ರಿಲೀಸ್ ಕೂಡ ಮಾಡಿತ್ತು. ಇದೀಗ ದರ್ಶನ್ ಅವರ ಅಕ್ಕನ ಮಗ ಚಂದನ್ ಕುಮಾರ್ ಇದೇ ಹೆಸರಿನಲ್ಲಿ ನಾನ್‌ವೆಜ್ ಹೋಟೆಲ್ ತೆರೆದಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಮೈಸೂರು ದಸರಾದಂತೆಯೇ ಅಲ್ಲಿ ನಡೆಯುವ ದಸರಾ ಆಹಾರ ಮೇಳ ಕೂಡ ಸಖತ್ ಫೇಮಸ್. ಬೇರೆ ಬೇರೆ ಊರುಗಳಿಂದ ಈ ಆಹಾರ ಮೇಳದಲ್ಲಿ ತಿಂದು ತೇಗಲು ಜನ ಇಲ್ಲಿಗೆ ಬರುತ್ತಾರೆ. ಈ ಬಾರಿ ದರ್ಶನ್ ಅವರ ಅಳಿಯ ಚಂದು ಕೂಡ ಆಹಾರ ಮೇಳದಲ್ಲಿ ನಾನ್‌ವೆಜ್ ಹೋಟೆಲ್ ತೆರೆದಿದ್ದಾರೆ. ಇದಕ್ಕೆ "ನೆಮ್ಮದಿಯಾಗಿ ಊಟ ಮಾಡಿ" ಎಂದು ಹೆಸರಿಡುವ ಮೂಲಕ ಗಮನ ಸೆಳೆದಿದ್ದಾರೆ. ದರ್ಶನ್ ಅವರ ತಾಯಿ ಮೀನಾ ಅವರು ಈ ಮಳಿಗೆಗೆ ಭೇಟಿ ನೀಡಿರುವ ವಿಡಿಯೋ ವೈರಲ್ ಆಗಿದೆ.

ಮೈಸೂರಿನ ಆಹಾರ ಮೇಳದಲ್ಲಿ ಭಾರೀ ಜನ ಸೇರುವ ಹಿನ್ನೆಲೆ ಚಂದನ್ ಕುಮಾರ್ ಕೂಡ ಫೇಮಸ್ ಡೈಲಾಗ್ ಅನ್ನೇ ತಮ್ಮ ಮಳಿಗೆಗೆ ಇಟ್ಟಿದ್ದಾರೆ. ಈಗಾಗಲೇ ಇದ್ರೆ ನೆಮ್ದಿಯಾಗ್ ಇರ್ಬೇಕು ಅನ್ನೋದು ದರ್ಶನ್ ಅಭಿಮಾನಿಗಳ ಬಾಯಲ್ಲಿ ಹರಿದಾಡುತ್ತಿದ್ದು, ಆಹಾರ ಮೇಳಕ್ಕೆ ಬರುವವರನ್ನು ಸೆಳೆಯಲು ಈ ವಿಭಿನ್ನ ಪ್ರಯತ್ನ ಮಾಡಿದ್ದಾರೆ. ದರ್ಶನ್ ಅವರ ಅಕ್ಕ ದಿವ್ಯ ಅವರ ಮಗ ಚಂದನ್ ಹೋಟೆಲ್ ತೆರೆದಿದ್ದು, ಮೀನಾ ತೂಗುದೀಪ ಕೂಡ ಸಾಥ್ ನೀಡಿದ್ದಾರೆ.
ಹೋಟೆಲ್‌ನಲ್ಲಿ ಏನೆಲ್ಲ ಸಿಗುತ್ತೆ?
ಚಂದು ತೆರೆದಿರುವ ಮಳಿಗೆಯಲ್ಲಿ ಚಿಕನ್ ಪಲಾವ್, ಮಟನ್ ಪಲಾವ್, ಮಟನ್ ಚಾಪ್ಸ್, ಚಿಕನ್ ಫ್ರೈ, ಚಿಕನ್ ಕಬಾಬ್ ಸೇರಿದಂತೆ ಬಾಯಲ್ಲಿ ನೀರೂರಿಸುವ ನಾನ್‌ವೆಜ್ ಮೆನು ಇಡಲಾಗಿದೆ. ಈ ವಿಡಿಯೋ ಇನ್‌ಸ್ಟಾಗ್ರಾಂ ಹಾಗೂ ಯುಟ್ಯೂಬ್‌ನಲ್ಲಿ ವೈರಲ್ ಆಗಿದ್ದು, ದರ್ಶನ್ ಅವರ ಅಳಿಯನ ಅಂಗಡಿ ಎಂದು ಜನ ಮುಗಿಬೀಳುತ್ತಿದ್ದಾರೆ. ಚಂದನ್ ಜೊತೆ ಸೆಲ್ಫಿ ಕೂಡ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ದರ್ಶನ್ ಅವರು ಕೊಲೆ ಕೇಸ್‌ನಲ್ಲಿ ಅರೆಸ್ಟ್ ಆದಾಗ ಜೈಲಿಗೆ ಚಂದನ್ ಕುಮಾರ್ ಅವರೇ ಬಟ್ಟೆ ಹಾಗು ಇತರೆ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿ ಕೊಡುತ್ತಿದ್ದರು. ಅಲ್ಲದೆ ದರ್ಶನ್ ಅವರ ಕುಟುಂಬದಿಂದ ಮುಂದಿನ ತಲೆಮಾರಿನವರಾದ ಚಂದನ್ ಹಾಗೂ ಪುತ್ರ ವಿನೀಶ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಲು ದರ್ಶನ್ ಮುಂದಾಗಿದ್ದಾರೆ. ದರ್ಶನ್ ಬಳಿಕ ಚಂದನ್ ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಪಕ್ಕಾ ಎನ್ನಲಾಗುತ್ತಿದೆ.












Click it and Unblock the Notifications