ಅಂಬರೀಶ್ ಮೊಮ್ಮಗನ ನಾಮಕರಣ ಶಾಸ್ತ್ರಕ್ಕೆ ಸುದೀಪ್ ಎಂಟ್ರಿ; ಬರಲೇ ಇಲ್ಲ ದರ್ಶನ್ : ಸುಮಲತಾ ಮಗುವಿಗೆ ಇಟ್ಟ ಹೆಸರೇನು ಗೊತ್ತಾ?
ಬೆಂಗಳೂರು, ಮಾರ್ಚ್ 16: ರೆಬೆಲ್ ಸ್ಟಾರ್' ಅಂಬರೀಶ್ ಮತ್ತು ಮಾಜಿ ಸಂಸದೆ, ಹಿರಿಯ ನಟಿ ಸುಮಲತಾ ಅಂಬರೀಶ್ ಅವರ ಮೊಮ್ಮಗ, ನಟ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನ ನಾಮಕರಣ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನೆರವೇರಿತು. ಅಂಬರೀಶ್ ಕುಟುಂಬಸ್ಥರು, ಸಂಬಂಧಿಕರು, ಹಿತೈಷಿಗಳು, ರಾಜಕೀಯ ಮತ್ತು ಚಿತ್ರರಂಗದ ಹಲವರು ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ದೂರಿಯಾಗಿ ನಡೆದಿದೆ. ಜೂನಿಯರ್ ಅಂಬಿ ನಾಮಕರಣ ಶಾಸ್ತ್ರಕ್ಕೆ ರೆಬೆಲ್ ಸ್ಟಾರ್ ಕುಟುಂಬ ಸಾಕ್ಷಿಯಾಗಿದೆ. ಅಭಿಷೇಕ್ ಪುತ್ರನ ನಾಮಕರಣದಲ್ಲಿ ಹಲವು ನಟ - ನಟಿಯರು ಮತ್ತು ರಾಜಕೀಯದ ಗಣ್ಯರು ಕೂಡ ಭಾಗಿಯಾಗಿದ್ದಾರೆ. ಅಭಿಷೇಕ್ ಅಂಬರೀಶ್ ಮಗನಿಗೆ ತಮ್ಮ ಅಪ್ಪನ ಹೆಸರನ್ನೇ ಇಟ್ಟಿದ್ದಾರೆ. ಜೂನಿಯರ್ ಅಂಬಿಗೆ ರಾಣಾ ಅಮರ್ ಅಂಬರೀಶ್ ಎಂದು ನಾಮಕರಣ ಮಾಡಲಾಗಿದೆ. ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಎನ್ನುವುದು ಅಂಬರೀಶ್ ಅವರ ಮೂಲ ಹೆಸರು. ಬಳಿಕ ಅಂಬರೀಶ್ ಎಂದು ಬದಲಿಸಿಕೊಂಡು ಚಿತ್ರರಂಗಕ್ಕೆ ಬಂದಿದ್ದರು.

ಅಂಬರೀಶ್ ಮೊಮ್ಮಗ, ಜ್ಯೂ. ಅಂಬಿಗೆ ರಾಣಾ ಅಮರ್ ಎಂದು ನಾಮಕರಣ ಮಾಡಲಾಗಿದ್ದು, ʻರಾಣಾʼ ಎಂದರೆ ʻರಾಜʼ ಅರ್ಥ ಹೋಲುವ ಹೆಸರನ್ನು ತಮ್ಮ ಮಗನಿಗೆ ಅಭಿ-ಅವಿವಾ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಅಭಿಷೇಕ್ ಅಂಬರೀಶ್ ಪುತ್ರನ ನಾಮಕರಣ ಸಮಾರಂಭ ರಾಜಕೀಯ ನಾಯಕರು ಹಾಗೂ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ಸುದೀಪ್ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅಂಬರೀಶ್ ಪುತ್ರನಿಗಾಗಿ ನಟ ಕಿಚ್ಚ ಸುದೀಪ್ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ನಟ ಸುದೀಪ್ ಕೊಟ್ಟ ಗಿಫ್ಟ್ ನೋಡಿ ಸುಮಲತಾ ಅಂಬರೀಶ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನೂ ಸುಮಲತಾ ಅಂಬರೀಶ್ ಅವರ ಕುಟುಂಬದ ಯಾವುದೇ ಕಾರ್ಯಕ್ರಮಗಳು ನಡೆದರು ನಟ ದರ್ಶನ್ ಅವರು ಎಂಟ್ರಿ ಕೊಡುತ್ತಿದ್ದರು. ಆದರೆ, ಅಭಿಷೇಕ್ ಪುತ್ರನ ನಾಮಕರಣ ಸಮಾರಂಭಕ್ಕೆ ಚಿತ್ರರಂಗದ ಹಲವು ಗಣ್ಯರು, ರಾಜಕೀಯ ಗಣ್ಯ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಆದರೆ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿದ್ದ, ನಟ ದರ್ಶನ್ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ನಟ ದರ್ಶನ್ ಈ ಕಾರ್ಯಕ್ರಮಕ್ಕೆ ಗೈರಾಗಿರುವುದು ಹಲವು ಅನುಮಾನಗಳಿಕೆ ಕಾರಣವಾಗಿದೆ.
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಿಂದ ಹೊರ ಬಂದಮೇಲೆ ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಸೇರಿದಂತೆ ಆರು ಜನರನ್ನು ನಟ ದರ್ಶನ್ ತೂಗುದೀಪ ಇನ್ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ ವಿಚಾರ ಹಲವು ಅಂತೆ-ಕಂತೆಗಳನ್ನೇ ಸೃಷ್ಟಿಸಿಬಿಟ್ಟಿತ್ತು. ಆದರೆ, ಈ ಬಗ್ಗೆ ಸುಮಲತಾ ಅಂಬರೀಶ್ ಅವರು, ನನ್ನ ಹಾಗೂ ದರ್ಶನ್ ನಡುವೆ ಯಾವುದೆ ಮನಸ್ತಾಪಗಳಿಲ್ಲ.ದರ್ಶನ್ ಮತ್ತು ನಮ್ಮ ಮಧ್ಯೆ ಎಲ್ಲವೂ ಸರಿಯಿದೆ, ನಮ್ಮ ಮನೆಯಲ್ಲಿ ದರ್ಶನ್ ಬಿಟ್ಟು ಯಾವುದೇ ಒಳ್ಳೆ ಕಾರ್ಯಗಳು ಇಲ್ಲಿಯವರೆಗೂ ಆಗಿಲ್ಲ, ಆಗುವುದಿಲ್ಲ. ಮೊಮ್ಮಗನ ನಾಮಕರಣಕ್ಕೆ ದರ್ಶನ್‌ರನ್ನು ಆಹ್ವಾನಿಸುತ್ತೇನೆ ಎಂದು ಸುಮಲತಾ ಅಂಬರೀಶ್ ಹೇಳಿದ್ದರು. ಆದರೆ ಇಬ್ಬರ ನಡುವೆ ಕೆಲ ಕಾರಣಗಳಿಂದ ಮನಸ್ತಾಪಗಳು ಉಂಟಾಗಿದೆ, ಇದೇ ಕಾರಣಕ್ಕೆ ದರ್ಶನ್ ಅವರು ಅಂಬಿ ಮೊಮ್ಮಗನ ನಾಯಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎನ್ನಲಾಗಿದೆ.
-
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications