Darshan Health Upset: ದರ್ಶನ್ ಆರೋಗ್ಯದಲ್ಲಿ ಏರುಪೇರು: ಮಾನಸಿಕವಾಗಿ ಕುಗ್ಗಿ ಹೋದ ದಾಸ!
ಬೆಂಗಳೂರು ಜುಲೈ 7: ದರ್ಶನ್ ಬಂಧನವಾಗಿ ಒಂದು ತಿಂಗಳು ಕಳೆಯುತ್ತಾ ಬಂದಿದೆ. ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ವಾಸ ಅನುಭವಿಸುತ್ತಿರುವ ದರ್ಶನ್ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ತಿಳಿದು ಬಂದಿದೆ.
ಚಿಂತೆಯಲ್ಲಿ ದಾಸ ಸೊರಗಿ ಹೋಗಿದ್ದು ತೂಕ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸದಾ ಪಾರ್ಟಿ ಅಂತ ನಾನ್ ವೆಜ್ ಊಟ ಮಾಡುತ್ತಿದ್ದ ದರ್ಶನ್‌ಗೆ ಈಗ ಜೈಲೂಟಾ ಫಿಕ್ಸ್ ಆಗಿದೆ. ಜೈಲಿನಲ್ಲಿ ಮುದ್ದೆ ಊಟ ಮಾಡುತ್ತಿರುವ ದರ್ಶನ್ ಚಿಂತೆಯಲ್ಲಿ ಮುಳುಗಿ ನಿದ್ದೆ ಇಲ್ಲದೆ ಸೊರಗಿ ಹೋಗಿದ್ದಾರೆ.

ಇದರಿಂದ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದೆ ಎಂದು ತಿಳಿದು ಬಂದಿದೆ. ಕಲರ್‌ಫುಲ್ ಜಗತ್ತನ್ನು ಕಾಣುತ್ತಿದ್ದ ದರ್ಶನ್ ಈಗ ನಾಲ್ಕು ಗೋಡೆಗಳ ಮಧ್ಯೆ ಕಾಲ ಕಳೆಯುವಂತಾಗಿದೆ. ಹೀಗಾಗಿ ದರ್ಶನ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆನ್ನಲಾಗುತ್ತಿದೆ.
ಹೌದು... ದರ್ಶನ್ ಜೈಲಿನಿಂದ ಹೊರಗಡೆ ಇದ್ದಾಗ ನಿತ್ಯ ಮದ್ಯ, ಸಿಗರೇಟ್, ನಾನ್ ವೆಜ್ ಹೀಗೆ ಮನಸ್ಸು ಬಯಸಿದ ಆಹಾರವನ್ನು ಸೇವಿಸುತ್ತಿದ್ದರು. ಆದರೀಗ ಅದಕ್ಕೆಲ್ಲ ಕಡಿವಾಣ ಬಿದ್ದಿದೆ. ಬಯಸಿದ ಆಹಾರ ಸಿಗುವುದಿರಲಿ, ಸಿಕ್ಕ ಆಹಾರ ಸೇವಿಸಿ ಅರಗಿಸಿಕೊಳ್ಳುವುದು ಜೈಲಿನಲ್ಲಿ ಕಷ್ಟವಾಗಿದೆ.
ಜೈಲಿನಲ್ಲಿ ದಿನಕ್ಕೊಂದು ಆಹಾರ ನೀಡಿದರೂ ಅದನ್ನು ರೂಢಿಸಿಕೊಂಡು ನಾಲ್ಕು ಗೋಡೆ ಮಧ್ಯೆ ಇರುವುದನ್ನು ಅಷ್ಟು ಸುಲಭವಲ್ಲ. ಹೀಗಾಗಿ ದಾಸ ಮಾನಸಿಕ ಒತ್ತವನ್ನು ಅನುಭವಿಸುತ್ತಿದ್ದಾರೆ. ಜೈಲಿನಲ್ಲಿ ನಿತ್ಯ ಒಬ್ಬೊಂಟಿಯಾಗಿ ಯಾರೊಂದಿಗೂ ಮಾತನಾಡದೇ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ದರ್ಶನ್ ಮನಸ್ಥಿತಿ ತುಂಬಾ ಹಾಳಾಗಿ ಹೋಗಿದೆ ಎನನ್ಲಾಗುತ್ತಿದೆ.

ಜೈಲಿನಲ್ಲಿ ಬೇಡಿದ ಆಹಾರ ಸಿಗುವುದಿಲ್ಲ. ಎಲ್ಲರಿಗೂ ಒಂದೇ ರೀತಿಯ ಆಹಾರ ಮಾಡಿ ಬಡಿಸಲಾಗುತ್ತದೆ. ಹೀಗಾಗಿ ಈ ಆಹಾರ ದಾಸನ ದೇಹಕ್ಕೆ ಹಾಗೂ ರುಚಿಗೆ ಸಾಕಾಗುತ್ತಿಲ್ಲ. ಇದರಿಂದ ದರ್ಶನ್ ಸರಿಯಾಗಿ ಊಟ ಮಾಡಲು ಆಗುತ್ತಿಲ್ಲ. ಸರಿಯಾಗಿ ಊಟ ಮಾಡದೆ ನಿದ್ದೆ ಕೂಡ ಮಾಡುತ್ತಿಲ್ಲ. ಇದು ಪೊಲೀಸರಿಗೂ ಸಮಸ್ಯೆಯನ್ನುಂಟು ಮಾಡಿದೆ.
ದಾಸನ ತೂಕ ಇಳಿಕೆ
ಜೈಲಿನಿಂದ ಹೊರಗಡೆ ಇರುವಾಗ ದರ್ಶನ್ ನಿತ್ಯ ಜಿಮ್ ಹೋಗುತ್ತಿದ್ದರು. ಅದಕ್ಕೆ ತಕ್ಕಂತೆ ಊಟ ಮಾಡುತ್ತಿದ್ದರು. ಏನೇ ತಿನ್ನಲ್ಲಿ ಅದನ್ನು ಜಿಮ್‌ನಲ್ಲಿ ಕಸರತ್ತು ಮಾಡಿ ಅರಗಿಸಿಕೊಳ್ಳುತ್ತಿದ್ದರು. ಹೀಗಾಗಿ ದರ್ಶನ್ ಜೈಲಿನಿಂದ ಹೊರಗಡೆ ಇದ್ದಾಗ ಚೆನ್ನಾಗೇ ಊಟ ಮಾಡ್ತಾಯಿದ್ರು. ನಾನ್ ವೆಜ್ ಪ್ರಿಯರಾದ ದರ್ಶನ್ ದಿನಕ್ಕೊಂದು ಬಾರಿಯಾದರೂ ನಾನ್ ವೆಜ್ ಊಟ ಮಾಡದೆ ಇರುತ್ತಿರಲಿಲ್ಲ.
ಪಾರ್ಟಿ, ಮದ್ಯ ಹಾಗೂ ಮದ್ಯಪಾನ ಇವೆಲ್ಲವೂ ಅವರಿಗೆ ನಿತ್ಯ ಸಾಮಾನ್ಯವಾಗಿತ್ತು. ಅಲ್ಲದೆ ನಿತ್ಯ ಫ್ರೆಂಡ್ಸ್, ಸಿನಿಮಾ, ಶೂಟಿಂಗ್ ಅಲ್ಲಿ ಬ್ಯೂಸಿ ಆಗಿರುತ್ತಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಸಲು ಪೊಲೀಸರು ಬೆಂಗಳೂರಿನಿಂದ ಮೈಸೂರಿಗೆ ತೆರಳಿದಾಗಲೂ ದರ್ಶನ್ ಜಿಮ್ ಅಲ್ಲಿ ಇದ್ದರು. ಶೂಟಿಂಗ್‌ಗಾಗಿ ಅವರು ಮೈಸೂರಿಗೆ ತೆರಳಿದ್ದರು.
ಹೀಗೆ ಒಂದಿಲ್ಲ ಒಂದು ಕೆಲಸದಲ್ಲಿ ನಿತ್ಯ ತಮ್ಮ ಗೆಳೆಯರು ಹಾಗೂ ಶೂಟಿಂಗ್ ಟೀಮ್‌ನೊಂದಿಗೆ ಕಾಲ ಕಳೆಯುತ್ತಿದ್ದ ದಾಸನಿಗೆ ಸೆರೆ ಮನೆ ವಾಸ ಮಂಕಾಗಿಸಿಬಿಟ್ಟಿದೆ. ಯಾರೊಂದಿಗೆ ಮಾತಿಲ್ಲ, ಕಥೆಯಿಲ್ಲ. ಮೌನವಾಗಿ ದರ್ಶನ್ ಯಾವುದೋ ಚಿಂತೆಯಲ್ಲಿ ಮುಳುಗಿ ಕುಳಿತಿರುತ್ತಾರೆ ಎನ್ನಲಾಗುತ್ತಿದೆ.
ಯಾರೊಂದಿಗೂ ಹೆಚ್ಚು ಮಾತನಾಡಲು ಇಷ್ಟಪಡದೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ ದರ್ಶನ್. ಹೀಗಾಗಿ ಅವರ ಆರೋಗ್ಯದಲ್ಲೂ ಏರುಪೇರಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ದರ್ಶನ್ ಸರಿಯಾಗಿ ಊಟ ಮಾಡುತ್ತಿಲ್ಲ ಸರಿಯಾಗಿ ನಿದ್ದೆ ಮಾಡುತ್ತಿಲ್ಲ. ಇದು ಅವರ ಆರೋಗ್ಯದ ಬಗ್ಗೆ ಇನ್ನಷ್ಟು ಚಿಂತೆಗೀಡು ಮಾಡಿದೆ. ಹೀಗೆ ಇನ್ನಷ್ಟು ದಿನ ದರ್ಶನ್ ಕಳೆದರೆ ಅವರ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಬೀಳುವ ಸಾಧ್ಯತೆ ಇದೆ. ಇದು ಪೊಲೀಸರಿಗೂ ಆತಂಕವನ್ನು ಸೃಷ್ಟಿ ಮಾಡಿದೆ. ಜೈಲಿನಲ್ಲಿರುವ ದರ್ಶನ್ ಬಗ್ಗೆ ಹೆಚ್ಚು ನಿಗಾ ಇಡಲಾಗಿದೆ.












Click it and Unblock the Notifications