Sudeep-Darshan: ಸುದೀಪ್ ಮಾತಿಗೆ ದರ್ಶನ್ ಫ್ಯಾನ್ಸ್ ಮೆಚ್ಚುಗೆ

ಕಿಚ್ಚ ಸುದೀಪ್ ಇಂದು ಸುದ್ದಿಗೋಷ್ಠಿ ನಡೆಸಿ ಮಾಧ್ಯಮದವರ ಜೊತೆ ಹಲವು ವಿಚಾರಗಳನ್ನು ಹಂಚಿಕೊಂಡರು. ಬಿಗ್ ಬಾಸ್ ನಿರೂಪಕರು ಬದಲಾಗುವ ವಿಚಾರದಿಂದ ಮೊದಲಾಗಿ, ತಮ್ಮ ಹುಟ್ಟುಹಬ್ಬ ಆಚರಣೆ, ಮುಂದಿನ ಸಿನಿಮಾಗಳು, ಚಿತ್ರರಂಗ ಸೇರಿದಂತೆ ಹಲವು ವಿಚಾರಗಳು ಅವರ ಮಾತಿನಲ್ಲಿ ಬಂದುಹೋದವು. ನಟ ದರ್ಶನ್ ಪ್ರಕರಣದ ಬಗ್ಗೆ ಕೂಡ ಅವರು ಮಾತನಾಡಿದ್ದು, ಅವರ ಮಾತಿಗೆ ಇದೀಗ ದರ್ಶನ್ ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದರ್ಶನ್‌ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಈ ವಿಚಾರದಲ್ಲಿ ನನ್ನ ನಿಲುವು ಏನೆಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಅಲ್ಲಿ ಏನಾಗಿದೆ ಎನ್ನುವುದು ನನಗೆ ಗೊತ್ತಿಲ್ಲ. ಅದನ್ನು ಕಾನೂನು ನೋಡಿಕೊಳ್ಳುತ್ತದೆ, ಅದರ ಬಗ್ಗೆ ನಾನು ಮಾತನಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

Darshan Fans Appreciate Sudeep s Remarks on Darshan s Arrest Case

ನಾವಿಬ್ಬರು ದೂರಾಗಿರುವುದು ಅವರು ಸರಿಯಿಲ್ಲ, ನಾನು ಸರಿಯಿಲ್ಲ ಎಂದು ಅಲ್ಲ. ಇಬ್ಬರೂ ಕೂಡ ಸರಿಯಿಲ್ಲ ಅಂದುಕೊಳ್ಳಿ. ಇಬ್ಬರ ವಿಚಾರಗಳು, ಆಲೋಚನೆಗಳು ಬೇರೆ ಇದ್ದಾಗ, ಹೊರಗೆ ನಾಟಕ ಆಡಿಕೊಂಡು ಬದುಕಲು ಆಗದು. ಹಾಗಂತ ಅವರ ಬಗ್ಗೆ ನನಗೆ ಕೋಪ, ದ್ವೇಷ ಇದೆ ಎಂದಲ್ಲ, ಸೂರ್ಯ ಬೆಳಿಗ್ಗೆ ಬರಬೇಕು, ಚಂದ್ರ ರಾತ್ರಿ ಬರಬೇಕು ಎರಡೂ ಒಟ್ಟಿಗೆ ಬಂದರೆ ಸಮಸ್ಯೆಯಾಗುತ್ತದೆ ಎಂದು ಸೂಚ್ಯವಾಗಿ ತಿಳಿಸಿದರು.

ದರ್ಶನ್‌ಗೆ ಕುಟುಂಬ ಇದೆ, ಅಭಿಮಾನಿಗಳು ಇದ್ದಾರೆ. ನಾನು ಮಾತನಾಡಿ ಅವರಿಗೆ ನೋವು ಮಾಡುವುದು ಸರಿಯಲ್ಲ. ಈ ವಿಚಾರದಲ್ಲಿ ನನ್ನ ಅಭಿಪ್ರಾಯ ಮುಖ್ಯವಾಗುವುದಿಲ್ಲ. ಅದಕ್ಕೊಂದು ವ್ಯವಸ್ಥೆ ಇದೆ. ಸರಿ ಯಾವುದು ತಪ್ಪು ಯಾವುದು ಎನ್ನುವುದನ್ನು ಕಾನೂನು ನಿರ್ಧಾರ ಮಾಡುತ್ತದೆ. ನಾವು ತಾಳ್ಮೆಯಿಂದ ಕಾಯಬೇಕು. ಎಲ್ಲದನ್ನೂ ನಾವೇ ನಿರ್ಧಾರ ಮಾಡಬಾರದು, ಕಾನೂನು ನಿರ್ಧರಿಸುವ ಮುನ್ನವೇ ತಪ್ಪು ಮಾಡಿದ್ದಾರೆ ಎಂದು ನಾವು ಹೇಳಬಾರದು ಎಂದು ಹೇಳಿದರು.

ದರ್ಶನ್ ಅಭಿಮಾನಿಗಳಿಗೂ ನೋವಾಗಿದೆ, ಅವರ ಕುಟುಂಬಕ್ಕೂ ನೋವಾಗಿದೆ. ಈ ಸಂದರ್ಭದಲ್ಲಿ ನಾವು ಮಾತನಾಡಿ ಮತ್ತಷ್ಟು ನೋವು ಕೊಡುವುದು ಸರಿಯಲ್ಲ. ಅದನ್ನೆಲ್ಲಾ ಕಾನೂನು, ವ್ಯವಸ್ಥೆ ನೋಡಿಕೊಳ್ಳುತ್ತದೆ. ನಾವು ತಾಳ್ಮೆಯಿಂದ ವರ್ತಿಸಬೇಕು ಎಂದು ಹೇಳಿದರು.

ಸುದೀಪ್ ಮಾತಿಗೆ ದರ್ಶನ್ ಫ್ಯಾನ್ಸ್ ಮೆಚ್ಚುಗೆ

ಸುದೀಪ್ ಅವರ ಮಾತುಗಳಿಗೆ ದರ್ಶನ್ ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುದೀಪ್ ಅರ್ಥಪೂರ್ಣವಾಗಿ ಮಾತನಾಡಿದ್ದಾರೆ. ದರ್ಶನ್ ತಪ್ಪು ಮಾಡಿದ್ದಾರ ಇಲ್ಲವಾ ಎಂದು ಕಾನೂನು, ನ್ಯಾಯಾಲಯ ನಿರ್ಧಾರ ಮಾಡುತ್ತದೆ. ಅವರು ಇನ್ನು ಆರೋಪಿ ಅಷ್ಟೆ ಅಪರಾಧಿ ಅಲ್ಲ. ಈಗಲೇ ಕೆಲವರು ದರ್ಶನ್‌ರನ್ನು ಅಪರಾಧಿ ಎನ್ನುವಂತೆ ಬಿಂಬಿಸುತ್ತಿದ್ದಾರೆ, ಸುದೀಪ್ ತಮ್ಮ ಘನತೆಗೆ ತಕ್ಕಂತೆ ಮಾತನಾಡಿದ್ದಾರೆ ಎಂದು ಮೆಚ್ಚಿಕೊಂಡಿದ್ದಾರೆ.

ಇನ್ನೂ ಕೆಲವು ದರ್ಶನ್ ಅಭಿಮಾನಿಗಳು ನೀವು ದರ್ಶನ್ ಇಬ್ಬರು ಒಂದಾಗಬೇಕು. ನೀವೊಮ್ಮೆ ಜೈಲಿಗೆ ಹೋಗಿ ಅವರನ್ನು ನೋಡಿಕೊಂಡು ಬನ್ನಿ ಎಂದು ಮನವಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+