Actor Darshan: ನಟ ದರ್ಶನ್‌ ಜೊತೆ ಪತ್ನಿ ವಿಜಯಲಕ್ಷಿಗೂ ಕೋರ್ಟ್‌ನಿಂದ ಸಮನ್ಸ್‌, ಕಾರಣವೇನು?

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ತೂಗುದೀಪ ಅವರು ಈಗಷ್ಟೇ ಜಾಮೀನಿನ ಮೇಲೆ ಹೊರಬಂದು ರಿಲೀಫ್‌ ಆಗಿದ್ದಾರೆ. ಜಾಮೀನು ರದ್ದು ಮಾಡುವ ಅರ್ಜಿ ವಿಚಾರಣೆಯನ್ನು ಕೂಡ ಸುಪ್ರೀಂಕೋರ್ಟ್‌ ಎರಡು ತಿಂಗಳ ಕಾಲ ಮುಂದೂಡಿದೆ. ಇದೀಗ ದರ್ಶನ್‌ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರಿಗೂ ದೊಡ್ಡ ಸಂಕಷ್ಟ ಎದುರಾಗಿದೆ. ಮತ್ತೊಂದು ಹೊಸ ಪ್ರಕರಣದಲ್ಲಿ ನಟ ದರ್ಶನ್‌ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಈ ಬಾರಿ ವಿಜಯಲಕ್ಷ್ಮಿ ಅವರಿಗೂ ಸಮನ್ಸ್‌ ನೀಡಿರುವುದು ಶಾಕ್‌ ನೀಡಿದೆ. ಯಾವ ಪ್ರಕರಣದಲ್ಲಿ ಇವರಿಗೆ ಸಮನ್ಸ್‌ ನೀಡಿದೆ ಎಂಬ ಮಾಹಿತಿ ಇಲ್ಲಿದೆ.

ಹೌದು ಹೊಸ ಪ್ರಕರಣವೊಂದರಲ್ಲಿ ವಿಜಯಲಕ್ಷ್ಮಿ ಅವರಿಗೂ ಕೂಡ ಕೋರ್ಟ್‌ ಸಮನ್ಸ್‌ ನೀಡಿದೆ. ತಾವೇ ಮಾಡಿದ ಆ ಎಡವಟ್ಟಿನಿಂದಾಗಿ ಇದೀಗ ದರ್ಶನ್‌ ದಂಪತಿಗೆ ಕಾನೂನು ಸಂಕಷ್ಟ ಎದುರಾಗಿದೆ. ದರ್ಶನ್‌ ಜಾಮೀನು ಪಡೆದ ನಂತರ ತಮ್ಮ ಮೈಸೂರಿನ ಫಾರ್ಮ್‌ ಹೌಸ್‌ನಲ್ಲಿ ಹಲವು ತಿಂಗಳ ಕಾಲ ವಿಶ್ರಾಂತಿ ಪಡೆದಿದ್ದರು. ಇದೀಗ ಮೈಸೂರು ಫಾರ್ಮ್‌ ಹೌಸ್‌ ವಿಚಾರವಾಗಿಯೇ ದರ್ಶನ್‌ ಹಾಗೂ ವಿಜಯಲಕ್ಷ್ಮಿ ಅವರಿಗೆ ಸಮನ್ಸ್‌ ಜಾರಿ ಮಾಡಲಾಗಿದೆ.

Court Summons Actor Darshan Thoogudeepa And Wife Vijayalakshmi In Mysuru Foreign Duck Case

ದರ್ಶನ್ ತಮ್ಮ ಫಾರ್ಮ್‌ ಹೌಸ್ನಲ್ಲಿ ಈಗಾಗಲೇ ಹಲವು ಪ್ರಾಣಿ ಪಕ್ಷಿಗಳನ್ನು ಸಾಕಿದ್ದಾರೆ. ಇದೇ ವಿಚಾರವಾಗಿ ಅವರು ಕಾನೂನು ಸಂಕಷ್ಟದಲ್ಲಿ ಸಿಲುಕಿದ್ದಾರೆ. ದರ್ಶನ್‌ ಅಲ್ಲಿ ವಿದೇಶಿ ತಳಿಯ ಬಾತುಕೋಳಿ ಸಾಕಿದ್ದ ಬಗ್ಗೆ ಈ ಹಿಂದೆ ಕೇಸ್‌ ದಾಖಲಾಗಿತ್ತು. ಇದೀಗ ಇದೇ ಕೇಸ್‌ ಸಂಬಂಧ ನ್ಯಾಯಾಲಯದಿಂದ ಸಮನ್ಸ್ ಜಾರಿಯಾಗಿದೆ.

ದರ್ಶನ್‌ ಅವರು ಬಾರ್‌ ಹೆಡೆಡ್‌ ಗೂಸ್‌ ಎನ್ನುವ ವಿದೇಶಿ ತಳಿಯ ಬಾತುಕೋಳಿಗಳನ್ನು ಸಾಕಿದ್ದರು. ಇದೇ ಆರೋಪದಲ್ಲಿ ಈ ಹಿಂದೆ ದರ್ಶನ್‌ ಅವರು ತೋಟದ ಮೇಲೆ ಅರಣ್ಯಾಧಿಕಾರಿಗಳು ದಾಳಿ ಕೂಡ ಮಾಡಿದ್ದರು. ಈ ವೇಳೆ ವಿದೇಶಿ ತಳಿಯ ಬಾತು ಕೋಳಿಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದೇ ಕೇಸ್‌ ವಿಚಾರಣೆಯು ಮೈಸೂರಿನ ಟಿ.‌ನರಸೀಪುರ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಇದೇ ಪ್ರಕರಣ ಸಂಬಂಧ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕೋರ್ಟ್‌ ಸಮನ್ಸ್ ಜಾರಿ ಮಾಡಿದೆ. ಮುಂದಿನ ಜುಲೈ 4ರಂದು ಖುದ್ದಾಗಿ ಕೋರ್ಟ್‌ಗೆ ಹಾಜರಾಗುವಂತೆ ಸಮನ್ಸ್‌ನಲ್ಲಿ ತಿಳಿಸಿದೆ.

Court Summons Actor Darshan Thoogudeepa And Wife Vijayalakshmi In Mysuru Foreign Duck Case

ಈ ಬಾರ್‌ ಹೆಡೆಡ್‌ ಗೂಸ್‌ ಬಾತುಕೋಳಿಗಳು ಹೆಚ್ಚಾಗಿ ಮಧ್ಯ ಏಷ್ಯಾ ಮೂಲದ ಪಕ್ಷಿಗಳಾಗಿವೆ. ಅಲ್ಲದೆ ಇವು ವಲಸೆ ಹಕ್ಕಿಗಳಾಗಿರುವ ಕಾರಣ ಇದನ್ನು ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧ ಎನ್ನಲಾಗಿದೆ. ಆದರೆ ದರ್ಶನ್‌ ಅವರು ಇವುಗಳನ್ನು ತಮ್ಮ ಫಾರ್ಮ್‌ಹೌಸ್‌ನಲ್ಲಿ ತಂದು ಸಾಕಿದ್ದರಿಂದ ಕೇಸ್‌ ದಾಖಲಿಸಿಕೊಂಡಿದ್ದರು. ಈ ಬಾತುಕೊಳಿಗಳನ್ನು ತನ್ನ ಸ್ನೇಹಿತರು ನೀಡಿದ್ದಾಗಿ ದರ್ಶನ್‌ ಅವರು ಸ್ಪಷ್ಟನೆಯೂ ನೀಡಿದ್ದರು. ಆದರೂ ಅಧಿಕಾರಿಗಳು ಬಾತುಕೋಳಿಗಳನ್ನು ವಶಕ್ಕೆ ಪಡೆದು ನಟ ದರ್ಶನ್ ವಿರುದ್ಧ ಕೇಸ್‌ ದಾಖಲಿಸಿಕೊಂಡಿದ್ದರು.

ಸಂದರ್ಶನವೊಂದರಲ್ಲಿ ದರ್ಶನ್‌ ಅವರು ತಮ್ಮ ಫಾರ್ಮ್‌ಹೌಸ್‌ನಲ್ಲಿರುವ ಪ್ರಾಣಿ, ಪಕ್ಷಿಗಳ ಬಗ್ಗೆ ವಿವರಿಸಿದ್ದರು. ಆಗ ಇದೇ ಬಾರ್‌ ಹೆಡೆಡ್‌ ಗೂಸ್‌ ಬಾತುಕೋಳಿಯ ಬಗ್ಗೆಯೂ ದರ್ಶನ್‌ ಮಾತನಾಡಿದ್ದರು. ಬಳಿಕ ಈ ವಿಚಾರ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದು ಫಾರಂ ಹೌಸ್‌ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಫಾರ್ಮ್‌ಹೌಸ್‌ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರ ಹೆಸರಿನಲ್ಲಿರುವುದರಿಂದ ಅವರಿಗೂ ಸಮನ್ಸ್‌ ಜಾರಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+