Thalapathy Vijay: ನಟ ದಳಪತಿ ವಿಜಯ್ ವಿರುದ್ಧ ದೂರು ದಾಖಲು, ಕಾರಣವೇನು?
ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ (Thalapathy Vijay) ವಿರುದ್ಧ ದೂರು ದಾಖಲಾಗಿದೆ. ವಿಜಯ್ ಅವರ ಬೌನ್ಸರ್‌ಗಳಿಂದ ಹಲ್ಲೆ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮಧುರೈನಲ್ಲಿ ನಡೆದ ವಿಜಯ್ ಅವರ ಟಿವಿಕೆ ಪಕ್ಷದ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದ್ದು, ಬೌನ್ಸರ್‌ಗಳಿಂದಾಗಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಆಗಸ್ಟ್ 20ರಂದು ಮಧುರೈ ಜಿಲ್ಲೆಯ ಪರಪತಿಯಲ್ಲಿ ನಡೆದ ತಮ್ಮ ಕಾರ್ಯಕ್ರಮದಿಂದಾಗಿ ನಟ ವಿಜಯ್ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.
ತಮಿಳಗ ವೆಟ್ರಿ ಕಳಗಂನ ಎರಡನೇ ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾಗ ಅವರ ಸಿಬ್ಬಂದಿ ಜನರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರಿನ ಪ್ರಕಾರ ಕೇಡರ್ ಶರತ್ ಕುಮಾರ್ ಅವರು ವಿಜಯ್ ನಡೆದುಕೊಂಡು ಹೋಗುತ್ತಿದ್ದ ರ‍್ಯಾಂಪ್ ಅನ್ನು ಹತ್ತಲು ಪ್ರಯತ್ನಿಸಿದರು. ಆದರೆ ನಟನ ಬೌನ್ಸರ್‌ಗಳು ಅವರನ್ನು ಹಿಂಸಾತ್ಮಕವಾಗಿ ಕೆಳಗೆ ತಳ್ಳಿದರು, ಇದರಿಂದಾಗಿ ಅವರ ಎದೆಗೆ ಗಾಯವಾಗಿದೆ ಎಂದು ದೂರಿದ್ದಾರೆ. ಈ ಸಂಬಂಧ ವಿಜಯ್ ಮತ್ತು ಅವರ ಬೌನ್ಸರ್‌ಗಳ ವಿರುದ್ಧ ಸೆಕ್ಷನ್ 189(2), 296(b), ಮತ್ತು 115ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೈರಲ್ ವಿಡಿಯೋದಲ್ಲೇನಿದೆ?
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನಟ ಮತ್ತು ಇತರ 10 ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ವಿಜಯ್ ವೇದಿಕೆ ಪ್ರವೇಶಿಸುತ್ತಿದ್ದಂತೆ ಅವರನ್ನು ಭೇಟಿಯಾಗಲು ಗೋಡೆ ಹತ್ತಲು ಪ್ರಯತ್ನಿಸುತ್ತಿದ್ದೆ. ಆದರೆ ನಟನ ಬೌನ್ಸರ್‌ಗಳು ಆ ವ್ಯಕ್ತಿಯನ್ನು ತಳ್ಳಿ ಬಿಸಾಡಿದರು. ನಟನ ಭದ್ರತಾ ಸಿಬ್ಬಂದಿ ಅವರನ್ನು ಹಿಂಸಾತ್ಮಕವಾಗಿ ಕೆಳಗೆ ಎಳೆದರು. ಇದರಿಂದಾಗಿ ಅವರು ಕೆಳಗೆ ಬಿದ್ದರು ಎಂದು ವ್ಯಕ್ತಿಯೊಬ್ಬರು ತಮ್ಮ ದೂರಿನಲ್ಲಿ ಹೇಳಿಕೊಂಡಿದ್ದಾರೆ. ವೈರಲ್ ವೀಡಿಯೊವೊಂದರಲ್ಲಿ ವಿಜಯ್ ಅವರ ಬೌನ್ಸರ್‌ಗಳು ಒಬ್ಬ ವ್ಯಕ್ತಿಯನ್ನು ವೇದಿಕೆಯಿಂದ ಎಸೆಯುವುದನ್ನು ತೋರಿಸಲಾಗಿದೆ. ಬಳಿಕ ನಟ ಅವರನ್ನು ಸುಮ್ಮನಿರಿ ಎಂದು ಮನವಿ ಮಾಡಿರುವುದು ಕಂಡುಬಂದಿದೆ.
ಪೆರಂಬಲೂರು ಜಿಲ್ಲಾ ಎಸ್‌ಪಿ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ. ಇದು ತಮಿಳಗ ವೆಟ್ರಿ ಕಳಗಂ ಪಕ್ಷದ ಎರಡನೇ ರಾಜ್ಯ ಸಮ್ಮೇಳನವಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಮತ್ತು ದಳಪತಿ ವಿಜಯ್ ಅವರನ್ನು ನೋಡಲು ಅಭಿಮಾನಿಗಳು ಮತ್ತು ಪಕ್ಷದ ಬೆಂಬಲಿಗರು ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದ್ದರು. ಆಗ ಈ ಘಟನೆ ಸಂಭವಿಸಿದೆ. ಇನ್ನು ದೂರು ದಾಖಲಾಗಿರುವ ಬಗ್ಗೆ ನಟ ವಿಜಯ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಮ್ಮೇಳನದಲ್ಲಿ ಮಾತನಾಡಿದ್ದ ವಿಜಯ್, ಮುಖ್ಯಮಂತ್ರಿ ಸ್ಟಾಲಿನ್ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಅಣಕಿಸಿದ್ದರು. "ಸ್ಟಾಲಿನ್ ಅಂಕಲ್, ಏನು ಅಂಕಲ್, ಇದು ತುಂಬಾ ತಪ್ಪು ಅಂಕಲ್ ಎಂದಿದ್ದರು. ಆಡಳಿತ ಪಕ್ಷವು ದುರಾಡಳಿತ, ಭ್ರಷ್ಟಾಚಾರ ಮತ್ತು ಮಹಿಳೆಯರು, ರೈತರು ಮತ್ತು ಸರ್ಕಾರಿ ನೌಕರರಿಗೆ ಚುನಾವಣಾ ಭರವಸೆಗಳನ್ನು ಈಡೇರಿಸದೆ ದ್ರೋಹ ಮಾಡಿದೆ ಎಂದು ವಿಜಯ್ ಆರೋಪಿಸಿದ್ದರು.
ಇನ್ನು ಸಿನಿಮಾಗೆ ಗುಡ್‌ಬೈ ಹೇಳಿ ವಿಜಯ್ ರಾಜಕೀಯ ಪ್ರವೇಶಿಸಿದ್ದು, ನಾನು ನನ್ನ ವೃತ್ತಿಜೀವನದ ಉತ್ತುಂಗವನ್ನು ಕೈಬಿಟ್ಟಿದ್ದೇನೆ, ಸಂಬಳವನ್ನು ಕೈಬಿಟ್ಟಿದ್ದೇನೆ. ನಿಮ್ಮೆಲ್ಲರ ಮೇಲೆ ನಂಬಿಕೆಯಿಟ್ಟು ನಾನು ನಿಮ್ಮ ವಿಜಯ್ ಆಗಿ ಇಲ್ಲಿದ್ದೇನೆ ಎಂದು ವಿಜಯ್ ರಾಜಕಾರಣಿಯಾಗಿ ಮಾತನಾಡಿದ್ದರು.












Click it and Unblock the Notifications