ಕೆಟ್ಟದಾಗಿ ನೋಡ್ತಿದ್ದ, ನಾನು ಸತ್ತರೆ ಅವನೇ ಕಾರಣ: ಹಾಸ್ಯನಟ ಅಪ್ಪಣ್ಣ ಮೇಲೂ ಗಂಭೀರ ಆರೋಪ

ನಟ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅವರ ಮೇಲೆ ಕಿರುತೆರೆ ನಟಿಯೊಬ್ಬರು ಅತ್ಯಾಚಾರ ದೂರು ದಾಖಲಿಸಿದ್ದಾರೆ. ಇದು ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಕೇಸ್‌ ವಿಚಾರಣೆ ಚುರುಕುಗೊಂಡಿದ್ದು, ಮನು ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ. ಇದೀಗ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮತ್ತೊಬ್ಬ ಹಾಸ್ಯ ಕಲಾವಿದನ ಮೇಲೂ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಆಡಿಯೋವೊಂದು ವೈರಲ್‌ ಆಗಿದ್ದು, ಹಾಸ್ಯ ನಟ ಅಪ್ಪಣ್ಣ ರಾಮದುರ್ಗ ಮೇಲೂ ಆ ಸಂತ್ರಸ್ತೆ ಆರೋಪ ಮಾಡಿದ್ದಾರೆ.

ವೈರಲ್‌ ಆಗಿರುವ ಆಡಿಯೋದಲ್ಲಿ ಹಾಸ್ಯ ನಟ ಅಪ್ಪಣ್ಣ ರಾಮದುರ್ಗ ಅವರ ಹೆಸರು ಕೂಡ ಕೇಳಿಬಂದಿದೆ. ʼಕಾಮಿಡಿ ಕಿಲಾಡಿಗಳು ಶೋನಲ್ಲಿ ಅಪ್ಪಣ್ಣ ರಾಮದುರ್ಗ ಅಂತ ಇದಾನೆ, ಅವರನು ಕಾಮಿಡಿ ಕಿಲಾಡಿಗಳು ಸೀಸನ್‌ ಎರಡರಿಂದಲೂ ನನಗೆ ಸಿಕ್ಕಾಪಟ್ಟೆ ಟಾರ್ಚರ್‌ ಕೊಡ್ತಿದ್ದಾನೆ. ಶೋಗಳಿಗೆ ಕರೆದುಕೊಂಡು ಹೋಗಿ ಕೆಟ್ಟ ದೃಷ್ಟಿಯಲ್ಲಿ ನೋಡೋದು ಎಲ್ಲ ಮಾಡ್ತಿದ್ದ. ತುಂಬಾ ದಿನಗಳವರೆಗೆ ಅವುಗಳಿಂದ ನಾನು ತಪ್ಪಿಸಿಕೊಂಡು ಬರುತ್ತಿದ್ದೆ. ಇತ್ತೀಚೆಗೆ ಅವನ ಕಾಟ ಹೆಚ್ಚಾಗಿದ್ದು, ನನಗೆ ಅವನ ಕಿರುಕುಳ ತಪ್ಪಿಲ್ಲʼ ಎಂದು ಯುವತಿ ಆರೋಪ ಮಾಡಿದ್ದಾರೆ.

Comedy Khiladigalu Fame Appanna Ramadurga Accused In Harassment Case Audio Viral

ʼಶೋಗೆ ಬಾ ಎಂದು ತುಂಬಾ ದಿನೇ ದಿನೇ ಕಾಟ ಕೊಡುತ್ತಲೇ ಇದ್ದಾನೆ. ಇದರಿಂದಾಗಿ ನನ್ನ ಬಾಯ್‌ಫ್ರೆಂಡ್‌ ಜೊತೆಗೂ ಬಿರುಕು ಮೂಡಿದೆ. ಕೊನೆಗೆ ಬ್ರೇಕ್‌ಅಪ್‌ ಕೂಡ ಆಗಿದ್ದು, ಇದಕ್ಕೆ ಕಾರಣ ಅಪ್ಪಣ್ಣ ಎಂದು ಯುವತಿಯೊಬ್ಬರು ಆರೋಪ ಮಾಡಿರುವುದು ಆಡಿಯೋದಲ್ಲಿದೆ. ನಾನೇನಾದ್ರೂ ಒಂದು ವೇಳೆ ಸೂಸೈಡ್‌ ಮಾಡಿಕೊಂಡು ಸತ್ತರೆ ಅದಕ್ಕೆ ಕಾರಣವೂ ಅಪ್ಪಣ್ಣ, ಅವನನ್ನ ಸುಮ್ಮನೆ ಬಿಡಬೇಡಿ. ಈ ಆಡಿಯೋ ಎಲ್ಲರಿಗೂ ಶೇರ್‌ ಮಾಡಿʼ ಎಂದೂ ಕಣ್ಣೀರು ಹಾಕಿದ್ದಾರೆ.

ಸ್ಪಷ್ಟನೆ ಕೊಟ್ಟ ಅಪ್ಪಣ್ಣ

ಆಡಿಯೋ ವೈರಲ್‌ ಆಗಿರುವ ಬಗ್ಗೆ ಹಾಸ್ಯ ಕಲಾವಿದ ಅಪ್ಪಣ್ಣ ರಾಮದುರ್ಗ ಸ್ಪಷ್ಟನೆ ನೀಡಿದ್ದಾರೆ. ಸಂತ್ರಸ್ತೆ ಮಾಡಿರುವ ಆರೋಪ ಸುಳ್ಳು, ಅವರಿಬ್ಬರ ಜಗಳದಲ್ಲಿ ನನ್ನ ಹೆಸರು ತರುತ್ತಿದ್ದಾರೆ. ಇದು ಒಂದೂವರೆ ವರ್ಷದ ಹಿಂದಿನ ಹಳೆಯ ಆಡಿಯೋ‌. ನನ್ನ ಜೊತೆ ಶೋ ಮಾಡಬಾರದು ಎಂದು ಮನು ಮಾಡಿಸಿರುವ ಆಡಿಯೋ ಇದು. ಇದರ ಬಗ್ಗೆ ಸಂತ್ರಸ್ತೆ ನನ್ನ ಬಳಿ ಹೇಳಿಕೊಂಡಿದ್ರು. ನಮ್ಮನ್ನು ದೂರ ಇಡಲು ಮನು ಮಾಡಿಸಿರುವ ಆಡಿಯೋ ಇದು‌. ನಾನು ಆಕೆಗೆ ಯಾವುದೇ ಕಿರುಕುಳ ನೀಡಿಲ್ಲ. ಸಂತ್ರಸ್ತೆಯ ಬಳಿಯ ಇದರ ಬಗ್ಗೆ ಮಾಹಿತಿ ಸಿಗುತ್ತೆ ಎಂದು ಅಪ್ಪಣ್ಣ ಸ್ಪಷ್ಟನೆ ನೀಡಿದ್ದಾರೆ.

Comedy Khiladigalu Fame Appanna Ramadurga Accused In Harassment Case Audio Viral

ಅತ್ಯಾಚಾರ ಕೇಸ್‌ನಲ್ಲಿ ಕಾಮಿಡಿ ಕಿಲಾಡಿಗಳು ನಟ ಮಡೆನೂರು ಮನು ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದ ತನಿಖೆ ಜೋರಾಗಿರುವ ನಡುವೆಯೇ ಅಪ್ಪಣ್ಣ ವಿರುದ್ಧವೂ ಈ ಆರೋಪ ಕೇಳಿಬಂದಿದೆ. ಅಪ್ಪಣ್ಣ ಅವರು ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ಗುರುತಿಸಿಕೊಂಡಿದ್ದರು. ಬಳಿಕ ಡಿಯರ್ ಸತ್ಯ, ರಾಮಾರ್ಜುನ, ಪೈಲ್ವಾನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಅವರ ಮೇಲೂ ಗಂಭೀರ ಆರೋಪಗಳು ಸಂಚಲನ ಸೃಷ್ಟಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+