ನಟ ವಿಜಯ್‌ ರಾಘವೇಂದ್ರ 2ನೇ ಮದುವೆ ಬಗ್ಗೆ ತಂದೆ ಚಿನ್ನೇಗೌಡ ಅಚ್ಚರಿ ಹೇಳಿಕೆ

ನಟ ವಿಜಯ್‌ ರಾಘವೇಂದ್ರ ಅವರ ಪತ್ನಿ ಸ್ಪಂದನಾ 2023ರ ಆಗಸ್ಟ್‌ನಲ್ಲಿ ಬ್ಯಾಕಾಂಕ್‌ ಪ್ರವಾಸದಲ್ಲಿದ್ದಾಗ ಹೃದಯಾಘಾತದಿಂದ ನಿಧನರಾದರು. ಬಳಿಕ ವಿಜಯ್‌ ರಾಘವೇಂದ್ರ ಅವರು ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೂಡ ಹರಿದಾಡಿತ್ತು. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ವಿಜಯ್‌, ಎರಡನೇ ಮದುವೆಯ ಯಾವ ಉದ್ದೇಶವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ವಿಜಯ್‌ ಅವರ ತಂದೆ ಚಿನ್ನೇಗೌಡ ಅವರು ಮಗನ ಎರಡನೇ ಮದುವೆ ಬಗ್ಗೆ ಅಚ್ಚರಿಯ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ನೆಲಮುಗಿಲು ಟಿವಿ ಯುಟ್ಯೂಬ್ ಸಂದರ್ಶನದಲ್ಲಿ ಚಿನ್ನೇಗೌಡ ಅವರು ವಿಜಯ್‌ ಅವರ ಎರಡನೇ ಮದುವೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. 'ವಿಜಯ್‌ ರಾಘವೇಂದ್ರ ಹಸಿಗೂಸಿನಂತಹ ವ್ಯಕ್ತಿ. ವಿಜಯ್‌ಗೆ ಗುಲಾಬಿ ಅಂದ್ರೆ ಸ್ವಲ್ಪ ಭಯ. ಮುರುಳಿ ಚಿಕ್ಕಂದಿನಿಂದಲೂ ಗುಲಾಬಿ ತೋರಿಸಿ, ಹೆದರಿಸಿ ವಿಜಯ್‌ ಬಳಿ ಇರುವ ವಸ್ತುಗಳನ್ನು ತಗೋತಿದ್ದ' ಎಂದು ಪುತ್ರನ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ.

Chinne Gowda Opens Up About Son Vijay Raghavendra Second Marriage

'ವಿಜಯ್‌ ರಾಘವೇಂದ್ರ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ಕೊಲ್ಲೂರು ಮೂಕಾಂಬಿಕೆ ಸಿನಿಮಾ ತೆಗೆಯುತ್ತಿದ್ದರು. ಅದರಲ್ಲಿ ಶಂಕರಾಚಾರ್ಯ ಪಾತ್ರ ಮಾಡಲು ವಿಜಯ್‌ಗೆ ಕೇಳಿದ್ರು. ಅದಕ್ಕೆ ಅವನು ಒಪ್ಪಿಕೊಂಡ. ಮುಡಿ ಕೊಡಲು ಸಹ ಒಪ್ಪಿದ. ಆ ಭಗವಂತ, ಶಂಕರಾಚಾರ್ಯ ಆಶೀರ್ವಾದ ಅಲ್ಲಿಂದ ವಿಜಯ್‌ ರಾಘವೇಂದ್ರ ಬೆಳೆದು ಇಂದು ಈ ಮಟ್ಟಕ್ಕೆ ಬಂದಿದ್ದಾನೆ' ಎಂದು ಸಂತಸ ಹಂಚಿಕೊಂಡಿದ್ದಾರೆ.

'ಸ್ಪಂದನಾ ಮನೆಯವರಿಂದಲೂ 2ನೇ ಮದುವೆ ಸಲಹೆ'

'ವಿಜಯ್‌ ರಾಘವೇಂದ್ರನಿಗೆ ಕೆಟ್ಟ ಕನಸು ಎನ್ನುವಂತೆ ಪತ್ನಿ ಸ್ಪಂದನಾ ಅಲ್ಪಕಾಲದಲ್ಲೇ ಮರಣ ಹೊಂದಿದಳು. ನಾನು ಎರಡನೇ ಮದುವೆ ಬಗ್ಗೆ ಸಾಕಷ್ಟು ಪ್ರಯತ್ನ ಮಾಡಿದೆ. ಅವನು ಒಪ್ಪುತ್ತಿಲ್ಲ. ಮಗ ಪಿಯುಸಿ ಓದುತ್ತಿದ್ದಾನೆ. ಈಗಲೂ ಅವನಾಯ್ತು, ಅವನ ಕೆಲಸ ಆಯ್ತು ಅಂತ ಇದ್ದಾನೆ. ಯಾರ ತಂಟೆಗೂ ಬರೋದಿಲ್ಲ, ಏನು ಕೆಲಸ ಕೊಟ್ಟರೂ ಮಾಡಿಕೊಂಡಿರುತ್ತಾನೆ. ಅದನ್ನ ನೋಡಿದ್ರೆ ನನಗೆ ಖುಷಿಯಾಗುತ್ತೆ' ಎಂದು ಚಿನ್ನೇಗೌಡರು ಹೇಳಿದ್ದಾರೆ.

'ಹೆತ್ತ ಕರುಳಿಗೆ ತುಂಬಾ ನೋವಾಗುತ್ತೆ. ಚಿಕ್ಕ ವಯಸ್ಸಿಗೆ ವಿಜಯ್‌ ಹೆಂಡತಿಯನ್ನು ಕಳೆದುಕೊಂಡ, ಏನಪ್ಪ ಮುಂದೆ ಗತಿ ಅನ್ನೋ ಚಿಂತೆ ಇದ್ದೇ ಇರುತ್ತೆ. ವಿಜಯ್‌ ಅವರ ಅತ್ತೆ-ಮಾವ ಕೂಡ ಎರಡನೇ ಮದುವೆ ಆಗುವಂತೆ ಅವನಿಗೆ ಸಲಹೆ ಕೊಡುತ್ತಿದ್ದಾರೆ. ಆದರೆ, ವಿಜಯ್‌ ಅದಕ್ಕೆ ಒಪ್ಪುತ್ತಿಲ್ಲ. ನನ್ನ ಹೆಂಡತಿಯಾಗಿ ಆ ಸ್ಥಾನ ತುಂಬಲು ಬೇರೆ ಯಾರಿಂದಲೂ ಸಾಧ್ಯವಿಲ್ಲ ಅಂತಾನೆ' ಎಂದು ಚಿನ್ನೇಗೌಡ ಬಹಿರಂಗಪಡಿಸಿದ್ದಾರೆ.

ಎರಡನೇ ಮದುವೆ ವದಂತಿಗಳ ಬಗ್ಗೆ ಮಾತನಾಡಿದ್ದ ವಿಜಯ್‌ ರಾಘವೇಂದ್ರ, 'ಈ ವದಂತಿಗಳಿಗೆ ನಾನು ಸ್ಪಷ್ಟೀಕರಣ ಕೊಡುವುದು ಇಷ್ಟವಿಲ್ಲ. ಇಂತಹ ವಿಚಾರಗಳಿಂದ ತುಂಬಾ ಹಿಂಸೆಯಾಗುತ್ತೆ. ನಾನು ಎರಡನೇ ಮದುವೆ ಬಗ್ಗೆ ಯಾವುದೇ ಮಾತು ಆಡಿಲ್ಲ. ಇದರ ಹಿಂದೆ ಯಾವ ಸತ್ಯವೂ ಇಲ್ಲ. ಎರಡನೇ ಮದುವೆ ನಡೆಯುವುದೂ ಇಲ್ಲ. ನನ್ನ ಬದುಕಿನಲ್ಲಿ ಈಗ ಮತ್ತೊಂದು ಮದುವೆ ಅನ್ನೋದಾಗಲಿ, ಇನ್ನೊಬ್ಬರನ್ನ ನನ್ನ ಬದುಕಲ್ಲಿ ಬರಮಾಡಿಕೊಳ್ಳುವುದೂ ಇಲ್ಲ. ಅದು ಆಗದೇ ಇರುವ ಕೆಲಸ' ಎಂದು ಸ್ಪಷ್ಟಪಡಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+