ವಿಚ್ಛೇದನ ಬಳಿಕವೂ ಜಂಟಿಯಾಗಿ ಸುದ್ದಿಗೋಷ್ಠಿ ಕರೆದ ಚಂದನ್ ಶೆಟ್ಟಿ-ನಿವೇದಿತಾ
ಇತ್ತೀಚೆಗಷ್ಟೇ ಬಿಗ್‌ಬಾಸ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ವಿಚ್ಛೇದನ ನೀಡಿದ್ದರು. ಆದರೂ ಈ ವಿಚಾರ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆಯೇ ಈ ಇಬ್ಬರು ಒಟ್ಟಿಗೆ ಸುದ್ದಿಗೋಷ್ಠಿ ಕರೆದಿದ್ದು, ಭಾರೀ ಕುತೂಹಲ ಸೃಷ್ಟಿಸಿದೆ. ಹಾಗಾದರೆ ಪತ್ರಿಕಾಗೋಷ್ಠಿ ಎಲ್ಲಿ ನಡೆಯಲಿದೆ ಹಾಗೂ ಸಮಯದ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನದ ವಿಚಾರ ಎಲ್ಲೆಡೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಳೆದ ಒಂದು ವರ್ಷಗಳಿಂದ ಇವರು ಈ ಬಗ್ಗೆ ಚರ್ಚೆ ಮಾಡುತ್ತಿದ್ದರು. ಆದರೆ ಎಲ್ಲಿಯೂ ಸುದ್ದಿಯಾಗದಂತೆ ನೋಡಿಕೊಂಡಿದ್ದರು. ಇದೀಗ ದಿಢೀರ್ ವಿಚ್ಛೇದನದವರೆಗೂ ಹೋಗಿದ್ದು, ಅಭಿಮಾನಿಗಳಿಗೆ ಅಚ್ಚರಿ ಆಗುವಂತೆ ಮಾಡಿದೆ. ಅಲ್ಲದೆ, ಸಾಮಾಜಿ ಜಾಲತಾಣಗಳಿದಂಲೂ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದು, ಇದೀಗ ಇಬ್ಬರೂ ಜಂಟಿ ಸುದ್ದಿಗೋಷ್ಠಿ ಕರೆದಿದ್ದಾರೆ. ಈ ಮೂಲಕ ಹಲವು ವದಂತಿಗಳಿಗೆ ತೆರೆ ಎಳೆಯಲಿದ್ದಾರೆ ಎನ್ನಲಾಗಿದೆ.

ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ನಿವೇದಿತಾ ದಾಂಪತ್ಯಕ್ಕೆ ಕಾಲಿಟ್ಟು ನಾಲ್ಕು ವರ್ಷ ಆಗಿದ್ದು, ಇವರು ಯಾವುದೇ ಕಲಹಗಳಿಲ್ಲದೇ ಸಂಸಾರ ಸಾಗಿಸಿಕೊಂಡು ಹೋಗುತ್ತಿದ್ದರು. ಆದರೆ ಏನಾಯ್ತೋ ಏನೋ.. ಇವರು ವಿಚ್ಛೇದನದವರೆಗೂ ಹೋಗಿದ್ದು, ಇದಕ್ಕೆ ಕಾರಣ ಏನೆಂದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಹಲವು ರೀತಿಯಲ್ಲಿ ವದಂತಿಗಳು ಎದ್ದಿದ್ದು, ಈ ಹಿನ್ನೆಲೆ ಇದಕ್ಕೆಲ್ಲ ತೆರೆ ಎಳೆಯಲು ಇಬ್ಬರು ಒಟ್ಟಿಗೆ ಸುದ್ದಿಗೋಷ್ಠಿ ನಡೆಸಲು ಮುಂದಾಗಿದ್ದಾರೆ.
ಬೆಂಗಳೂರಿನ ಜಿಟಿ ಮಾಲ್‌ನಲ್ಲಿರುವ ಎಂಬಿ ಲೆಗಸಿಯಲ್ಲಿ ಇಂದು (ಜೂನ್ 10) ಮಧ್ಯಾಹ್ನ 3:30ಕ್ಕೆ ಸುದ್ದಿಗೋಷ್ಠಿ ಆರಂಭವಾಗಲಿದ್ದು, ಈ ವೇಳೆ ಯಾವೆಲ್ಲ ವಿಚಾರಗಳ ಬಗ್ಗೆ ಮಾತನಾಡುತ್ತಾರೆ ಎನ್ನುವುದೇ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ.
ಮಗು ಪಡೆಯಲು ಒಪ್ಪಿಗೆ ಇಲ್ಲದಿದ್ದರಿಂದ ನಿವೇದಿತಾ ಗೌಡ ಅವರು ವಿಚ್ಛೇದನ ಪಡೆದರು, ನಟಿಯಾಗಿ ಮುಂದುವರೆಯಬೇಕು ಎಂದು ಗಂಡನಿಂದ ದೂರ ಆಗುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಇನ್ನು ಇದೀಗ ಇದಕ್ಕೆಲ್ಲ ಸುದ್ದಿಗೋಷ್ಠಿಯಲ್ಲಿ ಇವರು ಸ್ಪಷ್ಟನೆ ಕೊಡಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.












Click it and Unblock the Notifications