ಡಿ-ಬಾಸ್ ದರ್ಶನ್ ‘ನಾನು ಬ್ಯಾಡ್ ಬಾಯ್’ ಅಂತಾ ಹೇಳಿದ್ದು ಯಾಕೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿನ್ನೆ ತಮ್ಮ ಶತ್ರು ಪಡೆಗೆ ನೇರ ನೇರವಾಗಿ ವಾರ್ನ್ ಮಾಡಿದ್ದಾರೆ. ಅದರಲ್ಲೂ ತಾವು ಸಿನಿಮಾ ರಂಗದಲ್ಲಿ 25 ವರ್ಷದಿಂದಲೂ ಗೆದ್ದು, ಹಂತ ಹಂತವಾಗಿ ಮೇಲೆ ಬರುವಾಗ ಎಷ್ಟೆಲ್ಲಾ ಕಷ್ಟ ಅನುಭವಿಸಿದ್ದರು, ಅನ್ನೋ ವಿಚಾರಗಳನ್ನು ಚಾಚೂ ತಪ್ಪದೆ ತಿಳಿಸಿದ್ದಾರೆ. ಇದೇ ವೇಳೆ 'ನಾನು ಬ್ಯಾಡ್ ಬಾಯ್' ಅಂತಾನೂ ಹೇಳಿ, ತಮ್ಮ ವಿರೋಧಿಗಳಿಗೆ 'ಡಿ-ಬಾಸ್' ದರ್ಶನ್ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ! ಹಾಗಾದರೆ ದರ್ಶನ್ ಅವರು ಹೇಳಿದ್ದೇನು, ಆ ವಿಡಿಯೋ ನೋಡಲು ಮುಂದೆ ಓದಿ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಅಖಾಡದಲ್ಲಿ ಮಾತ್ರ ಶತ್ರುಗಳನ್ನ ಪುಡಿ ಪುಡಿ ಮಾಡಿಲ್ಲ ನಿಜ ಬದುಕಿನಲ್ಲಿ ಕೂಡ ಸಾಕಷ್ಟು ಶತ್ರುಗಳ ಎದುರಿಸಿದ್ದಾರೆ. ಆದರೆ ಈಗಲೂ ಅವರಿಗೆ ಶತ್ರುಗಳ ಕಾಟ ಕಡಿಮೆ ಆಗಿಲ್ಲ. ಈ ಮಾತಿಗೆಲ್ಲ ಸಾಕ್ಷಿ ಎನ್ನುವಂತೆ 'ಕಾಟೇರ' ಸಿನಿಮಾ ಸಕ್ಸಸ್ ಬೆನ್ನಲ್ಲೇ ನಟ ದರ್ಶನ್ ಅವರು ಹಲವು ವಿವಾದದಲ್ಲಿ ಸಿಲುಕುವ ವಾತಾವರಣ ಸೃಷ್ಟಿಯಾಗಿತ್ತು. ಆದರೆ ವಿರೋಧಿಗಳ ಮಸಲತ್ತನ್ನು ಅವರು ಸೂಕ್ತವಾಗಿ ಎದುರಿಸಿದರು. ಅಷ್ಟೇ ಅಲ್ಲ ಇದೀಗ ತಮ್ಮ ವಿರೋಧಿಗಳಿಗೆ ಪರೋಕ್ಷವಾಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ, ಈ ಕುರಿತು ನಟ ದರ್ಶನ್ ಅವರು ಮಾತನಾಡಿರುವ ವಿಡಿಯೋ ನೋಡೋದಕ್ಕೆ ಮುಂದೆ ಓದಿ.

ಶತ್ರುಗಳಿಗೆ ಡಿ-ಬಾಸ್ ಖಡಕ್ ವಾರ್ನ್!
ನಟ ದರ್ಶನ್ ಜೀವನದಲ್ಲಿ ಸಾಕಷ್ಟು ಕಷ್ಟ ಎದುರಿಸಿ ಮೇಲೆ ಬಂದಿದ್ದಾರೆ ಇಡೀ ಕರ್ನಾಟಕದಲ್ಲಿ ಕೋಟ್ಯಂತರ ಅಭಿಮಾನಿಗಳನ್ನ ನಟ ದರ್ಶನ್ ಅವ್ರು ಗಳಿಸಿದ್ದಾರೆ. ಈ ರೀತಿ, ಹೊರ ರಾಜ್ಯದಲ್ಲಿ ಕೂಡ ನಟ ದರ್ಶನ್ ಅವರಿಗೆ ದೊಡ್ಡ ಪ್ರಮಾಣದಲ್ಲಿ ಅಭಿಮಾನಿ ಬಳಗ ಇದೆ. ಹೀಗಿದ್ದಾಗ ನಟ ದರ್ಶನ್ ಅವರ 'ಕಾಟೇರ' ಸಿನ್ಮಾ ದೊಡ್ಡ ಮಟ್ಟಿಗಿನ ಸಕ್ಸಸ್ ಕಂಡು, 200 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಈ ಸಂಭ್ರಮದ ನಡುವೆ ದರ್ಶನ್ ಅವರು ಕನ್ನಡ ಸಿನಿಮಾ ರಂಗದಲ್ಲಿ ಒಟ್ಟು 25 ವರ್ಷ ಪೂರೈಸಿದ್ದು, ಇದೇ ಸಮಯದಲ್ಲಿ ಅವರು ತಮ್ಮ ವಿರುದ್ಧ ಬಂದ ವಿವಾದಗಳ ಬಗ್ಗೆ ಅಂದ್ರೆ ಕಾಂಟ್ರವರ್ಸಿ ಬಗ್ಗೆ ಮಾತನಾಡಿದ್ದಾರೆ. ವಿಡಿಯೋಗಾಗಿ ಮುಂದೆ ನೋಡಿ.
ನೀರು ಕುತ್ತಿಗೆ ತನಕ ಬಂದಾಗ..
ಹೌದು, ನಟ ದರ್ಶನ್ ಅವರು ನಿನ್ನೆ ತಮ್ಮ ಕೋಟ್ಯಂತರ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಆಗ ತಮ್ಮ ವಿರುದ್ಧದ ವಿವಾದಗಳನ್ನ ವಿವರಿಸಲು ಒಂದು ಉದಾಹರಣೆ ನೀಡಿದ ಅವರು, ನೀರು ಕುತ್ತಿಗೆ ತನಕ ಬಂದರೂ ಸಹಿಸಬಹುದು. ಆದರೆ ಕುತ್ತಿಗೆ ದಾಟಿ, ಮುಖಕ್ಕೆ ಬಂದಾಗ ನಾವು ಬದುಕಲೇಬೇಕು. ನನಗೂ ಹಂಗೆ ಮಾಡಿದ್ದಾಗ ಕೋಪ ಬಂದಿದೆ. ನಂಗೆ ಏನ್ ಹೇಳಿದ್ರೂ ನಾನು ತಲೆ ಕೆಡಿಸಿಕೊಳ್ಳೋದಿಲ್ಲ. ನನಗೆ ನನ್ನ ಸಿನಿಮಾ & ಫ್ಯಾನ್ಸ್ ಸಾಕು ಎಂದಿದ್ದಾರೆ ನಟ ದರ್ಶನ್. ಹಾಗೆಯೇ ತಮ್ಮನ್ನು ತಾವೇ 'ನಾನು ಬ್ಯಾಡ್ ಬಾಯ್' ಅಂತಾನೂ ಹೇಳಿದ್ದಾರೆ. ಈ ಮೂಲಕ ಯಾರಿಗೂ ನಾನು ಕೇರ್ ಮಾಡಲ್ಲ ಅಂತಾ ವಿರೋಧಿ ಪಡೆಗೆ ಎಚ್ಚರಿಕೆ ನೀಡಿದ್ದಾರೆ ಡಿ-ಬಾಸ್ ದರ್ಶನ್.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾಗಳು ಅಂದ್ರೆ ದೊಡ್ಡ ಮಟ್ಟಿಗಿನ ಹೈಪ್ ಇರುತ್ತೆ & ಅಭಿಮಾನಿಗಳು ಕೂಡ ಸಿಕ್ಕಾಪಟ್ಟೆ ಕಾಯ್ತಾರೆ. ಅದೇ ರೀತಿ ಕಾಟೇರ ಸಿನಿಮಾ ಕೂಡ ತುಂಬಾನೇ ಅಂದ್ರೆ ತುಂಬಾನೆ ನಿರೀಕ್ಷೆ ಹೊತ್ತು ಅಖಾಡಕ್ಕೆ ಎಂಟ್ರಿ ಕೊಟ್ಟಿತ್ತು. ನಿರೀಕ್ಷೆ ಮೀರಿಸಿದ್ದ ಸಿನಿಮಾ ಗುರಿ ಮುಟ್ಟಿದೆ. 200 ಕೋಟಿ ರೂಪಾಯಿ ಕ್ಲಬ್ ಕೂಡ ಸೇರಿದೆ. ಈ ವೇಳೆ ನಟ ದರ್ಶನ್ ಅವರು ತಮ್ಮ ಜೀವನದ ಘಟನೆಗಳನ್ನ ಮೆಲುಕು ಹಾಕಿಕೊಂಡು, ಅಭಿಮಾನಿಗಳಿಗೆ ವಂದಿಸಿದ್ದಾರೆ. ನಟ ದರ್ಶನ್ ಅವರ ಈ ನೇರ ನುಡಿಗಳಿಗೆ ಅಭಿಮಾನಿಗಳು ಫುಲ್ ಬೆಂಬಲ ನೀಡುತ್ತಿದ್ದಾರೆ.












Click it and Unblock the Notifications