‘ಡಿ-ಬಾಸ್’ ದರ್ಶನ್ ಅಭಿಮಾನಿಗಳ ಬಳಿ ಮನವಿ ಮಾಡಿದ್ದು ಏಕೆ?
ನಟ ದರ್ಶನ್ ಅವರ ಅಭಿಮಾನಿಗಳಿಗೆ ಇದೀಗ ಡಬಲ್ ಸಂಭ್ರಮ, ಒಂದು ಕಡೆ ದರ್ಶನ್‌ರ ಸಿನಿಮಾ 'ಕಾಟೇರ' ಭರ್ಜರಿ ಸಕ್ಸಸ್ ಕಂಡಿದೆ. ಇನ್ನೊಂದ್ಕಡೆ ದರ್ಶನ್ ಅವರ ಬರ್ತ್ ಡೇ ಕೂಡ ಹತ್ತಿರದಲ್ಲೇ ಇದೆ. ಹೀಗಾಗಿ ಅಭಿಮಾನಿಗಳು ಸಂಭ್ರಮದಿಂದ, ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಆಚರಿಸಲು ಸಕಲ ಸಿದ್ಧತೆ ನಡೆಸಿದ್ದರು. ಆದರೆ ಈಗ ದಾಸ ದರ್ಶನ್ ಅವರು ತಮ್ಮ ಅಭಿಮಾನಿಗಳ ಬಳಿ ಮಹತ್ವದ ಮನವಿ ಮಾಡಿದ್ದಾರೆ.
ಅಂದಹಾಗೆ ನಟ ದರ್ಶನ್ ಅವರು ತಮ್ಮ ಅಭಿಮಾನಿಗಳನ್ನು, ಪ್ರೀತಿಯಿಂದ ಸೆಲೆಬ್ರಿಟೀಸ್ ಅಂತಾ ಕರೆಯುತ್ತಾರೆ. ಬೇರೆ ನಟರಿಗೆ ಹೋಲಿಕೆ ಮಾಡಿದರೆ ನಟ ದರ್ಶನ್ ಹಾಗೂ ಅವರ ಅಭಿಮಾನಿಗಳ ನಡುವೆ ಬಾಂಡಿಂಗ್ ತುಂಬಾ ಚೆನ್ನಾಗಿದೆ. ಹೀಗಾಗಿಯೇ ನಟ ದರ್ಶನ್‌ರನ್ನ ಕಂಡರೆ ಫ್ಯಾನ್ಸ್‌ಗೆ ಅತೀವ ಪ್ರೀತಿ & ಗೌರವ. ಹೀಗಿದ್ದಾಗ ಇನ್ನೇನು ದರ್ಶನ್ ಅವರ ಬರ್ತ್ ಡೇ ಕೂಡ ಬರುತ್ತಿದ್ದು, ಹುಟ್ಟು ಹಬ್ಬವನ್ನ ಅತ್ಯಂತ ಸಂಭ್ರಮದಿಂದ ಆಚರಿಸಲು ಇದೀಗ ಅವರ ಅಭಿಮಾನಿಗಳು ಸಿದ್ಧತೆ ನಡೆಸಿದ್ದರು. ಆದ್ರೆ ನಟ ದರ್ಶನ್ ಅವರು ಅಭಿಮಾನಿಗಳಿಗೆ ಹೇಳಿದ್ದು ಏನು ಗೊತ್ತಾ?

ದಯವಿಟ್ಟು ಈ ಕೆಲಸ ಮಾಡಬೇಡಿ!
ಹೌದು, ತಮ್ಮ ಹುಟ್ಟುಹಬ್ಬ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು ಈಗ ತಮ್ಮ ಅಭಿಮಾನಿಗಳ ಬಳಿ ಮನವಿ ಒಂದನ್ನ ಮಾಡಿದ್ದಾರೆ. ಅದು ಸಮಾಜಕ್ಕೂ ಉತ್ತಮ ಸಂದೇಶ ನೀಡಿದಂತೆ ಇದೆ. ಈ ಮೂಲಕ ನಟ ದರ್ಶನ್ ಅವರು ಅಭಿಮಾನಿಗಳ ಹೃದಯಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ. ಹಾಗಾದರೆ ಈಗ ನಟ ದರ್ಶನ್ ಅವರು ಹೇಳಿದ್ದಾದ್ರು ಏನು? ಆ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ಅಭಿಮಾನಿಗಳೇ ಇಲ್ಲಿ ಕೇಳಿ...
'ಬ್ಯಾನರ್, ಕೇಕ್ & ಹಾರಗಳನ್ನ ದಯಮಾಡಿ ತರಬೇಡಿ. ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ, ಬೇಳೆ, ಸಕ್ಕರೆ ಹಾಗೂ ಇತರ ದವಸ ಧಾನ್ಯಗಳನ್ನು ದಾನ ನೀಡಿ. ಅದನ್ನು ಒಗ್ಗೂಡಿಸಿ ಸೇರಿಸಬೇಕಾದ ಅನಾಥಾಶ್ರಮ ವೃದ್ಧಾಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು. ಈ ಸಂಭ್ರಮಾಚರಣೆಯ ಸಂದರ್ಭದಲ್ಲಿ ನಮ್ಮ ಮನೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ನಿಮ್ಮಿಂದ ತೊಂದರೆಯಾಗುವುದು, ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು, ಹೂವು ಕುಂಡಗಳನ್ನು ಬೀಳಿಸುವುದು ಹಾಗೂ ಅವರ ಸ್ವತ್ತುಗಳಿಗೆ ಹಾನಿ ಮಾಡುವುದು ಇಂತಹ ಅನುಚಿತ ವರ್ತನೆ ನಡೆಯಬಾರದು.'

'ನನ್ನ ಬಗ್ಗೆ ಇಷ್ಟೆಲ್ಲ ಪ್ರೀತಿ ಅಭಿಮಾನ ಇಟ್ಟಿರುವ ನೀವೆಲ್ಲ ಈ ನನ್ನ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ. ಹಾಗು ಸಂಘದ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿ ವರ್ಗದವರಿಗೆ ಸಹಕರಿಸಬೇಕೆಂದು ವಿನಂತಿಸುತ್ತೇನೆ.' ಎಂದು ತಮ್ಮ ಅಭಿಮಾನಿಗಳ ಬಳಿ ನಟ ದರ್ಶನ್ ಅವರು ಇದೀಗ ಮನವಿ ಮಾಡಿದ್ದಾರಂತೆ. ಈ ಬಗ್ಗೆ ಪೋಸ್ಟರ್ ಕೂಡ ವೈರಲ್ ಆಗುತ್ತಿದೆ. ಆದರೂ ಇದು ಅಧಿಕೃತವೋ, ಅಥವಾ ಅಭಿಮಾನಿಗಳೇ ಮಾಡಿರುವ ಪೋಸ್ಟರೋ? ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
200 ಕೋಟಿ ಕ್ಲಬ್‌ಗೆ ಕಾಟೇರ
ಕಾಟೇರ ಸಿನಿಮಾ ಅಬ್ಬರಿಸಿದೆ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಯಾವುದೇ ಸಿನಿಮಾ ಈ ತನಕ ಮಾಡದ ಸಾಧನೆ ಮಾಡಿದೆ. ಕನ್ನಡ ಭಾಷೆಯಲ್ಲಿ ಮಾತ್ರ ರಿಲೀಸ್ ಆಗಿದ್ದ 'ಕಾಟೇರ' ಬರೋಬ್ಬರಿ 200 ಕೋಟಿ ಕ್ಲಬ್‌ಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಈ ಮೂಲಕ ಕನ್ನಡ ಸಿನಿಮಾ ಜಗತ್ತಿನ ತಾಕತ್ತು ಈಗ ಇಡೀ ಜಗತ್ತಿಗೆ ಗೊತ್ತಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಅಂದ್ರೆ ದೊಡ್ಡ ಮಟ್ಟಿಗೆ ಹೈಪ್ ಇರುತ್ತೆ ಫ್ಯಾನ್ಸ್ ಕೂಡ ಕಾಯ್ತಾರೆ. ಅದೇ ರೀತಿ ಕಾಟೇರ ಕೂಡ ತುಂಬಾ ಅಂದ್ರೆ ತುಂಬಾ ನಿರೀಕ್ಷೆ ಹೊತ್ತು ಅಖಾಡಕ್ಕೆ ಬಂದಿತ್ತು. ನಿರೀಕ್ಷೆಗಳನ್ನ ಮೀರಿಸಿ ಗುರಿ ಮುಟ್ಟಿದೆ. 200 ಕೋಟಿ ರೂ. ಕ್ಲಬ್‌ಗೆ ಸೇರಿದೆ ಕಾಟೇರ. ಇದೇ ಸಮಯದಲ್ಲಿ ದರ್ಶನ್ ಅವರ ಹುಟ್ಟುಹಬ್ಬ ಕೂಡ ಬರುತ್ತಿದ್ದು ಹೀಗಾಗಿ ಸಂಭ್ರಮ ಡಬಲ್ ಆಗಿದೆ.












Click it and Unblock the Notifications