ದರ್ಶನ್‌ಗೆ ಹೆಚ್ಚಾಯ್ತಾ ಶತ್ರುಗಳ ಕಾಟ? ಬಾರ್ ಪಾರ್ಟಿ ಬಗ್ಗೆ ಫಿಟ್ಟಿಂಗ್ ಇಟ್ಟಿದ್ದು ಯಾರು?
ಕನ್ನಡಿಗರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಿನಿಮಾ ಅಖಾಡದಲ್ಲಿ ಮಾತ್ರ ಶತ್ರುಗಳನ್ನ ಪುಡಿ ಪುಡಿ ಮಾಡಿಲ್ಲ, ನಿಜ ಬದುಕಿನಲ್ಲಿ ಕೂಡ ಸಾಕಷ್ಟು ಶತ್ರುಗಳನ್ನ ಅವರು ಎದುರಿಸಿದ್ದಾರೆ. ಆದರೆ ಈಗಲೂ ಅವರಿಗೆ ಶತ್ರುಗಳ ಕಾಟ ಕಡಿಮೆ ಆಗಿಲ್ಲ. ಈ ಮಾತಿಗೆಲ್ಲ ಸಾಕ್ಷಿ ಎನ್ನುವಂತೆ 'ಕಾಟೇರ' ಸಿನಿಮಾ ಸಕ್ಸಸ್ ಬೆನ್ನಲ್ಲೇ ನಟ ದರ್ಶನ್ ಅವರು ಪೊಲೀಸ್ ಠಾಣೆಗೆ ಹೋಗುವಂತಾಗಿದೆ.
ನಟ ದರ್ಶನ್ ಜೀವನದಲ್ಲಿ ಸಾಕಷ್ಟು ಕಷ್ಟ ಎದುರಿಸಿ ಮೇಲೆ ಬಂದಿದ್ದಾರೆ. ಹೀಗಾಗಿ ಇಡೀ ಕರ್ನಾಟಕದಲ್ಲಿ ಕೋಟ್ಯಂತರ ಅಭಿಮಾನಿಗಳನ್ನು ನಟ ದರ್ಶನ್ ಅವರು ಗಳಿಸಿದ್ದಾರೆ. ಈ ರೀತಿ ಹೊರ ರಾಜ್ಯದಲ್ಲಿ ಕೂಡ ನಟ ದರ್ಶನ್ ಅವರಿಗೆ ದೊಡ್ಡ ಪ್ರಮಾಣದಲ್ಲಿ ಅಭಿಮಾನಿ ಬಳಗ ಇದೆ. ಹೀಗಿದ್ದಾಗಲೇ ನಟ ದರ್ಶನ್ ಅವರ 'ಕಾಟೇರ' ಸಿನಿಮಾ ದೊಡ್ಡ ಮಟ್ಟಿಗಿನ ಸಕ್ಸಸ್ ಕಂಡು ಈಗ 200 ಕೋಟಿ ರೂಪಾಯಿ ಕ್ಲಬ್ ಸೇರಲು ಮುನ್ನುಗ್ಗುತ್ತಿದೆ. ಹೀಗಿದ್ದಾಗ ನಟ ದರ್ಶನ್ ಅವರಿಗೆ ಹೆಚ್ಚಾಯ್ತಾ ಶತ್ರುಗಳ ಕಾಟ? ಎಂಬ ಬಹುದೊಡ್ಡ ಪ್ರಶ್ನೆ ಕಾಡುತ್ತಿದೆ ಆ ಬಗ್ಗೆ ಸಂಪೂರ್ಣ ವಿವರಣೆ ಮುಂದೆ ಇದೆ ಓದಿ.

ದರ್ಶನ್ ಅವರಿಗೆ ಶತ್ರುಗಳ ಕಾಟ?
ಅಂದಹಾಗೆ ಬೆಂಗಳೂರಿನ ಪ್ರತಿಷ್ಠಿತ ಪಬ್‌ನಲ್ಲಿ ತಡರಾತ್ರಿವರೆಗೆ ಪಾರ್ಟಿ ಮಾಡಿದ್ದಾರೆ, ಎನ್ನುವ ಆರೋಪ ಹಿನ್ನೆಲೆ ನಟ ದರ್ಶನ್ ಅವರಿಗೆ ಸಮಸ್ಯೆ ಎದುರಾಗಿದೆ. ಹೀಗಿದ್ದಾಗ ಅವರು ದಿಢೀರ್, ಇಂದು ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಸುಬ್ರಹ್ಮಣ್ಯ ನಗರ ಠಾಣೆಗೆ ಹಾಜರಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ನಟ ದರ್ಶನ್ ಅವರ ಜೊತೆ ಕನ್ನಡ ಸಿನಿಮಾ ರಂಗದ ಮತ್ತಷ್ಟು ನಟರು ಕೂಡ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆದರೆ ಈಗ ಅಭಿಮಾನಿಗಳು ಚರ್ಚೆ ಮಾಡ್ತಾ ಇರುವ ವಿಚಾರ ಏನಂದ್ರೆ, ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಹೆಚ್ಚಾಯ್ತಾ ಶತ್ರುಗಳ ಕಾಟ? ಅಂತಾ. ಅಲ್ಲದೆ ನಟ ದರ್ಶನ್ ಅವರು ಇತ್ತೀಚೆಗೆ ಶತ್ರುಗಳ ಬಗ್ಗೆ ನೀಡಿದ್ದ ಹೇಳಿಕೆ ಕೂಡ ಈಗ ಸಂಚಲನ ಸೃಷ್ಟಿಸಿದೆ.
ದರ್ಶನ್ ಅವರಿಗೆ ಮೊದಲೇ ಗೊತ್ತಿತ್ತಾ?
ಅಂದಹಾಗೆ ಕೆಲವೇ ದಿನಗಳ ಹಿಂದೆ ನಟ ದರ್ಶನ್ ಅವರು ದುಬೈಗೆ ಹೊಗಿದ್ದರು. ಅವರು ದುಬೈಗೆ ಹೋಗಿದ್ದಾಗ ಅಲ್ಲಿಂದಲೇ ಒಂದು ಫೋಟೋ ಸಹಿತ, ತಮ್ಮ ಶತ್ರುಗಳಿಗೆ ಸಂದೇಶ ಕಳುಹಿಸಿದ್ದರು. ಈಗ ಆ ಮೆಸೇಜ್ ಕೂಡ ವೈರಲ್ ಆಗುತ್ತಿದೆ ಯಾಕೆ ಅಂದ್ರೆ ನಟ ದರ್ಶನ್ ಅವರಿಗೆ ತಮ್ಮ ಶತ್ರುಗಳ ಈ ನವರಂಗಿ ಆಟದ ಬಗ್ಗೆ ಮೊದಲೇ ಗೊತ್ತಿತ್ತಾ? ಅಂತಾ. ಅರೆ ಹಾಗಾದರೆ ನಟ ದರ್ಶನ್ ಅವರು ತಮ್ಮ ಶತ್ರುಗಳಿಗೆ ಕಳುಹಿಸಿದ್ದ ಮೆಸೇಜ್ ಏನು? ಬನ್ನಿ ಆ ಬಗ್ಗೆ ಮುಂದೆ ತಿಳಿಯೋಣ.
ಶತ್ರುಗಳಿಗೆ ಚಾಲೆಂಜಿಂಗ್ ಸ್ಟಾರ್ ಮೆಸೇಜ್
'ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ' ಎಂದು ಟ್ವೀಟ್ ಮಾಡಿದ್ದರು ನಟ ದರ್ಶನ್ ಅವರು.

ಕಾಟೇರ ಅಬ್ಬರದ ನಡುವೆ ಬೇಸರ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾಗಳು ಅಂದ್ರೆ ದೊಡ್ಡ ಮಟ್ಟಿಗಿನ ಹೈಪ್ ಇರುತ್ತೆ & ಅಭಿಮಾನಿಗಳು ಕೂಡ ಸಿಕ್ಕಾಪಟ್ಟೆ ಕಾಯ್ತಾರೆ. ಅದೇ ರೀತಿ ಕಾಟೇರ ಸಿನಿಮಾ ಕೂಡ, ತುಂಬಾ ಅಂದ್ರೆ ತುಂಬಾನೆ ನಿರೀಕ್ಷೆ ಹೊತ್ತು ಅಖಾಡಕ್ಕೆ ಎಂಟ್ರಿ ಕೊಟ್ಟಿತ್ತು. ನಿರೀಕ್ಷೆಗಳನ್ನು ಮೀರಿಸಿದ್ದ ಈ ಸಿನಿಮಾ ಗುರಿ ಮುಟ್ಟಿದೆ. 150 ಕೋಟಿ ರೂಪಾಯಿ ಕ್ಲಬ್ ಕೂಡ ಸೇರಿದೆ. ಆದರೆ ಈ ವೇಳೆ ನಟ ದರ್ಶನ್ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿರುವುದು ಅಭಿಮಾನಿಗಳಿಗೆ ಒಂದಷ್ಟು ಗೊಂದಲ ಮೂಡಿಸಿದೆ. ಹಾಗೇ ಶತ್ರುಗಳ ಬಗ್ಗೆ ಆಕ್ರೋಶವೂ ವ್ಯಕ್ತವಾಗಿದೆ.












Click it and Unblock the Notifications