ನಟ ದರ್ಶನ್‌ಗೆ ಒಳಗೂ & ಹೊರಗೂ ಶತ್ರುಗಳ ಕಾಟ ಹೆಚ್ಚಾಯ್ತಾ?

'ಡಿ-ಬಾಸ್' ಅಂತಾ ಅಭಿಮಾನಿಗಳಿಂದ ಕರೆಸಿಕೊಳ್ಳುವ ನಟ ದರ್ಶನ್ ಅವರಿಗೆ ಮೇಲಿಂದ ಮೇಲೆ ಸಮಸ್ಯೆ ಎದುರಾಗುತ್ತಿದೆ. ಅದರಲ್ಲೂ ಕೌಟುಂಬಿಕ ಕಲಹವೇ ನಟ ದರ್ಶನ್ ಅವರ ಸಿನಿಮಾ ಲೈಫ್‌ಗೂ ದೊಡ್ಡ ಅಡ್ಡಿ ಆಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಿದ್ದಾಗ ಇಂದು ನಟ ದರ್ಶನ್ ಅವರ ಪತ್ನಿ ಗರಂ ಆಗಿ, ಪವಿತ್ರ ಗೌಡಗೆ ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾರೆ. ಆದರೆ ಈ ವಿಚಾರವನ್ನ ನಟ ದರ್ಶನ್ ಅವರ ಶತ್ರುಗಳು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವ ಆರೋಪ ಈಗ ಕೇಳಿಬಂದಿದೆ.

ಹೌದು, ಕನ್ನಡಿಗರ ಪ್ರೀತಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಅಖಾಡದಲ್ಲಿ ಮಾತ್ರವೇ ಶತ್ರುಗಳನ್ನು ಪುಡಿ ಮಾಡಿಲ್ಲ, ನಿಜ ಬದುಕಿನಲ್ಲಿ ಕೂಡ ಸಾಕಷ್ಟು ಶತ್ರುಗಳನ್ನ ಎದುರಿಸಿದ್ದಾರೆ. ಆದರೆ ಈಗಲೂ ಅವರಿಗೆ ಶತ್ರುಗಳ ಕಾಟ ಕಡಿಮೆ ಆಗುತ್ತಿಲ್ಲ. ಈ ಮಾತಿಗೆಲ್ಲ ಸಾಕ್ಷಿ ಎನ್ನುವಂತೆ 'ಕಾಟೇರ' ಸಕ್ಸಸ್ ಬೆನ್ನಲ್ಲೇ ದರ್ಶನ್ ಅವರು ಪೊಲೀಸ್ ಠಾಣೆಗೆ ಹೋಗುವಂತೆ ಆಗಿತ್ತು. ಇದು ಸಾಲದು ಎನ್ನುವಂತೆ ಈಗ ದರ್ಶನ್ ಅವರ ಕೌಂಟುಂಬಿಕ ಕಲಹದ ವಿಚಾರವನ್ನೆ ಇದೀಗ, ದರ್ಶನ್ ಅವರ ಶತ್ರುಗಳು ವೈಯಕ್ತಿಕ ಹಿತಾಸಕ್ತಿಗೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

Challenging Star Darshan Family Fight Creating Storm

ಶತ್ರುಗಳು ಅಲರ್ಟ್ ಆಗಿದ್ದಾರಾ?

ಅಂದಹಾಗೆ ಬೆಂಗಳೂರಿನ ಪ್ರತಿಷ್ಠಿತ ಪಬ್‌‍ನಲ್ಲಿ ತಡರಾತ್ರಿವರೆಗೆ ಪಾರ್ಟಿ ಮಾಡಿದ್ದಾರೆ, ಎನ್ನುವ ಆರೋಪ ಹಿನ್ನೆಲೆ ನಟ ದರ್ಶನ್ ಅವರಿಗೆ ಸಮಸ್ಯೆ ಎದುರಾಗಿತ್ತು. ಹೀಗಿದ್ದಾಗ ಅವ್ರು ಪೊಲೀಸ್ ಠಾಣೆಗೆ ಹಾಜರಾಗಿ ಸುಬ್ರಹ್ಮಣ್ಯ ನಗರ ಠಾಣೆಗೆ ಮಾಹಿತಿ ನೀಡಿದ್ದರು. ಈ ಘಟನೆ ನಡೆದು ಇನ್ನು ಕೆಲವೇ ಕೆಲವು ದಿನ ಆಗಿದೆ ಅಷ್ಟೇ, ಅಷ್ಟರಲ್ಲಿ ಮತ್ತೆ ದರ್ಶನ್ ಅವರ ವಿಚಾರವೆ ಚರ್ಚೆಗೆ ಬಂದಿದೆ. ಅದ್ರಲ್ಲೂ ನಟ ದರ್ಶನ್ ಅವರ ಕೌಟುಂಬಿಕ ಕಲಹ ಮುನ್ನೆಲೆಗೆ ಬರುತ್ತಿದ್ದಂತೆ, ಅದನ್ನ ದರ್ಶನ್ ಅವರ ಶತ್ರುಗಳು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಅಸಲಿಗೆ ಆಗಿದ್ದಾದರೂ ಏನು?

ಕಾಟೇರ ಸಕ್ಸಸ್ ಬೆನ್ನಲ್ಲೇ ನಟ ದರ್ಶನ್ ಅವರಿಗೆ ಸಾಲು ಸಾಲು ಸವಾಲು ಎದುರಾಗುತ್ತಿದೆ. ನಿರೀಕ್ಷೆ ಮೀರಿಸಿದ್ದ ಈ ಸಿನಿಮಾ ಗುರಿ ಮುಟ್ಟಿದೆ 200 ಕೋಟಿ ರೂಪಾಯಿ ಕ್ಲಬ್ ಕೂಡ ಸೇರಿದೆ. ಈ ವೇಳೆ ನಟ ದರ್ಶನ್ ಅವರ ವಿಚಾರದಲ್ಲಿ ಅನಗತ್ಯ ಸುದ್ದಿಗಳು ಬಿರುಗಾಳಿ ಎಬ್ಬಿಸುತ್ತಿವೆ. ಹೀಗಾಗಿ ಈ ಕಾರಣಕ್ಕೆ ನಟ ದರ್ಶನ್ ಅವರ ವಿರೋಧಿಗಳ ವಿರುದ್ಧ ಈಗ, ಅಭಿಮಾನಿಗಳು ಗರಂ ಆಗಿ ಸೋಷಿಯಲ್ ಮೀಡಿಯಾದಲ್ಲಿ ಖಡಕ್ ಉತ್ತರ ಕೊಡುತ್ತಿದ್ದಾರಂತೆ.

ಘಟನೆಯ ಹಿನ್ನೆಲೆ ಏನು ಗೊತ್ತೆ?

ದರ್ಶನ್‌ರ ಪತ್ನಿ ವಿಜಯಲಕ್ಷ್ಮಿ ಅವರು, ಪವಿತ್ರಾ ಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ವಿಜಯಲಕ್ಷ್ಮಿ ಅವರು ದರ್ಶನ್ ಹಾಗೂ ತಮ್ಮ ಪುತ್ರ ವಿನೀತ್ ಜೊತೆಗಿನ ಫೋಟೋನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, 'This is us♥️ with our one and only #familyovereverything' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ 'ಕುಟುಂಬವೇ ಎಲ್ಲ' ಎಂಬ ಸಂದೇಶ ಕೊಟ್ಟಿದ್ದರು ನಟ ದರ್ಶನ್ ಅವರ ಪತ್ನಿ. ಇದರ ಜೊತೆ ಮತ್ತೊಂದು ಪೋಸ್ಟ್ ಮೂಲಕ ಎಚ್ಚರಿಕೆ ನೀಡಿದ್ದರು.

ಫೋಟೋ ಹಂಚಿಕೊಂಡಿದ್ದ ಪವಿತ್ರ ಗೌಡ

ಹೀಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು, ತಮ್ಮ ಕುಟುಂಬದ ಫೋಟೋ ಹಾಕಿದ ಸ್ವಲ್ಪ ಹೊತ್ತಲ್ಲೇ ಪವಿತ್ರ ಗೌಡ ಕೂಡ ದರ್ಶನ್‌ರ ಜೊತೆಗಿನ ಫೋಟೋ ಪೋಸ್ಟ್ ಮಾಡಿದ್ದರು. ಅಲ್ಲದೆ 'ನಮ್ಮ ಸಂಬಂಧಕ್ಕೆ 10 ವರ್ಷಗಳು ಆಯಿತು. ಇನ್ನೂ ಹಲವು ವರ್ಷ ಜೊತೆಗೆ ಸಾಗಬೇಕಿದೆ.' ಅಂತಾ ಪವಿತ್ರಾ ಗೌಡ ಕ್ಯಾಪ್ಷನ್ ನೀಡಿದ್ದರು. ಆ ಬಳಿಕ, ನಟ ದರ್ಶನ್ ಅವರ ಪತ್ನಿ ಕೂಡ ಈ ಪೋಸ್ಟ್ ವಿರುದ್ಧ ಗರಂ ಆಗಿದ್ದರು.

ನಟ ದರ್ಶನ್ ಪತ್ನಿ ಎಚ್ಚರಿಕೆ ಹೇಗಿತ್ತು?

ಪವಿತ್ರ ಗೌಡ ಅವರು ದರ್ಶನ್ ಅವರ ಜೊತೆಗಿನ ಫೋಟೋ ಪೋಸ್ಟ್ ಮಾಡಿದ ಬಳಿಕ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇದೀಗ ವಿಜಯಲಕ್ಷ್ಮಿ ದರ್ಶನ್, 'ಈ ಮಹಿಳೆಗೆ ಪ್ರಜ್ಞೆ ಇದ್ದಿದ್ದರೆ ಬೇರೊಬ್ಬರ ಗಂಡನ ಫೋಟೋ ಪೋಸ್ಟ್ ಮಾಡುತ್ತಿರಲಿಲ್ಲ. ಈ ಕಾರ್ಯ ಆಕೆಯ ನೈತಿಕತೆ & ಆದರ್ಶ ಎಂಥಹದ್ದು ಅಂತ ತೋರಿಸುತ್ತೆ.' ಅಂತ ಗರಂ ಆಗಿ ಎಚ್ಚರಿಕೆ ನೀಡಿದ್ದಾರೆ.

'ಖುಷಿ ಗೌಡ, ಪವಿತ್ರಾ ಮತ್ತು ಸಂಜಯ್ ಸಿಂಗ್ ಅವರ ಮಗಳು ಎಂಬುದನ್ನು ಸ್ಪಷ್ಟವಾಗಿ ಸಾಬೀತು ಮಾಡುತ್ತವೆ ಈ ಫೋಟೋಗಳು. ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯದ ಕುರಿತು ಮಾತನಾಡಲು ಸಾಮಾಜಿಕ ಮಾಧ್ಯಮ ಬಳಸಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದಾಗಿ ಧ್ವನಿ ಎತ್ತುವ ಸಮಯ ಬಂದಿದೆ ಎಂದು ಭಾವಿಸುತ್ತೇನೆ. ಸಮಾಜಕ್ಕೆ ತಪ್ಪು ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ' ಎಂದು ವಿಜಯಲಕ್ಷ್ಮಿ ದರ್ಶನ್ ಎಚ್ಚರಿಕೆ ನೀಡಿದ್ದರು. ಆದರೆ ಇದೇ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+