ಅಣ್ಣಾವ್ರ ಮೂವರು ಮಕ್ಕಳಿಗೂ ಅನಾರೋಗ್ಯ: ಯಾಕೆ ಈ ಶಾಪ? ಅಭಿಮಾನಿಗಳ ಅಳಲು
ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಎಂದೇ ಹೆಸರು ಪಡೆದಿರುವ ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಕುಟುಂಬಕ್ಕೆ ಯಾವುದೋ ಕೆಟ್ಟ ದೃಷ್ಟಿ ಬಿದ್ದಿದ್ದೆ. ಅಣ್ಣಾವ್ರ ಕುಟುಂಬಕ್ಕೆ ಒಂದಾದ್ಮೇಲೆ ಒಂದು ಸಮಸ್ಯೆಗಳು ಕಾಡುತ್ತಿದ್ದು, ಆ ಕುಟುಂಬಕ್ಕೆ ಶನಿ ಬೆನ್ನುಹತ್ತಿದಂತಿದೆ.
ಹೌದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಅಗಲಿದ್ರೆ, ಇತ್ತ ನಟ ಶಿವರಾಜ್ ಕುಮಾರ್ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ರೋಗವೆಂಬ ಯುದ್ಧವನ್ನ ಗೆಲ್ಲಲು ಅಣಿಯಾಗಿದ್ದಾರೆ. ಡಿಸೆಂಬರ್ 18 ರಂದು ಶಿವಣ್ಣ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಲಿದ್ದು, ಡಿಸೆಂಬರ್ 24 ರಂದು ಶಿವಣ್ಣಗೆ ಸರ್ಜರಿ ನಡೆಯಲಿದೆ ಎಂದು ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅವರು ದುಃಖದಿಂದ ಹೇಳಿಕೊಂಡಿದ್ದಾರೆ.

ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಮೂವರು ಮಕ್ಕಳು ಮೂರು ಮುತ್ತುಗಳಂತೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಅವರು ತಮ್ಮ ನಟನೆ, ಕೋಟ್ಯಾಂತರ ಕನ್ನಡದ ಅಭಿಮಾನಿ ಬಳಗ ಹಾಗೂ ಪ್ರೀತಿಯನ್ನ ಗಳಿಸಿದ್ದಾರೆ. ದೊಡ್ಮನೆ ಅಂದ್ರೆ ಬಂದವರನ್ನ ಕೈ ಬಿಸಿ ಅಪ್ಪಿಕೊಂಡು ಪ್ರತಿಯೊಬ್ಬರ ಕಷ್ಟಕ್ಕೆ ಸ್ಪಂದಿಸಿದ ಕುಟುಂಬ ಅದು. ಅಲ್ಲದೇ ಅದೆಷ್ಟೋ ಲಾವಿದರಿಗೆ ವೃತ್ತಿ ಬದುಕಿಗೆ ಅಡಿಪಾಯ ಹಾಕಿಕೊಟ್ಟಿದ್ದೇ ದೊಡ್ಮನೆ. ಸದಾ ನಗ್ತಾ, ಸಂತೋಷದಿಂದಿದ್ದ ದೊಡ್ಮನೆ ಕುಟುಂಬದ ಮೇಲೆ ಯಾರದ್ದೋ ದುಷ್ಟ, ಕಠೋರ ದೃಷ್ಟಿ ಬಿದ್ದಿದೆ. ಅಣ್ಣಾವ್ರ ಮೂವರು ಮಕ್ಕಳ ಮೇಲೆ ಕೆಟ್ಟ ದೃಷ್ಟಿ ಬಿದ್ದಂತಿದೆ. ಸದಾ ನಗುತ್ತಾ, ನಗಿಸುತ್ತಾ ಇದ್ದ ನಟ ಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಕುಟುಂಬ ಇದೀಗ ಬರೀ ನೋವು ಹಾಗೂ ಅನಾರೋಗ್ಯಕ್ಕೆ ಕುಗ್ಗಿ ಹೋಗುವಂತಾಗಿದೆ.
ನಮ್ಮನ್ನು ಅಗಲಿದ ಪುನೀತ್ ರಾಜ್ ಕುಮಾರ್
ಡಾ. ರಾಜ್ ಕುಮಾರ್ ಅವರ ಮುದ್ದಿನ ಮಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮ ಜೊತೆಗೆ ಇಲ್ಲ ಅಂದ್ರೆ ಅದು ನಂಬಲು ಸಾಧ್ಯವೇ ಇಲ್ಲ. ನೂರ್ಕಾಲ ಸುಖವಾಗಿ ಬಾಳಲಿ ಅಂತ ಅಭಿಮಾನಿಗಳಿಂದ ಹರಸಿಕೊಂಡಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿ ಇದೀಗ ಹಲವು ವರ್ಷಗಳೇ ಕಳೆದಿವೆ. ಯೋಗ, ಉತ್ತಮ ಆಹಾರ, ಸದಾ ಕ್ರಿಯಾಶೀಲರಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತ (Heart Attack)ನಿಂದಾಗಿ ಕೋಟ್ಯಾಂತರ ಅಭಿಮಾನಿಗಳು ಅವರನ್ನ ಕಳೆದುಕೊಂಡಿದ್ದಾರೆ.
ಶಿವಣ್ಣಗೆ ಅನಾರೋಗ್ಯ
ಡಾ. ರಾಜ್ ಕುಮಾರ್ ಅವರ ಮೊದಲ ಮಗ, ಸ್ಯಾಂಡಲ್‌ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಸದಾ ಹಾಡ್ತಾ, ಕುಣಿತಾ ಎಲ್ಲರನ್ನು ರಂಜಿಸುವ, ಪ್ರತಿಯೊಬ್ಬರಿಗೂ ಪ್ರೀತಿ ಹಂಚುತ್ತಿದ್ದರು. ಆದರೆ. ಶಿವಣ್ಣ ಅವರು ಇದೀಗ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. 62ನೇ ವಯಸ್ಸಿನಲ್ಲಿರುವ ಶಿವಣ್ಣ ಸದಾ ಕುಣಿಯುತ್ತಾ ಎಲ್ಲಾರ ಜೊತೆ ಮಕ್ಕಳಂತೆ ಇರುತ್ತಿದ್ದರು. ಆದರೆ, ಅನಾರೋಗ್ಯದಿಂದಾಗಿ ಶಿವಣ್ಣ ಅಮೆರಿಕಾಕ್ಕೆ ಚಿಕಿತ್ಸೆಗೆ ತೆರಳುವುದಾಗಿ ಹೇಳಿಕೊಂಡಿದ್ದಾರೆ.
ನಾನು ಮನುಷ್ಯನೇ ಎಲ್ಲಾರಂತೆ ನನಗೂ ಕಾಯಿಲೆಗಳು ಬರುತ್ತವೆ. ಎಷ್ಟು ಕೋಟಿ ಹಣ, ಅದೆಷ್ಟು ಆಸ್ತಿ ಇದ್ದರೂ, ಎಲ್ಲದಕ್ಕಿಂತ ಆರೋಗ್ಯವೇ ದೊಡ್ಡ ಆಸ್ತಿ. ನಾವು ಡಾಕ್ಟರ್ ಮೇಲೆ ನಂಬಿಕೆ ಇಡೋಣ, ಇಡಲೇಬೇಕು. ಏಕೆಂದರೆ, ಜೀವನ ಸಾಗಲೇಬೇಕು ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಇನ್ನೂ ಶಿವಣ್ಣ ಅವರ ಆರೋಗ್ಯದ ಕುರಿತು ಮಾಹಿತಿ ನೀಡಿರುವ ಗೀತಾ ಅವರು, ಡಿಸೆಂಬರ್ 18 ರಂದು ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳುತ್ತಿದ್ದೇವೆ, ಡಿಸೆಂಬರ್ 24 ರಂದು ಸರ್ಜರಿ ಇದೆ ಎಂದು ಶಿವರಾಜ್ ಕುಮಾರ್ ಪತ್ನಿ ಗೀತಾ ಅವರು ದುಃಖದ ನಡುವೆ ಶಿವಣ್ಣ ಅವರ ಅನಾರೋಗ್ಯದ ಬಗ್ಗೆ ಮಾತನಾಡಿದ್ದಾರೆ.
ಸಾವು ಗೆದ್ದು ಬಂದ ರಾಘವೇಂದ್ರ ರಾಜ್ ಕುಮಾರ್
ರಾಜ್ ಕುಮಾರ್ ಅವರ ಕಿರಿಯ ಮಗ ಪುನೀತ್ ರಾಜ್ ಕುಮಾರ್ ಅವರ ಸಾವಿನ ಬಳಿಕ ರಾಜ್ ಕುಮಾರ್ ಅವರ ಕುಟುಂಬ ಇನ್ನೂ ದುಃಖದಲ್ಲಿರುವಾಗಲೇ ಶಿವರಾಜ್ ಕುಮಾರ್ ಅನಾರೋಗ್ಯದ ವಿಚಾರ ಅಭಿಮಾನಿಗಳ ದುಃಖಕ್ಕೆ ಕಾರಣವಾಗಿದೆ. ದೊಡ್ಮನೆಯ ಇನ್ನೊಬ್ಬ ಮಗ ರಾಘವೇಂದ್ರ ರಾಜ್ ಕುಮಾರ್ ಅವರು ಈ ಹಿಂದೆಯೇ ಸಾವು ಗೆದ್ದು ಬಂದಿದ್ದಾರೆ.
2013ರಲ್ಲಿಯೇ ಪಾರ್ಶ್ವವಾಯುವಿಗೆ ಒಳಗಾಗಿದ್ದ ರಾಘವೇಂದ್ರ ಅವರು ಆಸ್ಪತ್ರೆಯಲ್ಲಿ ಸತತ ಹೋರಾಟ ನಡೆಸಿದ್ದಾರೆ. ಪಾರ್ಶ್ವವಾಯುವಿಗೆ ಒಳಗಾಗಿರು ರಾಘವೇಂದ್ರ ರಾಜ್ ಕುಮಾರ್ ಅವರು ಸದ್ಯ ಸಿನಿಮಾದಿಂದ ದೂರವಿದ್ದಾರೆ. ಎಲ್ಲರಂತೆ ಓಡಾಡಲು ಅವರಿಗೆ ಸಾಧ್ಯವಾಗ್ತಿಲ್ಲ. ಅದೆಷ್ಟೋ ಕಲಾವಿದರ ಬದುಕಿಗೆ ಬೆಳಕಾಗಿದ್ದ ದೊಡ್ಮನೆ ಮಕ್ಕಳಿಗೆ ಅನಾರೋಗ್ಯದ ಶಿಕ್ಷೆ ಯಾಕೆ ಎಂದು ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ. ಅಣ್ಣಾವ್ರ ಮಕ್ಕಳಿಕೆ ಯಾಕೆ ಇಂಥ ಅಗ್ನಿ ಪರೀಕ್ಷೆ ಎಂದು ಅಭಿಮಾನಿಗಳು ದೇವರ ಬಳಿ ಪ್ರಶ್ನೆ ಕೇಳುವಂತಾಗಿದೆ.












Click it and Unblock the Notifications